ಡ್ಯುರಾಂಡ್ ಕಪ್ ಸೆಮಿಫೈನಲ್ಸ್ ತಲುಪಿದ ಬೆಂಗಳೂರು ಎಫ್ ಸಿ

ನೌಶಾದ್ ಮೂಸಾ ಪಡೆ 3-2ರ ಅಂತರದೊಂದಿಗೆ ಆರ್ಮಿ ಗ್ರೀನ್ ತಂಡವನ್ನು ಸೋಲಿಸಿ, ಫೈನಲ್ಸ್ ಅರ್ಹತೆ ಪಡೆಯಲು ಎಫ್‌ಸಿ ಗೋವಾ ತಂಡವನ್ನು ಉಪಾಂತ್ಯದಲ್ಲಿ ಎದುರಿಸಲಿದೆ.

ವಿವೇಕಾನಂದ ಯುಬ ಭಾರತಿ ಕ್ರೀರಾಂಗನ್ ನಲ್ಲಿ ಶನಿವಾರ ನಡೆದ ಡ್ಯುರಾಂಡ್ ಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ 3-2ರ ಅಂತರದೊಂದಿಗೆ ಆರ್ಮಿ ಗ್ರೀನ್ ತಂಡವನ್ನು ಮಣಿಸಿತು. ಲಲ್ಲವ್‌ಕಿಮಾ ಪಿಸಿ (9’) ಮೊದಲಾರ್ಧದಲ್ಲಿ ಎದುರಾಳಿ ತಂಡಕ್ಕಾಗಿ ಮುನ್ನಡೆ ಪಡೆದರು. ನಂತರದಲ್ಲಿ ಬ್ಲೂಸ್ ಪರ ವುಂಗಯಮ್ ಮುಯ್ರಾಂಗ್ (20’), ಲಿಯಾನ್ ಅಗಸ್ಟೀನ್ (46 ’) ಮತ್ತು ನಮಗ್ಯಾಲ್ ಭುಟಿಯಾ (74’) ಗೋಲುಗಳನ್ನು ಗಳಿಸಿ ಮುನ್ನಡೆ ಸಾಧಿಸಿದರು. ಎದುರಾಳಿ ತಂಡದ ವಿಬಿನ್ ಟಿವಿ (89 ’) ಪಂದ್ಯದ ಅಂತ್ಯದಲ್ಲಿ ತಮ್ಮ ತಂಡಕ್ಕಾಗಿ ಅಂಕಗಳಿಸಿ ಅಂತರವನ್ನು ಕಡಿಮೆಯಾಗಿಸಿದರು. ಇದರೊಂದಿಗೆ ಬೆಂಗಳೂರು ಪಂದ್ಯವನ್ನು ಗೆದ್ದು ಮುಂದಿನ ಹಂತ ತಲುಪಿದೆ.

ಈ ಹಿಂದಿನ ಪಂದ್ಯದಲ್ಲಿ ಇಂಡಿಯನ್ ನೇವಿ ತಂಡವನ್ನು 5-3 ಅಂತರದಿಂದ ಮಣಿಸಿದ್ದ ಬ್ಲೂಸ್ ತಂಡದಲ್ಲಿ ಒಂದು ಬದಲಾವಣೆಯನ್ನು ನೌಶಾದ್ ಮೂಸಾ ಮಾಡಿದ್ದರು, ದಾಳಿಯಲ್ಲಿ ಬಿದ್ಯಾಶಾಗರ್ ಸಿಂಗ್ ಬದಲಿಗೆ ಲಿಯಾನ್ ಅಗಸ್ಟೀನ್ ಸ್ಥಾನ ಪಡೆದಿದ್ದರು. ಬ್ಲೂಸ್ ಪಂದ್ಯವನ್ನು ಉತ್ತಮವಾಗಿಯೇ ಆರಂಭಿಸಿತು. ಲಿಯಾನ್ ತನ್ನ ಮಾರ್ಕರ್ ಅನ್ನು ದಾಟಿ ಮೊದಲ ಗೋಲ್ ಗಳಿಸುವ ಅವಕಾಶವನ್ನು ಶಿವಶಕ್ತಿ ನಾರಾಯಣನ್ ಗೆ ನೀಡಿದರು. ಆದರೆ ಆರ್ಮಿ ಗ್ರೀನ್ ಗೋಲ್ ಕೀಪರ್ ಶರತ್ ನಾರಾಯಣನ್ ತನ್ನ ಸ್ಥಾನದಿಂದ ಬೇಗನೆ ಹೊರಬಂದು ಹೊಡೆತವನ್ನು ತಡೆದರು. ನಿಮಿಷಗಳ ನಂತರ, ಸೇನಾ ಪಡೆಯು ಇನ್ನೊಂದು ತುದಿಯಲ್ಲಿ ಮುನ್ನಡೆ ಸಾಧಿಸುವ ಅವಕಾಶ ಗಿಟ್ಟಿಸಿತು. ನಾಯಕ ಅಜಿತ್ ಕುಮಾರ್ ಬಾಕ್ಸ್ ಅಲ್ಲಿ ತಡೆದ ಕಾರಣ ಅವಕಾಶ ಸಿಕ್ಕ ಲಲ್ಲವ್‌ಕಿಮಾ ಪಿಸಿ ಸ್ಪಾಟ್ ಇಂದಲೇ ಗೋಲ್ ಗಳಿಸಿ ಎದುರಾಳಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು.

