ನೇವಿ ವಿರುದ್ಧದ ಗೆಲುವಿನೊಂದಿಗೆ ಭರ್ಜರಿಯಾಗಿ ಡುರಾಂಡ್ ಕಪ್ ನ ನಾಕ್ ಔಟ್ ಗೆ ಲಗ್ಗೆ ಇಟ್ಟ ಬ್ಲೂಸ್

ನೌಶಾದ್ ಮೂಸಾ ಪಡೆ ದ್ವಿತೀಯಾರ್ಧದಲ್ಲಿನ ರೋಚಕ ಪ್ರದರ್ಶನದಿಂದ ಎಲ್ಲ ಅಡೆತಡೆಗಳನ್ನು ಮೀರಿ 5-3 ಅಂತರದ ಗೆಲುವನ್ನು ತಮ್ಮದಾಗಿಸಿಕೊಂಡರು.

ನೌಶಾದ್ ಮೂಸಾ ನೇತೃತ್ವದ ಬೆಂಗಳೂರು ಎಫ್‌ಸಿ ತಂಡವು ಗಮನಾರ್ಹವಾಗಿ ದ್ವಿತೀಯಾರ್ಧದಲ್ಲಿ ಪ್ರದರ್ಶನ ತೋರುವ ಮೂಲಕ 2021 ರ ಡುರಾಂಡ್ ಕಪ್ ನ ನಾಕೌಟ್ ಸುತ್ತುಗಳನ್ನು ತಲುಪಿದೆ, ಮಂಗಳವಾರ ಕೋಲ್ಕತ್ತಾದ ವಿವೇಕಾನಂದ ಯುಬ ಭಾರತಿ ಕ್ರೀರಾಂಗನ್ ಅಲ್ಲಿ ಇಂಡಿಯನ್ ನೇವಿ ವಿರುದ್ಧ 5-3 ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಜಿಜೊ (18′) ಮತ್ತು ಶ್ರೇಯಸ್ (29′) ನಿಂದ ಗಳಿಸಿದ ಗೋಲುಗಳು ಸರ್ವಿಸಸ್ ಪಡೆಗೆ ಮುನ್ನಡೆ ನೀಡಿತ್ತಾದರೂ, ವಿರಾಮಕ್ಕೆ ಮುನ್ನ ಮತ್ತು ನಂತರದಲ್ಲಿ ಶುರುವಾದ ಬ್ಲೂಸ್ ನ ಆಕ್ರಮಣಕಾರಿ ಆಟ ರೋಚಕವಾಗಿ ಕಂಡಿತು. ಲಿಯಾನ್ ಅಗಸ್ಟೀನ್ (52′), ಹರ್ಮನ್‌ಪ್ರೀತ್ ಸಿಂಗ್ (60′, 80′), ಅಜಯ್ ಛೇತ್ರಿ (73′) ಮತ್ತು ಥೋಯ್ ಸಿಂಗ್ (90′ + 1′) ಅಂಕಗಳನ್ನು ತಮ್ಮದಾಗಿಸಿಕೊಂಡರು. ಹಾಗೆ ಹೆಚ್ಚುವರಿ ಸಮಯದಲ್ಲಿ ಎದುರಾಳಿ ತಂಡದ ವಿಜಯ್ (90′ + 3′) ಗೋಲ್ ನೊಂದಿಗೆ ತಮ್ಮ ತಂಡಕ್ಕಾಗಿ ಸಮಾಧಾನಕರ ಅಂತರವನ್ನು ತಂದುಕೊಟ್ಟರು.

