AFC ಕಪ್ ನ ಗುಂಪು ಹಂತದಲ್ಲಿ ATK ಮೋಹನ್ ಬಗಾನ್ ಎದುರಾಗಿ ಸೆಣೆಸಲಿರುವ ಬ್ಲೂಸ್

ಮಾರ್ಕೊ ಪೆಜೈಯುಲಿ ಬಳಗ ಗ್ರೂಪ್ ಡಿ ಓಪನರ್‌ನಲ್ಲಿ ಪರಿಚಿತ ವೈರಿಗಳ ವಿರುದ್ಧ ಸೆಣೆಸಲು ಸನ್ನದ್ಧ.

ಬ್ಲೂಸ್‌ನ ಮುಖ್ಯ ತರಬೇತುದಾರ ಮಾರ್ಕೊ ಪೆಜೈಯುಲಿ ತಮ್ಮ ತಂಡ ಇಲ್ಲಿಂದ ಅತ್ಯುತ್ತಮ ಪ್ರದರ್ಶನ ನೀಡಬೇಕಿದೆ ಎಂದು ಹೇಳಿಕೊಂಡರು, ಬುಧವಾರದಂದು 2021ರ ಎಎಫ್‌ಸಿ ಕಪ್‌ನ ಡಿ ಗುಂಪಿನ ಅಭಿಯಾನ ಮಾಲ್ಡೀವ್ಸ್‌ನ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಎಟಿಕೆ ಮೋಹನ್ ಬಗಾನ್ ವಿರುದ್ಧದ ಪಂದ್ಯದೊಂದಿಗೆ ಆರಂಭವಾಗಲಿದೆ. ಭಾನುವಾರ ನಡೆದ ಪ್ಲೇಆಫ್‌ನಲ್ಲಿ ಕ್ಲಬ್ ಈಗಲ್ಸ್ ಅನ್ನು 1-0 ಗೋಲುಗಳಿಂದ ಸೋಲಿಸಿದ ಬೆಂಗಳೂರು ತಂಡವು ಎಟಿಕೆ ಮೋಹನ್ ಬಗಾನ್, ಬಸುಂಧರಾ ಕಿಂಗ್ಸ್ ಮತ್ತು ಮಜಿಯಾ ಎಸ್ & ಆರ್‌ಸಿ ತಂಡಗಳ ಜೊತೆ ಸೇರಿದೆ. ಇವರಲ್ಲಿ ಕೇವಲ ಒಂದು ತಂಡ ಇಂಟರ್-ಜೋನ್ ಪ್ಲೇಆಫ್ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿದೆ.

“ನಮ್ಮ ಕಳೆದ ಪಂದ್ಯವು ಕೇವಲ ಎರಡು ದಿನಗಳ ಹಿಂದೆಯಷ್ಟೇ ಆಗಿತ್ತು, ಆದ್ದರಿಂದ ಇದು ತಂಡಕ್ಕೆ ಅಲ್ಪ ಚೇತರಿಕೆಯ ಸಮಯವಾಗಿತ್ತು. ಇದು ನಿಜವಾಗಿಯೂ ಪ್ರಯೋಜನವಲ್ಲ, ಆದರೆ ನಾನು ಗ್ಲಾಸ್ ಅನ್ನು ಅರ್ಧ ಖಾಲಿಯಾಗಿ ಅಥವಾ ಅರ್ಧ ಪೂರ್ಣವಾಗಿ ನೋಡಬಲ್ಲೆ ಮತ್ತು ನಾನು ಅದನ್ನು ಅರ್ಧದಷ್ಟು ಪೂರ್ಣವಾಗಿ ನೋಡುವ ಆಯ್ಕೆ ಮಾಡುತ್ತೇನೆ. ಗೆಲುವಿನ ನಂತರ ತಂಡದಲ್ಲಿ ಉತ್ತಮ ಮನೋಭಾವ ಮತ್ತು ಧನಾತ್ಮಕ ಶಕ್ತಿ ಇತ್ತು. ಈ ಸ್ಪರ್ಧೆಯ ಗುಂಪು ಹಂತದಲ್ಲಿರುವುದಕ್ಕೆ ನಮಗೆ ಸಂತೋಷವಿದೆ. ಇದು ಹೊಸ ಆಟ, ಹೊಸ ಆರಂಭ ಮತ್ತು ನಾವು ಹೊಸನೋಟವನ್ನು ಹೊಂದಿದ್ದೇವೆ. ಎಟಿಕೆ ಮೋಹನ್ ಬಗಾನ್ ವಿರುದ್ಧ ನಾವು ತುಂಬಾ ಚುರುಕಾಗಿರಬೇಕಾಗುತ್ತದೆ, ಏಕೆಂದರೆ ಆಕ್ರಮಣಕಾರಿ ಆಟವನ್ನು ಅವರಿಂದ ನಿರೀಕ್ಷಿಸುತ್ತಿದ್ದೇನೆ. “ಎಂದು ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಪೆಜೈಯುಲಿ ಹೇಳಿದರು.

