ಎಟಿಕೆ ಬಗಾನ್‌ಗೆ ಮಣಿದ ಬ್ಲೂಸ್‌ ಫ್ಲೇಆಫ್‌ ಕನಸು ಭಗ್ನ

ಮಹತ್ವದ ಪಂದ್ಯದಲ್ಲಿಎಟಿಕೆ ವಿರುದ್ಧ ಬೆಂಗಳೂರು ಎಫ್‌ಸಿಗೆ 2-0 ಗೋಲ್‌ಗಳ ಸೋಲು, ಒಂದು ಪಂದ್ಯ ಬಾಕಿ ಇರುವಂತೆಯೇ ಪ್ಲೇಆಫ್‌ ಸ್ಪರ್ಧೆಯಿಂದ ಹೊರಬಿದ್ದ ಬಿಎಫ್‌ಸಿ

ರಕ್ಷ ಣಾ ವೈಫಲ್ಯದಿಂದಾಗಿ ಬೆಂಗಳೂರು ಎಫ್‌ಸಿ ಹಾಲಿ ಐಎಸ್‌ಎಲ್‌ ಟೂರ್ನಿಯ ತನ್ನ ಮಹತ್ವದ ಪಂದ್ಯದಲ್ಲಿಎಟಿಕೆ ಮೋಹನ್‌ ಬಗಾನ್‌ ವಿರುದ್ಧ ಪರಾಭವಗೊಂಡಿತು. ಹೀಗಾಗಿ ಪ್ಲೇಆಫ್‌ ಹಂತಕ್ಕೇರುವ ಮಾರ್ಕೊ ಪೆಜ್ಜೈಯುಲಿ ಬಳಗದ ಅವಕಾಶ ಒಂದು ಪಂದ್ಯ ಬಾಕಿ ಇರುವಂತೆಯೇ ಕೊನೆಗೊಂಡಿತು.
ಪಿಜೆಎನ್‌ ಕ್ರೀಡಾಂಗಣದಲ್ಲಿಭಾನುವಾರ ನಡೆದ ಪಂದ್ಯದಲ್ಲಿಬ್ಲೂಸ್‌ 2-0 ಗೋಲ್‌ಗಳ ಅಂತರದಲ್ಲಿಎಟಿಕೆ ಮೋಹನ್‌ ಬಗಾನ್‌ ತಂಡಕ್ಕೆ ಶರಣಾಯಿತು. ಎಟಿಕೆ ಪರ ಲಿಸ್ಟನ್‌ ಕೊಲಾಕೊ (45 ನೇ ನಿಮಿಷ) ಮತ್ತು ಲಿಸ್ಟನ್‌ (85ನೇ ನಿಮಿಷ) ತಲಾ ಒಂದು ಗೋಲ್‌ ಬಾರಿಸಿ ಜಯದ ರೂವಾರಿಯೆನಿಸಿದರು. ಸದ್ಯ 26 ಅಂಕ ಹೊಂದಿರುವ ಬೆಂಗಳೂರು ಎಫ್‌ಸಿ ಅಂಕಪಟ್ಟಿಯಲ್ಲಿ6ನೇ ಸ್ಥಾನಕ್ಕೆ ಕುಸಿದರೆ, ಎಟಿಕೆ 34 ಅಂಕಗಳೊಂದಿಗೆ 3ನೇ ಸ್ಥಾನಕ್ಕೆ ಜಿಗಿಯಿತು.
