ಹೊಸ ಆವೃತ್ತಿಯ ಹಿನ್ನೆಲೆಯಲ್ಲಿ ‘ಕೀಪ್ ಇಟ್ ಕೈಂಡ್’ ಅಭಿಯಾನವನ್ನು ಆರಂಭಿಸಿದ ಬೆಂಗಳೂರು ಎಫ್‌ಸಿ

ಸಮುದಾಯ ತನ್ನ ಸಹಾಯಹಸ್ತವನ್ನು ವಿಸ್ತರಿಸಿ ಅಗತ್ಯ ಜನರಿಗೆ ಸಹಾಯ ಮಾಡುವಂತೆ ಪ್ರೇರೇಪಿಸಲು ವೇದಿಕೆಯನ್ನು ಸೃಷ್ಟಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟ ಬ್ಲೂಸ್; ಸಾಮಾಜಿಕ ಕಳಕಳಿಯನ್ನು ಬೆಂಬಲಿಸುವ ಸಂಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮಾಡವ ದ್ಯೇಯ.

ಬೆಂಗಳೂರು ಎಫ್‌ಸಿ, ಶುಕ್ರವಾರದಂದು ‘ಕೀಪ್ ಇಟ್ ಕೈಂಡ್’ ಎಂಬ ಅಭಿಯಾನವನ್ನು ಬರಲಿರುವ ಆವೃತ್ತಿಯ ಹಿನ್ನೆಲೆಯಲ್ಲಿ ಪ್ರಾರಂಭಿಸಿದ್ದು, ಇದರ ಮೂಲಕ ಅಗತ್ಯವಿರುವವರಿಗೆ ಸಹಾಯ ಹಸ್ತ ನೀಡಲು ವೇದಿಕೆಗಳನ್ನು ಮತ್ತು ಅವಕಾಶಗಳನ್ನು ಪ್ರೇರೇಪಿಸಲು ಕ್ಲಬ್ ಉತ್ಸುಕವಾಗಿದೆ. ಸಾಮಾಜಿಕ ಕಾರಣಗಳನ್ನು ಬೆಂಬಲಿಸುವ ಸ್ಥಳೀಯ ಸಂಸ್ಥೆಗಳೊಂದಿಗೆ ಕೈಜೋಡಿಸಿ ನಗರಕ್ಕೆ ಸ್ಫೂರ್ತಿ ತುಂಬುವ ನಿಟ್ಟಿನಲ್ಲಿ ತನ್ನ ಪಾತ್ರ ನಿರ್ವಹಿಸಲು ಮುಂದಾಗಿದೆ. ನಾಯಕ ಸುನೀಲ್ ಛೇತ್ರಿ, ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಸಂಧು, ಸುರೇಶ್ ವಾಂಗ್ಜಾಮ್, ಕ್ಲಿಟನ್ ಸಿಲ್ವಾ, ಜಯೇಶ್ ರಾಣೆ ಮತ್ತು ಡ್ಯಾನಿಶ್ ಫಾರೂಕ್ ಅವರನ್ನು ಒಳಗೊಂಡ ವಿಡಿಯೋ ತುಣುಕಿನ ಮೂಲಕ ಪ್ರಾರಂಭವಾದ ಈ ಅಭಿಯಾನದ ಉದ್ದೇಶವು ಜನರನ್ನು ಉತ್ತೇಜಿಸುವುದು ಮತ್ತು ಕೋವಿಡ್ -19 ಸಾಂಕ್ರಾಮಿಕ ಖಾಯಿಲೆಯ ಹಿನ್ನೆಲೆಯಲ್ಲಿ ಸಮುದಾಯದೊಂದಿಗೆ ಪರಸ್ಪರ ಸಹಕರಿಸಿಕೊಳ್ಳುವ ಅಭೂತಪೂರ್ವ ಒಗ್ಗಟ್ಟನ್ನು ಮತ್ತೊಮ್ಮೆ ಪ್ರದರ್ಶಿಸುವುದು ಆಗಿದೆ.

ಕ್ಲಿಷ್ಟಕರ ಸಮಯದಲ್ಲಿ ದೇಶವು ಹೇಗೆ ಒಗ್ಗೂಡಿತು ಎಂಬುದನ್ನು ನಾವು ನೋಡಿದ್ದೇವೆ, ಅಪರಿಚಿತರು ಅಗತ್ಯವಿರುವವರಿಗೆ ಸಹಾಯ ಮಾಡಿದ್ದರು. ಈ ಆವೃತ್ತಿ ಮತ್ತು ಅದರಾಚೆಗೂ ಇದನ್ನು ಮುಂದುವರಿಯುವಂತೆ ನಾವು ಖಚಿತಪಡಿಸಿಕೊಳ್ಳಲು ಬಯಸುತ್ತೇವೆ – ಪಿಡುಗು ಇದ್ದರೂ ಇಲ್ಲದಿದ್ದರೂ ಇದು ಕೆಲಸ ಮಾಡಬೇಕಿದೆ. ವಿವಿಧ ಸಾಮಾಜಿಕ ಕಾರಣಗಳೊಂದಿಗೆ ಜನರಿಗೆ ಹತ್ತಿರವಾಗಿ ಕಾರ್ಯ ನಿರ್ವಹಿಸುತ್ತಿರುವ ಹಲವಾರು ಸ್ಥಳೀಯ ಸಂಸ್ಥೆಗಳೊಂದಿಗೆ ಕ್ಲಬ್ ಕೈಜೋಡಿಸಲಿದೆ ಮತ್ತು ಈ ಅಭಿಯಾನವು ಮುಂದುವರೆಯುವುದನ್ನು ನೋಡಲು ತಂಡದಲ್ಲಿರುವ ನಾವೆಲ್ಲರೂ ನಿಜವಾಗಿಯೂ ಎದುರು ನೋಡುತ್ತಿದ್ದೇವೆ. ಕರ್ನಾಟಕ ನಮ್ಮ ತಂಡದ ತವರು ರಾಜ್ಯ ಮತ್ತು ಬೆಂಗಳೂರು ನಮ್ಮ ನಗರ ಹಾಗು ಅದರ ಜನರನ್ನು ಒಟ್ಟುಗೂಡಿಸುವಲ್ಲಿ ನಾವು ನಮ್ಮ ಪಾತ್ರವನ್ನು ನಿರ್ವಹಿಸಲು ಬಯಸುತ್ತೇವೆ.” ಎಂದು ಛೇತ್ರಿ ಹೇಳಿದರು.

