ಎಟಿಕೆ ಮೋಹನ್‌ ಬಾಗನ್‌ನಿಂದ ಬಲ-ಬ್ಯಾಕ್‌ ಪ್ರಬೀರ್‌ ದಾಸ್‌ ಜತೆ ಸಹಿ ಹಾಕಿದ ಬೆಂಗಳೂರು ಎಫ್‌ಸಿ

2024-25 ರ ಅಭಿಯಾನದ ಅಂತ್ಯದವರೆಗೆ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಮಾಡಿದ ಫುಲ್‌-ಬ್ಯಾಕ್‌ ಆಟಗಾರ

2024-25ರ ಋುತುವಿನ ಅಂತ್ಯದವರೆಗೆ ಮೂರು ವರ್ಷಗಳ ಅವಧಿಗೆ ಎಟಿಕೆ ಮೋಹನ್‌ ಬಾಗನ್‌ನಿಂದ ರೈಟ್‌-ಬ್ಯಾಕ್‌ ಪ್ರಬೀರ್‌ ದಾಸ್‌ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬೆಂಗಳೂರು ಎಫ್‌ಸಿ ಸೋಮವಾರ ಪ್ರಕಟಿಸಿದೆ. ಪೈಲಾನ್‌ ಆ್ಯರೋಸ್‌ ಯೂತ್‌ ಅಕಾಡೆಮಿಯ ಉತ್ಪನ್ನ (ಗರಡಿಯಲ್ಲಿಬೆಳದ ಆಟಗಾರ)ವಾದ ದಾಸ್‌, ಹಲವಾರು ಕ್ಲಬ್‌ ಗಳಿಗಾಗಿ ಆಡಿದ ಅನುಭವವನ್ನು ತಮ್ಮೊಂದಿಗೆ ತರುತ್ತಿದ್ದಾರೆ ಮತ್ತು ಫೆಡರೇಷನ್‌ ಕಪ್‌ ಮತ್ತು ಇಂಡಿಯನ್‌ ಸೂಪರ್‌ ಲೀಗ್‌ ಗೆದ್ದ ಅನುಭವ ಹೊಂದಿದ್ದಾರೆ.

‘‘ ಬೆಂಗಳೂರು ಎಫ್‌ಸಿಗೆ ಸಹಿ ಹಾಕಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಏಕೆಂದರೆ ಇದು ನಾನು ಕೆಲವು ಸಮಯದಿಂದ ಮೆಚ್ಚುವ ಫುಟ್ಬಾಲ್‌ ಕ್ಲಬ್‌ ಆಗಿದೆ. ನಾನು ಕಂಠೀರವದಲ್ಲಿಆಡಿದ್ದೇನೆ ಮತ್ತು ವಾತಾವರಣವು ಯಾವಾಗಲೂ ಹೆಚ್ಚಿನ ಶಕ್ತಿಯಿಂದ ಕೂಡಿರುತ್ತದೆ ಮತ್ತು ನಾನು ಬೆಂಗಳೂರಿನ ಜರ್ಸಿಯನ್ನು ಧರಿಸುವ ಅನುಭವಕ್ಕಾಗಿ ಕಾಯುತ್ತಿದ್ದೇನೆ. ಈ ಕ್ಲಬ್‌ಗೆ ಯಶಸ್ಸನ್ನು ಮರಳಿ ತರುವಲ್ಲಿನಾನು ದೊಡ್ಡ ಪಾತ್ರ ವಹಿಸಲು ಉತ್ಸುಕನಾಗಿದ್ದೇನೆ ಮತ್ತು ನನ್ನಲ್ಲಿನಂಬಿಕೆಯನ್ನು ತೋರಿಸಿದ್ದಕ್ಕಾಗಿ ಮಾಲೀಕರು ಮತ್ತು ಆಡಳಿತ ಮಂಡಳಿಗೆ ನಾನು ಆಭಾರಿಯಾಗಿದ್ದೇನೆ ಹಾಗೂ ನಾನು ಅವರ ಮಹತ್ವಾಕಾಂಕ್ಷೆಗಳ ಭಾಗವಾಗಬೇಕೆಂದು ಬಯಸಿದ್ದಕ್ಕಾಗಿ ನಾನು ಆಭಾರಿಯಾಗಿದ್ದೇನೆ,’’ ಎಂದು ದಾಸ್‌ ತಮ್ಮ ಒಪ್ಪಂದದ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ಹೇಳಿದರು.

2012-13ರ ಋುತುವಿನಲ್ಲಿಆ್ಯರೋಸ್‌ ತಂಡದೊಂದಿಗೆ ಮುನ್ನಡೆ ಸಾಧಿಸಿದ ನಂತರ, ದಾಸ್‌ ಡೆಂಪೊಗೆ ತೆರಳಿದರು ಮತ್ತು ನಂತರ ಇಂಡಿಯನ್‌ ಸೂಪರ್‌ ಲೀಗ್‌ನ ಆರಂಭಿಕ ಆವೃತ್ತಿಗಳಲ್ಲಿಎಫ್‌ಸಿ ಗೋವಾ ಮತ್ತು ಡೆಲ್ಲಿಡೈನಮೋಸ್‌ಗೆ ಲೋನ್‌ ಮೇಲೆ ತೆರಳಿದರು. 2015 ರಲ್ಲಿಐ-ಲೀಗ್‌ ತಂಡ ಮೋಹನ್‌ ಬಾಗನ್‌ ಜೊತೆ ಸಹಿ ಹಾಕಿದ 28 ವರ್ಷದ ಅವರು, ಕಳೆದ ಏಳು ವರ್ಷಗಳಿಂದ ಕೋಲ್ಕತ್ತಾದಲ್ಲಿಎಟಿಕೆ ಮತ್ತು ಎಟಿಕೆ ಮೋಹನ್‌ ಬಾಗನ್‌ನೊಂದಿಗೆ ಕಳೆದಿದ್ದಾರೆ.

