ನಿರ್ಣಾಯಕ ಪಂದ್ಯದಲ್ಲಿ ಒ ಡಿಶಾ ವಿರುದ್ಧ 3 ಅಂಕ ಕಲೆಹಾಕಿದ ಬೆಂಗಳೂರು ಎಫ್ ಸಿ

ಒಡಿಶಾ ಎಫ್ ಸಿ ವಿರುದ್ಧ ಮಾರ್ಕೊ ಪೆಜ್ಜೈಯುಲಿ ಪಡೆಗೆ 2-1 ಅಂತರದ ಗೆಲುವು, ಬ್ಲೂಸ್ ಪ್ಲೇಆಫ್ ಆಸೆ ಜೀವಂತ

ದ್ವಿತೀಯಾರ್ಧದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಬೆಂಗಳೂರು ಎಫ್ ಸಿ ಪ್ರಸಕ್ತ ಐಎಸ್ ಎಲ್ ಟೂರ್ನಿಯ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಒಡಿಶಾ ಎಫ್ ಸಿ ವಿರುದ್ಧ 2-1 ಗೋಲ್ ಗಳಿಂದ ಜಯ ಗಳಿಸಿ, ಪೂರ್ಣ ಮೂರು ಅಂಕ ತನ್ನದಾಗಿಸಿಕೊಂಡಿತು.
ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹಣಾಹಣಿಯಲ್ಲಿ ಬ್ಲೂಸ್ ಪರ ದಾನಿಶ್ (31ನೇ ನಿಮಿಷ) ಮತ್ತು ಕ್ಲೀಟನ್ ಸಿಲ್ವಾ (49 ನೇ ನಿಮಿಷ) ಒಂದು ಗೋಲ್ ಬಾರಿಸಿದರೆ, ಒಡಿಶಾ ಎಫ್ ಸಿ ಪರ ನಂದ (8ನೇ ನಿಮಿಷ) ಒಂದು ಗೋಲ್ ದಾಖಲಿಸಿದರು.
ಈ ಜಯದೊಂದಿಗೆ ಒಟ್ಟಾರೆ 26 ಅಂಕ ಕಲೆಹಾಕಿರುವ ಬ್ಲೂಸ್ ಸದ್ಯಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದು, ಪ್ಲೇ ಆಫ್ ಪ್ರವೇಶಿಸುವ ತನ್ನ ಆಸೆಯನ್ನು ಜೀವಂತವಾಗಿಸಿಕೊಂಡಿತು.ಹಿಂದಿನ ಎರಡು ಪಂದ್ಯಗಳಲ್ಲಿ ಸತತವಾಗಿ ಸೋಲುಂಡಿದ್ದ ಬ್ಲೂಸ್ ಕೊನೆಗೂ ಒಡಿಶಾ ವಿರುದ್ಧ ಜಯದ ಹಳಿಗೆ ಮರಳುವಲ್ಲಿ ಯಶಸ್ವಿಯಾಯಿತು.
60ರಿಂದ 70 ನಿಮಿಷದವರೆಗೂ ಆಟಗಾರರ ಬದಲಾವಣೆಗೆ ಆದ್ಯತೆ ನೀಡಿದ ಒಡಿಶಾ ಹಿನ್ನಡೆ ತಗ್ಗಿಸಲು ಹರಸಾಹಸ ಪಟ್ಟಿತು. ಆದರೆ ಬಿಎಫ್ ಸಿ ರಕ್ಷಣಾ ಕೋಟೆ ಮತ್ತಷ್ಟು ಬಿಗಿಯಾದ ಕಾರಣ ಎದುರಾಳಿ ತಂಡ ಹಿನ್ನಡೆ ಅನುಭವಿಸಬೇಕಾಯಿತು.
ಪ್ಲೇಆಫ್ ಸ್ಪರ್ಧೆಯಲ್ಲಿ ಉಳಿಯಬೇಕಾದರೆ ಒಡಿಶಾ ವಿರುದ್ಧ ಮಾಡು ಇಲ್ಲವೇ ಮಡಿ ಪರಿಸ್ಥಿತಿ ಎದುರಿಸುತ್ತಿರುವ ಬೆಂಗಳೂರು ದ್ವಿತೀಯಾರ್ಧದಲ್ಲಿ ಆಕ್ರಮಣಶೀಲ ಆಟಕ್ಕೆ ಆದ್ಯತೆ ನೀಡಿತು. ಇದರ ಫಲವಾಗಿ ದ್ವಿತೀಯಾರ್ಧ ಆರಂಭವಾದ ನಾಲ್ಕೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶವನ್ನು ಕ್ಲೀಟನ್ ಸಿಲ್ವಾ ಗೋಲಾಗಿ ಪರಿವರ್ತಿಸಿದರು. ಈ ಮೂಲಕ ಕೋಚ್ ಮಾರ್ಕೊ ಪೆಜ್ಜೆಯುಲಿ ಪಡೆ ಪಂದ್ಯದಲ್ಲಿ ಮೊದಲ ಬಾರಿ ಮುನ್ನಡೆ ಗಳಿಸಿತು.ಅಲ್ಲದೆ ಮುಂದಿನ ಆಟಕ್ಕೆ ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡಿತು.
