ಸಮಾನ ಅಂಕ ಹಂಚಿಕೊಂಡ ಬೆಂಗಳೂರು ಎಫ್ ಸಿ ಮತ್ತು ಸ್ಟೂಡೆಂಟ್ಸ್ ಯೂನಿಯನ್

ಬ್ಲೂ ಕೋಲ್ಟ್ಸ್ ಸಿಕ್ಕ ಅವಕಾಶವನ್ನು ಕಳೆದುಕೊಂಡರೇ, 10ಆಟಗಾರಿಂದ ಮುನ್ನುಗ್ಗಿದ ಯೂನಿಯನ್ ಒಂದು ಅಂಕ ಗಳಿಸಿತು

ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಬಿಡಿಎಫ್‌ಎ ಸೂಪರ್ ಡಿವಿಷನ್ ಲೀಗ್‌ನಲ್ಲಿ ಸ್ಟೂಡೆಂಟ್ಸ್ ಯೂನಿಯನ್ ಎಫ್‌ಸಿ ವಿರುದ್ಧ 1-1 ಅಂಕಗಳಿಂದ ಮತ್ತೊಮ್ಮೆ ಡ್ರಾ ಸಾಧಿಸಿದ ಬೆಂಗಳೂರು ಎಫ್‌ಸಿ. ಮ್ಯಾಕಾರ್ಟನ್ ಲೂಯಿಸ್ ನಿಕ್ಸನ್ (15’) ಬ್ಲೂ ಕೋಲ್ಟ್ಸ್‌ಗೆ ಆರಂಭಿಕ ಮುನ್ನಡೆಯನ್ನು ನೀಡಿದರೇ, ನಂತರದ ಆಟದಲ್ಲಿ ಸ್ಟೂಡೆಂಟ್ ಯೂನಿಯನ್ ಪರ ಆರ್ಯನ್ ಆಮ್ಲಾ (80′) ಗೋಲು ಗಳಿಸುವ ಮೂಲಕ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು.

ಬೆಂಗಳೂರು ಡ್ರೀಮ್ ಯುನೈಟೆಡ್ ವಿರುದ್ಧ ಆಡಿದ್ದ ಕಳೆದ ಪಂದ್ಯದಲ್ಲಿ ಬ್ಲೂ ಕೋಲ್ಟ್ಸ್ 1-1ರಿಂದ ಡ್ರಾ ಮಾಡಿಕೊಂಡಿತ್ತು, ಆ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಿಕೊಂಡು ಕಣಕ್ಕಿಳಿದರು, ಒಮೆಗಾ ವನ್‌ಲಾಲ್ಹ್ರುಯಿಟ್ಲುವಾಂಗಾ ಮತ್ತು ರಾಹುಲ್ ರಾಜು ಬದಲಿಗೆ ಬೆಕಿ ಓರಾಮ್ ಮತ್ತು ಮ್ಯಾಕಾರ್ಟನ್ ಲೂಯಿಸ್ ನಿಕ್ಸನ್ ತಂಡದಲ್ಲಿ ಸ್ಥಾನ ಗಳಿಸಿದರು. ಈ ಸೀಸನ್ ನ ಮೊದಲ ಗೆಲುವನ್ನು ಪಡೆಯಲು ಉತ್ಸುಕರಾಗಿದ್ದ ತಂಡವು ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಪ್ರದರ್ಶನವನ್ನು ತೋರಿತು ಮತ್ತು ಆಟದ ಹದಿನೈದನೇ ನಿಮಿಷದಲ್ಲಿ ಮುನ್ನಡೆಯನ್ನು ಸಾಧಿಸಿತು. ಲಾಲ್ತಾಂಗ್ಲಿಯಾನಾ ಬೆಕಿನನ್ನು ಬಾಕ್ಸ್‌ನಲ್ಲಿ ಮುಕ್ತವಾಗಿ ಕಂಡುಕೊಂಡರು, ಡಮ್ಮಿ ಆದ ಚೆಂಡು ಮ್ಯಾಕಾರ್ಟನ್‌ ಬಳಿ ತಲುಪಿತು, ಅವರು ತಮ್ಮ ಹೊಡೆತವನ್ನು ದೂರದ ಮೂಲೆಯಲ್ಲಿ ಕಡಿಮೆ ಅಂತರದಲ್ಲಿ ಹೊಡೆಯುವ ಮೂಲಕ ಅಂಕವನ್ನು 1-0 ಮಾಡಿದರು.

