ಶಿವಶಕ್ತಿ ಮತ್ತು ಬಿದ್ಯಾಶಾಗರ್ ಗಳಿಸಿದ ಗೋಲ್ ಸಹಾಯದಿಂದ ನೌಶಾದ್ ಮೂಸ ಪಡೆ ಗ್ರೂಪ್ ಸಿ ಅಲ್ಲಿ ಅಂಕ ಪಡೆಯಿತು.
ಬೆಂಗಳೂರು ಎಫ್‌ಸಿ ಮತ್ತು ದೆಹಲಿ ಎಫ್‌ಸಿ ತಂಡಗಳು ಡುರಾಂಡ್ ಕಪ್ ಗ್ರೂಪ್ ಸಿ ಪಂದ್ಯದಲ್ಲಿ ಕೋಲ್ಕತ್ತಾದ ಮೋಹನ್ ಬಗಾನ್ ಮೈದಾನದಲ್ಲಿ ಶನಿವಾರದಂದು 2-2 ಗೋಲುಗಳ ಸಮಬಲದ ಹೋರಾಟದಿಂದ ಪಂದ್ಯವನ್ನು ರೋಚಕಗೊಳಿಸಿದ್ದವು. ಶಿವಶಕ್ತಿ ನಾರಾಯಣನ್ (27’) ಮೊದಲಾರ್ಧದಲ್ಲಿ ತಂಡದ ಪರ ಗೋಲ್ ಸಿಡಿಸಿದರೆ, ದ್ವಿತೀಯಾರ್ಧದಲ್ಲಿ ದೆಹಲಿ ತಂಡವು ಪಂದ್ಯದ ದಿಕ್ಕನ್ನು ಬದಲಿಸಿತು. ವಿಲ್ಲೀಸ್ ಪ್ಲಾಜಾ (57’, 61’) ಎರಡು ಗೋಲ್ ಗಳಿಸುವ ಮೂಲಕ ಮುನ್ನಡೆ ಸಾಧಿಸಿ ಆಘಾತ ತಂದರು. ಬದಲಿ ಆಟಗಾರ ಬಿದ್ಯಾಶಾಗರ್ ಸಿಂಗ್ (75’) ಮತ್ತೊಂದು ಗೋಲ್ ಗಳಿಸುವ ಮೂಲಕ ಬೆಂಗಳೂರು ತಂಡ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಅನುವುಮಾಡಿಕೊಟ್ಟರು.
ಕೇರಳ ಬ್ಲಾಸ್ಟರ್ಸ್ ತಂಡವನ್ನು ಆರಂಭಿಕ ಪಂದ್ಯದಲ್ಲಿ ಮಣಿಸಿದ್ದ ತಂಡದಲ್ಲಿ ನೌಶಾದ್ ಮೂಸಾ ಮೂರು ಬದಲಾವಣೆಗಳನ್ನು ಮಾಡಿದರು. ಆಕಾಶ್‌ದೀಪ್ ಸಿಂಗ್, ನಮಗ್ಯಾಲ್ ಭುಟಿಯಾ ಮತ್ತು ಬಿದ್ಯಾಶಾಗರ್ ಸಿಂಗ್ ಸ್ಥಾನದಲ್ಲಿ ದಮೈತ್‌ಫಾಂಗ್ ಲಿಂಗ್‌ಡೋ, ಲಿಯಾನ್ ಅಗಸ್ಟೀನ್ ಮತ್ತು ಹರ್ಮನ್‌ಪ್ರೀತ್ ಸಿಂಗ್ ಅವರನ್ನು ಕರೆತಂದರು.
ಮತ್ತೊಂದು ಪಂದ್ಯದಲ್ಲಿ ನಾಯಕತ್ವದ ಜವಾಬ್ದಾರಿ ಹೊತ್ತ ಅಜಿತ್ ಕುಮಾರ್, ಐದನೇ ನಿಮಿಷದಲ್ಲಿ ಬಾಕ್ಸ್ ಒಳಗಡೆ ಹಿಮಾಂಶು ಜಾಂಗ್ರಾ ರನ್ನು ತಡೆಹಿಡಿದು ವಿಲ್ಲೀಸ್ ಪ್ಲಾಜಾ ನೀಡಿದ ಕ್ರಾಸ್ ತಡೆಯುವಲ್ಲಿ ಹೆಚ್ಚು ಶ್ರಮ ವಹಿಸಬೇಕಾಯ್ತು. ನಂತರ ತಂಡಕ್ಕೆ ಮೊದಲ ಅಂಕ ಗಳಿಸುವ ಅವಕಾಶ ರೈಟ್ ವಿಂಗ್ ಕಡೆಯಿಂದ ಚೆಂಡನ್ನು ಸಿಡಿಸಿದ ಶಿವಶಕ್ತಿ ನಾರಾಯಣನ್ ಮೂಲಕ ಲಭಿಸಿತು. ಸ್ಟ್ರೈಕರ್ ಕಟ್ ಬ್ಯಾಕ್ ಆದಾಗ ಅಜಯ್ ಛೇತ್ರಿ ಅವರನ್ನು ಚೆಂಡು ತಲುಪಿತು. ಆದರೇ ಅವರ ಹೊಡೆತವನ್ನು ಸೂರಜ್ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಇನ್ನೊಂದು ತುದಿಯಲ್ಲಿ, ಲಾರಾ ಶರ್ಮಾ ಎಚ್ಚರಿಕೆಯಿಂದ ರಿನ್ರೈಥನ್ ಶೈಜಾ ಅವರನ್ನು ತಡೆದುಳಿಸಿದರು.
