ಬೆಂಗಳೂರು ತಂಡ ಬಸುಂಧರಾ ಕಿಂಗ್ಸ್ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿದ ಕಾರಣ ಎಎಫ್‌ಸಿ ಕಪ್‌ ಪಂದ್ಯಾವಳಿಯಿಂದ ಹೊರಕ್ಕೆ

ಬಾಂಗ್ಲಾದೇಶ ಮೂಲದ ತಂಡದ ವಿರುದ್ಧ ಗೋಲ್ ಗಳಿಸದ ಕಾರಣ ಸಮಾನ ಅಂಕ ಪಡೆದ ಮಾರ್ಕೊ ಪೆಜೈಯುಲಿ ಪಡೆ.

2021 ರ ಎಎಫ್‌ಸಿ ಕಪ್‌ನ ಗುಂಪು ಹಂತಗಳ ಪೈಪೋಟಿಯಲ್ಲಿ ಮಾರ್ಕೊ ಪೆಜೈಯುಲಿ ನೇತೃತ್ವದ ಬೆಂಗಳೂರು ಎಫ್‌ಸಿ ತಂಡವು ಮೇಲ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಬಸುಂಧರಾ ಕಿಂಗ್ಸ್ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿದ ಕಾರಣ ಪಂದ್ಯಾವಳಿಯಿಂದ ಹೊರಗುಳಿಯಲಿದೆ. ಇದರೊಂದಿಗೆ ಬ್ಲೂಸ್ ಒಂದು ಅಂಕದೊಂದಿಗೆ ಗ್ರೂಪ್ ಡಿ ಯ ಅಂಕ ಪಟ್ಟಿಯಲ್ಲಿ ಮೂರನೆಯ ಸ್ಥಾನವನ್ನು ಪಡೆದುಕೊಂಡಿದೆ ಹಾಗಾಗಿ ಬಶುಂಧರಾ ನಾಲ್ಕು ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನವನ್ನು ಅಲಂಕರಿಸಿದೆ. ಆನಂತರ ಎಟಿಕೆ ಮೋಹನ್ ಬಗಾನ್ ಮುಂದೆ ಮಜಿಯಾ ಎಸ್ & ಆರ್‌ಸಿ ವಿರುದ್ಧ ಪಂದ್ಯವನ್ನು ಆಡಲಿದೆ.

ಮಾರ್ಕೊ ಪೆಜೈಯುಲಿ ಅವರು ಎಟಿಕೆ ಮೋಹನ್ ಬಗಾನ್ ವಿರುದ್ಧ ಸೋತಿದ್ದ ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಿದ್ದಾರೆ. ಸಾರ್ಥಕ್ ಗೊಲುಯಿ, ಅಜಯ್ ಛೇತ್ರಿ ಮತ್ತು ಉದಾಂತ ಸಿಂಗ್ ಅವರು ಪರಾಗ್ ಶ್ರೀವಾಸ್, ಡ್ಯಾನಿಶ್ ಫಾರೂಕ್ ಮತ್ತು ಬಿದ್ಯಾಶಾಗರ್ ಸಿಂಗ್ ಅವರಿಗೆ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಆಸ್ಕರ್ ಬರ್ಜೋನ್ ನೇತೃತ್ವದ ಬಶುಂಧರ ತಂಡವು ಮಜಿಯಾ ಎಸ್ & ಆರ್‌ಸಿ ವಿರುದ್ಧ ಗೆದ್ದ ತಮ್ಮ ತಂಡದಲ್ಲಿ ಯಾವುದೇ ಆಟಗಾರರ ಬದಲಾವಣೆಯನ್ನು ಮಾಡಿಲ್ಲ.

ಆರಂಭದಿಂದಲೇ ಬ್ಲೂಸ್ ಉತ್ತಮ ಆಟದತ್ತ ಹೆಜ್ಜೆ ಇಟ್ಟಿತು ನಂತರದ ಮೊದಲ ಐದು ನಿಮಿಷಗಳಲ್ಲೆ ಉತ್ತಮ ಅವಕಾಶವೂ ಕೂಡಿಬಂತು. ಡ್ಯಾನಿಶ್‌ ಅವರ ಲಾಬ್ ಹೊಡೆತವು ಉತ್ತಮ ಓಟವನ್ನು ಕಾಯ್ದುಕೊಂಡಿದ್ದ ಬಿದ್ಯಾಶಾಗರ್ ಅನ್ನು ಸರಿಯಾಗಿ ತಲುಪಲಿಲ್ಲ ಮತ್ತು ಬಾಕ್ಸ್‌ನ ತುದಿಯಿಂದ ಆ ಯುವ ಆಟಗಾರ ಯತ್ನ ಮಾಡಿದರೂ ಬಶುಂಧರ ತಂಡದ ನಾಯಕ ತೋಪು ಬರ್ಮನ್ ಅದನ್ನು ತಡೆದರು. ಜಯೇಶ್ ರಾಣೆ ಪ್ರಯತ್ನಿಸಿದ ರಿಬೌಂಡ ಆದ ಚೆಂಡು ಮತ್ತೆ ಗೋಲ್ ಗಳಿಸುವ ಯತ್ನದಲ್ಲಿ ವಿಫಲವಾಯ್ತು.

