ಕೇರಳ ಎಫ್‌ಸಿ ವಿರುದ್ಧ ಬಿಎಫ್‌ಸಿಗೆ 1-0 ಅಂತರದ ಗೆಲುವು

ಕೇರಳ ಬ್ಲಾಸ್ಟರ್ಸ್‌ ಎಫ್‌ಸಿ ವಿರುದ್ಧ 3 ಅಂಕ ಗಳಿಸಿದ ಬೆಂಗಳೂರು ಎಫ್‌ಸಿ | ರೋಶನ್‌ ಜಯದ ರೂವಾರಿ

ರೋಶನ್‌ ನೌರೆಮ್‌ ದಾಖಲಿಸಿದ ಏಕೈಕ ಗೋಲಿನ ಸಾಹಸದಿಂದ ಬೆಂಗಳೂರು ಎಫ್‌ಸಿ ತನ್ನ 14ನೇ ಪಂದ್ಯದಲ್ಲಿಕೇರಳ ಬ್ಲಾಸ್ಟರ್ಸ್‌ ಎಫ್‌ಸಿ ವಿರುದ್ಧ ಗೆಲುವು ದಾಖಲಿಸುವ ಮೂಲಕ ಟೂರ್ನಿಯಲ್ಲಿಐದನೇ ಜಯ ದಾಖಲಿಸಿದೆ.
ತಿಲಕ್‌ ಮೈದಾನದಲ್ಲಿಭಾನುವಾರ ನಡೆದ ಹಣಾಹಣಿಯಲ್ಲಿಬ್ಲೂಸ್‌ 1-0 ಅಂತರದಲ್ಲಿಕೇರಳ ವಿರುದ್ಧ ಅಧಿಕಾರಯುತ ಜಯ ದಾಖಲಿಸಿತು. ಹಿಂದಿನ ಪಂದ್ಯದಲ್ಲಿಡ್ರಾ ಸಾಧಿಸಿ ಅಂಕ ಹಂಚಿಕೊಂಡಿದ್ದ ಬಿಎಫ್‌ಸಿ ಈ ಪಂದ್ಯದಲ್ಲಿಪೂರ್ಣ 3 ಅಂಕ ಗಳಿಸಿತು. ಇದರೊಂದಿಗೆ ಒಟ್ಟಾರೆ 20 ಕಲೆಹಾಕಿರುವ ಕೋಚ್‌ ಮಾರ್ಕೊ ಪೆಜ್ಜೈಯುಲಿ ಬಳಗ ಅಂಕಪಟ್ಟಿಯಲ್ಲಿನಾಲ್ಕನೇ ೕ ಸ್ಥಾನಕ್ಕೆ ಬಡ್ತಿ ಹೊಂದಿತು. ಬೆಂಗಳೂರು ಎಫ್‌ಸಿ ರೋಶನ್‌ ನೌರೆಮ್‌ 56ನೇ ನಿಮಿಷದಲ್ಲಿಗೋಲ್‌ ಗಳಿಸಿ ಜಯದ ರೂವಾರಿಯೆನಿಸಿದರು.
ಮೊದಲಾರ್ಧ ಗೋಲ್‌ ರಹಿತಗೊಂಡ ಪರಿಣಾಮ ಬ್ಲೂಸ್‌ ಆಕ್ರಮಣಕಾರಿ ಆಟದೊಂದಿಗೆ ದ್ವಿತೀಯಾರ್ಧ ಆರಂಭಿಸಿತು. ಇದರ ಫಲವಾಗಿ 56ನೇ ನಿಮಿಷದಲ್ಲಿರೋಶನ್‌ ಗೋಲ್‌ ಬಾರಿಸಿ ಬ್ಲೂಗೆ 1-0 ಅಂತರದ ಮುನ್ನಡೆ ತಂದರು. 65ನೇ ನಿಮಿಷದಲ್ಲಿಆಟಗಾರರ ಬದಲಾವಣೆಗೆ ಒತ್ತು ನೀಡಿದ ಬೆಂಗಳೂರು ತಂಡ ಮುನ್ನಡೆ ವಿಸ್ತರಿಸಲು ಯತ್ನಿಸತು. ಆದರೆ ಯಾವುದೇ ಲಾಭ ದೊರೆಯಲಿಲ್ಲ. ಕೊನೆಯವರೆಗೂ ಗೋಲಿಗಾಗಿ ಯತ್ನಿಸಿದ ಕೇರಳ ತಂಡ ಬ್ಲೂಸ್‌ ರಕ್ಷ ಣಾ ಕೋಟೆಯನ್ನು ಬೇಧಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಕನಿಷ್ಠ ಡ್ರಾ ಮಾಡಿಕೊಳ್ಳಲು ಕೇರಳ ತಂಡಕ್ಕೆ ಛೆಟ್ರಿ ಪಡೆ ಬಿಡಲಿಲ್ಲ.
