ಮುಂಬೈ ಸಿಟಿ ಎಫ್‌ಸಿ ವಿರುದ್ಧ ಬ್ಲೂಸ್‌ಗೆ 3-0 ಅಂತರದ ಗೆಲುವು | ಇಬಾರ, ದಾನಿಶ್ ನೆರವಿನಿಂದ ಮಿಂಚಿದ ಮಾರ್ಕೊ ಬಳಗ
ಪಂದ್ಯದ ಮೊದಲಾರ್ಧದಲ್ಲಿನೀಡಿದ ಆಕ್ರಮಣಕಾರಿ ಆಟದ ಫಲವಾಗಿ ಬೆಂಗಳೂರು ಎಫ್‌ಸಿ ಇಂಡಿಯನ್ ಸೂಪರ್ ಲೀಗ್‌ನ ತನ್ನ 11ನೇ ಪಂದ್ಯದಲ್ಲಿಹಾಲಿ ಚಾಂಪಿಯನ್ ಮುಂಬೈ ಸಿಟಿ ಎಫ್‌ಸಿ ತಂಡವನ್ನು ಸೋಲಿಸಿ ಗೆಲುವಿನೊಂದಿಗೆ ದ್ವಿತೀಯಾರ್ಧ ಆರಂಭಿಸಿದೆ.
ಇಲ್ಲಿನ ಪಿಜೆಎನ್ ಕ್ರೀಡಾಂಗಣದಲ್ಲಿಸೋಮವಾರ ನಡೆದ ಪಂದ್ಯದಲ್ಲಿಕೋಚ್ ಮಾರ್ಕೊ ಪೆಜ್ಜೈಯುಲಿ ಬಳಗ, 3-0 ಗೋಲ್‌ಗಳ ಅಂತರದಿಂದ ಲೀಗ್ ಲೀಡರ್ ಮುಂಬೈ ಸಿಟಿ ಎಫ್‌ಸಿಗೆ ಆಘಾತ ನೀಡಿತು. ಈ ಜಯದೊಂದಿಗೆ ಒಟ್ಟಾರೆ 13 ಅಂಕ ಕಲೆಹಾಕಿದ ಬ್ಲೂಸ್ ಅಂಕಪಟ್ಟಿಯಲ್ಲಿ7ನೇ ಸ್ಥಾನಕ್ಕೆ ಜಿಗಿಯುವ ಮೂಲಕ ಪ್ಲೇಆಫ್ ಅಂತರವನ್ನು ತಗ್ಗಿಸುವ ನಿಟ್ಟಿನಲ್ಲಿಮೊದಲ ಹೆಜ್ಜೆ ಇರಿಸಿತು. ಬೆಂಗಳೂರು ಎಫ್‌ಸಿ ಪರ ದಾನಿಶ್ (8ನೇ ನಿಮಿಷ) ಒಂದು ಗೋಲ್ ಬಾರಿಸಿದರೆ, ಪ್ರಿನ್ಸ್ ಇಬಾರ (23, 45ನೇ ನಿಮಿಷ) ಎರಡು ಗೋಲ್ ದಾಖಲಿಸಿ ತಂಡದ ಜಯದಲ್ಲಿಪ್ರಮುಖ ಪಾತ್ರವಹಿಸಿದರು.
ಮುನ್ನಡೆ ಗಳಿಸಿದ ಕಾರಣ ಮೊದಲಾರ್ಧದ ನಂತರ ಬಿಎಫ್‌ಸಿ ರಕ್ಷ ಣಾತ್ಮಕ ಆಟಕ್ಕೆ ಮುಂದಾದರೆ, ಮುಂಬೈ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿತು. ಆದರೆ ಎದುರಾಳಿಯ ಎಲ್ಲಗೋಲಿನ ಯತ್ನಗಳನ್ನು ಹಿಮ್ಮೆಟ್ಟಿಸಿದ ಬ್ಲೂಸ್, ಟೂರ್ನಿಯಲ್ಲಿಮೂರನೇ ಜಯ ದಾಖಲಿಸುವಲ್ಲಿಸಫಲಗೊಂಡಿತು.
ವಿರಾಮಕ್ಕೂ ಮುನ್ನ ಮತ್ತೆ ರೋಶನ್ ನವೋರೆಮ್ ನೆರವಿನಿಂದ 45ನೇ ನಿಮಿಷದಲ್ಲಿತಂಡದ 3ನೇ ಹಾಗೂ ವೈಯಕ್ತಿಕ 2ನೇ ಗೋಲ್ ಗಳಿಸಿದ ಇಬಾರ ತಂಡದ ಮುನ್ನಡೆಯನ್ನು 3-0ಗೆ ಹಿಗ್ಗಿಸಿದರು. ಇದರೊಂದಿಗೆ ಹಾಲಿ ಟೂರ್ನಿಯಲ್ಲಿಇದೇ ಮೊದಲ ಬಾರಿ ಬೆಂಗಳೂರು ಎಫ್‌ಸಿ ಮೊದಲಾರ್ಧಕ್ಕೆ 3-0 ಅಂತರದ ಪ್ರಭುತ್ವ ಸಾಧಿಸಿತು. 33ನೇ ನಿಮಿಷದಲ್ಲಿಬ್ಲೂಸ್‌ನ ಪ್ರತೀಕ್ ಚೌಧರಿ ಹಾಗೂ 45ನೇ ನಿಮಿಷದಲ್ಲಿಮುಂಬೈ ತಂಡದ ವಿನಿತ್ ರಾಯ್ ಹಳದಿ ಕಾರ್ಡ್ ಎಚ್ಚರಿಕೆ ಪಡೆದರು. ಈ ಮಧ್ಯೆ, ಬಿಎಫ್‌ಸಿ ಮುನ್ನಡೆಯನ್ನು 3-0ಗೆ ವಿಸ್ತರಿಸುವ ಅವಕಾಶವಿತ್ತದಾರೂ ಎದುರಾಳಿಯ ರಕ್ಷ ಣಾತ್ಮಕ ಆಟದಿಂದ ವಿಫಲಗೊಂಡಿತು.