ಪಂದ್ಯಾರಂಭಕ್ಕೂ ಮುನ್ನ ನೌಷಾದ್ ಮೂಸಾ ಅವರು ದೆಹಲಿ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ 2-2 ರಿಂದ ಡ್ರಾ ಮಾಡಿಕೊಂಡಿದ್ದ ತಂಡದಲ್ಲಿ ಒಂದು ಬದಲಾವಣೆಯನ್ನು ಮಾಡಿದ್ದರು. ಲಿಯಾನ್ ಅಗಸ್ಟೀನ್ ಬದಲಿಗೆ ಬಿದ್ಯಾಶಾಗರ್ ಸಿಂಗ್ ಅನ್ನು ಅಂಗಳಕ್ಕಿಳಿಸಿದ್ದರು. ಪಂದ್ಯದ ಆರಂಭದ ನಿಮಿಷದಿಂದಲೇ ಬ್ಲೂಸ್‌ನ ಗೋಲ್‌ಕೀಪರ್ ಲಾರಾ ಶರ್ಮಾ ಇಂಡಿಯನ್ ನೇವಿಯ ತಂತ್ರಗಾರಿಕೆಯ ಆಟವನ್ನು ತುಸು ಹೆಚ್ಚು ಎಚ್ಚರದೊಂದಿಗೆ ಆಡುವ ಸವಾಲು ಪಡೆದರು, ಕಾರ್ನರ್ ನಿಂದ ಪೋಸ್ಟ್‌ ನ ಬಳಿಗೆ ಚೆಂಡು ಹಾದುಬಂತು ಆದರೆ ಅದನ್ನು ತಡೆಯುವಲ್ಲಿ ಯಶಸ್ವಿಯಾದರು. ಅಂಗಳದ ಮತ್ತೊಂದು ಭಾಗದಲ್ಲಿ ಕೇವಲ 5 ನಿಮಿಷಗಳ ಅಂತರದಲ್ಲೇ, ಶಿವಶಕ್ತಿ ನಾರಾಯಣನ್ ಉತ್ತಮವಾದ ಹೊಡೆತವನ್ನು ತೆಗೆದುಕೊಂಡರು ಆದರೆ ಅದನ್ನು ಇಂಡಿಯನ್ ನೇವಿಯ ಡಿಫೆನ್ಸ್ ಬಾಕ್ಸ್ ಒಳಗೆ ತಡೆಯುವಲ್ಲಿ ಸಫಲವಾಯ್ತು.

18 ನೇ ನಿಮಿಷದಲ್ಲಿ ಎದುರಾಳಿ ತಂಡದ ಜಿಜೊ ಗೋಲ್ನತ್ತ ಹೊಡೆತ ತೆಗೆದುಕೊಂಡರು, ಲಾರಾ ಅವರ ಹಿಡಿತಕ್ಕೆ ಅದು ಸಿಗದಂತೆ ಗುರಿ ಇಟ್ಟು ಬಾಕ್ಸ್ ನ ತುದಿಯಲ್ಲಿ ವಾಲಿ ಮಾಡುವ ಮೂಲಕ ಸೇನಾ ಪಡೆಗೆ ಮುನ್ನಡೆಯನ್ನು ತಂದುಕೊಟ್ಟರು. ಶಿವಶಕ್ತಿಗೆ ಬ್ಲೂಸ್ ಪರ ಅಂಕ ಗಳಿಸುವ ಅವಕಾಶ ಲಭಿಸುವುದಿತ್ತು ಆದರೆ ಹರ್ಮನ್‌ಪ್ರೀತ್ ಸಿಂಗ್ ಬಾಕ್ಸ್‌ನಲ್ಲಿ ಮುಕ್ತವಾಗಿ ಶಿವಶಕ್ತಿಯನ್ನು ಕಂಡುಕೊಂಡು ಪ್ರಯತ್ನಕ್ಕೆ ಭಂಗ ಉಂಟಾಯಿತು. ಇದಾದ ಹತ್ತು ನಿಮಿಷಗಳಲ್ಲೆ ಇಂಡಿಯನ್ ನೇವಿಯೂ ಶ್ರೇಯಸ್ ವಿಜಿ ಮೂಲಕ ತಮ್ಮ ಮುನ್ನಡೆಯನ್ನು ದ್ವಿಗುಣಗೊಳಿಸಿಕೊಂಡರು, ಅವರು ಅಂಗಳದ ಮಿಡಲ್ ನಿಂದ ಮುಕ್ತವಾಗಿ ಸಾಗಿ ಕಾರ್ನರ್ ನ ಅಂಚಿನಲ್ಲಿ ರೋಚಕವಾಗಿ ಗೋಲ್ ಗಳಿಸಿದರು.