ಈ ಅಭಿಯಾನದ ಮೂಲಕ, ಸಂಸ್ಥೆಗಳು ಮತ್ತು ವ್ಯಕ್ತಿಗಳೊಂದಿಗೆ ಕ್ಲಬ್ ಪೂರ್ಣವಾಗಿ ಕೈಜೋಡಿಸಲಿದ್ದು ಈ ನಗರವನ್ನು ತಮ್ಮ ಮಾನವೀಯ ಮೌಲ್ಯಗಳುಳ್ಳ ಉತ್ತಮ ಸ್ಥಳವನ್ನಾಗಿ ಮಾಡಿ, ಜನರು ತಾವಾಗಿಯೇ ಇದರಲ್ಲಿ ತೊಡಗಿಸಿಕೊಳ್ಳುವ ಅವಕಾಶಗಳನ್ನು ಸೃಷ್ಟಿಸುವುದೇ ಇದರ ಉದ್ದೇಶವಾಗಿದೆ.

“ನಾವು 2013 ರಲ್ಲಿ ತಂಡವಾಗಿ ಆರಂಭವಾದಾಗಿನಿಂದ, ಒಂದು ಕ್ಲಬ್ ಆಗಿ ನಮ್ಮ ಬೆಂಬಲಿಗರು ಮತ್ತು ನಮ್ಮ ಸುತ್ತಲಿನ ಸಮುದಾಯದೊಂದಿಗೆ ನಾವು ಪ್ರಾಮಾಣಿಕ ಸಂಪರ್ಕವನ್ನು ಬೆಳೆಸಿಕೊಂಡಿದ್ದೇವೆ. ಕಳೆದ ಆವೃತ್ತಿಯಲ್ಲಿ ‘ಬ್ಯಾಕ್ ಆನ್ ಅವರ್ ಫೀಟ್’ ಅಭಿಯಾನದ ಮೂಲಕ, ಕಷ್ಟದಲ್ಲಿರುವ ಸಣ್ಣ ಉದ್ಯಮಗಳಿಗೆ ಸಹಾಯ ಮಾಡಲು ನಾವು ನಮ್ಮ ಕೈಲಾದಷ್ಟು ಸಹಾಯ ಮಾಡಿದ್ದೆವು. ಪಿಡುಗಿನ ಸಮಯದಲ್ಲಿ ಸಂಕಷ್ಟ ಅನುಭವಿಸಿದ್ದವರಿಗೆ ನೆರವು ನೀಡಲು ಮುಂದಾದಾಗ ನಗರವು ನಮ್ಮನ್ನು ಹೇಗೆ ಅಪ್ಪಿಕೊಂಡಿತು ಎಂಬುದನ್ನು ನಾವು ನೋಡಿದ್ದೇವೆ. ಈ ವರ್ಷ ನಾವು ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲರನ್ನೂ ಪ್ರೇರೇಪಿಸಲು ಬಯಸುತ್ತೇವೆ ಮತ್ತು ಮುಖ್ಯವಾಗಿ, ಹಂಚಿ ಬದುಕುವುದನ್ನು ತಿಳಿಹೇಳಬೇಕು ಎಂದು ಭಾವಿಸಿದ್ದೇವೆ. ನಾವು ಹೆಚ್ಚಿನ ಜನರನ್ನು ತಮ್ಮ ಸಾಮಾಜಿಕ ಕರ್ತವ್ಯ ನಿರ್ವಹಿಸಲು ಪ್ರೇರೇಪಿಸಲಿದ್ದೇವೆ ಮತ್ತು ನಮ್ಮ ಸಮಾಜದಲ್ಲಿ ಈಗಾಗಲೇ ಸಾಧನೆಯಲ್ಲಿ ತೊಡಗಿರುವ ಜನರನ್ನು ಗುರುತಿಸುವ ಪ್ರಯತ್ನವನ್ನು ಮಾಡಲಿದ್ದೇವೆ ಮತ್ತು ಅವರೊಂದಿಗೆ ಸಹಕರಿಸಲಿದ್ದೇವೆ.” ಎಂದು ತಮ್ಹಾನೆ ಹೇಳಿದರು.

Malcare WordPress Security