ಬಿಡಿಎಫ್ಎ ಸೂಪರ್ ಡಿವಿಷನ್ ಲೀಗ್ ಅಲ್ಲಿ ಡ್ರೀಮ್ ಯುನೈಟೆಡ್ ವಿರುದ್ಧ ಆಡಲಿರುವ ಬ್ಲೂ ಕೋಲ್ಟ್ಸ್

ಬಿಎಫ್‌ಎಸ್‌ನಲ್ಲಿ ನಡೆಯಲಿರುವ ಸ್ಥಳೀಯ ಲೀಗ್ ಮೂಲಕ ಅಭಿಯಾನವನ್ನು ಆರಂಭಿಸಲಿರುವ ಬೆಂಗಳೂರು ಎಫ್‌ಸಿ ತನ್ನ ಹಲವಾರು ಯುವ ಆಟಗಾರರಿಗೆ ತಂಡದಲ್ಲಿ ಬಡ್ತಿ ನೀಡಿ ಅವಕಾಶ ಕಲ್ಪಿಸಿದೆ.

ಬೆಂಗಳೂರು ಎಫ್‌ಸಿ 2021-22ನೇ ಸಾಲಿನ ಬಿಡಿಎಫ್‌ಎ ಸೂಪರ್ ಡಿವಿಷನ್ ಲೀಗ್‌ನಲ್ಲಿ ಬುಧವಾರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಬೆಂಗಳೂರು ಡ್ರೀಮ್ ಯುನೈಟೆಡ್ ತಂಡದ ವಿರುದ್ಧ ಸೆಣಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. 2018-19 ಮತ್ತು 2019-20ರಲ್ಲಿನ ಲೀಗ್ ವಿಜಯಗಳ ನಂತರ, ಬ್ಲೂ ಕೋಲ್ಟ್ಸ್ ಕಳೆದ ಆವೃತ್ತಿಯಲ್ಲಿ ಹ್ಯಾಟ್ರಿಕ್ ಪ್ರಶಸ್ತಿಗೆ ಸನಿಹವಾಗಿತ್ತಾದರೂ ಚಾಂಪಿಯನ್ ತಂಡ ಎಫ್‌ಸಿ ಬೆಂಗಳೂರು ಯುನೈಟೆಡ್‌ಗಿಂತಲೂ ಒಂದು ಅಂಕ ಹಿಂದೆ ಉಳಿದಿತ್ತು.

ಹಲವಾರು ಯುವ ಆಟಗಾರರು ಹಿರಿಯರ ತಂಡಕ್ಕೆ ಪಾದಾರ್ಪಣೆ ಮಾಡಿದ್ದುದರೊಂದಿಗೆ, ಬ್ಲೂ ಕೋಲ್ಟ್ಸ್ ತಂಡಕ್ಕೆ ಪುನಶ್ಚೇತನದ ಅವಕಾಶ ದೊರೆಯಿತು. ಇದರಿಂದಾಗಿ ಹಲವಾರು ಯುವ ಆಟಗಾರರು ಪಂದ್ಯಾವಳಿಗಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. “ಬಿಡಿಎಫ್‌ಎ ಸೂಪರ್ ಡಿವಿಷನ್ ಲೀಗ್ ನಮ್ಮ ಆಟಗಾರರಿಗೆ ಸ್ಪರ್ಧಾತ್ಮಕ ಪಂದ್ಯಗಳನ್ನು ನೀಡುವ ಮೂಲಕ ಉತ್ತಮ ಅವಕಾಶಗಳನ್ನು ನೀಡಲಿದೆ ಮತ್ತು ಹಿಂದಿನ ಆವೃತ್ತಿಗಳಲ್ಲಿ ಆಟಗಾರರು ಹಿರಿಯರ ತಂಡದಲ್ಲಿ ಸ್ಥಾನ ಪಡೆಯಲು ಇದು ವೇದಿಕೆಯಾಗಿದೆ ಎಂದು ನಮಗೆ ತಿಳಿದಿದೆ” ಎಂದು ಬೆಂಗಳೂರಿನಲ್ಲಿ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಸಂದೇಶ್ ಭೋಯಿಟ್ ಹೇಳಿದರು.

