ಡುರಾಂಡ್ ಕಪ್ ಸೆಮಿಫೈನಲ್‌ನಲ್ಲಿ ಎಫ್‌ಸಿ ಗೋವಾವನ್ನು ಎದುರಿಸಲಿರುವ ಬೆಂಗಳೂರು

ಎಫ್‌ಸಿ ಗೋವಾ ವಿರುದ್ಧ ವಿವೇಕಾನಂದ ಯುಬ ಭಾರತಿ ಕ್ರೀರಾಂಗನ್‌ನಲ್ಲಿ ಬುಧವಾರ ನಡೆಯಲಿರುವ ಡುರಾಂಡ್ ಕಪ್ ಸೆಮಿಫೈನಲ್‌ನಲ್ಲಿ ತಮ್ಮ ಯುವ ತಂಡವು ಉತ್ತಮ ಪ್ರದರ್ಶನವನ್ನು ನೀಡುವ ವಿಶ್ವಾಸವವನ್ನು ಹೊಂದಿದೆ ಎಂದು ಬೆಂಗಳೂರು ಎಫ್‌ಸಿ ಕೋಚ್ ನೌಶಾದ್ ಮೂಸಾ ಹೇಳಿದರು.

“ಆಟಗಾರರು ಈ ಪಂದ್ಯದಿಂದಾಗಿ ಯಾವುದೇ ರೀತಿಯ ಒತ್ತಡವನ್ನು ಹೊಂದಿಲ್ಲ ಏಕೆಂದರೆ ಅವರು ಈಗಾಗಲೇ ತಮ್ಮ ಪಾತ್ರ ಮತ್ತು ಜವಾಬ್ದಾರಿಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದಾರೆ. ಎಫ್‌ಸಿ ಗೋವಾ ಸಂಪೂರ್ಣ ತಂಡದೊಂದಿಗೆ ಇಲ್ಲಿಗೆ ಬಂದಿತ್ತು, ಮತ್ತು ಕೇರಳ ಬ್ಲಾಸ್ಟರ್ಸ್ ನಲ್ಲೂ ಹಾಗೆ ಇತ್ತು. ಗೋವಾ ಒಂದು ತಂಡವಾಗಿ ಎಷ್ಟು ಉತ್ತಮವಾಗಿದೆ ಎಂಬುದು ನಮಗೆ ತಿಳಿದಿದೆ. ಇದು ಸುಲಭದ ಆಟವಂತೂ ಅಲ್ಲವೇ ಅಲ್ಲ, ಆದರೆ ಅವರಿಗೆ ಕಠಿಣ ಸವಾಲನ್ನು ನೀಡುವ ಉದ್ದೇಶದೊಂದಿಗೆ ನಾವು ಪಿಚ್‌ಗೆ ಕಾಲಿಡಲಿದ್ದೇವೆ. ಹುಡುಗರು ನಿಜವಾಗಿಯೂ ಧನಾತ್ಮಕವಾಗಿದ್ದಾರೆ ಮತ್ತು ಅವರು ಮುಕ್ತವಾಗಿ ಆಟವಾಡಬೇಕು, ತಮ್ಮ ಆಟವನ್ನು ತಾವು ಆಡಲು ಇಚ್ಚಿಸುತ್ತಾರೆ ಮತ್ತು ಪಂದ್ಯದ ಕೊನೆಯವರೆಗೂ ಅವರು ಹೋರಾಡಬೇಕೆಂದು ನಾನು ಬಯಸುತ್ತೇನೆ.” ಎಂದು ಸೆಮಿಫೈನಲ್‌ ಪಂದ್ಯದ ಹಿನ್ನೆಲೆಯಲ್ಲಿ ಪತ್ರಿಕೆಗಳೊಂದಿಗೆ ಮಾತನಾಡುವಾಗ ಮೂಸಾ ಹೇಳಿದರು.

ಎಫ್‌ಸಿ ಗೋವಾ ಕ್ವಾರ್ಟರ್‌ಫೈನಲ್‌ನಲ್ಲಿ ದೆಹಲಿ ಎಫ್‌ಸಿಯನ್ನು 5-1 ಗೋಲುಗಳಿಂದ ಸೋಲಿಸುವ ಮುನ್ನ ತಮ್ಮ ಎಲ್ಲಾ ಗುಂಪು ಹಂತದ ಪಂದ್ಯಗಳಲ್ಲೂ ಗೆಲುವಿನ ನಗೆ ಬೀರಿದ್ದರು. ಒಟ್ಟು 14 ಗೋಲುಗಳನ್ನು ಗಳಿಸಿ ಮತ್ತು ಕೇವಲ ಎರಡು ಬಿಟ್ಟುಕೊಟ್ಟ ಬಲಿಷ್ಠ ಗೋವಾ ತಂಡದ ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಸಾಮರ್ಥ್ಯವೇ ಇದರ ಹಿಂದಿನ ಗುಟ್ಟು ಎಂದು ತಿಳಿಯುತ್ತದೆ ಮತ್ತು ನಾವು ಸಕಾರಾತ್ಮಕ ಫಲಿತಾಂಶದೊಂದಿಗೆ ನಿಲ್ಲಬೇಕೆಂದರೆ ತಮ್ಮ ತಂಡವು ಅವರ ಆಟಕ್ಕಿಂತ ಹೆಚ್ಚು ಉತ್ತಮ ಪ್ರದರ್ಶನ ನೀಡಬೇಕು ಎಂಬುದು ಮೂಸಾ ಅವರ ನಂಬಿಕೆಯಾಗಿದೆ.

