ಡುರಾಂಡ್ ಕಪ್ ಅಭಿಯಾನಕ್ಕಾಗಿ ಕೋಲ್ಕತ್ತಾಗೆ ಪ್ರಯಾಣ ಬೆಳೆಸಿದ ಬೆಂಗಳೂರು ಎಫ್‌ಸಿ

ಜಾಯ್ ಸಿಟಿ ಕೋಲ್ಕತ್ತಾ ತಲುಪಿದ ನೌಷಾದ್ ಮೂಸಾ ನೇತೃತ್ವದ ಬ್ಲೂಸ್ ನ ಯುವಪಡೆ; ಕೇರಳ ಬ್ಲಾಸ್ಟರ್ಸ್ ವಿರುದ್ಧ ಬುಧವಾರ ಪಂದ್ಯ

ಕೋಲ್ಕತ್ತಾದಲ್ಲಿ ನಡೆಯುತ್ತಿರುವ 2021 ರ ಡುರಾಂಡ್ ಕಪ್‌ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ 22 ಜನರ ತಂಡವನ್ನು ಬೆಂಗಳೂರು ಎಫ್‌ಸಿ ಭಾನುವಾರ ಪ್ರಕಟಿಸಿದೆ. 130 ನೇ ಆವೃತ್ತಿಯ ಈ ಪಂದ್ಯಾವಳಿಯಲ್ಲಿ ಬ್ಲೂಸ್ ಪಾಲ್ಗೊಳ್ಳುವುದರೊಂದಿಗೆ ಸ್ಪರ್ಧೆಯಲ್ಲಿ ಮೂರನೇ ಬಾರಿಗೆ ಗುರುತಿಸಿಕೊಳ್ಳಲಿದೆ, ಈ ಹಿಂದೆ ಚೊಚ್ಚಲ ಬಾರಿಗೆ 2014ರಲ್ಲಿ ಭಾಗವಹಿಸಿದ್ದಾಗ ಬೆಂಗಳೂರು ಪಂದ್ಯಾವಳಿಯ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತ್ತು, ಆ ಅಭಿಯಾನದಲ್ಲಿ ಪೆನಾಲ್ಟಿ ಮೂಲಕ ಸಲ್ಗಾವಕರ್ ವಿರುದ್ಧ ಸೋಲನುಭವಿಸಿತ್ತು. ಕ್ಲಬ್‌ ಇತ್ತೀಚೆಗೆ 2019 ರ ಆವೃತ್ತಿಯಲ್ಲಿ ಭಾಗವಹಿಸಿ, ಅಲ್ಲಿ ತಮ್ಮ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದಿದ್ದರು. ಮಾರ್ಕೊ ಪೆಜೈಯುಲಿ ಅವರ ಸಹಾಯಕರಾದ ನೌಶಾದ್ ಮೂಸಾ ಈ ಟೂರ್ನಮೆಂಟ್‌ನ ತರಬೇತುದಾರರಾಗಿರಲಿದ್ದು, ರಾಜನ್ ಮಣಿ – ಬಿಎಫ್‌ಸಿ ಮೀಸಲು ಪಡೆಗೆ ಸಹಾಯಕ ತರಬೇತುದಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಮೊದಲ ತಂಡದ ಆಟಗಾರರು ಮತ್ತು ಬ್ಲೂ ಕೋಲ್ಟ್‌ ತಂಡದ ಆಟಗಾರರ ಮಿಶ್ರಣವಾಗಿರುವ ಬೆಂಗಳೂರು ತಂಡವು ಬಿಎಫ್‌ಸಿ ಬಿ ತಂಡದಿಂದ 10 ಆಟಗಾರರನ್ನು ಹೊಂದಿದ್ದು, ಅವರು ತಮ್ಮ ಹಿರಿಯ ತಂಡದಲ್ಲಿ ಸ್ಥಾನಪಡೆಯುವ ಕಾತರತೆಯಲ್ಲಿ ಪ್ರದರ್ಶನಕ್ಕೆ ಮುಂದಾಗಲಿದ್ದಾರೆ. ತಂಡವು U18 ಆಟಗಾರರಾದ ಲೂಯಿಸ್ ಮಕಾರ್ಟನ್ ನಿಕ್ಸನ್ ಮತ್ತು ಲಾಲ್ತಾಂಗ್ಲಿಯಾನಾ ಇಬ್ಬರನ್ನೂ ಅಂಗಳದಲ್ಲಿಳಿಸುವ ಯೋಜನೆಯನ್ನು ಹೊಂದಿದ್ದು, ಕ್ಲಬ್‌ನ ನಿರಂತರ ಆಟಗಾರರ ಅಭಿವೃದ್ಧಿ ಯೋಜನೆಯ ಮೂಲಕ ಆತ್ಮವಿಶ್ವಾಸವೃದ್ಧಿಗೆ ಸಹಕಾರಿಯಾಗಿರಲಿದೆ.

