ಮಿಡ್‌ಫೀಲ್ಡರ್ ಜಯೇಶ್ ರಾಣೆ ಇನ್ನು ಬ್ಲೂ

ಎರಡು ಬಾರಿ ಐಎಸ್ಎಲ್ ಗೆದ್ದ ಈ ಚಾಂಪಿಯನ್, ಎಎಫ್‌ಸಿ ಕಪ್ ಪ್ಲೇಆಫ್ ಹಂತದ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಮಾರ್ಕೊ ಪೆಜೈಯುಲಿ ಪಡೆಯನ್ನು ಬಳ್ಳಾರಿಯಲ್ಲಿ ಸೇರಿಕೊಂಡಿದ್ದಾರೆ.

2023-24ರ ಕ್ರೀಡಾವರ್ಷದ ಅಂತ್ಯದವರೆಗೆ, ಬಹುಮುಖ ಪ್ರತಿಭೆ – ಭಾರತೀಯ ಮಿಡ್‌ಫೀಲ್ಡರ್ ಜಯೇಶ್ ರಾಣೆ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಮಾಡಿರುವುದಾಗಿ ಬೆಂಗಳೂರು ಎಫ್‌ಸಿ ಗುರುವಾರ ಪ್ರಕಟಿಸಿದೆ. 28 ರ ಈ ಹರೆಯ, ಈವರೆಗೆ ಕ್ಲಬ್‌ ಮಾಡಿಕೊಂಡಿರುವ ಒಪ್ಪಂದಗಳಲ್ಲಿ ಆರನೆಯವರಾಗಿದ್ದು, ಎಎಫ್‌ಸಿ ಕಪ್ ಪ್ಲೇಆಫ್ ಹಂತದಲ್ಲಿ ಈಗಲ್ಸ್ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ತಂಡದ ಪರ ಆಡಲಿದ್ದಾರೆ.

ಮುಂಬೈ ಎಫ್‌ಸಿ ಅಕಾಡೆಮಿಯ ಉತ್ಪನ್ನವಾದ ರಾಣೆ, ಇಂಡಿಯನ್ ಸೂಪರ್ ಲೀಗ್‌ನಲ್ಲಿ ಈವರೆಗೆ 85 ಕ್ಯಾಪ್‌ಗಳನ್ನು ಹೊಂದಿದ್ದು, ಬ್ಲೂಸ್‌ ತಂಡದ ಅಟ್ಯಾಕ್ ಆಯ್ಕೆಗಳನ್ನು ಸಬಲವಾಗಿಸಿದ್ದಾರೆ. ಎಟಿಕೆ ಮತ್ತು ಎಟಿಕೆ ಮೋಹನ್ ಬಗಾನ್ ತಂಡಗಳೊಂದಿಗಿನ ನಾಲ್ಕುಆವೃತ್ತಿಗಳ ಪ್ರದರ್ಶನದ ನಂತರ ಅವರು ಬ್ಲೂಸ್ ಪಡೆಯನ್ನು ಸೇರಿದ್ದಾರೆ ಮತ್ತು ಈ ಹಿಂದೆ 2015-16ರ ಇಂಡಿಯನ್ ಸೂಪರ್ ಲೀಗ್ ಪ್ರಶಸ್ತಿಯನ್ನು ಗೆದ್ದಿದ್ದ ಚೆನ್ನೈಯಿನ್ ಎಫ್‌ಸಿ ತಂಡದ ಭಾಗವಾಗಿದ್ದರು.

“ಬೆಂಗಳೂರು ಎಫ್‌ಸಿ ತಂಡವನ್ನು ಸೇರಿಕೊಳ್ಳುತ್ತಿರುವುದು ನನಗೆ ಬಹಳ ಸಂತಸ ತಂದಿದೆ, ಈ ಕ್ಲಬ್ ಹಲವಾರು ವರ್ಷಗಳ ಯಶಸ್ಸಿನ ಅನುಭವವನ್ನು ಪಡೆದಿದ್ದು, ಪಿಚ್‌ನ ಒಳ ಹೊರಗೆ ಉನ್ನತ ಮಟ್ಟದ ವೃತ್ತಿಪರತೆಯನ್ನು ಹೊಂದಿರುವ ತಂಡ ಎನಿಸಿದೆ. ನನ್ನ ವೃತ್ತಿಜೀವನದ ಈ ಹಂತದಲ್ಲಿ, ನಾನು ಹೊಸ ಸವಾಲಿಗೆ ಸಿದ್ಧನಾಗಿದ್ದೆ ಮತ್ತು ಬೆಂಗಳೂರು ಎಫ್‌ಸಿ ನನಗೆ ಆ ಅವಕಾಶವನ್ನು ಕಲ್ಪಿಸಿದೆ. ನನ್ನ ವೃತ್ತಿಜೀವನದುದ್ದಕ್ಕೂ ಈ ತಂಡದ ವಿರುದ್ಧ ನಾನು ಆಡುತ್ತ ಬಂದಿದ್ದೇನೆ ಮತ್ತು ಈಗ ನಾನು ಈ ಕ್ಲಬ್ ಅನ್ನು ಪ್ರತಿನಿಧಿಸಲು ಹಾಗು ಅದರ ಮುಂದಿನ ಎಲ್ಲಾ ಯಶಸ್ಸಿನಲ್ಲಿ ಪಾತ್ರವನ್ನು ವಹಿಸಲು ಕಾಯುತ್ತಿದ್ದೇನೆ ”ಎಂದು ಬಳ್ಳಾರಿಯಲ್ಲಿರುವ ತರಬೇತಿ ಶಿಭಿರವನ್ನು ಸೇರಿಕೊಂಡ ನಂತರ ರಾಣೆ ತಿಳಿಸಿದರು.

