ಚೆನ್ನೈಯಿನ್‌ ಎಫ್‌ಸಿ ವಿರುದ್ಧ ಬೆಂಗಳೂರು ಎಫ್‌ಸಿಗೆ 3-0 ಅಂತರದ ಗೆಲುವು

17 ಅಂಕಗಳೊಂದಿಗೆ 6ನೇ ಸ್ಥಾನಕ್ಕೆ ಜಿಗಿದ ಕೋಚ್‌ ಮಾರ್ಕೊ ಪೆಜ್ಜೈಯುಲಿ ಬಳಗ | ಬ್ಲೂಸ್‌ಗೆ ಪೂರ್ಣ ಅಂಕ ತಂದುಕೊಟ್ಟ, ಇಮಾನ್‌, ಉದಾಂತ

ಉದಾಂತ ಸಿಂಗ್‌ ಅವರ ಅವಳಿ ಗೋಲು ಮತ್ತು ಇಮಾನ್‌ ಬಸಫಾ ದಾಖಲಿಸಿದ ಗೋಲಿನ ನೆರವಿನಿಂದ ಬೆಂಗಳೂರು ಎಫ್‌ಸಿ ಇಂಡಿಯನ್‌ ಸೂಪರ್‌ ಲೀಗ್‌ನ ತನ್ನ 13ನೇ ಪಂದ್ಯದಲ್ಲಿಚೆನ್ನೈಯಿನ್‌ ಎಫ್‌ಸಿ ವಿರುದ್ಧ ಅಧಿಕಾರಯುತ ಜಯ ದಾಖಲಿಸಿತು.
ಇಲ್ಲಿನ ಅಥ್ಲೆಟಿಕ್ಸ್‌ ಕ್ರೀಡಾಂಗಣದಲ್ಲಿಬುಧವಾರ ನಡೆದ ಪಂದ್ಯದಲ್ಲಿಕೋಚ್‌ ಮಾರ್ಕೊ ಪೆಜ್ಜೈಯಲಿ ಅವರ ತಂಡ 3-0 ಅಂತರದಲ್ಲಿಚೆನ್ನೈಯಿನ್‌ ಎಫ್‌ಸಿಗೆ ಏಪಕ್ಷೀಯವಾಗಿ ಆಘಾತ ನೀಡಿತು. ಇದರೊಂದಿಗೆ ಹಾಲಿ ಟೂರ್ನಿಯಲ್ಲಿಚೆನ್ನೈಯಿನ್‌ ವಿರುದ್ಧ ಸತತ ಎರಡನೇ ಜಯ ದಾಖಲಿಸಿತು. ಈ ಗೆಲುವಿನೊಂದಿಗೆ ಒಟ್ಟಾರೆ 17 ಅಂಕ ಕಲೆಹಾಕಿದ ಬ್ಲೂಸ್‌ 11 ತಂಡಗಳಿರುವ ಅಂಕಪಟ್ಟಿಯಲ್ಲಿ6ನೇ ಸ್ಥಾನಕ್ಕೆ ಜಿಗಿಯಿತಲ್ಲದೆ, ಸೆಮಿಫೈನಲ್‌ ಹಂತಕ್ಕೆ ಮತ್ತಷ್ಟು ಸನಿಹಗೊಂಡಿತು. ಬೆಂಗಳೂರು ತಂಡದ ಪರ ಇಮಾನ್‌ ಬಸಫಾ (12ನೇ ನಿಮಿಷ ಪೆನಾಲ್ಟಿ) ಒಂದು ಗೋಲ್‌ ಬಾರಿಸಿದರೆ ಉದಾಂತ ಸಿಂಗ್‌ (42, 52ನೇ ನಿಮಿಷ) ಎರಡು ಗೋಲ್‌ ಗಳಿಸಿ ಜಯದ ರೂವಾರಿಯೆನಿಸಿದರು.
ಸೋಲಿನ ಹಿನ್ನಡೆ ತಗ್ಗಿಸಲು ಚೆನ್ನೈಯಿನ್‌ ತಂಡ 62 ಮತ್ತು 74ನೇ ನಿಮಿಷದಲ್ಲಿಆಟಗಾರರ ಬದಲಾವಣೆಗೆ ಒತ್ತು ನೀಡಿತು. ಆದರೆ ಮುನ್ನಡೆ ಹೊಂದಿದ್ದ ಕಾರಣ ರಕ್ಷ ಣಾ ಕೋಟೆಯನ್ನು ಬಿಗಿಗೊಳಿಸಿದ ಬೆಂಗಳೂರು ತಂಡ ಎದುರಾಳಿಯ ಎಲ್ಲಗೋಲಿನ ಯತ್ನಗಳನ್ನು ನಿರಂತರವಾಗಿ ಹಿಮ್ಮೆಟಿಸುವ ಮೂಲಕ ಸಂಪೂರ್ಣ ಹಿಡಿತ ಸಾಧಿಸಿತು. ನಂತರ ಬ್ಲೂಸ್‌ ಕೂಡ 77 ಮತ್ತು 82ನೇ ನಿಮಿಷಗಳಲ್ಲಿಮುಯಿರಾಂಗ್‌ ಬದಲಿಗೆ ಭುಟಿಯಾ, ಪ್ರಿನ್ಸ್‌ ಇಬಾರ ಬದಲಿಗೆ ಎಡ್ಮಂಡ್‌ಗೆ ಹನ್ನೊಂದರ ಬಳಗದಲ್ಲಿಸ್ಥಾನ ಕಲ್ಪಿಸಿತು.