ಇದಕ್ಕೂ ಮುನ್ನ ಉಭಯ ತಂಡಗಳು ರಕ್ಷ ಣಾತ್ಮಕ ಆಟಕ್ಕೆ ಆದ್ಯತೆ ನೀಡಿದ ಪರಿಣಾಮ 45 ನಿಮಿಷಗಳ ಮೊದಲಾರ್ಧದ ಆಟದಲ್ಲಿಯಾವುದೇ ಗೋಲ್‌ ದಾಖಲಾಗಲಿಲ್ಲ. ಆದರೆ ಕೇರಳ ಬ್ಲಾಸ್ಟರ್ಸ್‌ಗೆ ಹೋಲಿಸಿದರೆ, ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ಹಲವು ಬಾರಿ ಗೋಲ್‌ ಗಳಿಕೆಯ ಅವಕಾಶಗಳನ್ನು ಸೃಷ್ಟಿಸಿ ಮೇಲುಗೈ ಸಾಧಿಸಿತು. ದಾನಿಶ್‌ ಫರೂಕಿ ಮತ್ತು ಪ್ರಿನ್ಸ್‌ ಇಬಾರ ಗೋಲ್‌ ಗಳಿಸಲು ಉತ್ತಮ ಅವಕಾಶ ಗಿಟ್ಟಿಸಿದರೂ ನಿಗದಿತ ಗುರಿ ಸಾಧಿಸುವಲ್ಲಿವಿಫಲಗೊಂಡರು. ಕೇರಳ ಬ್ಲಾಸ್ಟರ್ಸ್‌ ಸಹ ದಾಳಿ ಮತ್ತು ಗೋಲ್‌ ಗಳಿಕೆಯಲ್ಲಿಹಿಂದೆ ಬಿಳಲಿಲ್ಲ. ಎದುರಾಳಿಯ ಪ್ರತಿ ತಂತ್ರಕ್ಕೆ ತಿರುಗೇಟು ನೀಡಿತು. ಉಭಯ ತಂಡಗಳ ಡಿಫೆಂಡರ್‌ಗಳು ಇತ್ತಂಡಗಳ ಗೋಲಿನ ಅವಕಾಶವನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿ ಗಮನ ಸೆಳೆದರು.
ಆಕ್ರಮಣಕಾರಿ ಕಾಲ್ಚಳಕ ತೋರಿದ ಬಿಎಫ್‌ಸಿ ಆಟಗಾರರು 37 ಮತ್ತು 41ನೇ ನಿಮಿಷದಲ್ಲಿಎರಡು ಬಾರಿ ಗೋಲ್‌ ಬಾರಿಸುವ ಅವಕಾಶ ಗಿಟ್ಟಿಸಿದರು. 37ನೇ ನಿಮಿಷದಲ್ಲಿಇಬಾರ ಮತ್ತು ಛೆಟ್ರಿ ಮಾಡಿದ ಪ್ರಮಾದವನ್ನೇ 41ನೇ ನಿಮಿಷದಲ್ಲಿಉದಾಂತ ಮತ್ತು ಪರಾಗ್‌ ಮಾಡಿದರು. ಹೀಗಾಗಿ ವಿರಾಮಕ್ಕೆ ಮುನ್ನಡೆ ಗಳಿಸಲು ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿಬ್ಲೂಸ್‌ ವಿಫಲಗೊಂಡಿತು.
