ಹಾಲಿ ಚಾಂಪಿಯನ್ ಮುಂಬೈ ಸಿಟಿ ಎಫ್‌ಸಿ ವಿರುದ್ಧದ ಹೋರಾಟದಲ್ಲಿಪ್ಲೇಆಫ್ ಸ್ಥಾನ ಸನಿಹ ಮಾಡಿಕೊಳ್ಳುವತ್ತ ಬ್ಲೂಸ್ ಚಿತ್ತ
ಮಾರ್ಕೊ ಪೆಜ್ಜೈಯುಲಿ ಅವರ ಬಳಗ ಬೆಂಗಳೂರು ಎಫ್‌ಸಿ, ಫಟೋರ್ಡಾ ಜವಾಹರ್ ನೆಹರು ಕ್ರೀಡಾಂಗಣದಲ್ಲಿಸೋಮವಾರ ಹಾಲಿ ಚಾಂಪಿಯನ್ ಮುಂಬೈ ಸಿಟಿ ಎಫ್‌ಸಿ ತಂಡದ ಕಠಿಣ ಸವಾಲು ಎದುರಿಸಲಿದೆ. ತನ್ನ ಕಳೆದ ನಾಲ್ಕು ಪಂದ್ಯಗಳಲ್ಲಿಗೆಲುವು ಕಾಣದ ಐಲ್ಯಾಂಡರ್ಸ್ ವಿರುದ್ಧದ ಅಭಿಯಾನದೊಂದಿಗೆ ಇಂಡಿಯನ್ ಸೂಪರ್ ಲೀಗ್‌ನಲ್ಲಿತನ್ನ ದ್ವಿತೀಯಾರ್ಧ ಆರಂಭಿಸುತ್ತಿರುವ ಬ್ಲೂಸ್, ಮತ್ತಷ್ಟು ಅಂಕ ಸೇರ್ಪಡೆಗೊಳಿಸಿ ಪ್ಲೇ ಆಫ್ ಅಂತರವನ್ನು ತಗ್ಗಿಸುವ ಗುರಿಯಲ್ಲಿದೆ.
ಚೆನ್ನೈಯಿನ್ ಎಫ್‌ಸಿ ವಿರುದ್ಧ 4-2ರಲ್ಲಿಗೆಲುವು ಸಾಧಿಸಿ 2021ನೇ ವರ್ಷಾಂತ್ಯವನ್ನು ಪೂರ್ಣಗೊಳಿಸಿರುವ ಬೆಂಗಳೂರು ತಂಡ, ನಂತರ ಎಸ್‌ಸಿ ಈಸ್ಟ್ ಬೆಂಗಾಲ್ ವಿರುದ್ಧದ ಪಂದ್ಯದಲ್ಲಿ1-1ರಲ್ಲಿಡ್ರಾ ಸಾಧಿಸಿದೆ. ಇವೆರಡು ಪಂದ್ಯಗಳಲ್ಲಿಆರಂಭದಿಂದ ಅಂತ್ಯದವರೆಗೂ ಬ್ಲೂಸ್ ಪಾರುಪತ್ಯ ಸಾಧಿಸಿತ್ತು. ಅತ್ತ ಮಂಬೈ ತಂಡ ತನ್ನ ಕೊನೆಯ ಪಂದ್ಯದಲ್ಲಿರೆಡ್ ಮತ್ತು ಗೋಲ್ಡ್ ಬ್ರಿಗೇಡ್ ತಂಡದ ವಿರುದ್ಧ ಡ್ರಾ ಸಾಧಿಸಿದೆ. ತಂಡದ ಉತ್ತಮ ಫಾರ್ಮ್ ನಡುವೆಯೂ, ಐಲ್ಯಾಂಡರ್ಸ್ ವಿರುದ್ಧ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳಬೇಕು ಎಂದು ಪೆಜ್ಜೈಯುಲಿ ಪ್ರತಿಪಾದಿಸಿದ್ದಾರೆ.
