ಈಸ್ಟ್‌ ಬೆಂಗಾಲ್‌ ವಿರುದ್ಧ ಡ್ರಾ ಸಾಧಿಸಿದ ಬೆಂಗಳೂರು ಎಫ್‌ಸಿ

ಒಂದು ಅಂಕದೊಂದಿಗೆ ನೂತನ ವರ್ಷ ಆರಂಭಿಸಿದ ಮಾರ್ಕೊ ಪೆಜ್ಜೈಯುಲಿ ಬಳಗ ಬ್ಲೂಸ್‌

ಎದುರಾಳಿ ತಂಡದ ಉಡುಗೊರೆ ಗೋಲಿನ ನೆರವಿನಿಂದ ಬೆಂಗಳೂರು ಎಫ್‌ಸಿ ಹೀರೊ ಐಎಸ್‌ಎಲ್‌ನ ತನ್ನ 9ನೇ ಪಂದ್ಯದಲ್ಲಿ ಎಸ್‌ಸಿ ಈಸ್ಟ್‌ ಬೆಂಗಾಲ್‌ ವಿರುದ್ಧ ಡ್ರಾ ಮಾಡಿಕೊಂಡು ಕೇವಲ 1 ಅಂಕಕ್ಕಷ್ಟೇ ಸೀಮಿತಗೊಂಡಿತು.
ಇಲ್ಲಿನ ಅಥ್ಲೆಟಿಕ್ಸ್‌ ಕ್ರೀಡಾಂಗಣದಲ್ಲಿಮಂಗಳವಾರ ನಡೆದ ಹಣಾಹಣಿಯಲ್ಲಿಉಭಯ ತಂಡಗಳು 1 -1 ಗೋಲ್‌ಗಳಿಂದ ಸಮಬಲ ಸಾಧಿಸಿದೆವು. ಇದರೊಂದಿಗೆ ಬ್ಲೂಸ್‌ ಒಟ್ಟು 10 ಅಂಕ ಕಲೆಹಾಕಿದಂತಾಯಿತು. ಬೆಂಗಳೂರು ಎಫ್‌ಸಿ ಪರ ಸೌರವ್‌ (55ನೇ ನಿಮಿಷ- ಸ್ವಯಂ ಗೋಲ್‌) ಒಂದು ಗೋಲ್‌ ಗಳಿಸಿದರೆ, ಸೆಂಬಾಯಿ (28ನೇ ನಿಮಿಷ) ಈಸ್ಟ್‌ ಬೆಂಗಾಲ್‌ ಪರ ಗೋಲ್‌ ಗಳಿಸಿದರು.
ಚೆನ್ನೈಯಿನ್‌ ಎಫ್‌ಸಿ ವಿರುದ್ಧ 4-1ರಲ್ಲಿಗೆದ್ದು ವರ್ಷಾಂತ್ಯ ಕೊನೆಗೊಳಿಸಿದ್ದ ಬೆಂಗಳೂರು ಎಫ್‌ಸಿ, ಮಂಗಳವಾರ ಈಸ್ಟ್‌ ಬೆಂಗಾಲ್‌ ವಿರುದ್ಧ ಅದೇ ಪ್ರದರ್ಶನ ನೀಡಿ ವರ್ಷಾರಂಭ ಮಾಡುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಿತು. ಅತ್ತ ಟೂರ್ನಿಯಲ್ಲಿಗೆಲುವಿನ ಖಾತೆ ತೆರೆದು ಹೊಸ ಹುಮ್ಮಸ್ಸಿನೊಂದಿಗೆ ವರ್ಷ ಆರಂಭಿಸುವ ವಿಶ್ವಾಸದಲ್ಲಿಈಸ್ಟ್‌ ಬೆಂಗಾಲ್‌ ಅಖಾಡ ಪ್ರವೇಶಿಸಿತು.
ಪಂದ್ಯದ ಕೊನೆಯ ಇಪ್ಪತ್ತು ನಿಮಿಷಗಳ ಆಟದಲ್ಲಿಮುನ್ನಡೆಗಾಗಿ ಉಭಯ ತಂಡಗಳು ಹರಸಾಹಸ ನಡೆಸಿದೆವು. ಆದರೆ ಎರಡೂ ತಂಡಗಳ ರಕ್ಷ ಣಾ ಆಟಗಾರರು ಮೈಮರೆಯಲಿಲ್ಲ. 82ನೇ ನಿಮಿಷದಲ್ಲಿಸುರೇಶ್‌ ಬದಲು ದಿನೇಶ್‌ಗೆ ಬ್ಲೂಸ್ಥಾನ ಕಲ್ಪಿಸಿತು. ಆದರೆ ಇದರಿಂದ ಯಾವುದೇ ಲಾಭ ದೊರೆಯಲಿಲ್ಲ. ಪಂದ್ಯದ ಕೊನೆಯ ನಿಮಿಷದಲ್ಲೂಪೂರ್ಣ ಅಂಕಕ್ಕಾಗಿ ಎರಡೂ ತಂಡಗಳು ಆಟಗಾರರ ಬದಲಾವಣೆಗೆ ಆದ್ಯತೆ ನೀಡಿದರೂ ಫಲ ದೊರೆಯಲಿಲ್ಲ. ಹೀಗಾಗಿ 1-1ರಲ್ಲಿಪಂದ್ಯ ಕೊನೆಗೊಂಡಿತು.