ಅಭಿಯಾನದಲ್ಲಿನ ಮೊದಲ ಎರಡು ಸ್ನೇಹಪರ ಆವೃತ್ತಿಪೂರ್ವ ಪಂದ್ಯಗಳನ್ನು ಆಡಿದ ಬ್ಲೂ ಕೋಲ್ಟ್ಸ್, ತಮ್ಮ ಪಂದ್ಯದಲ್ಲಿ ಬೆಂಗಳೂರು ಈಗಲ್ಸ್ ವಿರುದ್ಧ 3-2 ರಿಂದ ಸೋಲನುಭವಿಸಿದರೆ, ಎಚ್‌ಎಎಲ್‌ ವಿರುದ್ಧ 4-3 ಅಂತರದಲ್ಲಿ ಸೋಲಿಸಿತು. ಕೊಡಗು ಎಫ್‌ಸಿ ಮತ್ತು ಜವಾಹರ್ ಯೂನಿಯನ್ ತಂಡಗಳ ಆಗಮನದಿಂದ ಈ ಆವೃತ್ತಿಯಲ್ಲಿ ಒಟ್ಟು ಹದಿನೈದು ಪೈಪೋಟಿ ನಡೆಸಲಿವೆ. ಹಿಂದಿನ ಆವೃತ್ತಿಯಲ್ಲಿ 11ನೇ ಸ್ಥಾನ ಪಡೆದಿದ್ದ ಡ್ರೀಮ್ ಯುನೈಟೆಡ್ ತಂಡವನ್ನು, ಕಳೆದ ವರ್ಷ ಬ್ಲೂ ಕೋಲ್ಟ್ಸ್‌ 4-0 ಅಂತರದಲ್ಲಿ ಸೋಲಿಸಿತ್ತು.

ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲೆ ಎಲ್ಲಾ ಪಂದ್ಯಗಳನ್ನು ಸಿಂಗಲ್ ಲೆಗ್ ಫಾರ್ಮ್ಯಾಟ್‌ನಲ್ಲಿ ಆಡಲು ನಿರ್ಧರಿಸಲಾಗಿದ್ದು, ಪಂದ್ಯಾರಂಭ ಬೆಳಿಗ್ಗೆ 11.45, ಮಧ್ಯಾಹ್ನ 1.45 ಮತ್ತು ಮಧ್ಯಾಹ್ನ 3.45 ಕ್ಕೆ ನಿಗದಿಪಡಿಸಲಾಗಿದೆ.

ತಂಡ

ಗೋಲ್‌ಕೀಪರ್‌ಗಳು: ದೀಪೇಶ್ ಚೌಹಾಣ್, ನರೆಂಗ್‌ಬಮ್ ರೋಹೆನ್ ಸಿಂಗ್, ಮಾಣಿಕ್ ಬಲಿಯಾನ್

ಡಿಫೆಂಡರ್‌ಗಳು: ಹರ್‌ಪ್ರೀತ್ ಸಿಂಗ್, ರಾಬಿನ್ ಯಾದವ್, ಜಗದೀಪ್ ಸಿಂಗ್, ಲಾಸ್ಟ್‌ಬಾರ್ನ್ ಮಾವ್ಫ್ನಿಯಾಂಗ್, ಅನೀಶ್ ಮಜುಂದಾರ್, ಲಿಕ್ಮಾಬಮ್ ರಾಕೇಶ್ ಮೀಟೆಯ್, ಮನೀಶ್ ಚೌಧರಿ, ಎಫ್‌ಸಿ ಲಾಲ್‌ಮುನ್ಮಾವಿಯಾ, ಲಾಲ್ರೆಂಟ್ಲವಾಂಗ ಫನೈ, ನಿಖಿಲ್ ನಿದೀಶ್ವರ್, ರಾಜನ್‌ಬೀರ್ ಸಿಂಗ್

ಮಿಡ್‌ಫೀಲ್ಡರ್‌ಗಳು: ಬಿಸ್ವಾ ದರ್ಜಿ, ಬೇಕಿ ಓರಮ್, ಕಮಲೇಶ್ ಪಳನಿಸಾಮಿ, ಶಿಘಿಲ್ ಎನ್‌ಎಸ್, ಒಮೆಗಾ ವನ್‌ಲಾಲ್ರುಹೈಟ್ಲವಾಂಗ, ಲೂಯಿಸ್ ಮ್ಯಾಕಾರ್ಟನ್ ನಿಕ್ಸನ್, ಎಡ್ವಿನ್ ರೊಸ್ಸಾರಿಯೊ, ಫ್ರೆಡಿ ಚಾಂಗ್ತಾನ್‌ಸಂಗ, ವಿನಿತ್ ವಿ, ಅಬು ಸ್ವಾಲಿಹ್, ಎಫ್. ಲಾಲ್ಮಿಂಗ್‌ಚುವಾಂಗಾ

Malcare WordPress Security