‘‘ಪ್ರಬೀರ್‌ ಕೆಲವು ಸಮಯದಿಂದ ನಮ್ಮ ಗಮನವನ್ನು ಕೇಂದ್ರೀಕರಿಸಿದ ಆಟಗಾರ, ಮತ್ತು ಅವರು ತಮ್ಮ ಭವಿಷ್ಯವನ್ನು ಬೆಂಗಳೂರು ಎಫ್‌ಸಿಗೆ ಅರ್ಪಿಸಲು ಒಪ್ಪಿರುವುದು ನಮಗೆ ಸಂತೋಷವಾಗಿದೆ. ಎಡಭಾಗದಲ್ಲಿಅಪಾರ ಪ್ರತಿಭೆಯನ್ನು ಹೊಂದಿರುವ ತಂಡಕ್ಕೆ ಬಲಬದಿ ಬಲಗೊಳ್ಳುವುದು ಅಗತ್ಯವಾಗಿತ್ತು. ಪ್ರಬೀರ್‌ ಮತ್ತು ಅವರ ಅನುಭವದೊಂದಿಗೆ, ಬಿಎಫ್‌ಸಿ ವಿಶ್ವಾಸಾರ್ಹ ಮತ್ತು ಸಮರ್ಥ ಆಟಗಾರನನ್ನು ಕಂಡುಕೊಂಡಿದೆ, ಅವರು ನಮ್ಮನ್ನು ಬಲಪಡಿಸುತ್ತಾರೆ. ನಾವು ಪ್ರಬೀರ್‌ಗೆ ಉತ್ಕೃಷ್ಟತೆ ಸಾಧಿಸಲು ಮತ್ತು ರಾಷ್ಟ್ರೀಯ ತಂಡಕ್ಕೆ ಮರಳಲು ವೇದಿಕೆಯನ್ನು ನೀಡಬಹುದು ಎಂಬ ವಿಶ್ವಾಸ ನಮಗಿದೆ, ಅದೇ ಸಮಯದಲ್ಲಿಬೆಂಗಳೂರು ಎಫ್‌ಸಿಗೆ ನಾವು ಸೇರಿರುವ ಸ್ಥಳಕ್ಕೆ(ಚಾಂಪಿಯನ್‌ ಪಟ್ಟಕ್ಕೆ) ಮರಳುವ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ,’’ ಎಂದು ಕ್ಲಬ್‌ ನಿರ್ದೇಶಕ ಪಾರ್ಥ್‌ ಜಿಂದಾಲ್‌ ಹೇಳಿದರು.
2019-20 ರ ಅಭಿಯಾನದಲ್ಲಿ, ದಾಸ್‌ ಐದು ಅಂಕಗಳೊಂದಿಗೆ ಡಿಫೆಂಡರ್‌ನಿಂದ ಜಂಟಿ-ಅತ್ಯಧಿಕ ನೆರವನ್ನು ದಾಖಲಿಸಿದರು. ಅಂತಿಮವಾಗಿ ಎಟಿಕೆಯೊಂದಿಗೆ ಪ್ರಶಸ್ತಿಯನ್ನು ಗೆದ್ದರು. ಎಟಿಕೆ ಮೋಹನ್‌ ಬಾಗನ್‌ ನೊಂದಿಗೆ, ದಾಸ್‌ ಕಳೆದ ಎರಡು ಋುತುಗಳಲ್ಲಿ39 ಪ್ರದರ್ಶನಗಳನ್ನು ನೀಡಿದ್ದಾರೆ.
2012ರಲ್ಲಿತುರ್ಕಮೆನಿಸ್ತಾನ್‌ ವಿರುದ್ಧ ನಡೆದ ಎಎಫ್‌ಸಿ ಅಂಡರ್‌-19 ಚಾಂಪಿಯನ್‌ ಷಿಪ್‌ ಅರ್ಹತಾ ಸುತ್ತಿನಲ್ಲಿಭಾರತ ಅಂಡರ್‌ 19 ತಂಡಕ್ಕೆ ಪದಾರ್ಪಣೆ ಮಾಡಿದ್ದ ದಾಸ್‌, ರಾಷ್ಟ್ರಮಟ್ಟದಲ್ಲಿಸ್ಥಾನ ಪಡೆದಿದ್ದಾರೆ. 2015 ರಲ್ಲಿ, ಅವರು ಎಎಫ್‌ಸಿ ಅಂಡರ್‌ 23 ಚಾಂಪಿಯನ್‌ಷಿಪ್‌ ಅರ್ಹತಾ ಪಂದ್ಯದಲ್ಲಿಸಿರಿಯಾ ವಿರುದ್ಧ ಭಾರತ ಅಂಡರ್‌ 23ಗೆ ಪಾದಾರ್ಪಣೆ ಮಾಡಿದ್ದರು.

Malcare WordPress Security