ಉತ್ತಮ ಆಟವಾಡಲು ಎಲ್ಲರೂ ಪ್ರಯತ್ನಿಸುತ್ತಾರೆ ಅಂತೆಯೇ ಬೆಂಗಳೂರು ಮೇಲ್ ನಲ್ಲಿ ಬಶುಂಧರ ಕಿಂಗ್ಸ್ ಅನ್ನು ಎದುರಿಸಲಿದೆ

ಅತಿಮುಖ್ಯ ಘಟ್ಟದ ಪಂದ್ಯದಲ್ಲಿ ಪೆಜೈಯುಲಿ ನೇತೃತ್ವದ ಬ್ಲೂಸ್ ತಂಡವು ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಚಾಂಪಿಯನ್ಸ್ ವಿರುದ್ಧ ಸೆಣೆಸಲಿದೆ.

ಶನಿವಾರದಂದು ನಡೆಯಲಿರುವ 2021ರ ಎಎಫ್‌ಸಿ ಕಪ್‌ನ ಅತಿಮುಖ್ಯ ಗ್ರೂಪ್ ಡಿ ಹಂತದ ಪಂದ್ಯದಲ್ಲಿ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಚಾಂಪಿಯನ್ ಬಶುಂಧರಾ ಕಿಂಗ್ಸ್ ಅನ್ನು ಎದುರಿಸಲು ತಯಾರಿ ನಡೆಸುತ್ತಿರುವ ಬೆಂಗಳೂರು ಎಫ್‌ಸಿ ತಂಡದ ಮುಖ್ಯ ಕೋಚ್ ಮಾರ್ಕೊ ಪೆಜೈಯುಲಿ, ಪಂದ್ಯದ ಹಿನ್ನೆಲೆಯಲ್ಲಿ ತಮಗೆ ಯಾವುದೇ ಒತ್ತಡ ಇಲ್ಲ ಎಂದು ಹೇಳಿಕೊಂಡಿದ್ದಾರೆ. ತಮ್ಮ ಮೊದಲ ಗುಂಪು ಹಂತದ ಪಂದ್ಯದಲ್ಲಿ ಮಜಿಯಾ ಎಸ್ & ಆರ್‌ಸಿ ವಿರುದ್ಧ 2-0 ಅಂತರದಿಂದ ವಿಜೇತರಾದ ಕಿಂಗ್ಸ್, ಅದೇ ಸ್ಕೋರ್‌ಲೈನ್‌ನಲ್ಲಿ ಎಟಿಕೆ ಮೋಹನ್ ಬಗಾನ್‌ ವಿರುದ್ಧ ಸೋತ ಬ್ಲೂಸ್‌ ವಿರುದ್ಧ ಉತ್ತಮ ಪ್ರದರ್ಶನ ತೋರಲು ಉತ್ಸುಕರಾಗಿದ್ದಾರೆ.

ಮೊಹಮ್ಮದ್ ಇರುಫಾನ್ ಅವರಿಂದಾದ ಪ್ರಮಾದದ ಸ್ವಂತ ಗೋಲ್ ನಂತರ ಬ್ರೆಜಿಲಿಯನ್ ವಿಂಗರ್ ರಾಬಿನ್ಹೋ ಅವರ ಸ್ಟ್ರೈಕ್ನಿಂದ ಪಡೆದ ಗೋಲ್ ಮಜಿಯಾ ಎಸ್ & ಆರ್ ಸಿ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಆಸ್ಕರ್ ಬ್ರೂಜೋನ್ ತಂಡಕ್ಕೆ ಮೂರು ಅಂಕಗಳನ್ನು ಗಳಿಸಲು ಸಹಕಾರಿಯಾಯ್ತು. ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಲೂಸ್‌ನ ಮುಖ್ಯಸ್ಥ ಪೆಜೈಯುಲಿ, ಬಾಂಗ್ಲಾದೇಶ ತಂಡವು ತಮ್ಮ ಲೀಗ್ ಅಭಿಯಾನವನ್ನು ಉತ್ತಮವಾಗಿ ಆರಂಭಿಸಿದ್ದು ಎಲ್ಲರ ಗಮನ ಸೆಳೆದಿದೆ, ಅವರಿನ್ನೂ ನಾಲ್ಕು ಪಂದ್ಯಗಳನ್ನು ಆಡಬೇಕಿದೆ ಎಂದು ಹೇಳಿದ್ದಾರೆ.