ಡ್ರೀಮ್ ಯುನೈಟೆಡ್ ವಿರುದ್ಧ ಸೀಸನ್ನಲ್ಲಿ ತನ್ನ ಗೋಲ್ ಗಳಿಕೆಯ ಖಾತೆಯನ್ನು ತೆರೆದಿದ್ದ ಜಗದೀಪ್ ಸಿಂಗ್, 41 ನೇ ನಿಮಿಷದಲ್ಲಿ ಬೆಂಗಳೂರಿನ ಮುನ್ನಡೆಯನ್ನು ಬಹುತೇಕ ದ್ವಿಗುಣಗೊಳಿಸುವ ಅವಕಾಶವನ್ನು ಪಡೆದಿದ್ದರು. ಲಾಲ್ತಾಂಗ್ಲಿಯಾನಾ ಬಾಕ್ಸ್ ನೊಳಗೆ ಅವರನ್ನು ಕಂಡುಕೊಂಡರು ಮತ್ತು ಡಿಫೆಂಡರ್‌ನ ಹೊಡೆತವು ಟಾಪ್ ಕಾರ್ನರ್ ಅತ್ತ ಮುನ್ನುಗ್ಗಿತಾದರೂ ಸ್ಟೂಡೆಂಟ್ಸ್ ಯೂನಿಯನ್ ನ ಗೋಲ್‌ಕೀಪರ್ ಅಭಿಷೇಕ್ ರಮೇಶ್ ತಮ್ಮ ತೋಳನ್ನು ಚಾಚಿ ಚೆಂಡನ್ನು ಬಾರ್‌ನ ಮೇಲೆ ತಳ್ಳುವಲ್ಲಿ ಯಶಸ್ವಿಯಾದರು.

ದ್ವಿತೀಯಾರ್ಧದ ಐದು ನಿಮಿಷಗಳ ಆಟದ ನಂತರ ಪಿಚ್ನಲ್ಲಿ ಹಿಡಿತ ಸಾಧಿಸಿದರು ಬೆಕಿ ಪೊಸೇಶನ್ ಅನ್ನು ಕಬಲಿಸಿದ ಕಾರಣ ಮ್ಯಾಕಾರ್ಟನ್‌ನ ಮೂಲಕ ಚೆಂಡನ್ನು ಆಡಿದರು, ಆದರೆ ಫಾರ್ವರ್ಡ್‌ನ ಲಾಬ್ ಅನ್ನು ಬಾಕ್ಸ್‌ನೊಳಗೆ ಸುಜಿತ್ ಕುಮಾರ್ ತೆರವುಗೊಳಿಸಿದರು. ಇದಾದ ತಕ್ಷಣವೇ, ಶೆಲ್ಟನ್ ನಿಕ್ಸನ್ ಅವರು ಎಡ್ವಿನ್ ರೊಸ್ಸಾರಿಯೊ ಅವರನ್ನು ಬೂಟ್ನಿಂದ ಕೆಳಗುರುಳಿಸಿದ ಕಾರಣ ರೆಡ್ ಕಾರ್ಡ್ ಪಡೆದು ಸ್ಟೂಡೆಂಟ್ಸ್ ಯೂನಿಯನ್ 10 ಆಟಗಾರರಿಗೆ ಇಳಿಯಿತು.

