ಕೆಎಸ್‌ಎಫ್‌ಎ ಮಹಿಳೆಯರ ‘ಎ’ ಡಿವಿಜನ್‌ ಲೀಗ್‌ ಅಭಿಯಾನದಲ್ಲಿ ಪಾಲ್ಗೊಳ್ಳಲು ಬಿಎಫ್‌ಸಿ 15 ವರ್ಷದೊಳಗಿನ ಬಾಲಕಿಯರು ಸಜ್ಜು

ಬೆಂಗಳೂರು ಫುಟ್ಬಾಲ್‌ ಕ್ರೀಡಾಂಗಣದಲ್ಲಿತನ್ನ ಮೊದಲ ಪಂದ್ಯದಲ್ಲಿಮಾಡರ್ನ್‌ ಗರ್ಲ್ಸ್ ಎಫ್‌ಸಿ ಎದುರಿಸಲಿರುವ ಡೆವೆಲಪ್‌ಮೆಂಟಲ್‌ ತಂಡ

ಬೆಂಗಳೂರು ಎಫ್‌ಸಿ ಯೂತ್‌ ಡೆವೆಲಪ್‌ಮೆಂಟ್‌ ಪ್ರೊಗ್ರಾಂಗೆ ಐತಿಹಾಸಿಕ ಕ್ಷ ಣ. ಏಕೆಂದರೆ ಬಿಎಫ್‌ಸಿ 15 ವರ್ಷದೊಳಗಿನ ಬಾಲಕಿಯರ ತಂಡವು ಕೆಎಸ್‌ಎಫ್‌ಎ ಮಹಿಳೆಯರ ‘ಎ’ಡಿವಿಜನ್‌ ಲೀಗ್‌ನಲ್ಲಿ ಇದೇ ಮೊದಲ ಬಾರಿ ಸ್ಪರ್ಧಿಸುತ್ತಿದ್ದು, ಮಂಗಳವಾರ ಬೆಂಗಳೂರು ಫುಟ್ಬಾಲ್‌ ಕ್ರೀಡಾಂಗಣದಲ್ಲಿಮಾಡರ್ನ್‌ ಗರ್ಲ್ಸ್ ಎಫ್‌ಸಿ ತಂಡವನ್ನು ಎದುರಿಸಲಿದೆ.
2021ರ ಸೆಪ್ಟೆಂಬರ್‌ನಲ್ಲಿಆಯ್ಕೆ ಟ್ರಯಲ್ಸ್‌ ಮಾಡುವ ಮೂಲಕ ಬಿಎಫ್‌ಸಿ ಮಹಿಳಾ ತಂಡವನ್ನು ರಚಿಸಲಾಗಿದೆ.ಮುಖ್ಯ ಕೋಚ್‌ ಲೆವಾನಾ ಸ್ಯಾಮ್ಯುಯೆಲ್‌ ತಂಡವನ್ನು ಮುನ್ನೆಡಸಲಿದ್ದು, ಮೈಕಲ್‌ ಮಾರ್ಕ್‌ ಜಾನ್ಸನ್‌ ಸಹಾಯ ಮಾಡಲಿದ್ದಾರೆ. ಇನ್ನು ತನ್ವಿ ನಾಯರ್‌ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
‘‘ ಕೆಎಸ್‌ಎಫ್‌ಎ ಎ ಡಿವಿಜನ್‌ನಲ್ಲಿನಮ್ಮ 15 ವರ್ಷದೊಳಗಿನವರ ಬಾಲಕಿಯರ ತಂಡದ ಆಟವನ್ನು ನೋಡಲು ನಾವೆಲ್ಲರೂ ತುಂಬಾ ಉತ್ಸುಕರಾಗಿದ್ದೇವೆ. ನಮ್ಮ ಯೂತ್‌ ಡೆವೆಲಪ್‌ಮೆಂಟ್‌ ಕಾರ್ಯಕ್ರಮಕ್ಕೆ ಇದೊಂದು ದೊಡ್ಡ ಕ್ಷ ಣವಾಗಿದೆ. ಏಕೆಂದರೆ ಕ್ಲಬ್‌ ಆರಂಭವಾದಗಿನಿಂದಲೂ ಮಹಿಳೆಯರ ತಂಡವನ್ನು ಪರಿಚಯಿಸುವುದು ನಮ್ಮ ಉದ್ದೇಶವಾಗಿತ್ತು. ಈ ತಂಡ ಮತ್ತು ಈ ಆಟಗಳು ಆ ದಿಕ್ಕಿನಲ್ಲಿಮೊದಲ ಹೆಜ್ಜೆಯಾಗಿವೆ ಮತ್ತು ಈ ಬಾಲಕಿಯರಿಗೆ ಲೀಗ್‌ನಲ್ಲಿಪಾಲ್ಗೊಳ್ಳುವ ಅವಕಾಶ ಕಲ್ಪಿಸಿರುವುದಕ್ಕೆ ಕೆಎಸ್‌ಎಫ್‌ಎಗೆ ನಾವು ಧನ್ಯವಾದಗಳನ್ನು ಹೇಳಲು ಬಯಸುತ್ತೇವೆ, ’’ ಎಂದು ಕ್ಲಬ್‌ನ ಸಿಇಒ ಮಂದಾರ್‌ ತಮ್ಹಾನೆ ಹೇಳಿದ್ದಾರೆ.