“ಈ ಡುರಾಂಡ್ ಕಪ್ ಪಂದ್ಯಾವಳಿಯು, ನಮ್ಮ ಯುವ ಆಟಗಾರರಿಗೆ ಸ್ಪರ್ಧಾತ್ಮಕ ಆಟಗಳಲ್ಲಿ ಅನುಭವ ಪಡೆಯಲು ಒಂದು ಅದ್ಭುತ ಅವಕಾಶವಾಗಿರಲಿದೆ ಎಂದು ಭಾವಿಸುತ್ತಿದ್ದೇವೆ, ಏಕೆಂದರೆ ಈ ಪಂದ್ಯಾವಳಿಯಲ್ಲಿ ಮೊದಲ ಮತ್ತು ಎರಡನೇ ಡಿವಿಷನ್ ಗಳಲ್ಲಿ ಪಾಲ್ಗೊಂಡ ಅನೇಕ ಉತ್ತಮ ತಂಡಗಳು ಇರುವುದಲ್ಲದೆ ಸೈನ್ಯದ ತಂಡಗಳೂ ಪಾಲ್ಗೊಳ್ಳಲಿವೆ. ನಮ್ಮ ಯುವ ಆಟಗಾರರು ತಮ್ಮ ಮೊದಲ ತಂಡಕ್ಕೆ ಹತ್ತಿರವಾಗುತ್ತಿದ್ದು ಬಹುಶಃ ಈ ಪಂದ್ಯಾವಳಿಯ ನಂತರ, ಮೊದಲ ತಂಡದಲ್ಲಿ ಆರಂಭಿಕ ಹನ್ನೊಂದರಲ್ಲಿ ಸ್ಥಾನ ಪಡೆಯಲು ಹೆಚ್ಚಿನ ಯುವ ಆಟಗಾರರು ಆಯ್ಕೆಯಲ್ಲಿ ನಮಗೆ ಸಿಗಲಿದ್ದಾರೆ ಎಂದು ಭಾವಿಸುತ್ತೇವೆ.” ಎಂದು ಬ್ಲೂಸ್ ಮುಖ್ಯ ಕೋಚ್ ಮಾರ್ಕೊ ಪೆಜೈಯುಲಿ ಹೇಳಿದರು.

ವಿವೇಕಾನಂದ ಯುಬ ಭಾರತಿ ಕ್ರೀರಾಂಗಣ್ (ವಿವೈಬಿಕೆ), ಮೋಹನ್ ಬಗಾನ್ ಕ್ಲಬ್ ಮೈದಾನ ಮತ್ತು ಕಲ್ಯಾಣಿ ಕ್ರೀಡಾಂಗಣವು ಡುರಾಂಡ್ ಕಪ್ ಪಂದ್ಯಗಳ ಆತಿಥ್ಯ ವಹಿಸಲಿದ್ದು, ಬ್ಲೂಸ್ ತಂಡವು ಕೇರಳ ಬ್ಲಾಸ್ಟರ್ಸ್, ಇಂಡಿಯನ್ ನೇವಿ ಮತ್ತು ದೆಹಲಿ ಎಫ್‌ಸಿ ತಂಡಗಳೊಂದಿಗೆ ಸಿ ಗುಂಪಿನಲ್ಲಿರಲಿದೆ.

ಡುರಾಂಡ್ ಕಪ್ ಪಂದ್ಯಾವಳಿಗಳಲ್ಲಿ ಹನ್ನೊಂದು ಬಾರಿ ಪಾಲ್ಗೊಂಡ ಆಟಗಾರನಾಗಿ ಮೂಸಾ ಅವರು 2000 ದಲ್ಲಿ ಮಹೀಂದ್ರಾ & ಮಹೀಂದ್ರಾ ತಂಡದ ಪರ ಫೈನಲ್ಸ್ ಪ್ರವೇಶಿಸಿದ್ದರು ಮತ್ತು ಇದರ ಎರಡು ವರ್ಷಗಳ ನಂತರದಲ್ಲಿ ಮಹೀಂದ್ರಾ ಯುನೈಟೆಡ್ ತಂಡದೊಂದಿಗೆ ಟ್ರೋಫಿಯನ್ನು ಗೆದ್ದಿದ್ದರು.