ದ್ವಿತೀಯಾರ್ಧದ ಐದು ನಿಮಿಷಗಳ ಆಟದ ನಂತರ ಪಿಚ್ನಲ್ಲಿ ಹಿಡಿತ ಸಾಧಿಸಿದರು ಬೆಕಿ ಪೊಸೇಶನ್ ಅನ್ನು ಕಬಲಿಸಿದ ಕಾರಣ ಬ್ಲೂ ಕೋಲ್ಟ್ಸ್ ಹೆಚ್ಚುವರಿ ಆಟಗಾರನ ಅನುಕೂಲ ಸದುಪಯೋಗಪಡಿಸಿಕೊಂಡು ಹಿಡಿತ ಸಾಧಿಸುವಲ್ಲಿ ಪ್ರಯತ್ನಿಸಿದರು. ತಂಡವು ತಮ್ಮ ಮುನ್ನಡೆಯನ್ನು ದ್ವಿಗುಣಗೊಳಿಸಲು ಹಲವಾರು ಅವಕಾಶಗಳನ್ನು ಸೃಷ್ಟಿಸಿಕೊಂಡರು. ಮೊದಲಿಗೆ, ಜಗದೀಪ್ ಬಲಭಾಗದಿಂದ ಬಾಕ್ಸ್‌ಗೆ ಕಟ್ ಮಾಡಿದರು ಮತ್ತು ಅವರ ಪ್ರಯತ್ನವನ್ನು ಪೋಸ್ಟ್ ನ ಹತ್ತಿರದಲ್ಲಿ ತಡೆಯಲಾಯಿತು. ನಂತರ, ಬದಲಿ ಆಟಗಾರನಾದ ಶಿಘಿಲ್ ಎನ್ ಎಸ್, ಸ್ಟೂಡೆಂಟ್ಸ್ ಯೂನಿಯನ್ ಡಿಫೆನ್ಸ್ ಮೂಲಕ ಲಾಲ್ತಾಂಗ್ಲಿಯಾನ ಮುನ್ನುಗ್ಗುತ್ತಿದ್ದುದ್ದನ್ನು ಕಂಡುಕೊಂಡರು, ಆದರೆ ಫಾರ್ವರ್ಡ್ ಶಾಟ್ ಅನ್ನು ಮಾರ್ಕ್‌ನಿಂದ ಸ್ವಲ್ಪ ಅಗಲದಲ್ಲಿ ಹೊಡೆದರು. 79 ನೇ ನಿಮಿಷದಲ್ಲಿ ಬೆಕಿ, ಮಿಡ್‌ಫೀಲ್ಡ್‌ನಲ್ಲಿ ಚೆಂಡನ್ನು ಸ್ವಾಧೀನಪಡಿಸಿಕೊಂಡರು ಮತ್ತು ಬಾಕ್ಸ್‌ನಲ್ಲಿ ಲಾಲ್ತಾಂಗ್ಲಿಯಾನಾ ಇಲ್ಲದಿರುವುದನ್ನು ಕಂಡುಕೊಂಡರು, ಆದರೆ ಅವರ ಹೊಡೆತವನ್ನು ಅಭಿಷೇಕ್ ತಡೆಹಿಡಿದರು.

ಸ್ಟೂಡೆಂಟ್ಸ್ ಯೂನಿಯನ್ ಕೇವಲ ಒಂದು ನಿಮಿಷದ ನಂತರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು, ರಾಬಿನ್ ಯಾದವ್ ಅವರ ಸವಾಲನ್ನು ಆಮ್ಲಾ ತಡೆಯುವಲ್ಲಿ ಯಶಸ್ವಿಯಾದರು ಮತ್ತು ಚೆಂಡನ್ನು ದೂರದ ಮೂಲೆಗೆ ತಳ್ಳಿದರು. ಆಟದ ಅಂತಿಮ ಘಟ್ಟದಲ್ಲಿ, ಒಮೆಗಾ ವನ್‌ಲಾಲ್‌ಹ್ರುಯಿತ್ಲುವಾಂಗಾ ಅವರ ಕ್ರಾಸ್‌ನಿಂದ ಬಿಸ್ವಾ ದರ್ಜೀ ಅವರ ಹೆಡರ್ ಶಾಟ್ ಕೀಪರ್ ಅನ್ನು ಸೋಲಿಸಿತಾದರೂ ಕ್ರಾಸ್‌ಬಾರ್‌ನಿಂದ ಹೊರಗುಳಿಯಿತು ಮತ್ತು ಆಟ ಮುಕ್ತಾಯಕಂಡಿತು.

ಲೀಗ್ ನ ಮುಂದಿನ ಪಂದ್ಯದಲ್ಲಿ ಬ್ಲೂ ಕೋಲ್ಟ್ಸ್ ನವೆಂಬರ್ 17 ರಂದು ಅದೇ ಅಂಗಳದಲ್ಲಿ ಕೊಡಗು ಯುನೈಟೆಡ್ ಎಫ್‌ಸಿಯನ್ನು ಎದುರಿಸಲಿದೆ.

Malcare WordPress Security