ಲಿಯಾನ್, ಇಂದಿನ ಪಂದ್ಯದ ಮೊದಲ ಅಂಕ ಗಳಿಸುವ ಭರದಲ್ಲಿ ಪಂದ್ಯದ 15 ನೇ ನಿಮಿಷದಲ್ಲಿ ಬಾಕ್ಸ್ ಬಳಿ ಹರ್ಮನ್‌ಪ್ರೀತ್ ಸಿಂಗ್ ಅವರನ್ನು ಕಂಡುಕೊಂಡರು, ಚೆಂಡಿನ ಮೇಲೆ ಹಿಡಿತ ಸಾಧಿಸಿದ ಹರ್ಮನ್‌ ಚೆಂಡನ್ನು ನೇರವಾಗಿ ಕೀಪರ್ ಶರತ್ ಕೈಗಳಿಗಿತ್ತರು. ಲಿಯೋನ್ ಅಂಗಳದ ಬಲಭಾಗದಲ್ಲಿ ತಡೆಯಲ್ಪಟ್ಟಾಗ, ತಂಡಕ್ಕೆ ಫ್ರೀಕಿಕ್ ನೀಡಲಾಯ್ತು, ಇದರ ಅನುಕೂಲ ಪಡೆದ ತಂಡ ಶೀಘ್ರದಲ್ಲೇ ಅಂಕಗಳನ್ನು ಸಮವಾಗಿಸಿಕೊಂಡಿತು. ಮುಯ್ರಾಂಗ್ ತನ್ನ ಗೋಲ್ ಯತ್ನದಲ್ಲಿ ವಾಲ್ ಮತ್ತು ‘ಕೀಪರ್ ಅನ್ನು ಮೀರಿ ಚೆಂಡನ್ನು ತಳ್ಳಿ ಅಂಕ ಗಳಿಸಿದರು. ಇದರೊಂದಿಗೆ ತಂಡಕ್ಕೆ 1-1ರ ಸಮಾನ ಅಂಕ ಲಭಿಸಿತು.

ಮೊದಲ ಗೋಲ್ ಗಳಿಸಿದ ಉತ್ಸಾಹದಲ್ಲೇ ಮುಂದುವರಿದ ತಂಡ ಮುನ್ನಡೆ ಸಾಧಿಸಲು ಹವಣಿಸುತ್ತಲೇ ಮುಂದುವರೆದಿತ್ತು. ಡಮೈಟ್ಫಾಂಗ್ ಲಿಂಗ್ಡೋ ಬಾಕ್ಸ್ ತುದಿಯಿಂದ ಕರ್ಲಿಂಗ್ ಪ್ರಯತ್ನ ಮಾಡಿದರು ಆದರೆ ಶರತ್ ಅದನ್ನು ತಡೆದು ಉಳಿಸಿ ಅಂಕಗಳಿಸದಂತೆ ಕಡಿವಾಣ ಹಾಕಿದರು.