27 ನೇ ನಿಮಿಷದಲ್ಲಿ ಬ್ಲೂಸ್ ಸವಾಲುಗಳನ್ನು ಹಿಮ್ಮೆಟ್ಟಿತು. ಅಜಯ್ ಅವರ ಫ್ರೀಕಿಕ್ ತಡೆಯನ್ನು ಮೀರಿ ಬೌನ್ಸ್ ಆದಾಗ ದೆಹಲಿ ಗೋಲ್ ಕೀಪರ್ ಲವ್ಪ್ರೀತ್ ಸಿಂಗ್ ಚೆಂಡನ ಹಿಡಿತ ಸಾಧಿಸುವಲ್ಲಿ ವಿಫಲರಾದರು, ಶಿವಶಕ್ತಿ ಎದುರಾಳಿಯ ಅಜಾಗರೂಕತೆಯನ್ನು ಗ್ರಹಿಸಿ ಪೋಸ್ಟ್ ಹತ್ತಿರದಿಂದಲೇ ಗೋಲ್ ಗಳಿಸಿ ಬಿಎಫ್‌ಸಿಯನ್ನು 1-0 ಅಂತರದೊಂದಿಗೆ ಮುನ್ನಡೆ ಸಾಧಿಸುವಂತೆ ಮಾಡಿದರು.
ಮೊದಲಾರ್ಧದ ಅಂತ್ಯದಲ್ಲಿ ಪಂದ್ಯವು ದೆಹಲಿಯ ಕಡೆ ವಾಲಿದಂತೆ ಕಂಡಿತು. ರಿನ್ರೈಥನ್ ಶೈಜಾ ಎಡ ಫ್ಲ್ಯಾಂಕ್ ನಿಂದ ಆರಾಮ ಹೊಡೆತ ತೆಗೆದುಕೊಂಡರು, ಆದರೆ ಅವರ ಹೊಡೆತವನ್ನು ಲಾರಾ ಹತ್ತಿರದ ಪೋಸ್ಟ್‌ನಲ್ಲಿ ಚೆನ್ನಾಗಿ ನಿರ್ಬಂಧಿಸಿದರು.
ಮೊದಲಾರ್ಧದ ನಂತರ ಅಂಗಳಕ್ಕೆ ದೆಹಲಿ ತಂಡವು ನೈಜೀರಿಯಾದ ವಿಕ್ಟರ್ ಫಿಲಿಪ್ ರನ್ನು ನಿಖಿಲ್ ಮಾಲಿ ಬದಲಿಗೆ ಸಬ್ಸ್ಟಿಟ್ಯೂಟ್ ಆಗಿ ಕರೆತಂದರು. ನೈಜೀರಿಯಾದ ಆಟಗಾರ ಅಂಗಳಕ್ಕಿಳಿದ ಕೂಡಲೇ ತನ್ನ ಮೋಡಿಯನ್ನು ಮಾಡಲಾರಂಭಿಸಿದರು. ಕ್ರಾಸ್ ಮೂಲಕ ಚೆಂಡನ್ನು ಸುನಾಯಾಸವಾಗಿ ಬಾಕ್ಸ್ ಒಳಗೆ ಪ್ಲಾಜಾ ಗೆ ತಲುಪಿಸಿದರು. ಗೋಲ್ ಅತ್ತ ಪ್ಲಾಜಾ ಮಾಡಿದ ಪ್ರಯತ್ನ ಲಾರಾ ಗೆ ಕೈಗೆಟುಕದೆ ಎದುರಾಳಿಗೆ ಅಂಕ ತಂದಿತ್ತಿತು. ಕೆಲವು ನಿಮಿಷಗಳ ನಂತರ, ಟ್ರಿನಿಡಾಡ್ ಮತ್ತು ಟೊಬಾಗೊ ಸ್ಟ್ರೈಕರ್ ಟೈಟ್ ಆಂಗಲ್ ನಿಂದ ಹೊಡೆದ ಹೊಡೆತವು ಪೋಸ್ಟ್ ನ ಬಳಿ ಲಾರಾ ಅವರನ್ನು ದಾಟಿ ಎರಡನೇ ಅಂಕವನ್ನು ಎದುರಾಳಿಗೆ ನೀಡಿ ಬ್ಲೂಸ್ ಗೆ 2-1 ರ ಹಿನ್ನೆಡೆ ಆಗುವಂತೆ ಆಯ್ತು.
