ಪರಾಗ್‌ ಶ್ರೀವಾಸ್‌ ಬೆಂಗಳೂರು ಎಫ್‌ಸಿ ಜತೆಗೆ ಮೂರು ವರ್ಷಗಳ ಹೊಸ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ

ಪರಾಗ್‌ ಶ್ರೀವಾಸ್‌ ಬೆಂಗಳೂರು ಎಫ್‌ಸಿ ಜತೆಗೆ ಮೂರು ವರ್ಷಗಳ ಹೊಸ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ

2024-25ರ ಋುತುವಿನ ಅಂತ್ಯದವರೆಗೆ ಬ್ಲೂಸ್‌ ತಂಡದೊಂದಿಗೆ ಮುಂದುವರಿಯಲು ಹೊಸ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಬಹುಮುಖ ಡಿಫೆಂಡರ್‌ ಪರಾಗ್‌ ಶ್ರೀವಾಸ್‌ ತಮ್ಮ ಭವಿಷ್ಯವನ್ನು ಕ್ಲಬ್‌ಗೆ ಸಮರ್ಪಿಸಿಕೊಂಡಿದ್ದಾರೆ ಎಂದು ಬೆಂಗಳೂರು ಎಫ್‌ಸಿ ಶನಿವಾರ ಘೋಷಿಸಿದೆ. 2017 ರಲ್ಲಿಬ್ಲೂಸ್‌ನ ರೆಸಿಡೆನ್ಸಿಯಲ್‌ ಅಕಾಡೆಮಿಯ ಭಾಗವಾಗಿ ಕ್ಲಬ್‌ಗೆ ಸೇರ್ಪಡೆಯಾದ 25 ವರ್ಷದ ಅವರು, 2019ರ ಫೆಬ್ರವರಿವಲ್ಲಿಮೊದಲ ಸಲ ತಂಡಕ್ಕೆ ಪಾದಾರ್ಪಣೆ ಮಾಡಿದರು, ನಂತರ ಆ ವರ್ಷದ ಕೊನೆಯಲ್ಲಿಬಿಎಫ್‌ಸಿಯ ‘ಬಿ’ ಪ್ಲೇಯರ್‌ ಆಫ್‌ ದಿ ಸೀಸನ್‌(ಋುತುವಿನ ಆಟಗಾರ) ಆಗಿ ಆಯ್ಕೆಯಾದರು.

‘ಬೆಂಗಳೂರು ಎಫ್‌ಸಿಯೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿರುವುದು ನನಗೆ ನಿಜವಾಗಿಯೂ ಸಂತೋಷವಾಗಿದೆ. ನಾನು ಐದು ವರ್ಷಗಳ ಹಿಂದೆ ಕ್ಲಬ್‌ ಸೇರಿದಾಗಿನಿಂದ ಆಟಗಾರನಾಗಿ ಸಾಕಷ್ಟು ಬೆಳೆದಿದ್ದೇನೆ, ಮತ್ತು ಮುಂಬರುವ ಋುತುಗಳಲ್ಲಿಹೊಸ ತರಬೇತುದಾರನ ಅಡಿಯಲ್ಲಿಹೆಚ್ಚಿನ ಕೊಡುಗೆ ನೀಡಲು ನಾನು ಎದುರು ನೋಡುತ್ತಿದ್ದೇನೆ. ತಂಡದೊಂದಿಗೆ ಮರುಜೋಡಣೆ ಮಾಡಲು ಮತ್ತು ಪೂರ್ವ-ಋುತುವಿನ ಆರಂಭಕ್ಕಾಗಿ ಉತ್ಸುಕನಾಗಿದ್ದೇನೆ,’’ ಎಂದು ಪರಾಗ್‌ ತಮ್ಮ ಒಪ್ಪಂದದ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ಹೇಳಿದರು.

ಅಮರಾವತಿಯಲ್ಲಿಜನಿಸಿದ ಪರಾಗ್‌ 2017 ರಲ್ಲಿಬ್ಲೂಕೋಲ್ಟ್ಸ್‌ನ ಆಗಿನ ಮುಖ್ಯ ತರಬೇತುದಾರ ನೌಶಾದ್‌ ಮೂಸಾ ಅವರ ಅಡಿಯಲ್ಲಿಬೆಂಗಳೂರು ಎಫ್‌ಸಿ ರೆಸಿಡೆನ್ಸಿಯಲ್‌ ಅಕಾಡೆಮಿಗೆ ಸೇರುವ ಮೊದಲು, ಪುಣೆ ಎಫ್‌ಸಿ ಅಕಾಡೆಮಿಗೆ ಸೇರಿದರು. ಇದಾದ ಐದು ವರ್ಷಗಳಲ್ಲಿ, ಪರಾಗ್‌ ಎಎಫ್‌ಸಿ ಕಪ್‌, ಡ್ಯುರಾಂಡ್‌ ಕಪ್‌ ಮತ್ತು ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿಬ್ಲೂಸ್‌ನ ಮೊದಲ ತಂಡವನ್ನು ಪ್ರತಿನಿಧಿಸಿದ್ದಾರೆ.