37 ನೇ ನಿಮಿಷದಲ್ಲಿ, ಪರಾಗ್ ಶ್ರೀವಾಸ್ ಪಾಸ್ ಅನ್ನು ತಡೆಹಿಡಿದು ಲಿಯಾನ್ ಅನ್ನು ಮುಕ್ತಗೊಳಿಸುವ ಮೂಲಕ ಪ್ರತಿದಾಳಿ ನಡೆಸಿದರು ಗೋಲ್ ಯತ್ನಿಸುತ್ತಿದ್ದಾಗ ಎದುರಾಳಿ ತಂಡದ ಗೋಲ್ ಕೀಪರ್ ಮುಂದೆ ಬರುತ್ತಿರುವುದನ್ನು ಕಂಡು ಹೊಡೆತ ತೆಗೆದುಕೊಂಡರು ಆದರೆ ಚೆಂಡು ದೂರದಲ್ಲಿ ಸಾಗಿ ಅಂಕ ಲಭಿಸಲಿಲ್ಲ. ನಿಮಿಷಗಳಲ್ಲೇ, 22 ವರ್ಷದ ಬಿ-ಟೀಮ್ ಪದವೀಧರ ಪಿಚ್ ಮಧ್ಯದಲ್ಲಿ ಚೆಂಡನ್ನು ಗೆದ್ದು ಮತ್ತೊಂದು ಪ್ರತಿದಾಳಿಗೆ ಯತ್ನಿಸಿದರು. ಶಿವಶಕ್ತಿಯನ್ನು ಬಲ ಫ್ಲ್ಯಾಂಕಲ್ಲಿ ಕಂಡುಕೊಂಡ ಬಳಿಕ, ಅವರು ಬಿಸ್ವಾ ದರ್ಜಿಯನ್ನು ಅಂಗಳದ ಮಧ್ಯದಲ್ಲಿ ಕಂಡುಕೊಂಡರು ಆದರೆ ಮಿಡ್‌ಫೀಲ್ಡರ್‌ನ ಸ್ಪರ್ಶವು ಸ್ವಲ್ಪ ಹೆಚ್ಚಿನ ಬಲದಿಂದ ಕೂಡಿತ್ತಾದ್ದರಿಂದ ಅದು ಸರಿಯಾಗಿ ಶರತ್ ಅನ್ನು ಬೇಗನೆ ಸೇರಿತು.

ದ್ವಿತೀಯಾರ್ಧದ ಮೊದಲ ನಿಮಿಷದಲ್ಲೇ ಬ್ಲೂಸ್ ಮತ್ತೆ ತನ್ನ ದಾಳಿಯನ್ನು ಚುರುಕುಗೊಳಿಸಿತು. ಈ ಹಿಂದಿನ ಪಂದ್ಯದಲ್ಲಿ ಎದುರಾಳಿ ತಂಡವನ್ನು ದ್ವಿತೀಯಾರ್ಧದಲ್ಲಿ ನಿಬ್ಬೆರಗಾಗಿಸಿದ್ದ ಲಿಯಾನ್ ಇಲ್ಲಿಯೂ ಅಡೆತಡೆಗಳನ್ನು ತಪ್ಪಿಸಿಕೊಂಡು ಚೆಂಡಿನ ಮೇಲೆ ಹಿಡಿತ ಸಾಧಿಸಿದರು, ಕೀಪರ್ ಮುಂದೆ ಸಾಗಿ ಬರುತ್ತಿರುವುದನ್ನು ಗಮನಿಸಿ, ಆರಾಮವಾಗಿ ಚೆಂಡನ್ನು ಚಿಪ್ ಮಾಡುವ ಮೂಲಕ ಗೋಲ್ ಗಳಿಸಿ ಅಂತರವನ್ನು 2-1 ಮಾಡಿದರು. ಇದಾದ ಒಂದು ನಿಮಿಷದಲ್ಲೇ ಮತ್ತೆ ಅದೇ ರೀತಿಯ ಮತ್ತೊಂದು ಪ್ರಯತ್ನಕ್ಕೆ ಕೈಹಾಕಿದರಾದರೂ ಅವರ ಯತ್ನವು ಗುರಿಯಿಂದ ಬಹಳ ದೂರದಲ್ಲಿ ಸಾಗಿ, ಅಂಕ ಗಳಿಸಲಾಗಲಿಲ್ಲ.