ಬ್ಲೂಸ್, ಸುಮಾರು ಅರ್ಧ ಗಂಟೆಯ ಅವಧಿಯಲ್ಲಿ ಅಜಿತ್ ಕುಮಾರ್ ರ ದೀರ್ಘ ಪಾಸ್ ನೊಂದಿಗೆ ಗೋಲ್ ಸಾಧಿಸುವ ಹಂತಕ್ಕೆ ತಲುಪಿದ್ದರಾದರೂ, ದೂರದ ಪೋಸ್ಟ್‌ನಲ್ಲಿ ಹರ್ಮನ್‌ಪ್ರೀತ್ ರನ್ನು ಕಂಡುಕೊಳ್ಳುವಲ್ಲಿ ಎಡವಿದರು.

ದ್ವಿತೀಯಾರ್ಧದ ಆರಂಭದಲ್ಲಿ ಬಿದ್ಯಾಶಾಗರ್ ಬದಲಾಗಿ ಲಿಯಾನ್ ನನ್ನು ಕಣಕ್ಕಿಳಿಸಲಾಯ್ತು. ಕೂಡಲೇ ಉತ್ತಮವಾದ ಹೊಡೆತದೊಂದಿಗೆ ಗೋಲ್ ಗಳಿಸಿ ಅವರು ತಮ್ಮ ಹೆಸರನ್ನು ಸ್ಕೋರ್‌ಬೋರ್ಡ್‌ನಲ್ಲಿ ದಾಖಲಿಸಿದರು, ಶಿವಶಕ್ತಿಯಿಂದ ಚುರುಕಾದ ಹೊಡೆತ ಪಡೆದ ನಂತರ ಕೀಪರ್ ಭಾಸ್ಕರ್ ರಾಯ್‌ ಜೊತೆಗೆ ಜಿದ್ದಾಜಿದ್ದಿಗೆ ಇಳಿದು ಗೋಲ್ ಗಳಿಸಿದರು. ಸ್ವಲ್ಪ ಸಮಯದಲ್ಲೇ ಗೋಲ್ ಸಿಡಿಸಿದ ಆಟಗಾರನು ತಂಡಕ್ಕೆ ಮತ್ತೊಂದು ಅಂಕ ಪಡೆಯಲು ಪ್ರೊವೈಡರ್ ಆಗಿ ಬದಲಾಗಿದ್ದರು. ಚೆಂಡನ್ನು ಅತ್ಯುತ್ತಮ ಪಾಸ್ ನೀಡುವ ಮೂಲಕ ಹರ್ಮನ್‌ಪ್ರೀತ್ ಗೆ ಇಂಚೂ ತಪ್ಪಿಲ್ಲದೆ ಅದನ್ನು ಗುರಿಯತ್ತ ಸಾಗಿಸಲು ಸಹಕರಿಸಿದರು. ಯಾವುದೇ ತಪ್ಪು ಮಾಡದ ಹರ್ಮನ್‌ಪ್ರೀತ್ ನೇರವಾಗಿ ಚೆಂಡನ್ನು ನೆಟ್ ಗೆ ತಲುಪಿಸುವಲ್ಲಿ ಯಶಸ್ವಿಯಾಗುವುದರೊಂದಿಗೆ ತಂಡ 2-2 ಅಂಕ ಗಳಸಿತು.

