ನಿಗದಿತ ಸಮಯದಲ್ಲಿ 2-2 ರ ಸಮಾನ ಅಂಕ ಕಾಯ್ದುಕೊಂಡ ನಂತರ ನೌಷಾದ್ ಮೂಸಾ ಪಡೆ ಸೆಮಿಫೈನಲ್‌ನಲ್ಲಿ 7-6 ರ ಅಂತರದಲ್ಲಿ ಸೋಲು.
ಬುಧವಾರ ವಿವೇಕಾನಂದ ಯುಬ ಭಾರತಿ ಕ್ರೀರಾಂಗನ್ ಅಲ್ಲಿ ಎಫ್‌ಸಿ ಗೋವಾ ವಿರುದ್ಧ ಸೋಲನುಭವಿಸಿದ ಬೆಂಗಳೂರು ಎಫ್‌ಸಿ ಡುರಾಂಡ್ ಕಪ್ ನ ಅಭಿಯಾನವನ್ನು ಕೊನೆಗೊಳಿಸಿದೆ. ಶಿವಶಕ್ತಿ ನಾರಾಯಣನ್ (1 ‘, 83’) ಪಂದ್ಯದ ಎರಡೂ ಭಾಗಗಳಲ್ಲಿ ಅಂಕ ಗಳಿಸಿದರೆ ಎದುರಾಳಿ ಗೋವಾ ತಂಡದ ಪರ ದೇವೇಂದ್ರ ಮುರ್ಗಾಕರ್ (8 ‘) ಮತ್ತು ರಿಡೀಮ್ ತ್ಲಾಂಗ್ (72’) ಅಂಕ ಗಳಿಸಿದರು. ಹೆಚ್ಚುವರಿ ಸಮಯದ ಕೊನೆಯಲ್ಲಿ ಎರಡೂ ತಂಡಗಳು ಸಮಬಲ ಕಾಯ್ದುಕೊಂಡವು. ಆಟವು ಪೆನಾಲ್ಟಿ ಶೂಟೌಟ್ ಮೂಲಕ ನಿರ್ಧರಿಸಲು ನಿರ್ಣಯಿಸಲಾಯ್ತು. ದಮೈತ್‌ಫಾಂಗ್ ಲಿಂಗ್ಡೋ ಯತ್ನವನ್ನು ತಡೆಹಿಡಿಯುವುದರೊಂದಿಗೆ ಸಡನ್ ಡೆತ್ ಮೂಲಕ ಕೋಲ್ಕತ್ತಾದಲ್ಲಿ ಬ್ಲೂಸ್ ಅಭಿಯಾನ ಕೊನೆಗೊಂಡಿತು.
ಕ್ವಾರ್ಟರ್ ಫೈನಲ್‌ನಲ್ಲಿ ಆರ್ಮಿ ಗ್ರೀನ್ ತಂಡವನ್ನು ಸೋಲಿಸಿದ ತಂಡದಲ್ಲಿ ಎರಡು ಬದಲಾವಣೆಗಳನ್ನು ನೌಶಾದ್ ಮೂಸಾ ಮಾಡಿದ್ದರು, ಬಿಸ್ವಾ ದರ್ಜಿ ಮತ್ತು ಲಿಯಾನ್ ಅಗಸ್ಟೀನ್ ಬದಲಿಗೆ ನಮಗ್ಯಾಲ್ ಭುಟಿಯಾ ಮತ್ತು ಆಕಾಶದೀಪ್ ಸಿಂಗ್ ಅಂಗಳಕ್ಕಿಳಿದರು. ಎದುರಾಳಿ ತಂಡದ ಜುವಾನ್ ಫೆರಾಂಡೊ ಮೂರು ಬದಲಾವಣೆಗಳನ್ನು ಮಾಡಿದ್ದರು. ಧೀರಜ್ ಸಿಂಗ್, ಬ್ರಾಂಡನ್ ಫೆರ್ನಾಂಡಿಸ್ ಮತ್ತು ಐಬನ್ಭಾ ಡೊಹ್ಲಿಂಗ್ ಅವರ ಸ್ಥಾನದಲ್ಲಿ ನವೀನ್ ಕುಮಾರ್, ಇವಾನ್ ಗೊನ್ಜಾಲೆಜ್, ಅಲ್ಬರ್ಟೊ ನೊಗೆರಾ ಕಣಕ್ಕಿಳಿದರು.