ಆರಂಭಿಕ ಮುನ್ನಡೆಯಿಂದ ಮತ್ತಷ್ಟು ಆಕ್ರಮಣಕಾರಿ ಆಟಕ್ಕೆ ಆದ್ಯತೆ ನೀಡಿದ ಬೆಂಗಳೂರು ತಂಡದ ಮುನ್ನಡೆಯನ್ನು 23ನೇ ನಿಮಿಷದಲ್ಲಿಪ್ರಿನ್ಸ ಇಬಾರ ದ್ವಿಗುಣಗೊಳಿಸಿದರು. ಗೋಲ್ ಪೆಟ್ಟಿಗೆ ಬಳಿಯಿದ್ದ ಚೆಂಡನ್ನು ದೂರ ಸರಿಸುವಲ್ಲಿಮುಂಬೈ ಡಿಫೆಂಡರ್‌ಗಳು ಎಡವಿದರು. ಅಂತಿಮವಾಗಿ ಚೆಂಡು ರೋಶನ್ ಹಿಡಿತಕ್ಕೆ ಒಳಪಟ್ಟಿತು. ಕೂಡಲೇ ಚೆಂಡನ್ನು ಇಬಾರ ಬಳಿ ತಳ್ಳಿದರು. ಯಾವುದೇ ತಪ್ಪೆಸಗದ ಇಬಾರ, ಗೋಲ್ ಬಾರಿಸಿ ತಂಡದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು. ಈ ಮಧ್ಯೆ , ಇಬಾರ ಅವರನ್ನು ತಡೆಯುವ ಯತ್ನದಲ್ಲಿಮುಂಬೈ ತಂಡದ ರಾಹುಲ್ ಭೇಕೆ ಪ್ರಮಾದವೆಸಗಿದ ಕಾರಣ ಪಂದ್ಯದಲ್ಲಿಮೊದಲ ಬಾರಿ ರೆಫರಿಯಿಂದ ಹಳದಿ ಕಾರ್ಡ್‌ಗೆ ಗುರಿಯಾದರು.
ಪ್ಲೇಆಫ್ ಹತ್ತಿರವಾಗುವ ಗುರಿಯೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಬೆಂಗಳೂರು ಎಫ್‌ಸಿ ಪಂದ್ಯದ ಆರಂಭದಲ್ಲೇ 1-0 ಅಂತರದ ಮುನ್ನಡೆ ಪಡೆಯಿತು. ಪಂದ್ಯದ 8ನೇ ನಿಮಿಷದಲ್ಲಿಕ್ಲೀಟನ್ ಸಿಲ್ವಾ ನೀಡಿದ ಚೆಂಡಿನ ಪಾಸನ್ನು ಮುಂಬೈನ ಮೂವರ ಡಿಫೆಂಡರ್‌ಗಳನ್ನು ವಂಚಿಸಿ ಹಿಡಿತಕ್ಕೆ ಪಡೆದ ದಾನಿಶ್ ಫರೂಕಿ ಗೋಲ್ ಬಾರಿಸುವಲ್ಲಿಯಶಸ್ವಿಯಾದರು. ಇದಕ್ಕೂ ಮುನ್ನ ಲೀಗ್ ಲೀಡರ್ ಮುಂಬೈ ತಂಡ 2ನೇ ನಿಮಿಷದಲ್ಲಿನಡೆಸಿದ ಅದ್ಭುತ ಗೋಲಿನ ಯತ್ನವನ್ನು ಬಿಎಫ್‌ಸಿ ಕಸ್ಟೋಡಿಯನ್ ಗುರ್‌ಪ್ರೀತ್ ಸಿಂಗ್ ಸಂಧು ತಡೆಯುವಲ್ಲಿಸಫಲರಾದರು.
ಬೆಂಗಳೂರು ಎಫ್‌ಸಿ ತನ್ನ ಮುಂದಿನ ಪಂದ್ಯದಲ್ಲಿಜನವರಿ 15ರಂದು ಫಟೋರ್ಡಾದ ಪಿಜೆಎನ್ ಕ್ರೀಡಾಂಗಣದಲ್ಲಿಎಟಿಕೆ ಮೋಹನ್ ಬಗಾನ್ ತಂಡವನ್ನು ಎದುರಿಸಲಿದೆ.