ಕಾಶ್ಮೀರಿ ಮುಂದಾಳು ಡ್ಯಾನಿಶ್ ಫಾರೂಕ್ ಅನ್ನು ಸೆಳೆದ ಬ್ಲೂಸ್

ಎ ಎಫ್ ಸಿ ಕಪ್ ಪ್ಲೇ ಆಫ್ಸ್ ನ ಕ್ಲಬ್ ಈಗಲ್ಸ್ ವಿರುದ್ಧದ ಪಂದ್ಯದ ಹಿನ್ನೆಲೆಯಲ್ಲಿ 25ರ ಹರೆಯ 2ವರ್ಷಗಳ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.

ಬೆಂಗಳೂರು ಎಫ್‌ಸಿ, ಎರಡು ವರ್ಷಗಳ ಒಪ್ಪಂದಕ್ಕೆ ಡ್ಯಾನಿಶ್ ಫಾರೂಕ್ ರವರೊಂದಿಗೆ ಸಹಿ ಮಾಡಿಕೊಂಡಿರುವುದಾಗಿ ಭಾನುವಾರ ಪ್ರಕಟಿಸಿದೆ. 25 ವರ್ಷದ ಈ ಅಟ್ಯಾಕರ್ ಜಮ್ಮು ಮತ್ತು ಕಾಶ್ಮೀರದಿಂದ ಕ್ಲಬ್‌ಗೆ ಸಹಿ ಮಾಡಿರುವ ಮೊದಲ ಆಟಗಾರನಾಗಿದ್ದಾರೆ, ಈಗಲ್ಸ್ ಎಫ್‌ಸಿ ವಿರುದ್ಧದ ಮುಂಬರಲಿರುವ ಎಎಫ್‌ಸಿ ಕಪ್ ಪ್ಲೇಆಫ್ ಹಂತದ ಹಣಾಹನಿಗೂ ಮುನ್ನ ತಂಡವನ್ನು ಅವರು ಸೇರಿಕೊಳ್ಳಲಿದ್ದಾರೆ.

ಡ್ಯಾನಿಶ್ ತನ್ನ ಯುವ ವೃತ್ತಿಜೀವನವನ್ನು J&K ಬ್ಯಾಂಕ್ ಫುಟ್ಬಾಲ್ ಅಕಾಡೆಮಿಗಾಗಿ ಆಡುತ್ತ ಕಳೆದಿದ್ದಾರೆ, ಅಲ್ಲಿ ಇವರು ಎಲ್ಲ ವಯೋಮಾನದ ಗುಂಪುಗಳಲ್ಲಿ ಆರ್ಮ್ ಬ್ಯಾಂಡ್ ಧರಿಸಿ, ಯಶಸ್ವಿಯಾಗಿ 12 ಪ್ರಶಸ್ತಿಗಳನ್ನು ಪಡೆಯುವಲ್ಲಿ ಯಶಸ್ಸು ಪಡೆದಿದ್ದಾರೆ. ಇವರ ಪ್ರದರ್ಶನಗಳು ಇವರನ್ನು ಐ-ಲೀಗ್ ಎರಡನೇ ವಿಭಾಗದ ಲೋನ್ಸ್ಟಾರ್ ಕಾಶ್ಮೀರಕ್ಕೆ ಮತ್ತು ಒಂದು ಆವೃತ್ತಿಯ ನಂತರ ರಿಯಲ್ ಕಾಶ್ಮೀರಕ್ಕೆ ತಲುಪುವಂತೆ ಮಾಡಿದೆ.

“ಬಿಎಫ್‌ಸಿ ದೇಶದ ಅತ್ಯುತ್ತಮ ಕ್ಲಬ್‌ಗಳಲ್ಲಿ ಒಂದಾಗಿದೆ, ಮತ್ತು ಇದರ ಭಾಗವಾಗಲು ಅವಕಾಶ ದೊರೆತಿರುವುದು ನನಗೆ ತುಂಬಾನೇ ಖುಷಿ ತಂದಿದೆ. ನನ್ನ ತಕ್ಷಣದ ಸವಾಲೆಂದರೆ ನಾನು ಮುಂದಿನ ಎಎಫ್‌ಸಿ ಕಪ್ ಮತ್ತು ಇಂಡಿಯನ್ ಸೂಪರ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುವುದು. ಹಾಗೆ ನನ್ನ ಅಂತಿಮ ಗುರಿಯೂ ಕ್ಲಬ್‌ನೊಂದಿಗೆ ಯಶಸ್ಸನ್ನು ಗಳಿಸುವುದು ಮತ್ತು ಒಬ್ಬ ಆಟಗಾರನಾಗಿ ಬೆಳೆಯುವುದು”ಎಂದು ಡ್ಯಾನಿಶ್ ಹೇಳಿದರು.