‘‘ಇಂದು ಮುಂಬೈ ವಿರುದ್ಧ ಆಡುತ್ತಿದ್ದೇವೆ. ಇಂದಿನಿಂದ ಎರಡು ವಾರ ಆಡುತ್ತೇವೆ ಅಥವಾ ಇಂದಿನಿಂದ ಒಂದು ತಿಂಗಳು ಆಡುತ್ತೇವೆ ಎಂಬುದು ಮುಖ್ಯವಲ್ಲ. ಈ ಮಧ್ಯೆ ಇತ್ತೀಚಿನ ಫಲಿತಾಂಶಗಳು ಎದುರಾಳಿ ತಂಡದ ಪರವಾಗಿರಲಿಲ್ಲಎಂಬುದು ನಿಜ. ಆದರೆ ಅವರು ಉತ್ತಮ ಫುಟ್ಬಾಲ್ ಆಡುತ್ತಿದ್ದಾರೆ ಮತ್ತು ಹೀಗಾಗಿ ಈ ಪಂದ್ಯ ಕಠಿಣದಿಂದ ಕೂಡಿರುವ ಕಾರಣ ನಾವು ನಮ್ಮ ಅತ್ಯುತ್ತಮ ಆಟವನ್ನು ಆಡಬೇಕಿದೆ. ಹಾಗೆಯೇ ನಮ್ಮ ಆಟದ ಮೇಲೆ ಗಮನ ಕೇಂದ್ರೀಕರಿಸಿ ಅದೇ ದಾರಿಯಲ್ಲಿಮುನ್ನಡೆಯಬೇಕಿದೆ,’’ ಎಂದು ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿಪೆಜ್ಜೈಯುಲಿ ಹೇಳಿದ್ದಾರೆ.
ಡೆಸ್ ಬಕ್ಕಿಂಗ್‌ಹ್ಯಾಮ್ ಅವರ ಗರಡಿಯಲ್ಲಿಪಳಗಿರುವ ಮುಂಬೈ ತಂಡ ಪ್ರಸ್ತುತ ಲೀಗ್ ಅಂಕಪಟ್ಟಿಯಲ್ಲಿಅಗ್ರಸ್ಥಾನದಲ್ಲಿದೆ. ಆದರೆ ಭಾನುವಾರ ರಾತ್ರಿ ನಡೆಯಲಿರುವ ಪಂದ್ಯದಲ್ಲಿಒಂದು ವೇಳೆ ಕೇರಳ ಬ್ಲಾಸ್ಟರ್ಸ ವಿರುದ್ಧ ಹೈದರಾಬಾದ್ ಎಫ್‌ಸಿ ಪೂರ್ಣ ಅಂಕ ಗಳಿಸಿದರೆ ದ್ವಿತೀಯ ಸ್ಥಾನಕ್ಕೆ ಕುಸಿಯಬೇಕಾಗುತ್ತದೆ. ಈ ನಡುವೆ 9ನೇ ಸ್ಥಾನದಲ್ಲಿರುವ ಬ್ಲೂಸ್, ಮುಂಬೈ ವಿರುದ್ಧ ಪೂರ್ಣ ಮೂರು ಅಂಕ ಗಳಿಸಿದರೆ, ಏಳನೇ ಸ್ಥಾನಕ್ಕೆ ಜಿಗಿಯುವ ಅವಕಾಶ ಹೊಂದಿದೆ.