20ನೇ ನಿಮಿಷದಲ್ಲಿರೋಶನ್‌ ಮೈದಾನದ ಎಡ ಬದಿಯಿಂದ ಚೆಂಡನ್ನು ಉದಾಂತ ಸಿಂಗ್‌ ಅವರತ್ತ ತಳ್ಳಿದರು. ಕೂಡಲೇ ಚೆಂಡನ್ನು ನಾಯಕ ಸುನೀಲ್‌ ಛೆಟ್ರಿಯತ್ತ ಪಾಸ್‌ ಮಾಡಿದರು. ಛೆಟ್ರಿ ಅದನ್ನು ಅತ್ಯಂತ ಜಾಗರೂಕತೆಯಿಂದ ಡ್ಯಾನಿಶ್‌ ಫಾಕೂಕ್‌ ದಿಕ್ಕಿನಲ್ಲಿಬ್ಯಾಕ್‌ ಪಿಕ್‌ ಮಾಡಿದರು. ಆದರೆ ಡ್ಯಾನಿಸ್‌ ಹೊಡೆದ ಚೆಂಡು ಗೋಲ್‌ ಪೆಟ್ಟಿಗೆಯಿಂದ ದೂರದಲ್ಲಿಹಾದು ಹೋಯಿತು. ಹೀಗಾಗಿ ಆರಂಭಿಕ ಮುನ್ನಡೆ ಗಳಿಸುವ ಬ್ಲೂಸ್‌ ಆಸೆ ಈಡೇರಲಿಲ್ಲ. ಇದಕ್ಕೂ ಮುನ್ನ ಚೆಂಡನ್ನು ಟ್ಯಾಕಲ್‌ ಮಾಡುವ ಯತ್ನದಲ್ಲಿಎದುರಾಳಿ ತಂಡದ ಮಾರ್ಕೊ ಲೆಸ್ಕೊವಿಕ್‌ ಅವರಿಗೆ ಅಡ್ಡಿಪಡಿಸಿದ ಕಾರಣ ಪಂದ್ಯದ 11ನೇ ನಿಮಿಷದಲ್ಲಿಬಿಎಫ್‌ಸಿ ತಂಡದ ಪ್ರಿನ್ಸ್‌ ಇಬಾರ ರೆಫರಿಯಿಂದ ಹಳದಿ ಕಾರ್ಡ್‌ ಎಚ್ಚರಿಕೆ ಪಡೆದರು. 24ನೇ ನಿಮಿಷದಲ್ಲಿರೋಶನ್‌ ನಡೆಸಿದ ಗೋಲಿನ ಯತ್ನ ಕೂಡ ಸಫಲವಾಗಲಿಲ್ಲ.
ಪೂರ್ಣ ಅಂಕಗಳ ಗಳಿಕೆಯೊಂದಿಗೆ ಅಂತಿಮ ನಾಲ್ಕರ ಘಟ್ಟಕ್ಕೆ ಸನಿಹಗೊಳ್ಳುವ ಗುರಿಯೊಂದಿಗೆ ಕಣಕ್ಕಿಳಿಸಿದ ಕೋಚ್‌ ಮಾರ್ಕೊ ಪೆಜ್ಜೈಯುಲಿ ಬಳಗ 4-3-3 ಮಾದರಿಯಲ್ಲಿಆಟ ಆರಂಭಿಸಿದರೆ, ಎದುರಾಳಿ ತಂಡ 4-4-2ರಲ್ಲಿರಚನೆಯೊಂದಿಗೆ ಕಣಕ್ಕಿಳಿಯಿತು.
ಬೆಂಗಳೂರು ಎಫ್‌ಸಿ ತನ್ನ ಮುಂದಿನ ಪಂದ್ಯದಲ್ಲಿಫೆಬ್ರವರಿ 5ರಂದು ಬಂಬೋಲಿಮ್‌ ಅಥ್ಲೆಟಿಕ್ಸ್‌ ಕ್ರೀಡಾಂಗಣದಲ್ಲಿಜಮ್‌ಶೆಡ್‌ಪುರ ಎಫ್‌ಸಿಯನ್ನು ಎದುರಿಸಲಿದೆ.

Malcare WordPress Security