ಇವರು ಸ್ನೋ ಲೆಪೋರ್ಡ್ ಐ-ಲೀಗ್ ನ 2 ನೇ ವಿಭಾಗದ ಪ್ರಶಸ್ತಿಯನ್ನು ಪಡೆಯುವಲ್ಲಿ ಮತ್ತು ಉನ್ನತ ಸ್ಥಾನಕ್ಕೆ ಬಡ್ತಿಯನ್ನು ಗಳಿಸುವಲ್ಲಿ ತಂಡದ ಪರ ಅಭಿಯಾನದಲ್ಲಿ ಅವರು ತಂಡದ ಜಂಟಿ ಅಗ್ರ ಸ್ಕೋರರ್ ಆಗಿ ಸಹಕರಿಸಿದ್ದರು. ತಮ್ಮ ಮೊದಲ ಐ-ಲೀಗ್‌ನಲ್ಲಿನ ಸೀಸನ್ ನಲ್ಲಿ, ರಿಯಲ್ ಕಾಶ್ಮೀರವು ಟೇಬಲ್ ನ ಮೂರನೇ ಸ್ಥಾನವನ್ನು ಪಡೆದುಕೊಳ್ಳುವುದರ ಮೂಲಕ, ಮೋಹನ್ ಬಗಾನ್, ಚರ್ಚಿಲ್ ಬ್ರದರ್ಸ್ ಮತ್ತು ಗೋಕುಲಂ ಕೇರಳ ಎಫ್‌ಸಿ ಗಿಂತ ಉತ್ತಮ ಸ್ಥಾನದಲ್ಲಿತ್ತು.

“ಐದು ವರ್ಷಗಳಿಂದ ರಿಯಲ್ ಕಾಶ್ಮೀರದೊಂದಿಗೆ ಆಡುತ್ತಿದ್ದೆ ಮತ್ತು ಬೆಂಗಳೂರು ಎಫ್‌ಸಿಯು ನನ್ನ ಪ್ರಗತಿಯನ್ನು ಗಮಣಿಸುತ್ತಿತ್ತು ಎಂದು ತಿಳಿದಾಗ ನನಗೆ ಸಂತೋಷವಾಯಿತು. ನನ್ನ ಏಜೆಂಟರಿಂದ ನನಗೆ ಕರೆ ಬಂದಾಗ, ಬಿಎಫ್‌ಸಿಯು ನನ್ನೊಂದಿಗೆ ಸಹಿ ಹಾಕಲು ಆಸಕ್ತಿ ಹೊಂದಿದೆ ಎಂದು ತಿಳಿದಾಗ, ನಾನು ಒಬ್ಬ ಆಟಗಾರನಾಗಿ ಬೆಳೆಯಲು ಮತ್ತು ನನ್ನ ಪ್ರತಿಭೆಯನ್ನು ಉನ್ನತ ಮಟ್ಟದಲ್ಲಿ ಪ್ರದರ್ಶಿಸಲು ಇದು ಅತ್ಯುತ್ತಮ ಅವಕಾಶವಾಗಿದೆ ಎಂದು ನಾನು ಭಾವಿಸಿದೆ.”ಎಂದು ಡ್ಯಾನಿಶ್ ವಿವರಿಸಿದರು.