ಮೋಹನ್ ಬಗಾನ್ ತಂಡ 2019-20ರ ಐ-ಲೀಗ್ ಅಭಿಯಾನದಲ್ಲಿ ಗೆಲ್ಲುವ ಮೂಲಕ ಸ್ಪರ್ಧೆಯ ಗುಂಪು ಹಂತಗಳಿಗೆ ಅರ್ಹತೆ ಪಡೆಯಿತು. ನಂತರದಲ್ಲಿ, 2020-21ರ ಇಂಡಿಯನ್ ಸೂಪರ್ ಲೀಗ್ ಫೈನಲ್‌ನಲ್ಲಿ ಮುಂಬೈ ಸಿಟಿ ಎಫ್‌ಸಿ ವಿರುದ್ಧ ಸೋಲನುಭವಿಸಿದ ನಂತರ ತಮ್ಮ ತಂಡವನ್ನು ಮತ್ತಷ್ಟು ಬಲವಾಗಿಸಿಕೊಂಡಿದ್ದಾರೆ ಮತ್ತು ಬ್ಲೂಸ್ ಬುಧವಾರ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಲಿದ್ದಾರೆ ಎಂದು ಪೆಜೈಯುಲಿ ತಿಳಿಸಿದರು. ಕೋಲ್ಕತ್ತಾ ಮೂಲದ ತಂಡವು ಈ ಬೇಸಿಗೆಯಲ್ಲಿ ತಮ್ಮ ತಂಡಕ್ಕೆ ಫ್ರೆಂಚ್ ಮಿಡ್‌ಫೀಲ್ಡರ್ ಹ್ಯೂಗೋ ಬೌಮಸ್, ಅಮರೀಂದರ್ ಸಿಂಗ್, ಲಿಸ್ಟನ್ ಕೊಲಾಕೊ, ಅಶುತೋಷ್ ಮೆಹ್ತಾ, ಬಿದ್ಯಾನಂದ ಸಿಂಗ್ ಮತ್ತು ದೀಪಕ್ ಟ್ಯಾಂಗ್ರಿ ಸೇರಿದಂತೆ ಅನೇಕ ಆಟಗಾರರನ್ನು ತಂಡಕ್ಕೆ ಬರಮಾಡಿಕೊಂಡಿದೆ.