ಗೋವಾ ಮೊದಲು ಚೆಂಡಿನ ಸ್ಪರ್ಶವನ್ನು ಪಡೆಯಿತಾದರೂ, ಬ್ಲೂಸ್ ಕಿಕ್‌ಆಫ್‌ನಿಂದಲೇ ಅಂಗಳದಲ್ಲಿ ತಮ್ಮ ಹಿಡಿತ ಸಾಧಿಸಿತು. ಗೋಲ್‌ಕೀಪರ್ ನವೀನ್ ಕುಮಾರ್ ಗೆ ಜೊತೆಕೊಡುವವರಿಲ್ಲದ್ದು ಗಮನಿಸಿ ಚೆಂಡು ಕೈಗೆ ಸಿಗದಂತೆ ಶಿವಶಕ್ತಿ ಗುರಿಯತ್ತ ತಿರುಗಿಸಿ ತಂಡಕ್ಕೆ 1-0 ಮುನ್ನಡೆಯನ್ನು ಗಳಿಸಿದರು. ಅಂಗಳದ ಮತ್ತೊಂದೆಡೆ ದೇವೇಂದ್ರ ಅವರು ಮೊಹಮ್ಮದ್ ನೆಮಿಲ್ ಅವರ ಕಾರ್ನರ್ ಅಲ್ಲಿ ಕೆಲವು ನಿಮಿಷಗಳ ಅಂತರದಲ್ಲೇ ಗೋವಾ ಪರ ಅಂಕ ಪಡೆದರು.
ಜಿದ್ದಾಜಿದ್ದಿ ಆಟದಲ್ಲಿನ ಸಮಾನ ಅಂಕಗಳ ಹೋರಾಟದ ಪ್ರದರ್ಶನದ ಹೊರತಾಗಿಯೂ ಬ್ಲೂಸ್ ತಮ್ಮ ಆಟದ ಯೋಜನೆಯಂತೆಯೇ ಹೆಜ್ಜೆ ಇಟ್ಟರು ಮತ್ತು ಅಂಗಳದಲ್ಲಿ ಸಮಯ ಕಳೆದಂತೆ ಹಲವಾರು ಗೋಲ್ ಯತ್ನಗಳೂ ಕಂಡುಬಂದವು. ಮೊದಲನೆಯದಾಗಿ, ಶಿವಶಕ್ತಿ ತನಗಾಗಿ ಜಾಗವನ್ನು ಮಾಡಿಕೊಂಡು ಗುರಿಯತ್ತ ಹೊಡೆತವನ್ನು ತೆಗೆದುಕೊಂಡರು ಆದರೆ ಅದು ದೂರದಲ್ಲಿ ಸಾಗಿತು. ನಂತರ, ಗಾಯಗೊಂಡ ಹರ್ಮನ್‌ಪ್ರೀತ್ ಸಿಂಗ್ ಬದಲಿಗೆ ಬಿದ್ಯಾಶಾಗರ್ ಸಿಂಗ್ ಆರಂಭದಲ್ಲೇ ಅಂಗಳಕ್ಕಿಳಿದರು. ಮೈದಾನದ ಎಡಭಾಗದಿಂದ ಒಳಕ್ಕೆ ಕಟ್ ಮಾಡುವ ಅವರ ಯತ್ನವು ಕಾರ್ನರ್ ಅಲ್ಲಿ ತಡೆಯಲಾಯ್ತು. ಕೆಲವು ನಿಮಿಷಗಳ ನಂತರ, ಶಿವಶಕ್ತಿ ಬ್ಲೂಸ್‌ನ ಅಂಗಳದ ಅರ್ಧಭಾಗದಿಂದ ಭುಟಿಯಾ ಅವರ ಓಟವನ್ನು ಕಂಡುಕೊಂಡರು, ಆದರೆ 22ರ ಹರೆಯ ತನ್ನ ಮೊದಲ ಪ್ರಯತ್ನದಲ್ಲಿ ಚೆಂಡನ್ನು ಪೋಸ್ಟ್ ಇಂದ ತುಸು ದೂರದಲ್ಲಿ ಸಾಗುವಂತೆ ಹೊಡೆಯಲು ಶಕ್ತರಾದರು.