ಮತ್ತೊಂದೆಡೆ, ಲಿಯಾನ್ ಬದಲಿಗೆ ಬಿದ್ಯಾಶಾಗರ್ ಅನ್ನು ಅಂಗಳಕ್ಕೆ ಕರೆತಂದಾಗ, ತಕ್ಷಣದಲ್ಲೇ ಅವರು ಹರ್ಮನ್‌ಪ್ರೀತ್ ಅವರ ಕ್ರಾಸ್ ಅನ್ನು ಪಡೆದು ಪ್ರಭಾವ ಬೀರಿದರು ಮತ್ತು ಬಹುತೇಕ ಅಸಾಧ್ಯವಾದ ಕೋನದಿಂದ ನೆಟ್ ಗೆ ಚೆಂಡನ್ನು ರೋಚಕವಾಗಿ ತಲುಪಿಸುವ ಮೂಲಕ ಬೆಂಗಳೂರು ತಂಡಕ್ಕೆ ಸಮಬಲ ತರುವಲ್ಲಿ ಯಶಸ್ವಿಯಾದರು.
ಬ್ಲೂಸ್ ಸತತವಾಗಿ ದೆಹಲಿಯಯನ್ನು ಮಣಿಸಿ ವಿಜೇತರಾಗಲು ಪ್ರಯತ್ನಿಸುತ್ತಲೇ ಇದ್ದರು ಮತ್ತು ಮುನ್ನಡೆ ಸಾಧಿಸಲು ಕೆಲವು ಉತ್ತಮ ಅವಕಾಶಗಳನ್ನೂ ಪಡೆದುಕೊಂಡರು. ಮೊದಲಿಗೆ, ಬಿದ್ಯಾಶಾಗರ್ ಪ್ರಯತ್ನವನ್ನು ಲವ್ಪ್ರೀತ್ ನಿರಾಕರಿಸಿ ದೂರ ಉಳಿಸಿದರು ಮತ್ತು ಹರ್ಮನ್‌ಪ್ರೀತ್ ರಿಬೌಂಡ್ ಆದ ಚೆಂಡನ್ನು ಗೋಲ್ ಮಾಡಲು ವಿಫಲರಾದರು. ನಂತರದಲ್ಲಿ ಹರ್ಮನ್‌ಪ್ರೀತ್ ಸಲೀಸಾಗಿ ಬಂದ ಚೆಂಡನ್ನು ಬಲಕ್ಕೆ ಬಿಟ್ಟರು ಮತ್ತು ಶಿವಶಕ್ತಿ ಅದನ್ನು ಕ್ರಾಸ್ ಮಾಡಿದರು, ಆದರೆ ಲವ್ಪ್ರೀತ್ ಮತ್ತು ಡಿಫೆಂಡರ್ ಗೋಲ್-ಲೈನ್ ಬಳಿ ಚೆಂಡನ್ನು ತಡೆಯುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಸ್ಟ್ರೈಕರ್ ತನ್ನ ಎರಡನೇ ಗೋಲ್ ಪಡೆಯುವಲ್ಲಿ ವಿಫಲವಾದಂತಾಯಿತು. ಅಂತಿಮ ಅವಕಾಶದಲ್ಲಿ ಮಧ್ಯದಿಂದ ಶಿವಶಕ್ತಿ ಹೊಡೆದ ಆರಾಮವಾದ ಹೊಡೆತವನ್ನು ಆಕಾಶದೀಪ್ ಸರಿಯಾಗಿಯೇ ಬಳಸಿಕೊಂಡರಾದರೂ, ಯುವಆಟಗಾರನ ಹೊಡೆತವು ಪೋಸ್ಟ್ ಇಂದ ಇಂಚುಗಳ ದೂರದಲ್ಲಿ ಸಾಗಿತು. ಅಂತಿಮವಾಗಿ ಬ್ಲೂಸ್ ಡ್ರಾ ಗೆ ತೃಪ್ತಿ ಪಡುವಂತಾಯ್ತು.
ಬಿಎಫ್‌ಸಿ ಮಂಗಳವಾರದಂದು ವಿವೇಕಾನಂದ ಯುಬ ಭಾರತಿ ಕ್ರೀರಾಂಗನ್ ಅಲ್ಲಿ ಇಂಡಿಯನ್ ನೇವಿ ತಂಡವನ್ನು ಎದುರಿಸಲಿದೆ.