“ನಮ್ಮ ಆಟದ ವಿಧಾನವು ನಾವು ಇಲ್ಲಿಯವರೆಗೆ ಆಡಿದಂತ ವಿಧಾನಕ್ಕಿಂತ ಭಿನ್ನವಾಗಿಯೇನೂ ಇರುವುದಿಲ್ಲ. ನಾವು ಬಹಳ ಎಚ್ಚರಿಕೆಯಿಂದ ಇರಬೇಕಾದ ಏಕೈಕ ವಿಷಯವೆಂದರೆ ನಾವು ಮೊದಲು ಎದುರಾಳಿ ಗೋಲ್ ಗಳಿಸಲು ಒಪ್ಪಿಕೊಳ್ಳುತ್ತಿರುವ ವಿಧಾನ. ನಾವು ಸಾಧಾರಣವಾಗಿ ನಂತರ ಹೋರಾಡಿ, ಉತ್ತಮ ಪ್ರದರ್ಶನ ತೋರಿ ಗೆಲ್ಲುತ್ತಿದ್ದೇವೆ. ಆದರೆ ಅದು ಗೋವಾ ವಿರುದ್ಧ ಸಾಧ್ಯವಾಗುವುದಿಲ್ಲ.” ಎಂದು ಮೂಸಾ ಹೇಳಿದರು.

ಈ ಆಟವು ಸಂಜೆಯ ಹೊತ್ತಿನಲ್ಲಿ ಶುರುವಾಗಲಿದ್ದು, ತಂಡಗಳಿಗೆ ಆಡಲು ಸುಲಭವಾಗಲಿದೆ ಮತ್ತು ಎರಡೂ ತಂಡಗಳಿಗೆ ಸಮವಾದ ಪ್ರಯೋಜನವನ್ನು ನೀಡಲಿದೆ ಎಂದು ಮೂಸಾ ನಂಬಿದ್ದಾರೆ. “ಆರ್ದ್ರತೆ ಮತ್ತು ಶಾಖದ ವಿಷಯದಲ್ಲಿ ಸಂಜೆ 6 ಗಂಟೆಗೆ ಶುರುವಾಗಲಿರುವ ಆಟವು ನಿಜವಾಗಿಯೂ ಆಟಗಾರರಿಗೆ ಸಹಾಯಕವಾಗಿರಲಿದೆ. ನಾವು ಇದುವರೆಗೂ ನಮ್ಮ ಆಟಗಳನ್ನು ಮಧ್ಯಾಹ್ನ 3 ಗಂಟೆಗೆ ಮತ್ತು 2 ಗಂಟೆಗೆ ಆಡುತ್ತಿದ್ದೆವು ಮತ್ತು ಹುಡುಗರಿಗೆ ಹೊಂದಿಕೊಳ್ಳಲು ಇದು ಕಷ್ಟಕರವಾಗಿರುತ್ತಿತ್ತು. ಸಂಜೆಯ ಆಟವು ಮೊಹಮ್ಮೆದನ್ ಎಸ್ ಸಿ ಮತ್ತು ಎಫ್ ಸಿ ಬೆಂಗಳೂರು ಯುನೈಟೆಡ್ ನಡುವಿನ ಮೊತ್ತೊಂದು ಸೆಮಿಫೈನಲ್‌ನಲ್ಲಿ ತಂಡಗಳಿಗೆ ಹೆಚ್ಚು ಮುಕ್ತವಾಗಿ ಆಡಲು ಹೇಗೆ ಅವಕಾಶ ಮಾಡಿಕೊಟ್ಟಿತ್ತು ಎಂಬುದನ್ನು ನೀವು ನೋಡಿರಬಹುದು. ಇದು ನಮಗೆ ಸಹಾಯ ಮಾಡುತ್ತದೆಯಾದರೂ, ಇದು ಗೋವಾ ತಂಡಕ್ಕೂ ಅನ್ವಯಿಸಲಿದೆ ಎಂದು ನನಗೆ ಖಾತ್ರಿಯಿದೆ. ಎರಡೂ ತಂಡಗಳು ಉತ್ತಮ ಗತಿಯೊಂದಿಗೆ ಆಡಲು ಪರಿಸ್ಥಿತಿಗಳು ಅನುಕೂಲಕರವಾಗಿವೆ ಮತ್ತು ಇದು ಒಳ್ಳೆಯ ಪಂದ್ಯವಾಗಬೇಕು ಅಷ್ಟೇ ” ಎಂದು ಮೂಸಾ ಹೇಳಿದರು.

ಬೆಂಗಳೂರು ಎಫ್‌ಸಿ ಮತ್ತು ಎಫ್‌ಸಿ ಗೋವಾ ನಡುವಿನ ಪಂದ್ಯವೂ ಸೆಪ್ಟೆಂಬರ್ 29 ರ ಬುಧವಾರದಂದು ಸಂಜೆ 6 ಗಂಟೆಗೆ ನಡೆಯಲಿದ್ದು, ಟೆನ್ ಸ್ಪೋರ್ಟ್ಸ್, ಅಡ್ಡಟೈಮ್ಸ್ ವೆಬ್‌ಸೈಟ್ ಅಥವಾ ಆ್ಯಪ್‌ನಲ್ಲಿ ನೇರ ಪ್ರಸಾರವಾಗಲಿದೆ. ಈ ಮುಖಾಮುಖಿಯಲ್ಲಿ ಗೆದ್ದವರು ಫೈನಲ್‌ನಲ್ಲಿ ಮಹಮ್ಮೆದನ್ ತಂಡವನ್ನು ಎದುರಿಸಲಿದ್ದಾರೆ.

Malcare WordPress Security