ಅರ್ಧ ಗಂಟೆಯ ಆಟದ ನಂತರ, ಸ್ಯಾನ್ಸನ್ ಪೆರೇರಾ ಬ್ಲೂಸ್ ಪಡೆಯ ಬಾಕ್ಸ್ ಅತ್ತದ ಹಾದಿಯನ್ನು ಕಂಡುಕೊಂಡಿದ್ದರು ಆದರೆ ಮಧ್ಯದಲ್ಲಿ ಎಡು ಬಿಡಿಯಾ ಗೆ ತಲುಪಿಸಿದರು, ಆದರೆ ವುಂಗಯಮ್ ಮುಯ್ರಾಂಗ್ ಚೆಂಡನ್ನು ಹೆಡ್ ಮಾಡುವ ಮೂಲಕ ಎದುರಾಳಿ ತಂಡದ ಗೋಲ್ ಗಳಿಸುವ ಯತ್ನವನ್ನು ವಿಫಲಗೊಲಿಸಿದರು ಆದರೆ ಲಾರಾ ಶರ್ಮಾ ಅಷ್ಟು ಹೊತ್ತಿಗಾಗಲೇ ತಮ್ಮ ರೇಖೆಯನ್ನು ದಾಟಿ ನಿಂತಿದ್ದರು.
ವಿರಾಮದ ನಂತರ, ಗೋವಾ ರಕ್ಷಣಾಕೋಟೆಯನ್ನು ಬೇಧಿಸಿ ಮುನ್ನುಗ್ಗಲು ಕೇವಲ ಎರಡು ನಿಮಿಷಗಳನ್ನು ಬೆಂಗಳೂರು ತೆಗೆದುಕೊಂಡಿತು, ಶಿವಶಕ್ತಿಯು ಬಿದ್ಯಾಶಾಗರ್ ಮೂಲಕ ಆಡಿದರು, ಆದರೆ ಪೋಸ್ಟ್ ಇಂದ ಎತ್ತರ ಮತ್ತು ದೂರದಲ್ಲಿ ಚೆಂಡು ಸಾಗಿತ್ತು. ಎರಡು ನಿಮಿಷಗಳ ನಂತರ, ನಾಯಕ ಅಜಿತ್, ಅಂಗಳದಲ್ಲಿ ಒತ್ತಡವನ್ನು ಹಾಕುವ ಮೂಲಕ ಪೋಸ್ಟ್ ಹೊರಗೆ ಚೆಂಡನ್ನು ಸ್ವಾಧೀನಪಡಿಸಿಕೊಂಡು ಆಕಾಶ್‌ದೀಪ್ ಗೆ ತಲುಪಿಸಿದರು ಆದರೆ ಅವರ ಗುರಿಯು ಪೋಸ್ಟ್ ಇಂದ ದೂರದಲ್ಲಿ ಸಾಗಿತ್ತು.
ಗೋವಾ ತಂಡಕ್ಕೆ ದ್ವಿತೀಯಾರ್ಧದಲ್ಲಿ ಗುರಿಯತ್ತದ ಮೊದಲ ಹೊಡೆತ ಎಡು ಅವರ ಫ್ರೀಕಿಕ್ ಮೂಲಕ ಬಂತು. ಆದರೆ ಎಚ್ಚರದಿಂದಿದ್ದ ಲಾರಾ ಕೆಳಕ್ಕೆ ಧುಮುಕಿ ನಿರ್ಬಂಧಿಸಿದರು. ಆಟದ ಮೇಲೆ ಹಿಡಿತ ಸಾಧಿಸುವ ಉದ್ದೇಶದೊಂದಿಗೆ ಎದುರಾಳಿ ಗೋವಾ ತಂಡಕ್ಕೆ 61 ನೇ ನಿಮಿಷದಲ್ಲಿ ಫೆರಾಂಡೊ ಮೂರು ಬದಲಿ ಆಟಗಾರರನ್ನು ಕರೆತಂದರು. ದೇವೇಂದ್ರ, ನೆಮಿಲ್ ಮತ್ತು ಸ್ಪೇನ್ ನ ಇವಾನ್ ಗೊನ್ಜಾಲೆಜ್ ಬದಲಿಗೆ ಮಕಾನ್ ಚೋಥೆ, ರಿಡೀಮ್ ತ್ಲಾಂಗ್ ಮತ್ತು ಐಬನ್ಭಾ ಡೊಹ್ಲಿಂಗ್ ಅಂಗಳಕ್ಕಿಳಿದರು. ಸಮಯೋಚಿತವಾಗಿದ್ದ ಈ ಕ್ರಮ ಬಹುಬೇಗನೆ ಫಲ ದೊರಕಿಸಿಕೊಟ್ಟಿತು. ರಿಡೀಮ್ ಗಳಿಸಿದ ಅಂಕ ಗೋವಾ ತಂಡಕ್ಕೆ 2-1 ರ ಮುನ್ನಡೆಯನ್ನು ತಂದುಕೊಟ್ಟಿತು.