ತಮ್ಮ ತಂಡ ದಾಳಿಯಲ್ಲಿಸಮಸ್ಯೆ ಎದುರಿಸುತ್ತಿರುವ ಕುರಿತು ಪೆಜ್ಜೈಯುಲಿ ಗುರುತಿಸಿದ್ದಾರೆ. ಆದರೆ ತಂಡದ ಆಯ್ಕೆಯು ಆಡಲು ಸಿದ್ದವಾಗಿರುವ ಮತ್ತು ತರಬೇತಿಯಲ್ಲಿಉತ್ತಮವಾಗಿ ಕಾರ್ಯನಿರ್ವಹಿಸಿದ ಆಟಗಾರರ ಮೇಲೆ ಗಮನಹರಿಸಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ‘‘ಫ್ರಿನ್ಸ್, ಕ್ಲೀಟನ್, ಉದಾಂತ, ಆ್ಯಶಿಕ್, ಸುನೀಲ್ ಮತ್ತು ರೋಶನ್ ಇದ್ದಾರೆ. ಈ ಮಧ್ಯೆ, ಆಟಗಾರರಿಗೆ ಅವಕಾಶ ನೀಡುವುದು ಮಹತ್ವವೆನಿಸಿದರೂ ತರಬೇತಿ ಮತ್ತು ಪಂದ್ಯಗಳಲ್ಲಿಉತ್ತಮ ಪ್ರದರ್ಶನ ನೀಡಿದವರಿಗೂ ವಿಶ್ವಾಸ ತುಂಬುವುದು ಸಹ ಮಹತ್ವದ್ದಾಗಿರುತ್ತದೆ. ನಾವು ಅತ್ಯುತ್ತಮ ದಾಳಿ ನಡೆಸುವ ಆಟಗಾರರನ್ನು ಒಳಗೊಂಡಿದ್ದೇವೆ, ಆದರೆ ಅಪರಾಧ ಮತ್ತು ರಕ್ಷ ಣೆಯಲ್ಲಿಸಮತೋಲನ ಕಾಯ್ದುಕೊಳ್ಳುವ ತಂಡವನ್ನು ಕಂಡುಕೊಳ್ಳುವುದು ನನ್ನ ಗುರಿಯಾಗಿದೆ,’’ ಎಂದು ಪೆಜ್ಜೈಯುಲಿ ಹೇಳಿದ್ದಾರೆ.
ದೀರ್ಘಾವದಿ ಗಾಯದಿಂದ ಬಳಲುತ್ತಿರುವ ಲಿಯೋನ್ ಆಗಸ್ಟೀನ್ ಮತ್ತು ರೊಂಡು ಮುಸಾವು ಕಿಂಗ್ ಅವರ ಅಲಭ್ಯತೆಯಲ್ಲಿಬೆಂಗಳೂರು ಕಣಕ್ಕಿಳಿಯಲಿದೆ. ಈ ಮಧ್ಯೆ, ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಜಯೇಶ್ ರಾಣೆ ಮತ್ತು ಅಜಯ್ ಛೆಟ್ರಿ ಸ್ಪರ್ಧೆಯಲ್ಲಿದ್ದಾರೆ ಎಂದು ಪೆಜ್ಜೈಯುಲಿ ಇದೇ ವೇಳೆ ತಿಳಿಸಿದ್ದಾರೆ. ಈ ನಡುವೆ ಮುಂಬೈ ಮಿಡ್‌ಫೀಲ್ಡರ್ ಅಹ್ಮದ್ ಜಹೊಹ್ ಇಲ್ಲದೆ ಕಣಕ್ಕಿಳಿಯುತ್ತಿದೆ. ಈಸ್ಟ್ ಬೆಂಗಾಲ್ ವಿರುದ್ಧ ಮೊರೊಕ್ಕಾನ್ ಈ ಋುತುವಿನ ನಾಲ್ಕನೇ ಹಳದಿ ಕಾರ್ಡ್ ಪಡೆದಿದಾರೆ.
ಬೆಂಗಳೂರು ಎಫ್‌ಸಿ ಮತ್ತು ಮುಂಬೈ ಸಿಟಿ ಎಫ್‌ಸಿ ನಡುವಿನ ಪಂದ್ಯ ಸೋಮವಾರ ರಾತ್ರಿ 7.30ಕ್ಕೆ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಡಿಸ್ನಿ+ ಹಾಸ್ಟರ್ ಮತ್ತು ಜಿಯೊ ಟಿವಿಯಲ್ಲಿಪಂದ್ಯ ನೇರ ಪ್ರಸಾರ ಇರಲಿದೆ.