ಡ್ಯಾನಿಶ್ ಅವರು ಬರ್ಮನ್‌ ಗೆ ಅಡ್ಡಲಾಗಿ ಬಂದ ಕಾರಣ ಬಶುಂಧರಾ ಕಿಂಗ್ಸ್ ತಂಡಕ್ಕೆ ಪಂದ್ಯದ 15 ನೇ ನಿಮಿಷದಲ್ಲಿ ಬಾಕ್ಸ್ ತುದಿಯಿಂದ ಫ್ರೀ-ಕಿಕ್ ಅವಕಾಶವನ್ನು ನೀಡಲಾಯಿತು, ಆದರೆ ರಾಬಿನ್ಹೋ ನೀಡಿದ ಪಾಸ್ ಅನ್ನು ಸುರೇಶ್ ತಡೆದು ಸೆಟ್ ಪೀಸ್ ಆಗದಂತೆ ನೋಡಿಕೊಂಡರು. 21 ನೇ ನಿಮಿಷದಲ್ಲಿ ನೊರೆಮ್ ರೋಷನ್ ಸಿಂಗ್ ಅವರ ಹೊಡೆತ ಕ್ಲಿಟನ್ ಸಿಲ್ವಾ ಅವರನ್ನು ಕಂಡುಕೊಂಡಿತಾದರೂ ಬ್ರೆಜಿಲ್ ಆಟಗಾರನ ಜೊತೆ ಬಿದ್ಯಾಶಾಗರ್ ಯತ್ನವನ್ನು ವಿಂಗರ್ ಅಲ್ಲಿ ಬಶುಂಧರ ತಂಡದ ಡಿಫೆನ್ಸ್ ತಡೆಯಿತು. ಹಾಗಾಗಿ, ಬಾಂಗ್ಲಾದೇಶ ತಂಡವು ಪ್ರತಿದಾಳಿಗೆ ಮುಂದಾಯಿತು, ಅದನ್ನು ತಡೆಯುವ ಬರದಲ್ಲಿ ಮುಸಾವು-ಕಿಂಗ್ ತನ್ನ ಆಟದ ಮೊದಲ ಹಳದಿ ಕಾರ್ಡ್ ಪಡೆದುಕೊಂಡರು.

ಮೂರು ನಿಮಿಷಗಳ ನಂತರ, ಕ್ಲಿಟನ್‌ ಚೆಂಡನ್ನು ಬಾಕ್ಸ್ ನೊಳಗೆ ತಂದಾಗ ಯಾರೊಂಡು ಮುಸಾವು-ಕಿಂಗ್ ಅದನ್ನು ಗೋಲ್ನತ್ತ ಹೊಡೆದರು, ಅದು ನೇರವಾಗಿ ಬಶುಂಧರ ಕೀಪರ್ ಅನಿಸೂರ್ ರೆಹಮಾನ್ ಅವರ ಕೈಸೇರಿತು. ಇನ್ನೊಂದು ತುದಿಯಲ್ಲಿ, ಗುರುಪ್ರೀತ್ ಸಿಂಗ್ ಸಂಧು ಅವರು ಜೊನಾಥನ್ ರೈಸ್ ಅವರ ಪ್ರಯತ್ನಕ್ಕೆ ಅಡ್ಡವಾಗಿ ಉತ್ತಮ ರೀತಿಯಲ್ಲಿ ತಡೆದು ಬಾಕ್ಸ್ ನ ಹೊರಗಿನಿಂದಲೇ ಚೆಂಡನ್ನು ಹೊರಗಿಟ್ಟರು. ಬಶುಂಧರ ತಂಡದ ಮೊದಲಾರ್ಧದ ಗೋಲ್ ಗಳಿಸುವ ಕನಸ್ಸು ನನಸಾಗಲಿಲ್ಲ.