ಆರಂಭದ ಕೆಲ ನಿಮಿಷಗಳಲ್ಲೇ ಬ್ಲೂಸ್ ಪರ ಮತ್ತೊಂದು ಅಂಕ ಗಳಿಸಿದ ಶಿವಶಕ್ತಿ ಆಟಕ್ಕೆ ಮತ್ತೆ ರಂಗು ತಂದುಕೊಟ್ಟರು, ಭುಟಿಯಾ ನೀಡಿದ ಕ್ರಾಸ್ ಅನ್ನು ಹೆಡರ್ ಮೂಲಕ ಗೋಲ್ ಆಗಿಸಿ 2-2ರ ಸಮಾನ ಅಂಕಕ್ಕೆ ತಂಡವನ್ನು ತಂದಿರಿಸಿದರು ಇದರೊಂದಿಗೆ ಪಂದ್ಯದ ಫಲಿತಾಂಶದ ಅನಿವಾರ್ಯತೆಯಿಂದಾಗಿ ಹೆಚ್ಚುವರಿ ಮೂವತ್ತು ನಿಮಿಷಗಳ ಆಟಕ್ಕೆ ಅವಕಾಶ ನೀಡಲಾಯ್ತು.
ಆರ್ದ್ರತೆ ಹೆಚ್ಚಾಗಿದ್ದ ವಾತಾವರಣದಲ್ಲೂ ಹೆಚ್ಚುವರಿ ಮೂವತ್ತು ನಿಮಿಷಗಳ ಆಟದಲ್ಲಿ, ಎರಡೂ ತಂಡಗಳ ಜಿದ್ದಾಜಿದ್ದಿನ ಪ್ರದರ್ಶನದಿಂದಾಗಿ ಅಂಕ ಗಳಿಸದ ಕಾರಣ ಪಂದ್ಯವನ್ನು ಪೆನಾಲ್ಟಿ ಶೂಟೌಟ್ ಮೂಲಕ ನಿರ್ಧರಿಸಲು ಅಂಗಳ ಅಣಿಯಾಯ್ತು. ಮುಯಿರಾಂಗ್, ಅಜಯ್, ಪರಾಗ್ ಮತ್ತು ಭುಟಿಯಾ ಸ್ಪಾಟ್ ಅಲ್ಲಿ ಯಾವುದೇ ತಪ್ಪು ಮಾಡಲಿಲ್ಲ, ಆದರೆ ಆಕಾಶ್‌ದೀಪ್ ಯತ್ನವನ್ನು ತಡೆಯಲಾಯ್ತು ಮತ್ತು ಲಾರಾ ಅವರು ರಿಡೀಮ್ ಪೆನಾಲ್ಟಿಯನ್ನು ತಡೆದರು. ಪೈಪೋಟಿಯ ಆಟದಲ್ಲಿ ಡಮೈಟ್ಫಾಂಗ್ ಲಿಂಗ್ಡೋ ಅವರ ಸ್ಪಾಟ್ ಕಿಕ್ ತಡೆಹಿಡಿಯಲಾಯ್ತು. ಇದರೊಂದಿಗೆ ಬ್ಲೂಸ್ ಶೂಟೌಟ್‌ನಲ್ಲಿ 7-6ರ ಅಂತರದೊಂದಿಗೆ ಸಡನ್ ಡೆತ್ ಮೂಲಕ ಸೋಲಾನುಭವಿಸಿ ಸ್ಪರ್ಧೆಯಿಂದ ನಿರ್ಗಮಿಸಿತು.