ಬದಲಿ ಆಟಗಾರ ಡಿಪ್ ಮಜುಮ್ದರ್ ಮೂಲಕ ಸಮಾನ ಅಂಕ ಗಳಿಸುವ ಅವಕಾಶ ನಂತರದ ಒಂದು ನಿಮಿಷದಲ್ಲಿ ಎದುರಾಳಿ ತಂಡಕ್ಕೆ ಲಭಿಸಿತ್ತು. ಮೊದಲಿಗೆ, ನೊರೆಮ್ ರೋಷನ್ ಸಿಂಗ್ ತನ್ನ ಸ್ಲೈಡಿಂಗ್ ಮೂಲಕ ಚೆಂಡನ್ನು ಬಾಕ್ಸ್‌ನಲ್ಲಿ ಬ್ಲಾಕ್ ಮಾಡಿದರು ಮತ್ತು ನಂತರ ಲಾರಾ ಶರ್ಮಾ ತನ್ನ ಲೈನ್ ಬಳಿ ತಡೆಯುವ ಯತ್ನ ಮಾಡಿ ಯಶಸ್ವಿಯಾದರು.

ಬ್ಲೂಸ್ ಆಟದಲ್ಲಿ ತಮ್ಮ ಮೂರನೇ ಗೋಲನ್ನು ಪಡೆದುಕೊಂಡರು, ಬಿಸ್ವಾ ಬಾಕ್ಸ್‌ನಲ್ಲಿ ಬದಲಿ ಆಟಗಾರನಾದ ಭುಟಿಯಾ ರನ್ನು ಕಂಡುಕೊಂಡರು ಮತ್ತು ಫಾರ್ವರ್ಡ್ ಶಾಟ್ ಅನ್ನು ದೂರದ ಮೂಲೆಗೆ ತಳ್ಳಿ ಬೆಂಗಳೂರು ತಂಡಕ್ಕೆ 3-1ರ ಮುನ್ನಡೆಯನ್ನು ತಂದುಕೊಟ್ಟರು. ಆಕಾಶ್‌ದೀಪ್ ಸಿಂಗ್ ಮಾಡಿದ್ದ ಈ ಮುನ್ನದ ಅಂಕಗಳಿಸುವ ಯತ್ನವನ್ನು ಶರತ್‌ ತಡೆದಿದ್ದರು. ಮತ್ತೊಂದು ಅಂಕ ಗಳಿಸುವ ಯತ್ನದಲ್ಲಿ ಹೊಡೆತ ತೆಗೆದುಕೊಂಡ ನಂತರ ಕೀಪರ್‌ನಿಂದ ಚೆಂಡು ಸಾಗಿ ದೂರ ಸರಿದು ಪೋಸ್ಟ್‌ನಿಂದ ಪುಟಿದು ಹೊರಗೆ ಕ್ರಮಿಸಿತ್ತು. ಆರ್ಮಿ ಗ್ರೀನ್ ತಂಡವು ಪಂದ್ಯದ ಮುಕ್ತಾಯಕ್ಕೆ ನಿಮಿಷದ ಮುನ್ನ ಮತ್ತೊಂದು ಪೆನಾಲ್ಟಿ ಅವಕಾಶವನ್ನು ಗಳಿಸಿತು. ರಾಬಿನ್ ಯಾದವ್ ಅಂಗಳದಲ್ಲಿ ಲಲ್ಲವ್‌ಕಿಮಾ ಅವರನ್ನು ತಡೆದುಳಿಸಿದರು ಮತ್ತು ಇದರಿಂದಾಗಿ ಚೆಂಡನ್ನು ಗಳಿಸಿದ ವಿಬಿನ್ ಟಿವಿ ಗೋಲ್ ಪೋಸ್ಟ್ ಬಳಿ ಲಾರಾ ಅವರನ್ನು ಹಿಮ್ಮೆಟ್ಟಿ 3-2 ರ ಅಂತರ ಸಾಧಿಸಿದರು.

ಬ್ಲೂಸ್ ಪಂದ್ಯವನ್ನು ಗೆದ್ದು, ಸೆಮಿಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಈ ಮುನ್ನಡೆ ಸಾಕಾಗಿತ್ತು. ಇದರೊಂದಿಗೆ ಮುಂದಿನ ಪಂದ್ಯದಲ್ಲಿ ಬ್ಲೂಸ್ ತಂಡವು ಎಫ್ ಸಿ ಗೋವಾ ಪಡೆಯನ್ನು ಇದೇ ಅಂಗಳದಲ್ಲಿ ಸೆಪ್ಟೆಂಬರ್ 29ರಂದು ಎದುರಿಸಲಿದೆ.

Malcare WordPress Security