“ಬಾಂಗ್ಲಾದೇಶದ ಪಂದ್ಯಾವಳಿಯೊಂದರಲ್ಲಿ 55 ಗೋಲುಗಳನ್ನು ಗಳಿಸಿದ ಮತ್ತು ಚಾಂಪಿಯನ್ ಆಗಿರುವ ತಂಡದ ವಿರುದ್ಧ ನಾವು ಆಡಲಿದ್ದೇವೆ. ಅವರು ಲೀಗ್‌ನಲ್ಲಿ ಕೇವಲ ಒಂಬತ್ತು ಗೋಲುಗಳನ್ನು ಬಿಟ್ಟುಕೊಟ್ಟಿದ್ದಾರೆ ಮತ್ತು ತಮ್ಮ ಗುಂಪಿನ ಮೊದಲ ಆಟವನ್ನು 2-0 ಅಂತರದಲ್ಲಿ ಗೆದ್ದಿದ್ದಾರೆ. ಅವರು ಬಹಳಷ್ಟು ಗೋಲುಗಳನ್ನು ಗಳಿಸುವುದರೊಂದಿಗೆ ಉತ್ತಮ ರಕ್ಷಣಾತ್ಮಕ ಹೋರಾಟಕ್ಕೆ ಹೆಸರಾಗಿದ್ದಾರೆ, ಅಂಗಳದಲ್ಲಿ ತೀಕ್ಷ್ಣವಾಗಿಯೂ ಮತ್ತು ತೀವ್ರವಾಗಿ ಆಡುವುದರಿಂದ, ಅವರನ್ನು ಎದುರಿಸುವುದು ಸವಾಲಾಗಿರುತ್ತದೆ. ಇದು ನಮ್ಮ ಮೂರನೇ ಪಂದ್ಯವಾದ್ದರಿಂದ ನಾವು ಸ್ವಲ್ಪ ಬದಲಾವಣೆ ಮಾಡಬೇಕಾಗಬಹುದು. ನಮ್ಮ ಯೋಜನೆ ಪ್ರಕಾರ ನಾವು ಬಹುಶಃ ಸ್ವಲ್ಪ ಅಂಗಳದಾಳಕ್ಕೆ ಇಳಿದು ಗೋಲುಗಳನ್ನು ಗಳಿಸಬೇಕು ಹಾಗೆ ಗೋಲ್ ಅವಕಾಶಗಳನ್ನು ಸೃಷ್ಟಿಸುತ್ತ ಅವರಲ್ಲಿ ಅಂಕ ಪಡೆಯಲು ಸಾಧ್ಯವಾಗುವಷ್ಟು ಜಾಗವನ್ನು ಪಡೆಯಬೇಕು “ಎಂದು ಪೆಜೈಯುಲಿ ಹೇಳಿದರು.

ಕೋವಿಡ್ -19 ಕಾರಣದಿಂದಾಗಿ ಅಡಚಣೆಗೆ ಒಳಗಾಗಿದ್ದ ಕಳೆದ ಸೀಸನ್ ನ ಎಎಫ್‌ಸಿ ಕಪ್ ಪಂದ್ಯಾವಳಿಯಲ್ಲಿ ಚೊಚ್ಚಲ ಪ್ರವೇಶ ಮಾಡಿದ ಬಶುಂಧರಾ ತಂಡ, ಜನವರಿಯಲ್ಲಿ 2020-21 ರ ಬಾಂಗ್ಲಾದೇಶ್ ಫೆಡರೇಶನ್ ಕಪ್ ಅನ್ನು ಉಳಿಸಿಕೊಂಡಿದ್ದಾರೆ. ಪೆಜೈಯುಲಿ ರವರು ATK ಮೋಹನ್ ಬಗಾನ್ ವಿರುದ್ದದ ಪಂದ್ಯದಲ್ಲಿ ಅಜಯ್ ಛೇತ್ರಿ ಮತ್ತು ನವೋರೆಮ್ ರೋಷನ್ ಸಿಂಗ್ ಗೆ ಆಡುವ ಅವಕಾಶ ನೀಡಿದ್ದರು, ಜೊತೆಗೆ ಲಿಯಾನ್ ಅಗಸ್ಟೀನ್, ಪರಾಗ್ ಶ್ರೀವಾಸ್ ಮತ್ತು ಅಜಿತ್ ಕುಮಾರ್, ರವರೊಂದಿಗೆ ಬಿದ್ಯಾಶಾಗರ್ ಸಿಂಗ್ ಮತ್ತು ಡ್ಯಾನಿಶ್ ಫಾರೂಕ್‌ ರವರು ಇತ್ತೀಚೆಗಿನ ಒಪ್ಪಂದಗಳ ನಂತರ ತಂಡದ ಉಳಿದವರೊಂದಿಗೆ ಸೇರಿಕೊಂಡಿದ್ದಾರೆ.