ಬೆಂಗಳೂರು ಎಫ್‌ಸಿಯು ಡಿವಿಜನ್‌ನಲ್ಲಿರುವ ಇತರ ಏಳು ತಂಡಗಳೊಂದಿಗೆ ಸೇರ್ಪಡೆಯಾಗಲಿದೆ. ಸಾಯ್‌ ಸ್ಪೋರ್ಟ್ಸ್ ಅಕಾಡೆಮಿ, ರೂಟ್ಸ್‌ ಫುಟ್ಬಾಲ್‌ ಸ್ಕೂಲ್‌, ಪಿಂಕ್‌ ಪ್ಯಾಂಥರ್ಸ್‌ ಎಫ್‌ಸಿ, ಪಾಸ್‌ ಎಫ್‌ಸಿ, ಜಿಆರ್‌ಕೆ ಗರ್ಲ್ಸ್ ಎಫ್‌ಸಿ, ಯುನೈಟೆಡ್‌ ಎಫ್‌ಸಿ ಕೊಡಗು ಮತ್ತು ಮಾಡರ್ನ್‌ ಗರ್ಲ್ಸ್ ಎಫ್‌ಸಿ ಲೀಗ್‌ನಲ್ಲಿರುವ ಇತರ ತಂಡಗಳಾಗಿವೆ. ಒಂದೇ ಚರಣದ ಮಾದರಿಯಲ್ಲಿನಡೆಯಲಿರುವ ಲೀಗ್‌ನಲ್ಲಿಪ್ರತಿ ತಂಡ ಏಳು ಪಂದ್ಯಗಳನ್ನಾಡಲಿದೆ.
‘‘ಕಳೆದ ನಾಲ್ಕು ತಿಂಗಳುಗಳಲ್ಲಿ, ನಾವು ಈ ಹುಡುಗಿಯರಿಗೆ ನಿಯಮಿತವಾಗಿ ತರಬೇತಿ ನೀಡಲು ಪ್ರಯತ್ನಿಸಿದ್ದೇವೆ ಮತ್ತು ಅವರು ಸ್ಪರ್ಧಾತ್ಮಕ ಪಂದ್ಯಗಳಲ್ಲಿಪಾಲ್ಗೊಳ್ಳುವ ಮೂಲಕ ಅವರ ಪ್ರಗತಿಯನ್ನು ಪತ್ತೆಹಚ್ಚಲು ನಾವು ಎದುರು ನೋಡುತ್ತಿದ್ದೇವೆ. ಮಹಿಳೆಯರಲ್ಲಿಒಂದು ವಿಭಾಗದಲ್ಲಿಭಾಗವಹಿಸಲು ನಮಗೆ ಅವಕಾಶ ನೀಡಿದ ಕೆಎಸ್‌ಎಫ್‌ಎಗೆ ನಾವು ಕೃತಜ್ಞರಾಗಿರುತ್ತೇವೆ. ನಾವು ಲೆವಾನಾ ಅವರನ್ನು ಈ ತಂಡಕ್ಕೆ ಮುಖ್ಯ ತರಬೇತುದಾರರನ್ನಾಗಿ ನೇಮಿಸಿದ್ದೇವೆ ಮತ್ತು ಭವಿಷ್ಯಕ್ಕಾಗಿ ನಾವು ಬಿಎಫ್‌ಸಿ ಮಹಿಳಾ ಕಾರ್ಯಕ್ರಮವನ್ನು ನಿರ್ಮಿಸುವುದರಿಂದ ಅವರು ಕೆಲವು ಅಮೂಲ್ಯವಾದ ಅನುಭವವನ್ನು ಪಡೆಯುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ,’’ ಎಂದು ತಳಮಟ್ಟ ಮತ್ತು ಬಿಎಫ್‌ಸಿ ಫುಟ್ಬಾಲ್‌ ಶಾಲೆಗಳ ತಾಂತ್ರಿಕ ಮುಖ್ಯಸ್ಥ ಸುಹೇಲ್‌ ನಾಯರ್‌ ಹೇಳಿದರು.