ಎಡ ಬದಿಯಿಂದ ಚೆಂಡು ಪಡೆದ ಉದಾಂತ ಸಿಂಗ್ ಬಾಕ್ಸ್ ನತ್ತ ಕೊಂಡೊಯ್ದರು. ಈ ವೇಳೆ ಉದ್ದೇಶಪೂರ್ಕವಾಗಿಯೇ ಒಡಿಶಾ ಎಫ್ ಸಿ ಆಟಗಾರ ಲಾಲ್ರುಥಾರಾ ಅವರನ್ನು ಬೀಳಿಸಿದರು. ಇದನ್ನು ಕಣ್ಣಾರೆ ಕಂಡ ರೆಫರಿ ಕೂಡಲೇ ಬಿಎಫ್ ಸಿ ಗೆ ಪೆನಾಲ್ಟಿ ಅವಕಾಶ ಕಲ್ಪಿಸಿದರು.
ಪಂದ್ಯದ ಮೊದಲಾರ್ಧ ಉತ್ತಮವಾಗಿ ಮುಕ್ತಾಯ ಕಂಡಿತು. ಈ ಹಂತದಲ್ಲಿ ಉಭಯ ತಂಡಗಳನ್ನು ಭೀನ್ನವಾಗಿ ನೋಡಲು ಸಾಧ್ಯವಾಗಲಿಲ್ಲ. ಒಡಿಶಾ ಎಫ್ ಸಿ ಉತ್ತಮ ಆರಂಭ ಪಡೆಯಿತು. ಚುರುಕಿನ ಆಟದ ಮೇಲೆ ಬಿಎಫ್ ಸಿ ರಕ್ಷಣಾ ಬಳಗದ ಮೇಲೆ ಪದೇ ಪದೇ ಒತ್ತಡ ಏರಿತು. ಕೊನೆಗೂ 8ನೇ ನಿಮಿಷದಲ್ಲಿ ನಂದಕುಮಾರ್ ಸೇಕರ್ ಅವರ ನೆರವಿನಿಂದ ಗೋಲಿನ ಖಾತೆ ತೆರೆದು 1-0 ಅಂತರದಲ್ಲಿ ಮುನ್ನಡೆ ಗಳಿಸಿತು.
ನಂತರ ಬ್ಲೂಸ್ ಸಮಬಲಕ್ಕಾಗಿ ತನ್ನ ಎಲ್ಲ ಯತ್ನಗಳನ್ನು ಮಾಡಿತು. ಆದರೆ ಮೊದಲ ಅರ್ಧ ಗಂಟೆಯ ಒಳಗೆ ಗೋಲ್ ಬಾರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 31ನೇ ನಿಮಿಷದಲ್ಲಿ ಅಂತಿಮವಾಗಿ ರೋಶನ್ ಕಾರ್ನರ್ ಕಿಕ್ ಅನ್ನು ಸಮರ್ಕಪವಾಗಿ ಕಾರ್ಯಗತಗೊಳಿಸಿದರು. ಗೋಲ್ ಪೆಟ್ಟಿಗೆ ಬಳಿಯೇ ಇದ್ದ ದಾನಿಶ್ ಫರೂಕಿ ಹೆಡರ್ ಮೂಲಕ ಗೋಲ್ ಗಳಿಸಿ ತಂಡದ ಹೋರಾಟವನ್ನು 1-1 ರ ಸಮಬಲಕ್ಕೆ ಸಾಕ್ಷಿಯಾದರು. ಮೊದಲಾರ್ಧ ಮುಕ್ತಾಯಕ್ಕೆ ಕೆಲವೇ ನಿಮಿಷಗಳಿರುವಾಗ ಬ್ಲೂಸ್ ನ ರಕ್ಷಣಾ ವೈಫಲ್ಯದ ಲಾಭ ಪಡೆದ ನಂದಕುಮಾರ್ ಹಲವು ಬಾರಿ ಗೋಲ್ ಗಳಿಸುವ ಸುವರ್ಣ ಅವಕಾಶ ಪಡೆದರು. ಆದರೆ ಕೂದಲೆಳೆಯ ಅಂತರದಲ್ಲಿ ಎಲ್ಲವೂ ವಿಫಲಗೊಂಡವು.
ಬೆಂಗಳೂರು ಎಫ್ ಸಿ ತನ್ನ ಮುಂದಿನ ಪಂದ್ಯದಲ್ಲಿ ಫೆಬ್ರವರಿ 27ರಂಡದು ಫಟೋರ್ಡಾದ ಪಿಜೆಎನ್ ಕ್ರೀಡಾಂಗಣದಲ್ಲಿ ಎಟಿಕೆ ಮೋಹನ್ ಬಗಾನ್ ತಂಡವನ್ನು ಎದುರಿಸಲಿದೆ.

Malcare WordPress Security