ಕಾಶ್ಮೀರ ಮೂಲದ ಈ ಆಟಗಾರ ತಂಡದ ದೃಷ್ಟಿಯಲ್ಲಿ ನೋಡಿದಾಗ ಒಬ್ಬ ಆಕ್ರಮಣಕಾರಿ ಆಟಗಾರನಾಗಿದ್ದು, ಫ್ಲಾಂಕ್ ನಲ್ಲಿ ಆಡುವಲ್ಲಿ ಪ್ರಾವಿಣ್ಯತೆ ಹೊಂದಿದ್ದು ಈ ಹಿಂದೆ ಮಿಡ್‌ಫೀಲ್ಡ್‌ರ್ ಆಗಿಯೂ ಹೊರಹೊಮ್ಮುವಲ್ಲಿ ಯತ್ನಿಸುತ್ತಿದ್ದಾರೆ. ಐ-ಲೀಗ್‌ನ ಕಳೆದ ಮೂರು ಸೀಸನ್ ಗಳಲ್ಲಿ 48 ಹೆಚ್ಚು ಪ್ರದರ್ಶನಗಳನ್ನು ನೀಡಿರುವ ಫರೂಕ್ ಆ ಸಮಯದಲ್ಲಿ ಏಳು ಗೋಲುಗಳನ್ನು ಮತ್ತು ಐದು ಅಸಿಸ್ಟ್‌ಗಳನ್ನು ದಾಖಲಿಸಿದ್ದಾರೆ. ಫಾರೂಕ್ ನ ದಾಳಿಯಲ್ಲಿ, ರಿಯಲ್ ಕಾಶ್ಮೀರ 2020 ರ ಐಎಫ್‌ಎ ಶೀಲ್ಡ್ ಗೆಲ್ಲುವ ಮೂಲಕ ಕ್ಲಬ್ ತನ್ನ ಇತಿಹಾಸದಲ್ಲಿ ಮೊದಲ ಪ್ರಮುಖ ಪ್ರಾದೇಶಿಕ ಪ್ರಶಸ್ತಿಯನ್ನು ಗೆದ್ದುಕೊಂಡಿತು.

“ಡ್ಯಾನಿಶ್ ರವರು ಅನೇಕ ಸ್ಥಾನಗಳಲ್ಲಿ ಆಡಿದ ಅನುಭವವನ್ನು ಹೊಂದಿದ್ದು; ಸ್ಟ್ರೈಕರ್ ಆಗಿ, ವಿಂಗರ್ ಆಗಿ ಮತ್ತು ದಾಳಿಯಲ್ಲಿ ನಮಗೆ ಸಾಕಷ್ಟು ಆಯ್ಕೆಗಳನ್ನು ನೀಡುತ್ತಾರೆ. ಅವರದ್ದು ಒಳ್ಳೆಯ ವ್ಯಕ್ತಿತ್ವ, ತಂಡದೊಂದಿಗಿನ ಉತ್ತಮವಾದ ವರ್ತನೆ ಮತ್ತು ಅವರ ಫುಟ್‌ಬಾಲ್ ಶೈಲಿಯೂ ತಂಡಕ್ಕೆ ಸ್ವಲ್ಪ ತಾಂತ್ರಿಕವಾಗಿ ಗುಣಮಟ್ಟವನ್ನು ನೀಡುತ್ತದೆ. ಡ್ಯಾನಿಶ್ ಅವರು ಹಿಂದೆ ತಾವಾಡಿದ್ದ ತಂಡದ ಕ್ಯಾಪ್ಟನ್ ಆಗಿದ್ದರು ಮತ್ತು ಅವರ ನಾಯಕತ್ವದ ಗುಣಗಳು ಸ್ವಲ್ಪಮಟ್ಟಿಗೆ ಪಿಚ್‌ಗೂ ತರುತ್ತಾರೆ ”ಎಂದು ಬ್ಲೂಸ್‌ನ ಮುಖ್ಯ ಕೋಚ್ ಮಾರ್ಕೊ ಪಜೈಯುಲಿ ಹೇಳಿದರು.

ಫಾರೂಕ್ ಅವರೊಂದಿಗಿನ ಈ ಒಪ್ಪಂದ ಆಗಸ್ಟ್ 15 ರಂದು ಮಾಲ್ಡೀವ್ಸ್‌ನಲ್ಲಿ ಕ್ಲಬ್ ಈಗಲ್ಸ್ ಎಫ್‌ಸಿ ವಿರುದ್ಧದ ಎಎಫ್‌ಸಿ ಕಪ್ ಪ್ಲೇಆಫ್ ಹಣಾಹಣಿಯ ಹಿನ್ನೆಲೆಯಲ್ಲಿ ಬ್ಲೂಸ್‌ ಪರ ಏಳನೇಯದ್ದಾಗಿದೆ.

Malcare WordPress Security