ಎಐಎಫ್‌ಎಫ್ ಫುಟ್ಸಲ್ ಕ್ಲಬ್ ಚಾಂಪಿಯನ್‌ಶಿಪ್‌ ನ ಉದ್ಘಾಟನಾ ಪಂದ್ಯಾವಳಿಗೆ ತಂಡವನ್ನು ಪ್ರಕಟಿಸಿದ ಬ್ಲೂಸ್

ನವದೆಹಲಿಯಲ್ಲಿ ಆರಂಭವಾಗಲಿರುವ ಉದ್ಘಾಟನಾ ಆವೃತ್ತಿಯಲ್ಲಿ ಪಾಲ್ಗೊಳ್ಳಲು ಹೊರಟ ಯುವ ಪಡೆ

ಎಐಎಫ್‌ಎಫ್ ಫುಟ್ಸಾಲ್ ಕ್ಲಬ್ ಚಾಂಪಿಯನ್‌ಶಿಪ್‌ನ ಉದ್ಘಾಟನಾ ಆವೃತ್ತಿಯಲ್ಲಿ ಪಾಲ್ಗೊಳ್ಳಲು ಬೆಂಗಳೂರು ಎಫ್‌ಸಿ ಬುಧವಾರದಂದು ತಮ್ಮ 18 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ನವೆಂಬರ್ 5 ರಂದು ನವದೆಹಲಿಯಲ್ಲಿ ಆಡಲು ಸಜ್ಜಾಗಿದ್ದಾರೆ. ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ಆಯೋಜಿಸಿರುವ ಈ ಪಂದ್ಯಾವಳಿಯು ಭಾರತದ ಮೊದಲ ರಾಷ್ಟ್ರ ಮಟ್ಟದ ಫುಟ್ಸಲ್ ಟೂರ್ನಮೆಂಟ್ ಆಗಿರಲಿದೆ.

ಸ್ಪರ್ಧೆಯಲ್ಲಿ ಭಾಗವಹಿಸಲು ಸಿದ್ಧವಾಗಿರುವ 16 ತಂಡಗಳಲ್ಲಿ ಬೆಂಗಳೂರು ಎಫ್‌ಸಿ ತಂಡವು ಇಂಡಿಯನ್ ಸೂಪರ್ ಲೀಗ್ ಆಡಿದ ಏಕೈಕ ತಂಡವಾಗಿದ್ದು, ಐ-ಲೀಗ್‌ ಆಡಿರುವ ಸುದೇವ ಡೆಲ್ಲಿ ಎಫ್‌ಸಿ, ಮೊಹಮ್ಮದನ್ ಎಸ್‌ಸಿ ಮತ್ತು ರಿಯಲ್ ಕಾಶ್ಮೀರ್ ಭಾಗವಹಿಸಲಿರುವ ಇತರೆ ಮೂರು ತಂಡಗಳಾಗಿವೆ. ಪಂದ್ಯಾವಳಿಯಲ್ಲಿ ಇನ್ನೂ 12 ತಂಡಗಳು ಪಾಲ್ಗೊಳ್ಳಲಿದ್ದು ತಮ್ಮ ರಾಜ್ಯ ಲೀಗ್‌ಗಳಲ್ಲಿ ವಿಜೇತ ತಂಡಗಳಾಗಿವೆ.

“ಎಐಎಫ್‌ಎಫ್ ಫುಟ್ಸಲ್ ಲೀಗ್‌ನ ಉದ್ಘಾಟನಾ ಆವೃತ್ತಿಯಲ್ಲಿ ಭಾಗವಹಿಸಲು ನಾವು ನಿಜವಾಗಿಯೂ ಉತ್ಸುಕರಾಗಿದ್ದೇವೆ. ಇದು ಬೆಂಗಳೂರು ಎಫ್‌ಸಿ ಈ ಹಿಂದೆ ಎಂದೂ ತೊಡಗಿಸಿಕೊಂಡಿರದ ಕ್ರೀಡಾ ಮಾದರಿಯಾಗಿದ್ದು, ಇದು ಇಂದು ದೇಶದಲ್ಲಿ ಹೆಚ್ಚು ಜನಪ್ರಿಯವಾಗಿದೆ. ದೇಶದಾದ್ಯಂತ ಕೆಲವು ಅತ್ಯುತ್ತಮ ತಂಡಗಳ ವಿರುದ್ಧ ನಾವು ಉತ್ತಮ ಪಂದ್ಯಗಳನ್ನು ಎದುರು ನೋಡುತ್ತಿದ್ದೇವೆ.” ಎಂದು ಫುಟ್ಸಲ್ ಪಂದ್ಯಾವಳಿಗಾಗಿ ನಿಯೋಜಿಸಲಾಗಿರುವ ಬೆಂಗಳೂರು ಎಫ್‌ಸಿ ತಂಡದ ಮುಖ್ಯ ಕೋಚ್ ಗೋವರ್ಧನ ಗೌಡ ಹೇಳಿದರು.