“ಜೀವನದಲ್ಲಿ ನೀವು ಋಣಾತ್ಮಕವಾಗಿರಲು ಸಾಧ್ಯವಿಲ್ಲ. ನಾನು ಹಿಂದೆ ಆಡಿದಂತ ಆಟದಿಂದ ಧನಾತ್ಮಕವಾದದನ್ನು ತೆಗೆದುಕೊಳ್ಳುತ್ತೇನೆ ಅಲ್ಲಿ ATK ಮೋಹನ್ ಬಗಾನ್ ವಿರುದ್ಧ ನಾವು ಸುಮಾರು 70% ಚೆಂಡನ್ನು ಸ್ವಾಧೀನದಲ್ಲಿ ಹೊಂದಿದ್ದೆವು. ನಾವು ಕೆಲವಾರು ಅಂಶಗಳಲ್ಲಿ ಉತ್ತಮವಾಗಬೇಕು ಎಂದು ನಾನು ಭಾವಿಸುತ್ತೇನೆ. ಯಾವುದೇ ಒತ್ತಡವಿಲ್ಲ. ಫುಟ್ಬಾಲ್ ಒತ್ತಡದ ಆಟ ಅಲ್ಲ. ನಾವು ಪಂದ್ಯಗಳನ್ನು ಆನಂದಿಸುತ್ತೇವೆ ಮತ್ತು ಪ್ರತಿ ತಂಡವು ಗುಂಪಿನ ನಂಬರ್ ಒನ್ ಆಗಬೇಕೆಂದು ಬಯಸುತ್ತದೆ ಎಂದು ನಮಗೆ ತಿಳಿದಿದೆ. ನಾವು ಗೆಲ್ಲಲು ಬಯಸುತ್ತೇವೆ, ಹಾಗೆಯೇ ಬಸುಂಧರಾ ಕಿಂಗ್ಸ್ ಕೂಡ ಬಯಸುತ್ತಾರೆ. ನಾವು ತರಬೇತಿಯಲ್ಲಿ ಕಷ್ಟಪಟ್ಟು ಅಭ್ಯಾಸ ಮಾಡಿದ್ದೇವೆ ಮತ್ತು ಕೆಲವು ವಿಷಯಗಳ ಮೇಲೆ ಗಮನ ಹರಿಸಿದ್ದೇವೆ. ನಾವು ನಮ್ಮ ಫ್ರೀ-ಕಿಕ್‌ಗಳು ಮತ್ತು ಕಾರ್ನರ್ ಗಳನ್ನು ಉತ್ತಮವಾಗಿ ಆಡಲು ಬಯಸುತ್ತೇವೆ ಮತ್ತು ಉತ್ತಮ ಅವಕಾಶಗಳನ್ನು ಸೃಷ್ಟಿಸಿ ಅವುಗಳನ್ನು ಪೂರ್ಣಗೊಳಿಸಲು ಇಚ್ಚಿಸುತ್ತೇವೆ. ” ಎಂದು ಪೆಜೈಯುಲಿ ಸೇರಿಸಿದರು.

ಹಲವಾರು ಹೊಸ ವಿದೇಶಿಯರ ಒಪ್ಪಂದಗಳೊಂದಿಗೆ ರೌಲ್ ಬೆಸೆರಾ, ಜೊನಾಥನ್ ಫೆರ್ನಾಂಡಿಸ್, ಖಲೀದ್ ಶಫೀ ಮತ್ತು ರಾಬಿನ್ಹೋ (ಫ್ಲುಮಿನೆನ್ಸ್‌ನಿಂದ ಲೋನ್ ಪಡೆದ ಆಟಗಾರ), ಬ್ಲೂಸ್ ತಂಡವು ಬಸುಂಧರಾ ಕಿಂಗ್ಸ್ ನ ದಾಳಿಯ ಬಗ್ಗೆ ಜಾಗರೂಕರಾಗಿರಬೇಕು, ಈ ಸೀಸನ್ ನ ಎಲ್ಲಾ ಸ್ಪರ್ಧೆಗಳಲ್ಲಿ ಬಿಪಿಎಲ್ ತಂಡವು 67ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದೆ.

ನ್ಯಾಷನಲ್ ಕ್ರೀಡಾಂಗಣದಲ್ಲಿ ಬ್ಲೂಸ್ ಮತ್ತು ಬಸುಂಧರಾ ಕಿಂಗ್ಸ್ ನಡುವಿನ ಪಂದ್ಯದ ಕಿಕ್ ಆಫ್ ಭಾರತೀಯ ಕಾಲಮಾನದ ಪ್ರಕಾರ ಸಂಜೆ 4.30 ಕ್ಕೆ ಆರಂಭವಾಗಲಿದೆ. ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್, ಹಾಟ್ ಸ್ಟಾರ್ ಮತ್ತು ಜಿಯೋಟಿವಿಯಲ್ಲಿ ನೇರ ಪ್ರಸಾರದಲ್ಲಿ ವೀಕ್ಷಿಸಬಹುದು.

Malcare WordPress Security