ಎಸ್‌ಸಿ ಈಸ್ಟ್‌ ಬೆಂಗಾಲ್‌ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ತಂಡಕ್ಕೆ ಗೆಲುವಿನೊಂದಿಗೆ ಕೊನೆಗೊಳಿಸುವ ಗುರಿ

ತಿಲಕ್‌ ಮೈದಾನದಲ್ಲಿಜಯದೊಂದಿಗೆ ಅಭಿಯಾನ ಮುಕ್ತಾಯಗೊಳಿಸಲು ಮಾರ್ಕೊ ಪೆಜ್ಜೈಯುಲಿ ಬ್ಲೂಸ್‌ ತಂಡಕ್ಕೆ ಕರೆ

ತಿಲಕ್‌ ಮೈದಾನದಲ್ಲಿಶನಿವಾರ ತಮ್ಮ ಬ್ಲೂಸ್‌ 2021-22 ಇಂಡಿಯನ್‌ ಸೂಪರ್‌ ಲೀಗ್‌ ಋುತುವನ್ನು ಗೆಲುವಿನೊಂದಿಗೆ ಕೊನೆಗೊಳಿಸಲು ಉತ್ಸುಕವಾಗಿದೆ ಎಂದು ಕೋಚ್‌ ಮಾರ್ಕೊ ಪೆಜ್ಜೈಯುಲಿ ಹೇಳಿದ್ದಾರೆ. ಪ್ಲೇಆಫ್‌ ಸ್ಪರ್ಧೆಯಿಂದ ಹೊರಬಿದ್ದಿರುವ ಬೆಂಗಳೂರು ತಂಡ, ಈ ಋುತುವಿನಲ್ಲಿಕೇವಲ ಒಂದು ಪಂದ್ಯವನ್ನು ಗೆದ್ದ ಟಾರ್ಚ್‌ಬೀರರ್ಸ್‌ ತಂಡವನ್ನು ಎದುರಿಸಲಿದೆ.

ಎಸ್‌ಸಿ ಈಸ್ಟ್‌ ಬೆಂಗಾಲ್‌ ಉತ್ತಮ ತಂಡವಾಗಿದೆ. ನಾವು ಋುತುವಿನಲ್ಲಿಮೊದಲು ಭೇಟಿಯಾದಾಗ ನಾವು ಎದುರಿಸಿದ ತಂಡಕ್ಕಿಂತ ಅವರು ತುಂಬಾ ಭಿನ್ನವಾಗಿರುವುದನ್ನು ನೀವು ನೋಡಬಹುದು. ಕಳೆದ ಕೆಲವು ವಾರಗಳಲ್ಲಿ, ಅವರು ಪ್ರಬಲ ವಿರೋಧದ ವಿರುದ್ಧ ಪಂದ್ಯಗಳನ್ನಾಡಿದ್ದಾರೆ, ಆದರೆ ಅವೆಲ್ಲವೂ ಕಠಿಣ ಪಂದ್ಯಗಳಾಗಿವೆ. ಅವರಿಗೆ ಹೊಸ ತರಬೇತುದಾರ ಮತ್ತು ಕೆಲವು ಹೊಸ ವಿದೇಶಿ ಆಟಗಾರರು ಇದ್ದಾರೆ. ಅವರು ಅವರನ್ನು ಉತ್ತಮ ತಂಡವನ್ನಾಗಿ ಮಾಡಿದ್ದಾರೆ. ನಾವು ಈಗಾಗಲೇ ಕಳೆದ ಋುತುವಿಗಿಂತ ಹೆಚ್ಚಿನ ಅಂಕಗಳನ್ನು ಪಡೆದಿದ್ದೇವೆ ಮತ್ತು ನಾವು ಇನ್ನೂ ಮೂರು ಅಂಕಗಳೊಂದಿಗೆ ಮುಗಿಸಲು ನಾನು ಬಯಸುತ್ತೇನೆ,’’ ಎಂದು ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿಪೆಜ್ಜೈಯುಲಿ ಹೇಳಿದರು.

ಶನಿವಾರ ನಡೆಯುತ್ತಿರುವ ಪಂದ್ಯವು ಇತ್ತಂಡಗಳ ಎರಡನೇ ಪಂದ್ಯವಾಗಿದೆ. ಕಳೆದ ಜನವರಿಯಲ್ಲಿಬಂಬೋಲಿಮ್‌ನಲ್ಲಿಉಭಯ ತಂಡಗಳು ಎದುರಾಗಿದ್ದೆವು.
ಹಂಗಾಮಿ ಮುಖ್ಯ ಕೋಚ್‌ ರೆನೆಡಿ ಸಿಂಗ್‌ ನೇತೃತ್ವದ ತಂಡದ ವಿರುದ್ಧ ಒಂದು ಅಂಕ ಪಡೆಯಲು ಬೆಂಗಳೂರು ತಂಡ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡಿತ್ತು. ಮೊದಲಾರ್ಧದಲ್ಲಿಸೆಂಬೋಯಿ ಹಾಕಿಪ್‌ ಗೋಲು ಗಳಿಸಿದ ನಂತರ ಸೌರವ್‌ ದಾಸ್‌ ಅವರ ಸ್ವಂತ ಗೋಲು ಬ್ಲೂಸ್‌ಗೆ ಸಮಬಲ ತಂದುಕೊಟ್ಟಿತ್ತು.