ಪಂದ್ಯದ ಮೊದಲಾರ್ಧದಲ್ಲಿ, ಪೆಜೈಯುಲಿ ಮೊದಲ ಬದಲಾವಣೆಯನ್ನು ಮಾಡಿದರು, ಸಾರ್ಥಕ್ ಅನ್ನು ಪರಾಗ್‌ನ ಸ್ಥಾನಕ್ಕೆ ಕರೆತಂದರು. ವಿರಾಮದ ಮುನ್ನ ಅಂತಿಮವಾಗಿ ಅಂಕ ಗಳಿಸುವ ಅವಕಾಶ ಬ್ಲೂಸ್‌ಗೆ ಒದಗಿತ್ತು. ತಾರಿಕ್ ರೈಹಾನ್ ಕಾಜಿ ಅವರು ಕ್ಲೀಟನ್‌ ಅನ್ನು ಹಿಂದಕ್ಕೆ ಎಳೆದ ಕಾರಣ ತಂಡಕ್ಕೆ ಫ್ರೀಕಿಕ್ ಅವಕಾಶ ಲಭಿಸಿತು. ಮಾತ್ರವಲ್ಲದೆ ಇದರಿಂದ ಅವರು ಹಳದಿ ಕಾರ್ಡ್ ಕೂಡ ಪಡೆದುಕೊಂಡರು. ಬ್ರೆಜಿಲ್ ಆಟಗಾರನ ಪ್ರಯತ್ನವನ್ನು ತಡೆಯಲಾಯಿತಾದರೂ ರಿಬೌಂಡ್ ಆದ ಚೆಂಡನ್ನು ಬಿದ್ಯಾಶಾಗರ್ ಮತ್ತೆ ಗೋಲ್ ಗಳಿಸೋ ಯತ್ನ ಮಾಡಿದರು ಆದರೆ ಚೆಂಡು ಪೋಸ್ಟ್ ನಿಂದ ದೂರ ಸಾಗಿತ್ತು.

ಮೊಹಮ್ಮದ್ ಇಬ್ರಾಹಿಂ ಅವರನ್ನು ಮಹ್ಬುಬುರ್ ರೆಹಮಾನ್ ಅವರ ಬದಲಿಗೆ ಬಶುಂದರ ಪರವಾಗಿ ಆಡಲು ವಿರಾಮದ ನಂತರ ಕರೆತರಲಾಯ್ತು. ಎದುರಾಳಿ ತಂಡ 57 ನೇ ನಿಮಿಷದಲ್ಲಿ ಬ್ರೆಜಿಲಿಯನ್ ವಿಂಗರ್ ರಾಬಿನ್ಹೋ ಮೂಲಕ ಮುನ್ನಡೆ ಸಾಧಿಸಲು ಬಹಳ ಹತ್ತಿರವಾಗಿತ್ತು, ಅವರ ಪ್ರಯತ್ನವು ಗುರುಪ್ರೀತ್ ಅವರ ಕಾಲನ್ನು ತಡವಿತು ಮತ್ತು ರೋಶನ್ ಚಮತ್ಕಾರಿಕ ಪ್ರಯತ್ನ ಮಾಡಿ ಗೋಲ್‌ಗಳಿಸುವತ್ತ ಮುಂದಾದರು. ಗುರುಪ್ರೀತ್ ಚಾಚಿದ ತನ್ನ ತೋಳಿನಿಂದ ಚೆಂಡನ್ನು ದೂರ ತಳ್ಳುವ ಮೂಲಕ ಅಂಕವನ್ನು ತಡೆಹಿಡಿದರು.

ಹಲವಾರು ಸಂದರ್ಭಗಳಲ್ಲಿ ತೀವ್ರವಾದ ಅಟ್ಯಾಕ್‌ ನೊಂದಿಗೆ ಆಟ ಮುಗಿಸುವ ಹಂತಗಳಲ್ಲಿ ಬ್ಲೂಸ್ ಕೆಲ ಅಂಕ ಗಳಿಸುವ ಅವಕಾಶಗಳನ್ನು ಪಡೆದಿದ್ದರು. ಕ್ಲಿಟನ್ 72 ನೇ ನಿಮಿಷದಲ್ಲಿ ತನ್ನ ಮಾರ್ಕ್ ಇಂದ ಹೊರಬಂದು ಚೆಂಡನ್ನು ಹತೋಟಿಗೆ ತೆಗೆದುಕೊಂಡರು ಮತ್ತು ಅವರ ಲೊ ಕ್ರಾಸ್ ಅನ್ನು ತೋಪು ತಡೆದರು. ಕೆಲವೇ ನಿಮಿಷಗಳ ನಂತರ, ಅಲನ್ ಕೋಸ್ಟಾ ಅವರ ಹೆಡರ್ ಅನ್ನು ಕ್ಲೀಟನ್ ಅವರು ಕಾರ್ನರ್ ಬಾರ್‌ನ ಕೆಳಭಾಗದಿಂದ ಗೋಲ್ ಲೈನ್ ಅತ್ತ ಸಾಗಿಸಿದಾಗ, ಅದನ್ನು ಕೀಪರ್ ಅನಿಸೂರ್ ಹಿಡಿದಿಟ್ಟುಕೊಳ್ಳಲು ಯಶಸ್ವಿಯಾಗುವ ಮೊದಲೇ ಅದು ಗೋಲ್ ಗೆರೆ ಇಂದ ಹಿಂದೆ ಬೌನ್ಸ್ ಆಯಿತು.