60ರಿಂದ 65 ನಿಮಿಷಗಳ ಅಂತರದಲ್ಲಿಬ್ಲೂಸ್‌ ಅಜಯ್‌ ಚೆಟ್ರಿ, ಪ್ರಿನ್ಸ್‌ ಇಬಾರ ಮತ್ತು ಪರಾಗ್‌ ಬದಲಿಗೆ ಅನುಕ್ರಮವಾಗಿ ರೋಹಿತ್‌ ಕುಮಾರ್‌, ಲಿಯೊನ್‌ ಆಗಸ್ಟೀನ್‌ ಮತ್ತು ಯಾಯಾ ಬನಾನ ಅವರನ್ನು ಆಡುವ ಹನ್ನೊಂದರ ಬಳಗದೊಳಗೆ ತಂದಿತು. ಆದರೆ ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಎದುರಾಳಿ ಆಟಗಾರರಿಂದ ಚೆಂಡನ್ನು ಕಸಿಯುವ ಬರದಲ್ಲಿಯಾಯಾ ಬನಾನ ಮತ್ತು ಲಿಯೋನ್‌ ಆಗಸ್ಟೀನ್‌ ರೆಫರಿಯಿಂದ ಹಳದಿ ಕಾರ್ಡ್‌ಗೆ ಗುರಿಯಾಗಿದ್ದು, ಬ್ಲೂಸ್‌ ಮೇಲಿನ ಒತ್ತಡವನ್ನು ಅನಾವರಣಗೊಳಿಸಿತು.
ಬ್ಲೂಸ್‌ ಮೇಲೆ ಒತ್ತಡ ಮುಂದುವರಿಸಿದ ಎಟಿಕೆ ಆಟಗಾರರು ಗೋಲಿಗಾಗಿ ಮುಗಿಬಿದ್ದರು. 54ನೇ ನಿಮಿಷದಲ್ಲಿ ಮಣಿವಿರ್‌ ಸಿಂಗ್‌ ಹೊಡೆದ ಚೆಂಡು ಕೂದಲೆಳೆಯ ಅಂತರದಲ್ಲಿಗೋಲ್‌ ಪೆಟ್ಟಿಗೆಯ ಸನಿಹವೇ ಹಾದು ಹೋದ ಕಾರಣ ಎಟಿಕೆ ಎರಡನೇ ಗೋಲ್‌ ತಪ್ಪಿತು. ಇದಾದ 4ನೇ ನಿಮಿಷದಲ್ಲಿಎಟಿಕೆ ಅಂತದ್ದೇ ಮತ್ತೊಂದು ಅವಕಾಶ ಗಿಟ್ಟಿಸಿತು. ಆದರೆ ಉದಾಂತ ಸಿಂಗ್‌ ಪ್ರಬಲವಾಗಿ ಚೆಂಡು ಹಿಮ್ಮೆಟ್ಟಿಸಿ ತಂಡಕ್ಕೆ ಆಗುತ್ತಿದ್ದ ಹಿನ್ನಡೆ ಹಾಗೂ ಒತ್ತಡವನ್ನು ತಡೆದರು.
ಮೊದಲಾರ್ಧದಲ್ಲಿಹಿನ್ನಡೆಯಾದ ಕಾರಣ ಬಿಎಫ್‌ಸಿ ಆಟಗಾರರು ದ್ವಿತೀಯಾರ್ಧದಲ್ಲಿಆಕ್ರಮಣಕಾರಿ ಆಟಕ್ಕೆ ಮುಂದಾದರು. ಈ ಸಂದರ್ಭದಲ್ಲಿಬ್ಲೂಸ್‌ನ ನಾಯಕ ಹಾಗೂ ಸ್ಟಾರ್‌ ಆಟಗಾರ ಸುನೀಲ್‌ ಛೆತ್ರಿ ಅನಗತ್ಯ ಟ್ಯಾಕಲ್‌ಗೆ ಯತ್ನಿಸಿ ರೆಫರಿಯಿಂದ ಹಳದಿ ಕಾರ್ಡ್‌ಗೆ ಗುರಿಯಾದರು. ಇದು ಪಂದ್ಯದಲ್ಲಿಆಟಗಾರನೊಬ್ಬನಿಗೆ ನೀಡಿದ ಮೊದಲ ಯೆಲ್ಲೊಕಾರ್ಡ್‌.