ಕುಪ್ಪುರಾಜ್ ಎಫ್‌ಸಿ (ಪಾಂಡಿಚೆರಿ), ಸ್ಪೀಡ್ ಫೋರ್ಸ್ ಎಫ್‌ಸಿ (ಹೈದರಾಬಾದ್) ಮತ್ತು ಸ್ಪೋರ್ಟಿಂಗ್ ಕ್ಲಬ್ ಡಿ ಗೋವಾ (ಗೋವಾ) ಜೊತೆಗೆ ಬ್ಲೂಸ್ ತಂಡವು ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಗುಂಪಿನ ವಿಜೇತರು ಸೆಮಿಫೈನಲ್‌ ತಲುಪಲಿದ್ದಾರೆ.

ಪಂದ್ಯಾವಳಿಯು ರೌಂಡ್-ರಾಬಿನ್ ಮಾದರಿಯನ್ನು ಅನುಸರಿಸಲಿದ್ದು, ಗುಂಪಿನ ವಿಜೇತರು ಸೆಮಿಫೈನಲ್‌ ಹಂತವನ್ನು ತಲುಪಲಿದ್ದಾರೆ. ಬರೋಡಾ ಎಫ್‌ಸಿ, ಚನ್ಮರಿ ಜೋಥಾನ್ ಫುಟ್ಸಾಲ್, ಸೂಪರ್ ಸ್ಟ್ರೈಕರ್ಸ್ ಎಫ್‌ಸಿ, ಡೆಲ್ಲಿ ಎಫ್‌ಸಿ, ರಿಯಲ್ ಕಾಶ್ಮೀರ್ ಎಫ್‌ಸಿ, ಟೆಲೊಂಗ್‌ಜೆಮ್ ಎಫ್‌ಸಿ, ಕ್ಲಾಸಿಕ್ ಫುಟ್‌ಬಾಲ್ ಅಕಾಡೆಮಿ, ಮಂಗಲ್ ಕ್ಲಬ್, ನಿಯಾವ್ ವಾಸಾ ಯುನೈಟೆಡ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್, ಟ್ರಾಯು ಎಫ್‌ಸಿ, ಮೊಹಮ್ಮದನ್ ಎಸ್‌ಸಿ ಮತ್ತು ಸುದೇವ ಡೆಲ್ಲಿ ಎಫ್ಸಿ ಸ್ಪರ್ಧೆಯಲ್ಲಿರುವ ಇತರ ತಂಡಗಳಾಗಿವೆ.

ತಂಡ

ಗೋಲ್‌ಕೀಪರ್‌ಗಳು: ಮಾಣಿಕ್ ಬಲಿಯಾನ್, ಪ್ರೀತಂ ಹರೇಶ್ ಇದ್ನಾನಿ

ಡಿಫೆಂಡರ್ಸ್: ಮನೀಶ್ ಚೌಧರಿ, ರಾಬಿನ್ ಯಾದವ್, ಹರ್ಪ್ರೀತ್ ಸಿಂಗ್, ಜಗದೀಪ್ ಸಿಂಗ್.

ಮಿಡ್‌ಫೀಲ್ಡರ್‌ಗಳು: ಶಿಘಿಲ್ ಎನ್‌ಎಸ್, ಬೆಕಿ ಓರಮ್, ಕಮಲೇಶ್ ಪಳನಿಸಾಮಿ, ಎಡ್ವಿನ್ ರೊಸಾರಿಯೊ, ಲೂಯಿಸ್ ಮ್ಯಾಕಾರ್ಟನ್ ನಿಕ್ಸನ್, ಲಾಲ್ತಾಂಗ್ಲಿಯಾನಾ, ವಿನಿತ್ ವಿ, ಒಮೆಗಾ ವನ್‌ಲಾಲ್ಹ್ರುಯಿಟ್ಲುವಾಂಗಾ, ಲಾಲ್ರೆಮ್ಟ್ಲುವಾಂಗಾ ಫನೈ, ಬಿಸ್ವಾ ದರ್ಜೀ.

Malcare WordPress Security