ಬ್ಲೂಸ್‌ ಈ ಜಿದ್ದಾಜಿದ್ದಿನಲ್ಲಿ ತಡವಾಗಿ ಗೋಲ್ ಗಳಿಸಬಹುದಾದ ಅವಕಾಶಗಳನ್ನು ಕಂಡುಕೊಂಡರಾದರೂ ಸಫಲವಾಗಲಿಲ್ಲ, ಆ ಅವಕಾಶಗಳಲ್ಲಿ ಕ್ಲೀಟನ್ ಹಲವು ಬಾರಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬ್ರೆಜಿಲಿಯನ್ ಗೋಲ್ ಅತ್ತ ತಿರುಗಿಸಿದ ಶಾಟ್ 82 ನೇ ನಿಮಿಷದಲ್ಲಿ ಅನಿಸೂರ್ ಇಂದ ದೂರ ತಳ್ಳಲಾಗಿತ್ತು ಮತ್ತು ಛೇತ್ರಿ ಮೊದಲ ರಿಬೌಂಡ್ ಅನ್ನು ಪಡೆದಿದ್ದರು. ಕೀಪರ್ ತನ್ನ ಲೈನ್ ಇಂದ ಹೊರಗುಳಿದದನ್ನು ನೋಡಿದ ಛೇತ್ರಿ ಅವರು ರಾಣೆಗೆ ಚೆಂಡನ್ನು ತಲುಪಿಸಿದರು, ಆದರೆ ಮಿಡ್‌ಫೀಲ್ಡರ್‌ನ ಪ್ರಯತ್ನವನ್ನು ತೋಪು ತಡೆಹಿಡಿದರು. ನಿಮಿಷಗಳ ನಂತರ, ಲಿಯಾನ್ ಅವರು ಕಾಜಿಯನ್ನು ಬಾಕ್ಸ್ ಅಲ್ಲಿ ದಾಟಿ ಆಡಲು ಪ್ರಯತ್ನಿಸಿದಾಗ ಡಿಫೆಂಡರ್ ತನ್ನ ಸ್ಥಾನದಲ್ಲೆ ನಿಂತು ವಿಂಗರ್ ನ ಪ್ರಯತ್ನಕ್ಕೆ ತಡೆಯಾದರು.

ಪೆಜೈಯುಲಿಯ ಅಂತಿಮ ದಾಳವಾಗಿ ಬಿ-ಟೀಮ್ ಪದವೀಧರ ಶಿವಶಕ್ತಿ ನಾರಾಯಣನ್ ಅವರು ಸುರೇಶ್ ಬದಲಿಗೆ ತಮ್ಮ ಚೊಚ್ಚಲ ಪಂದ್ಯಕ್ಕೆ ಪ್ರವೇಶ ಪಡೆದರು, ಆದರೆ ಎರಡೂ ತಂಡಗಳು ತಮ್ಮ ಅಂತಿಮ ಗುಂಪು ಹಂತದ ಆಟದಲ್ಲಿ ತಲಾ ಒಂದು ಅಂಕವನ್ನು ಪಡೆದುಕೊಂಡವು.

ಬ್ಲೂಸ್ ಆಗಸ್ಟ್ 24 ರಂದು ಅದೇ ಅಂಗಳದಲ್ಲಿ ತನ್ನ ಅಂತಿಮ ಗ್ರೂಪ್ ಡಿ ಹಂತದ ಪಂದ್ಯದಲ್ಲಿ ಮಜಿಯಾ ಎಸ್ & ಆರ್‌ಸಿಯನ್ನು ಎದುರಿಸಲಿದೆ.

Image credit: AFC

Malcare WordPress Security