ಕೊನೆಯ ಕ್ಷ ಣದಲ್ಲಿಎಸಗಿದ ರಕ್ಷ ಣಾ ವೈಫಲ್ಯದಿಂದಾಗಿ ಬೆಂಗಳೂರು ಎಫ್‌ಸಿ ಪಂದ್ಯದ ಮೊದಲಾರ್ಧಕ್ಕೆ 0-1ರ ಹಿನ್ನಡೆ ಅನುಭವಿಸಿತು. ಉಭಯ ತಂಡಗಳು ಹೆಚ್ಚಿನ ರಕ್ಷ ಣಾತ್ಮಕ ಆಟಕ್ಕೆ ಆದ್ಯತೆ ನೀಡಿದ ಪರಿಣಾಮ ಯಾವುದೇ ಗೋಲಿನ ಅಕಾಶಗಳು ಸೃಷ್ಟಿಯಾಗಲಿಲ್ಲ. ಹಾಗೆಯೇ ಎರಡೂ ತಂಡಗಳು ದೂರದಿಂದ ಹೊಡೆತಗಳಿಗೆ ಸೀಮಿತಗೊಂಡವು. ಜತೆಗೆ ಎರಡು ತಂಡಗಳ ರಕ್ಷ ಣಾತ್ಮಕ ಬಿಗಿಯಾಗಿದ್ದ ಕಾರಣ ಗೋಲ್‌ ದಾಖಲಾಗಲಿಲ್ಲ. ಒಂದು ಹಂತದಲ್ಲಿಎಟಿಕೆ ಮೋಹನ್‌ ಬಗಾನ್‌ ಚೆಂಡಿನ ಮೇಲೆ ಹೆಚ್ಚಿನ ಒತ್ತು ನಿಯಂತ್ರಣ ಸಾಧಿಸಿತಾದರೂ ನಿರೀಕ್ಷಿತ ಗುರಿ ಸಾಧಿಸಲು ಬಿಎಫ್‌ಸಿ ಆಟಗಾರರು ಅವಕಾಶ ಕಲ್ಪಿಸಲಿಲ್ಲ.
ಮೊದಲಾರ್ಧ ಬಹುತೇಕ ಗೋಲ್‌ ರಹಿತಗೊಳ್ಳುತ್ತದೆ ಎನ್ನುವಾಗಲೇ ಲಿಸ್ಟನ್‌ ಕೊಲಾಕೊ ಮ್ಯಾಜಿಕ್‌ ಮಾಡಿ ಸುಂದರವಾದ ಫ್ರೀ ಕಿಕ್‌ನಿಂದ ಗೋಲ್‌ ಬಾರಿಸುವಲ್ಲಿಯಶಸ್ವಿಯಾದರು. ಇದರೊಂದಿಗೆ 1-0 ಅಂತರದ ಮುನ್ನಡೆ ಗಳಿಸಿದ ಎಟಿಕೆ ಮೋಹನ್‌ ಬಗಾನ್‌ ತಂಡ ವಿರಾಮ್ಕೆಕ ನಿರಾಳತೆ ಪಡೆದರೆ, ಬೆಂಗಳೂರು ಎಫ್‌ಸಿ ಒತ್ತಡಕ್ಕೆ ಸಿಲುಕಿತು. ಏಕೆಂದರೆ ಪ್ಲೇಆಫ್‌ ಹಂತವನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಬೆಂಗಳೂರು ಎಫ್‌ಸಿ ಉಳಿದ 45 ನಿಮಿಷಗಳಲ್ಲಿಕನಿಷ್ಠಪಕ್ಷ ಸಮಬಲದ ಹೋರಾಟವನ್ನು ನೀಡಬೇಕಿದೆ.
ಬೆಂಗಳೂರು ಎಫ್‌ಸಿ ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿಮಾರ್ಚ್‌ 5ರಂದು ತಿಲಕ್‌ ಮೈದಾನದಲ್ಲಿಎಸ್‌ಸಿ ಈಸ್ಟ್‌ ಬೆಂಗಾಲ್‌ ತಂಡದ ಸವಾಲು ಎದುರಿಸಲಿದೆ.

Malcare WordPress Security