ರಾಣೆ, ಒಬ್ಬ ಮಿಡ್ ಫೀಲ್ಡರ್ ಆಗಿ ಫ್ಲ್ಯಾಂಕ್ ಗಳಲ್ಲೂ ಉತ್ತಮ ಪ್ರದರ್ಶನ ನೀಡಬಲ್ಲವರಾಗಿದ್ದಾರೆ. ಇವರು ಎಟಿಕೆ ಪರ ಆಡಿದ್ದಾಗ ಎರಡನೇ ಬಾರಿಗೆ ಇಂಡಿಯನ್ ಸೂಪರ್ ಲೀಗ್ ಪ್ರಶಸ್ತಿಯನ್ನು ಗೆದ್ದಿದ್ದರು ಮತ್ತು ಇವರು 2017 ರಲ್ಲಿ ಐ-ಲೀಗ್ ಟ್ರೋಫಿಯನ್ನು ಗೆದ್ದ ಐಜಾಲ್ ಎಫ್ ಸಿ ತಂಡದಲ್ಲಿಯೂ ಆಡಿದ್ದರು. ಅವರು U23 ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, ಎಎಫ್‌ಸಿ U23 ಚಾಂಪಿಯನ್‌ಶಿಪ್ ನ ಅರ್ಹತಾ ಪಂದ್ಯಗಳಲ್ಲಿ ಪಾಲ್ಗೊಂಡಿದ್ದರು.

“ಜಯೇಶ್ ರವರು ವಿಭಿನ್ನ ಸ್ಥಾನಗಳಲ್ಲಿ ಆಡಬಲ್ಲ ಆಟಗಾರನಾಗಿದ್ದು ಅವರ ಪ್ರತಿಭೆ ತಂಡದ ಅಟ್ಯಾಕ್ ಅಲ್ಲಿ ಸಾಕಷ್ಟು ಆಯ್ಕೆಗಳನ್ನು ನೀಡುತ್ತದೆ. ಅವರು ಸೃಜನಶೀಲ ಮತ್ತು ಕೌಶಲ್ಯಯುತ ಆಟಗಾರನಾಗಿದ್ದು, ಗೋಲ್ ಅತ್ತ ಗುರಿ ಹೊಂದಿರುತ್ತಾರೆ, ಮೂರು ಲೀಗ್ ಪ್ರಶಸ್ತಿ ವಿಜೇತ ತಂಡಗಳ ಭಾಗವಾಗಿದ್ದ ಅನುಭವವನ್ನೂ ಅವರು ಹೊಂದಿದ್ದಾರೆ. ಪಿಚ್ ಹೊರಗೂ ಅವರು ಒಬ್ಬ ಸಕಾರಾತ್ಮಕ ವ್ಯಕ್ತಿಯಾಗಿದ್ದು ಈಗಾಗಲೇ ಉಳಿದ ತಂಡದೊಂದಿಗೆ ಹೊಂದಿಕೊಂಡಿದ್ದಾರೆ. ನಾನು ಅವರನ್ನು ಬೆಂಗಳೂರು ಎಫ್‌ಸಿಗೆ ಸ್ವಾಗತಿಸುತ್ತಾ ಅವರೊಂದಿಗೆ ಮತ್ತಷ್ಟು ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ”ಎಂದು ಬ್ಲೂಸ್‌ನ ಮುಖ್ಯ ತರಬೇತುದಾರ ಮಾರ್ಕೊ ಪೆಜೈಯುಲಿ ವಿವರಿಸಿದರು.

ಆಗಸ್ಟ್ 15 ರಂದು ಮಾಲ್ಡೀವ್ಸ್‌ನಲ್ಲಿ ನಡೆಯಲಿರುವ ಎಎಫ್‌ಸಿ ಕಪ್ ಪ್ಲೇಆಫ್ ಹಂತದ ಪಂದ್ಯದಲ್ಲಿ ಕ್ಲಬ್ ಈಗಲ್ಸ್ ಎಫ್‌ಸಿಯನ್ನು ಬ್ಲೂಸ್ ಎದುರಿಸಲಿದ್ದಾರೆ.

Malcare WordPress Security