ಇದಕ್ಕೂ ಮುನ್ನ 2-0 ಅಂತರದಲ್ಲಿವಿರಾಮ ಪಡೆದ ಬೆಂಗಳೂರು ತಂಡ ದ್ವಿತೀಯಾರ್ಧದಲ್ಲಿತನ್ನ ಆಕ್ರಮಣಕಾರಿ ಆಟಕ್ಕೆ ಆದ್ಯತೆ ನೀಡಿತು. ಪ್ರಥಮಾರ್ಧದ 42ನೇ ನಿಮಿಷದಲ್ಲಿಋುತುವಿನ ತಮ್ಮ ಮೊದಲ ಗೋಲ್‌ ಬಾರಿಸಿ ತಂಡದ ಮುನ್ನಡೆಯನ್ನು ದ್ವಿಗುಣಗೊಳಿಸಿದ ರೈಟ್‌ ವಿಂಗರ್‌ ಉದಾಂತ ಸಿಂಗ್‌, ಎರಡನೇ ಅವಧಿ ಆರಂಭವಾದ 7 ನಿಮಿಷಗಳಲ್ಲಿತಂಡದ ಮೂರನೇ ಹಾಗೂ ವೈಯಕ್ತಿಕ ಎರಡನೇ ಗೋಲ್‌ ದಾಖಲಿಸಿದರು.
ಬ್ಲೂಸ್‌ ಆಟಗಾರನಿಗೆ ಅಡ್ಡಿ ಪಡಿಸಿದ ಕಾರಣ ಚೆನ್ನೈಯಿನ್‌ ತಂಡದ ಸಜಿದ್‌ ಧೋತ್‌ 41ನೇ ನಿಮಿಷದಲ್ಲಿರೆಫರಿಯಿಂದ ಹಳದಿ ಕಾರ್ಡ್‌ ಪಡೆದರು. ಇದು ಪಂದ್ಯದಲ್ಲಿನೀಡಿದ ಮೊದಲ ಯೆಲ್ಲೊಕಾರ್ಡ್‌. ಇದಕ್ಕೂ ಮುನ್ನ 11ನೇ ನಿಮಿಷದಲ್ಲಿಚೆಂಡನ್ನು ತಡೆಯುವ ಯತ್ನದಲ್ಲಿಬ್ಲೂಸ್‌ ನಾಯಕ ಸುನೀಲ್‌ ಛೆಟ್ರಿಗೆ ಚೆನ್ನೈಯಿನ್‌ ಆಟಗಾರರು ಅಡ್ಡಿಪಡಿಸಿದ ಪರಿಣಾಮ ರೆಫರಿ ಕೂಡಲೇ ಬೆಂಗಳೂರು ತಂಡಕ್ಕೆ ಪೆನಾಲ್ಟಿ ಅವಕಾಶ ಕಲ್ಪಿಸಿದರು. ಯಾವುದೇ ತಪ್ಪು ಮಾಡದ ಇಮಾನ್‌ ಬಸಫಾ 12ನೇ ನಿಮಿಷದಲ್ಲಿಗೋಲ್‌ ದಾಖಲಿಸಿ ಬೆಂಗಳೂರು ತಂಡಕ್ಕೆ 1-0 ಅಂತರದ ಮುನ್ನಡೆ ಕಲ್ಪಿಸಿದರು.
ಅಂಕಪಟ್ಟಿಯಲ್ಲಿಮೇಲೇರುವ ಗುರಿಯೊಂದಿಗೆ ಕಣಕ್ಕಿಳಿದ ಬೆಂಗಳೂರು ಎಫ್‌ಸಿ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಇದರ ಫಲವಾಗಿ ಪಂದ್ಯ ಆರಂಭಗೊಂಡ 4ನೇ ನಿಮಿಷದಲ್ಲಿಇಮಾನ್‌ ಬಸಫಾ ಗೋಲ್‌ ಬಾರಿಸುವ ಅವಕಾಶ ಗಳಿಸಿದರಾದರೂ ಎದುರಾಳಿ ರಕ್ಷ ಣಾ ಪಡೆ ತ್ವರಿತವಾಗಿ ಎಚ್ಚೆತ್ತುಕೊಂಡ ಕಾರಣ ಬ್ಲೂಸ್‌ನ ಆರಂಭಿಕ ಮುನ್ನಡೆ ತಪ್ಪಿತು. ಆದರೆ 9ನೇ ನಿಮಿಷದಲ್ಲಿಪರಾಗ್‌ ಶ್ರೀವಾಸ್‌ ತಪ್ಪಿನಿಂದ ಚೆನ್ನೈಯಿನ್‌ ಗೋಲ್‌ ಗಳಿಸುವ ಉತ್ತಮ ಅವಕಾಶ ಗಳಿಸಿದರೂ ಇದರ ಲಾಭ ಪಡೆಯಲು ಬಿಎಫ್‌ಸಿ ಆಟಗಾರರು ಆಸ್ಪದ ನೀಡಲಿಲ್ಲ.
ಬೆಂಗಳೂರು ಎಫ್‌ಸಿ ತನ್ನ ಮುಂದಿನ ಪಂದ್ಯದಲ್ಲಿಜನವರಿ 30ರಂದು ತಿಲಕ್‌ ಮೈದಾನದಲ್ಲಿಕೇರಳ ಬ್ಲಾಸ್ಟರ್ಸ್‌ ಎಫ್‌ಸಿ ತಂಡವನ್ನು ಎದುರಿಸಲಿದೆ.

Malcare WordPress Security