ಬೆಂಗಳೂರು ಎಫ್‌ಸಿ 15 ವರ್ಷದೊಳಗಿನವರ ಬಾಲಕಿಯರ ತಂಡ ಮತ್ತು ಮಾಡರ್ನ್‌ ಗರ್ಲ್ಸ್ ಎಫ್‌ಸಿ ನಡುವಿನ ಪಂದ್ಯ ಫೆಬ್ರವರಿ 15ರಂದು ಮಂಗಳವಾರ ಬೆಂಗಳೂರು ಫುಟ್ಬಾಲ್‌ ಕ್ರೀಡಾಂಗಣದಲ್ಲಿಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ.
ತಂಡದ ವಿವರ: ಗೋಲ್‌ ಕೀಪರ್‌: ಕಾರ್ಣಿಕಾ ಕಾರ್ತಿಕ್‌
ಡಿಫೆಂಡರ್‌ಗಳು: ಹೋಶಿಕಾ, ಜನನಿ ತೋರ್ಪು, ಮಿಶಾ ಅಗರ್ವಾಲ್‌, ರಿಯಾನ್ನಾ ಲಿಜ್‌ ಜಾಕೋಬ್‌, ಶ್ರುಜನ್‌ ಸಾಯಿ
ಮಿಡ್‌ಫೀಲ್ಡರ್‌ಗಳು: ಆಭಾ ಅಭಯ್‌ ಕುಡಾಲೆ, ಜಸ್ಟಿನಾ ಎ, ಸಂಜನಾ ಎಂಕೆ, ತನ್ವಿ ನಾಯರ್‌, ಬೋನಿಫಿಲಿಯಾ ಶುಲ್ಲೆ ೖ, ಚಿನ್ಮಯಿ ಜಿ ತಿಲಿ, ಸೈಶಾ ಚಾವ್ಲಾ, ವಿಭಾ ಶರಣಪ್ಪ ವಿವೆಮ್‌
ಸ್ಟ್ರೈಕರ್‌ಗಳು: ಅನ್ನಿಕಾ ಶ್ರೀವಾಸ್ತವ್‌, ಅನ್ವಿತಾ ರಘು ರಾಮನ್‌, ಹಸ್ವಿಕಾ ಶ್ರೀಧರನ್‌, ನಂದಿನಿ ಕುಮಾರ್‌, ರುತ್ತು ಶ್ರೀನಂದ, ಶ್ಲೋಕಾ ಕೃಷ್ಣ, ಸಿಲಾ ಆದರ್ಶ್‌, ತಿಯಾ ಝಮೋರಾ ಫೆರ್ನಾಂಡಿಸ್‌
ಮುಖ್ಯ ಕೋಚ್‌: ಲೆವಾನಾ ಸ್ಯಾಮ್ಯುಯೆಲ್‌
ಸಹಾಯಕ ಕೋಚ್‌: ಮೈಕೆಲ್‌ ಮಾರ್ಕ್‌ ಜಾನ್ಸನ್‌

Malcare WordPress Security