0-1ರ ಹಿನ್ನಡೆಯೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಬ್ಲೂಸ್‌, ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿತು. ಅದರಲ್ಲೂಉದಾಂತ ಸಿಂಗ್‌ ತಮ್ಮ ಕಾಲ್ಚಕದಿಂದ ಗಮನ ಸೆಳೆದರು. ದ್ವಿತೀಯಾರ್ಧ ಆರಂಭವಾದ 10 ನಿಮಿಷಗಳ ನಂತರ ರೋಶನ್‌, ಚೆಂಡನ್ನು ಗೋಲ್‌ ಪೆಟ್ಟಿಗೆಯತ್ತ ಹೊಡೆದರು. ಆದರೆ ಚೆಂಡನ್ನು ಹಿಮ್ಮೆಟ್ಟಿಸುವ ಆತುರದಲ್ಲಿಸೌರವ್‌ ದಾಸ್‌ ಉಡುಗೊರೆ ಗೋಲ್‌ ನೀಡಿದರು. ಹೀಗಾಗಿ ಬ್ಲೂಸ್‌ 1-1ರಲ್ಲಿಸಮಬಲದ ಹೋರಾಟ ನೀಡಿತು.
28ನೇ ನಿಮಿಷದಲ್ಲಿಥೋಂಗ್‌ಖೋಸೀಮ್‌ ಹಾಕಿಪ್‌ ತನ್ನ ಹಳೆಯ ಕ್ಲಬ್‌ ವಿರುದ್ಧ ಗೋಲ್‌ ಗಳಿಸಿದರು. ಫ್ರೀಕಿಕ್‌ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಹಾಕಿಪ್‌, ವಹೆಂಗ್‌ಬಾಮ್‌ ಅವರ ನೆರವಿನಿಂದ ಬೆಂಗಾಲ್‌ ಪರ ಗೋಲ್‌ ಗಳಿಸಿ 1-0 ಅಂತರದ ಮುನ್ನಡೆ ತಂದುಕೊಟ್ಟರು. 34ನೇ ನಿಮಿಷದಲ್ಲಿಬ್ಲೂಸ್‌ನ ಪರಾಗ್‌ ಶ್ರೀವಾಸ್‌ ಹಿನ್ನಡೆ ತಗ್ಗಿಸುವ ಪ್ರಯತ್ನ ಮಾಡಿದರೂ ಯಾವುದೇ ಫಲ ಲಭಿಸಲಿಲ್ಲ. ವಿರಾಮಕ್ಕೂ ಮುನ್ನ ಸಮಬಲದ ಹೋರಾಟ ನೀಡಲು ಬಿಎಫ್‌ಸಿಗೆ ಮತ್ತೊಂದು ಅವಕಾಶ ಲಭಿಸಿತು.
21ನೇ ನಿಮಿಷದಲ್ಲಿಬ್ರುನೊ ಅವರ ಸಾಹಸದಿಂದ ಬಿಎಫ್‌ಸಿ ಮುನ್ನಡೆ ಗಳಿಸುವ ಅವಕಾಶವಿತ್ತು. ಆದರೆ ಅವರ ಹೊಡೆದ ಚೆಂಡು ಗೋಲ್‌ ಪೆಟ್ಟಿಗೆ ಸೇರಲಿಲ್ಲ. ಈ ವೇಳೆ ರೋಶನ್‌ ಹಳದಿ ಕಾರ್ಡ್‌ ಎಚ್ಚರಿಕೆ ಪಡೆದರು.
ಪಂದ್ಯ ಆರಂಭವಾಗುತ್ತಿದ್ದಂತೆಯೇ ಬಿಎಫ್‌ಸಿ ಆಟಗಾರ ಚೆಂಡಿನ ಮೇಲೆ ನಿಯಂತ್ರಣಕ್ಕೆ ಯತ್ನಿಸುವುದನ್ನು ತಡೆಯಲೆತ್ನಿಸಿದ ಈಸ್ಟ್‌ ಬೆಂಗಾಲ್‌ನ ಗೋಲ್‌ ಕೀಪರ್‌ ಅರಿಂದಮ್‌ ಭಟ್ಟಚಾರ್ಜ, ರೆಫರಿಯಿಂದ ಹಳದಿ ಕಾರ್ಡ್‌ಗೆ ಗುರಿಯಾಗಿ ಎಚ್ಚರಿಕೆ ಪಡೆದರು. 10ನೇ ನಿಮಿಷದಲ್ಲಿಫ್ರೀಕಿಕ್‌ ಪಡೆದ ಬೆಂಗಾಲ್‌ ಆಟಗಾರರು ಆರಂಭದಲ್ಲೇ ಮುನ್ನಡೆಗೆಯತ್ನಿಸಿದರು. ಆದರೆ ಬಿಎಫ್‌ಸಿ ಕಸ್ಟೋಡಿಯನ್‌ ಗುರ್‌ಪ್ರೀತ್‌ ಸಿಂಗ್‌ ಸಂದು ಇದಕ್ಕೆ ಆಸ್ಪದ ಮಾಡಿಕೊಡಲಿಲ್ಲ.
ಬೆಂಗಳೂರು ಎಫ್‌ಸಿ ತನ್ನ ಮುಂದಿನ ಪಂದ್ಯದಲ್ಲಿಜನವರಿ 10ರಂದು ಫರೋರ್ಡಾದ ಪಿಜೆಎನ್‌ ಕ್ರೀಡಾಂಗಣದಲ್ಲಿಮುಂಬಯಿ ಸಿಟಿ ಎಫ್‌ಸಿ ತಂಡವನ್ನು ಎದುರಿಸಲಿದೆ.

Malcare WordPress Security