‘ಕಳೆದ ಎರಡು ಋುತುಗಳಲ್ಲಿ, ನಾನು ಮೊದಲ ತಂಡಕ್ಕಾಗಿ ಆಡಲು ಹೆಚ್ಚಿನ ಅವಕಾಶಗಳನ್ನು ಹೊಂದಿದ್ದೇನೆ ಮತ್ತು ಅದು ಖಂಡಿತವಾಗಿಯೂ ಹೊಸ ಒಪ್ಪಂದಕ್ಕೆ ಸಹಿ ಹಾಕಲು ನನಗೆ ಪ್ರೇರಕ ಅಂಶವಾಗಿದೆ. ನನಗೆ ಸರಿಯಾದ ಮಾರ್ಗದರ್ಶನವನ್ನು ನೀಡಿದ್ದಕ್ಕಾಗಿ ನನ್ನ ಸಹ ಆಟಗಾರರು, ತರಬೇತುದಾರರು ಮತ್ತು ಕ್ಲಬ್‌ನ ಮ್ಯಾನೇಜ್ಮೆಂಟ್‌ಗೆ ನಾನು ಆಭಾರಿಯಾಗಿದ್ದೇನೆ ಮತ್ತು ಭವಿಷ್ಯದಲ್ಲಿನನ್ನ ದಾರಿಗೆ ಬರುವ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಳ್ಳಲು ನಾನು ಬಯಸುತ್ತೇನೆ’ ಎಂದು ಪರಾಗ್‌ ಹೇಳಿದರು.

ಬ್ಲೂಸ್‌ ತಂಡದ ಮೊದಲ ತಂಡಕ್ಕೆ ಸೇರ್ಪಡೆಗೊಳ್ಳುವ ಮೊದಲು, ಪರಾಗ್‌ 2017 ಮತ್ತು 2019 ರ ನಡುವೆ ಪುಟ್ಟಯ್ಯ ಮೆಮೋರಿಯಲ್‌ ಕಪ್‌, ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಮತ್ತು ಐ-ಲೀಗ್‌ 2 ನೇ ಡಿವಿಷನ್‌ನಲ್ಲಿಬೆಂಗಳೂರು ಎಫ್‌ಸಿ ಬಿ ಪರ ಆಡಿದರು. ಕ್ಲಬ್‌ ನ ಯುವ ಅಭಿವೃದ್ಧಿ ಪ್ರಯತ್ನಗಳು ಇತ್ತೀಚಿನ ವರ್ಷಗಳಲ್ಲಿಡಿಫೆಂಡರ್‌ನ ಪ್ರಗತಿಗೆ ಪ್ರಮುಖವಾಗಿವೆ, ಎಂದು ಕ್ಲಬ್‌ ಸಿಇಒ ಮಂದರ್‌ ತಮ್ಹಾನೆ ವಿಶ್ವಾಸ ವ್ಯಕ್ತಪಡಿಸಿದರು.

‘ ಪರಾಗ್‌ ನಮ್ಮೊಂದಿಗೆ ಬೆಳೆಯುವುದನ್ನು ನಾವು ನೋಡಿದ್ದೇವೆ, ಮತ್ತು ಅವರು ಬೆಂಗಳೂರು ಎಫ್‌ಸಿಯೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿರುವುದಕ್ಕೆ ನಮಗೆ ನಿಜವಾಗಿಯೂ ಸಂತೋಷವಾಗಿದೆ. ಐದು ವರ್ಷಗಳ ಹಿಂದೆ ಹದಿಹರೆಯದವನಾಗಿದ್ದಾಗ ಅವರು ಈ ಫುಟ್ಬಾಲ್‌ ಕ್ಲಬ್‌ನ ಬಾಗಿಲುಗಳ ಮೂಲಕ ಬಂದರು, ಮತ್ತು ಮೊದಲ ತಂಡಕ್ಕೆ ಅವರ ಸ್ಥಳಾಂತರವು ಕ್ಲಬ್‌ನ ಯುವ ಅಭಿವೃದ್ಧಿ ಕಾರ್ಯಕ್ರಮಕ್ಕೆ ಮತ್ತು ಅವರ ಬದ್ಧತೆ ಮತ್ತು ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ಸೈಮನ್‌ (ಗ್ರೇಸನ್‌) ಅಡಿಯಲ್ಲಿ, ಅವರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಎಂದು ನನಗೆ ಖಾತ್ರಿಯಿದೆ, ಮತ್ತು ನಾನು ಅವರಿಗೆ ಶುಭ ಹಾರೈಸುತ್ತೇನೆ,’’ ಎಂದು ತಮ್ಹಾನೆ ಹೇಳಿದರು.

2019 ರಲ್ಲಿಇಂಡಿಯನ್‌ ಸೂಪರ್‌ ಲೀಗ್‌ಗೆ ಪಾದಾರ್ಪಣೆ ಮಾಡಿದ ನಂತರ, ಪರಾಗ್‌ ಸ್ಪರ್ಧೆಯಲ್ಲಿ27 ಪ್ರದರ್ಶನಗಳನ್ನು ನೀಡಿದ್ದಾರೆ, ಅವುಗಳಲ್ಲಿ14 ಇತ್ತೀಚಿನ 2021-22 ರ ಅಭಿಯಾನದಲ್ಲಿಬರುತ್ತವೆ. ಅವರ ಸ್ಥಾನದಲ್ಲಿಬಹುಮುಖ ಪ್ರತಿಭೆ, ಪರಾಗ್‌ ಎರಡೂ ಪಾಶ್ರ್ವಗಳಲ್ಲಿಫುಲ್‌-ಬ್ಯಾಕ್‌ ಆಗಿ ಮತ್ತು ಕೆಲವೊಮ್ಮೆ ಸೆಂಟರ್‌-ಬ್ಯಾಕ್‌ ಆಗಿ ಹೊರಹೊಮ್ಮಿದ್ದಾರೆ.

Malcare WordPress Security