ಭಾರತೀಯ ಸೇನೆಯಿಂದ ಸಾಂಪ್ರದಾಯಿಕವಾಗಿ ಆಯೋಜಿಸಲ್ಪಡುತ್ತಿರುವ ಪಂದ್ಯಾವಳಿಯು ಈ ಆವೃತ್ತಿಯನ್ನು ಪಶ್ಚಿಮ ಬಂಗಾಳದ ಸರ್ಕಾರದೊಂದಿಗೆ ಜಂಟಿಯಾಗಿ ಆಯೋಜಿಸಲಿದೆ. ಜಮ್ಶೆಡ್‌ಪುರ ಎಫ್‌ಸಿ, ಹೈದರಾಬಾದ್ ಎಫ್‌ಸಿ, ಎಫ್‌ಸಿ ಗೋವಾ, ಮೊಹಮ್ಮದನ್ ಸ್ಪೋರ್ಟಿಂಗ್, ಗೋಕುಲಂ ಕೇರಳ ಎಫ್‌ಸಿ, ಸುದೇವ ದೆಹಲಿ ಎಫ್‌ಸಿ, ಎಫ್‌ಸಿ ಬೆಂಗಳೂರು ಯುನೈಟೆಡ್, ಆರ್ಮಿ ರೆಡ್, ಆರ್ಮಿ ಗ್ರೀನ್, ಇಂಡಿಯನ್ ನೇವಿ, ಸಿಆರ್‌ಪಿಎಫ್ ಮತ್ತು ಅಸ್ಸಾಂ ರೈಫಲ್ಸ್ ತಂಡಗಳು ಗುಂಪು ಹಂತಗಳಲ್ಲಿ ಭಾಗವಹಿಸಲಿರುವ ಇತರ ತಂಡಗಳಾಗಿವೆ, ಈ ಸ್ಪರ್ಧೆಯಲ್ಲಿ ತಲಾ ನಾಲ್ಕು ತಂಡಗಳು ನಾಲ್ಕು ಗುಂಪುಗಳೊಂದಿಗೆ ಪಂದ್ಯಾವಳಿಯನ್ನು ಪ್ರಾರಂಭಿಸಲಿವೆ.

ಬ್ಲೂಸ್ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 15 ರಂದು ವಿವೈಬಿಕೆಯಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧದ ಸೆಣಸಾಟದೊಂದಿಗೆ ಆರಂಭಿಸಲಿದೆ.

ಗೋಲ್‌ಕೀಪರ್‌ಗಳು: ಲಾರಾ ಶರ್ಮಾ, ಶರೋನ್ ಪಡಟ್ಟಿಲ್

ಡಿಫೆಂಡರ್ಸ್: ಪರಾಗ್ ಶ್ರೀವಾಸ್, ರಾಬಿನ್ ಯಾದವ್, ಹರಪ್ರೀತ್ ಸಿಂಗ್, ಜಗದೀಪ್ ಸಿಂಗ್, ಅಜಿತ್ ಕುಮಾರ್, ವುಂಗಯಮ್ ಮುಯ್ರಾಂಗ್, ನೊರೆಮ್ ರೋಷನ್ ಸಿಂಗ್

ಮಿಡ್‌ಫೀಲ್ಡರ್ಸ್: ಥೋಯ್ ಸಿಂಗ್, ಬೆಕಿ ಓರಾಮ್, ದಮೈತ್‌ಫಾಂಗ್ ಲಿಂಗ್ಡೋ, ಅಜಯ್ ಛೇತ್ರಿ, ಬಿಸ್ವಾ ದರ್ಜಿ, ಮಕಾರ್ಟನ್ ಲೂಯಿಸ್ ನಿಕ್ಸನ್

ಫಾರ್ವರ್ಡ್ಸ್: ಬಿದ್ಯಾಶಾಗರ್ ಸಿಂಗ್, ಲಿಯಾನ್ ಅಗಸ್ಟಿನ್, ಆಕಾಶದೀಪ್ ಸಿಂಗ್, ಹರ್ಮನ್ ಪ್ರೀತ್ ಸಿಂಗ್, ಶಿವಶಕ್ತಿ ನಾರಾಯಣನ್, ನಮಗ್ಯಾಲ್ ಭುಟಿಯಾ, ಲಾಲ್ತಾಂಗ್ಲಿಯಾನ

ಗುಂಪು ಹಂತದ ಪಂದ್ಯಗಳು:

1) ಬೆಂಗಳೂರು FC vs ಕೇರಳ ಬ್ಲಾಸ್ಟರ್ಸ್ FC
ಸೆಪ್ಟೆಂಬರ್ 15, ಮಧ್ಯಾಹ್ನ 3 ಕ್ಕೆ; ಸ್ಥಳ: ವಿವೇಕಾನಂದ ಯುಬ ಭಾರತಿ ಕ್ರೀರಾಂಗನ್

2) ದೆಹಲಿ ಎಫ್‌ಸಿ vs ಬೆಂಗಳೂರು ಎಫ್‌ಸಿ
ಸೆಪ್ಟೆಂಬರ್ 18, ಮಧ್ಯಾಹ್ನ 3 ಕ್ಕೆ; ಸ್ಥಳ: ಮೋಹನ್ ಬಗಾನ್ ಮೈದಾನ

3) ಬೆಂಗಳೂರು ಎಫ್‌ಸಿ vs ಇಂಡಿಯನ್ ನೇವಿ ಫುಟ್ಬಾಲ್ ಟೀಮ್
ಸೆಪ್ಟೆಂಬರ್ 21, ಮಧ್ಯಾಹ್ನ 3 ಕ್ಕೆ; ಸ್ಥಳ: ವಿವೇಕಾನಂದ ಯುಬ ಭಾರತಿ ಕ್ರೀರಾಂಗನ್

Malcare WordPress Security