ಡ್ಯಾನಿಶ್‌ ಫಾರೂಕ್‌ ತನ್ನ ಒಂದು-ಪಂದ್ಯದ ಅಮಾನತು ಶಿಕ್ಷೆಯನ್ನು ಪೂರೈಸಿದ ನಂತರ ತಂಡಕ್ಕೆ ಮರಳುತ್ತಿರುವ ಕುರಿತು ಪೆಜ್ಜೈಯುಲಿ ಮಾಹಿತಿ ಒದಗಿಸಿದರು. ತಂಡದಲ್ಲಿಕೆಲವು ಬದಲಾವಣೆಗಳಿವೆ. ಏಕೆಂದರೆ ಇನ್ನೂ ಕೆಲವು ಆಟಗಾರರು ಸ್ಪರ್ಧಾತ್ಮಕ ಪಂದ್ಯಗಳನ್ನು ಆಡಲು ಹಿಂದಿರುಗಿದ ನಂತರ ಸ್ನಾಯುಗಳಲ್ಲಿನೋವನ್ನು ಎದುರಿಸುತ್ತಿದ್ದಾರೆ. ಡ್ಯಾನಿಶ್‌ ಮತ್ತೊಮ್ಮೆ ತಂಡವನ್ನು ಸೇರಿಕೊಳ್ಳುತ್ತಾರೆ. ಆದರೆ ನಮಗೆ ಇನ್ನೂ ಕೆಲವು ದೀರ್ಘಕಾಲದ ಗಾಯಗಳಿವೆ. ಅಂತಿಮ ತರಬೇತಿ ಅವಧಿಯ ನಂತರ, ನಮಗಾಗಿ ಯಾರು ಆಡುತ್ತಾರೆ ಎಂಬುದರ ಕುರಿತು ನಾವು ಕರೆ ನೀಡುತ್ತಿವೆ. ಆದರೆ ಮೈದಾನಕ್ಕಿಳಿಯುವ ಹನ್ನೊಂದು ಮಂದಿ ಉತ್ತಮವಾಗಿರುತ್ತಾರೆ,’’ ಎಂದು ಪೆಜ್ಜೈಯುಲಿ ಹೇಳಿದರು.

ಬ್ಲೂಸ್‌ ಪ್ಲೇಆಫ್‌ ಸ್ಪರ್ಧೆಯಿಂದ ಹೊರಗಿರುವಾಗ, ಋುತುವನ್ನು ಕೊನೆಗೊಳಿಸಲು ಸಾಕಷ್ಟು ಧನಾತ್ಮಕ ಅಂಶಗಳನ್ನು ಹೊಂದಿದೆ ಎಂದು ಬೆಂಗಳೂರು ಮ್ಯಾನೇಜರ್‌ ಒತ್ತಿ ಹೇಳಿದರು. ಪ್ಲೇಆಫ್‌ ಹಂತವನ್ನು ತಲುಪುವುದು ಪ್ರಮುಖ ವಿಷಯವಾಗಿತ್ತು. ನಾವೆಲ್ಲರೂ ಅದರ ಬಗ್ಗೆ ನಿರಾಶೆಗೊಂಡಿದ್ದೇವೆ. ಆದರೆ ಈ ಋುತುವಿನಲ್ಲಿನಾವು ಬಹಳಷ್ಟು ವಿಷಯಗಳನ್ನು ಸಾಧಿಸಿದ್ದೇವೆ. ನಾವು ಬಹಳಷ್ಟು ಹೊಸ ಭಾರತೀಯ ಆಟಗಾರರನ್ನು ಶ್ರೇಯಾಂಕಗಳ ಮೂಲಕ ತಂದಿದ್ದೇವೆ ಮತ್ತು ಹೊಸ ವಿದೇಶಿಯರೊಂದಿಗೆ ಹೊಸ ತಂಡವನ್ನು ಅಭಿವೃದ್ಧಿಪಡಿಸಿದ್ದೇವೆ. ಇದು ಸರಿಯಾದ ದಿಕ್ಕಿನಲ್ಲಿಸಾಗಲು ಒಂದು ಪ್ರಮುಖ ಹೆಜ್ಜೆಯಾಗಿದೆ,’’ ಎಂದು ಪೆಜ್ಜೈಯುಲಿ ನುಡಿದರು.

ಬ್ಲೂಸ್‌ ಮತ್ತು ಎಸ್‌ಸಿ ಈಸ್ಟ್‌ ಬೆಂಗಾಲ್‌ ನಡುವಿನ ಪಂದ್ಯ ಶನಿವಾರ ರಾತ್ರಿ 7.30ಕ್ಕೆ ನಿಗದಿಪಡಿಸಲಾಗಿದೆ ಮತ್ತು ಸ್ಟಾರ್‌ ಸ್ಪೋಟ್ಸ…ರ್‍ ನೆಟ್ವರ್ಕ್‌, ಡಿಸ್ನಿ+ಹಾಟ್‌ಸ್ಟಾರ್‌ ಮತ್ತು ಜಿಯೋಟಿವಿಯಲ್ಲಿನೇರ ಪ್ರಸಾರ ಮಾಡಲಾಗುತ್ತದೆ.

Malcare WordPress Security