ಕೆಲವೇ ಕ್ಷಣದಲ್ಲಿ ತಂಡದಲ್ಲಿನ ಅಂಕಗಳಿಸುವ ಆವೇಗದಿಂದಾಗಿ ಬ್ಲೂಸ್ ಮುನ್ನುಗ್ಗಿತ್ತು. ನಂತರ ಬಿಸ್ವಾ ದರ್ಜಿಯನ್ನು ಬಾಕ್ಸ್ ನೊಳಗೆ ಅಡ್ಡಗಟ್ಟಿ ತಡೆದ ಕಾರಣ ತಂಡವು ಪೆನಾಲ್ಟಿ ಅವಕಾಶವನ್ನ ಪಡೆದುಕೊಂಡರು, ಅಜಯ್ ಛೇತ್ರಿ ಸ್ಪಾಟ್ ನಿಂದ ಯಾವುದೇ ತಪ್ಪು ಮಾಡದೇ, ಬಾಟಮ್ ಕಾರ್ನರ್ ಕಂಡುಕೊಂಡು ಗೋಲ್ ಗಳಿವಲ್ಲಿ ಯಶಸ್ವಿಯಾದರು. ಇದರೊಂದಿಗೆ ಬ್ಲೂಸ್ 3-2 ರ ಅಂತರ ಕಾಯ್ದುಕೊಂಡಿತು. ಕೆಲ ಹೊತ್ತಿನಲ್ಲೇ ಹರ್ಮನ್‌ಪ್ರೀತ್ ತನ್ನ ಹೆಸರಿಗೆ ಮತ್ತೊಂದು ಗೋಲನ್ನು ಸೇರಿಸಿಕೊಂಡರು, ಮುಂದಕ್ಕೆ ಸಾಗಿ ಬಂದ ಕೀಪರ್ ನ ಮೇಲಿನಿಂದ – ತಪ್ಪಿಸಿ ಖಾಲಿ ಇದ್ದ ನೆಟ್ ಗೆ ಚೆಂಡನ್ನು ತಲುಪಿಸಿದರು.

ಬ್ಲೂಸ್ ಪಂದ್ಯದ ಅಂತ್ಯದ ಸಮಯದಲ್ಲಿ ಮತ್ತೊಂದು ಗೋಲ್ ಅನ್ನು ಪಡೆದುಕೊಂಡರು. ಶಿವಶಕ್ತಿ ರೈಟ್ – ವಿಂಗ್ ನಲ್ಲಿ ಮುಕ್ತವಾಗಿ ಮುನ್ನೆಡೆದಾಗ ಬೆಕ್ಕಿ ಓರಮ್ ಅನ್ನು ಕಂಡುಕೊಂಡರು, ಇಂಡಿಯನ್ ನೇವಿ ಡಿಫೆನ್ಸ್ ನೊಂದಿಗೆ ಚುರುಕು ಪ್ರದರ್ಶನ ತೋರಿದ ನಂತರ ಥೋಯ್ ಸಿಂಗ್ ಗೆ ಪಾಸ್ ಕೊಟ್ಟರು, ಇವರು ಇಬ್ಬರು ಡಿಫೆಂಡರ್ಸ್ ಮತ್ತು ಕೀಪರ್ ನ ನಡುವೆ ಗೋಲ್ ಅನ್ನು ಗಳಿಸುವ ಮೂಲಕ ಬ್ಲೂಸ್ 5-2 ರ ಅಂತರ ಕಾಯ್ದುಕೊಂಡಿತು. ನಂತರ ವಿಜಯ್ ಹೆಚ್ಚುವರಿ ಅಂತಿಮ ನಿಮಿಷಗಳಲ್ಲಿ ಇಂಡಿಯನ್ ನೇವಿ ಪರ ಅಂಕಗಳ ಅಂತರವನ್ನು 5-3ಕ್ಕೆ ತಂದಿರಿಸಿ ಸಮಾಧಾನಪಟ್ಟರು.

ಈ ಗೆಲುವಿನಿಂದ ಬೆಂಗಳೂರು ಕ್ವಾರ್ಟರ್ ಫೈನಲ್‌ಗೆ ತಲುಪುವಲ್ಲಿ ಮುನ್ನಡೆ ಸಾಧಿಸಿದೆ, ಇವರು ಸೆಪ್ಟೆಂಬರ್ 25 ರಂದು ಆರ್ಮಿ ಗ್ರೀನ್ ರೊಂದಿಗೆ ಸೆಣೆಸಲಿದ್ದಾರೆ. ಪ್ರಸ್ತುತ ಆರ್ಮಿ ಗ್ರೀನ್ ಗ್ರೂಪ್ ಬಿ ಅಂಕಪಟ್ಟಿಯಲ್ಲಿ ಆರು ಅಂಕಗಳೊಂದಿಗೆ ಎರಡನೇ ಸ್ಥಾನವನ್ನು ಅಲಂಕರಿಸಿದೆ.

Malcare WordPress Security