“ಎಟಿಕೆ ಮೋಹನ್ ಬಾಗನ್ ಬಹಳಷ್ಟು ಲಾಂಗ್ ಪಾಸ್‌ಗಳನ್ನು ಆಡಲು ಇಷ್ಟಪಡುವುದರೊಂದಿಗೆ, ಎರಡನೇ ಬಾಲ್‌ ಆಡುತ್ತ ಮೈದಾನದ ಮೇಲೆ ಚೆಂಡನ್ನು ಇರಿಸಲು ಇಷ್ಟಪಡುತ್ತದೆ, ಅದು ನಮಗೆ ವಿಭಿನ್ನ ಮಾದರಿಯ ಆಟದ ವಿಧಾನವಾಗಿರಲಿದೆ. ಆದರೆ ಅವರು ತಮ್ಮ ಇತರ ಆಟಗಾರರೊಂದಿಗೆ ಫ್ರೆಂಚ್ ಆಟಗಾರನನ್ನು (ಹ್ಯೂಗೋ ಬೌಮಸ್) ಕರೆತರುವ ಮೂಲಕ ಬದಲಾವಣೆಯ ಹಾದಿಯನ್ನು ಹಿಡಿದಿದ್ದಾರೆ. ಅವರು ಇಂಡಿಯನ್ ಸೂಪರ್ ಲೀಗ್ ಮತ್ತು ಎಎಫ್‌ಸಿ ಕಪ್ ಗೆಲ್ಲಲು ಬಯಸುತ್ತಿರುವುದು ಎದ್ದು ಕಾಣುವಂತಿದೆ. ನಾವು ಉತ್ತಮ ಮನೋಭಾವದಿಂದ ಇರಬೇಕಾಗುತ್ತದೆ, ಗಮನ ಹರಿಸಿ ಆಡಬೇಕು ಮತ್ತು ಇದರೊಂದಿಗೆ ನಾಳೆ ನಮಗೆ ಗೆಲ್ಲುವ ಅವಕಾಶವ ನಿಚ್ಚಳವಾಗಿದೆ, ” ಎಂದು ಪೆಜೈಯುಲಿ ಹೇಳಿದರು.

ಜಯೇಶ್ ರಾಣೆ ಬ್ಲೂಸ್ ಪರ ಏಕೈಕ ಗೋಲನ್ನು ಗಳಿಸಿ ಕ್ಲಬ್ ಈಗಲ್ಸ್ ಅನ್ನು ಸೋಲಿಸಲು ಸಹಕರಿಸಿದರು ಮತ್ತು ಗ್ರೂಪ್ ಹಂತದಲ್ಲಿ ಕೇವಲ ಇನ್ನು ಮೂರು ಪಂದ್ಯಗಳು ಉಳಿದುಕೊಂಡಿದ್ದು, ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಸಂಧು ತಂಡದ ಎಲ್ಲಾ ಕಡೆಗಳಿಂದಲೂ ಗಮನ ಮತ್ತು ಬದ್ಧತೆಯ ಅಗತ್ಯವಿದೆ ಎಂದು ಅರಿತಿರುವುದಾಗಿ ಹೇಳಿದರು.

“ಈ ಬಾರಿ ವಿಷಯಗಳು ವಿಭಿನ್ನವಾಗಿವೆ ಎಂಬುದು ನಿಜ, ಏಕೆಂದರೆ ಗುಂಪಿನಲ್ಲಿ ಆಡಲು ಬಹಳ ಕಡಿಮೆ ಆಟಗಳು ಉಳಿದಿವೆ. ಆದರೆ ಇದು ಇನ್ನೂ ಕಷ್ಟಕರವಾಗಿದೆ ಮತ್ತು ನಾವು ಗಮನಹರಿಸಬೇಕು. ನಾವು ಗುಂಪು ಹಂತಕ್ಕೆ ಪ್ರವೇಶಿಸುವುದು ಮುಖ್ಯವಾಗಿತ್ತು ಏಕೆಂದರೆ ನಾವು ಕ್ಲಬ್ ಆಗಿ ಏಷ್ಯಾದಲ್ಲಿ ಉತ್ತಮ ಪ್ರದರ್ಶನ ನೀಡಲು ಬಯಸುತ್ತೇವೆ. ಈಗ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ ಮತ್ತು ಪ್ರತಿ ಪಂದ್ಯದಲ್ಲಿ ನಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ ಎಂದು ಗುರ್‌ಪ್ರೀತ್ ಹೇಳಿದರು.

ಎಟಿಕೆ ಮೋಹನ್ ಬಗಾನ್ ಮತ್ತು ಬೆಂಗಳೂರು ಎಫ್‌ಸಿ ನಡುವಿನ ಪಂದ್ಯವು ಸಂಜೆ 4.30 ಕ್ಕೆ (ಸ್ಥಳೀಯ ಸಮಯ ಸಂಜೆ 4 ಗಂಟೆಗೆ) ನಿಗದಿಯಾಗಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ.

Malcare WordPress Security