ಬಿಡಿಎಫ್‌ಎ ಸೂಪರ್ ಡಿವಿಷನ್ ಲೀಗ್‌ನ ಆರಂಭಿಕ ಪಂದ್ಯದಲ್ಲಿ 1-1ರೊಂದಿಗೆ ಡ್ರಾ ಮಾಡಿಕೊಂಡ ಬೆಂಗಳೂರು ಎಫ್‌ಸಿ

ಬಿಡಿಎಫ್‌ಎ ಸೂಪರ್ ಡಿವಿಷನ್ ಲೀಗ್‌ನ ಆರಂಭಿಕ ಪಂದ್ಯದಲ್ಲಿ 1-1ರೊಂದಿಗೆ ಡ್ರಾ ಮಾಡಿಕೊಂಡ ಬೆಂಗಳೂರು ಎಫ್‌ಸಿ

ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಬುಧವಾರ ಬೆಂಗಳೂರು ಡ್ರೀಮ್ ಯುನೈಟೆಡ್ ವಿರುದ್ಧ 1-1ರ ಡ್ರಾದೊಂದಿಗೆ ಬೆಂಗಳೂರು ಎಫ್‌ಸಿ 2021-22ನೇ ಸಾಲಿನ ಬಿಡಿಎಫ್‌ಎ ಸೂಪರ್ ಡಿವಿಷನ್ ಲೀಗ್ ಅಭಿಯಾನವನ್ನು ಆರಂಭಿಸಿದೆ. ಜಗದೀಪ್ ಸಿಂಗ್ (4’) ತಂಡಕ್ಕೆ ಆರಂಭಿಕ ಮುನ್ನಡೆ ನೀಡಿದರೆ, ಎದುರಾಳಿ ತಂಡದ ನಿಮಾ ಲೆಪ್ಚಾ ದ್ವಿತೀಯಾರ್ಧದಲ್ಲಿ ಪೆನಾಲ್ಟಿ (64’) ಮೂಲಕ ಸ್ಕೋರ್ ಅನ್ನು ಸಮಗೊಳಿಸಿದರು.

ಪಂದ್ಯದ ಆರಂಭದಿಂದಲೇ ಬ್ಲೂ ಕೋಲ್ಟ್ಸ್ ಆಟದ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಯಿತು ಮತ್ತು ಮೂರನೇ ನಿಮಿಷದಲ್ಲೆ ಲಾಲ್ತಾಂಗ್ಲಿಯಾನಾ ಅವರು ಡ್ರೀಮ್ ಯುನೈಟೆಡ್ ಗೋಲ್‌ಕೀಪರ್ ನಿಧಿನ್‌ಲಾಲ್ ಮೂಲಕವೀಡು ಅವರ ಮೇಲೆ ಹಾದು ಹೋಗುವಂತೆ ಚೆಂಡನ್ನು ಲಾಬ್ ಮಾಡಿದರು ಆದರೆ ಅವರ ಹೊಡೆತ ಖಾಲಿ ಇದ್ದ ಗೋಲ್‌ಪೋಸ್ಟ್ ಅತ್ತ ಸಾಗದೆ ವಿಫಲಯತ್ನವಾಯ್ತು. ತದನಂತರದ ಒಂದು ನಿಮಿಷದಲ್ಲಿ ಜಗದೀಪ್ ತಪ್ಪನ್ನು ಸರಿಪಡಿಸಿಕೊಂಡಂತೆ, ಬಾಕ್ಸ್‌ನ ಅಂಚಿನಲ್ಲಿ ಚೆಂಡಿನ ಮೇಲೆ ಹಿಡಿತ ಸಾಧಿಸಿ, ಶಾಟ್ ಅನ್ನು ಕರ್ಲಿಂಗ್ ಮಾಡಿದರು. ಇದರೊಂದಿಗೆ ತಂಡವು 1-0 ಮುನ್ನಡೆ ಸಾಧಿಸಿತು.

20 ನೇ ನಿಮಿಷದಲ್ಲಿ, ಲಾಲ್ತಾಂಗ್ಲಿಯಾನಾ ಅವರು ಬಾಕ್ಸ್‌ನೊಳಗೆ ಜಾಗವನ್ನು ಕಂಡುಕೊಂಡರು ಮತ್ತು ನಾಯಕ ಬಿಸ್ವಾ ದರ್ಜಿಗೆ ಕಟ್ ಮಾಡಿದರು, ಅವರ ಲೂಪಿಂಗ್ ಶಾಟ್ ಕ್ರಾಸ್‌ಬಾರ್‌ನ ಮೇಲೆ ಸಾಗಿತು. ಮೊದಲಾರ್ಧದ ಬಹುಪಾಲು ಅವಧಿಯವರೆಗೆ ಹಿನ್ನಡೆಯಲ್ಲಿಯೇ ಇದ್ದರೂ, ಡ್ರೀಮ್ ಯುನೈಟೆಡ್ ಸಮಬಲವನ್ನು ಸಾಧಿಸಲು ಕೆಲ ನಿಮಿಷಗಳ ಅಂತರದಲ್ಲೆ ಎರಡು ಉತ್ತಮ ಅವಕಾಶಗಳು ದೊರೆತಿದ್ದವು. ಅಬ್ದುಲ್ಲಾ ಎಸ್‌ಕೆ ಬಾಕ್ಸ್‌ನಲ್ಲಿ ಇಬ್ಬರು ಡಿಫೆಂಡರ್‌ಗಳಿಂದ ಮುಕ್ತರಾಗಿದ್ದಾಗ ಅವರು ತೆಗೆದುಕೊಂಡ ಹೊಡೆತ ಬಾರ್‌ ಮೇಲೆ ಸಾಗಿತ್ತು, ನಂತರ 39 ನೇ ನಿಮಿಷದಲ್ಲಿ ಟಿ ಹರಿಹರನ್ ಪ್ರಯತ್ನವು ಗೋಲ್ ಪೋಸ್ಟ್ ದಾಟಿ ಮುಂದೆ ಸಾಗಿತು.

ಒಂದು ಗಂಟೆಯ ಆಟದ ಅವಧಿಯ ಗಡಿದಾಟಿದ ನಂತರ ಬಾಕ್ಸ್‌ನಲ್ಲಿ ರಾಬಿನ್ ಯಾದವ್ ಅವರಿಂದ ಹ್ಯಾಂಡ್‌ಬಾಲ್‌ ಆಯ್ತು ಅದಕ್ಕೆ ಉತ್ತರವಾಗಿ ರೆಫರಿ ಸ್ಥಳವನ್ನು ಸೂಚಿಸಿ ಡ್ರೀಮ್ ಯುನೈಟೆಡ್ ಗೆ ಪೆನಾಲ್ಟಿ ಅವಕಾಶ ಕಲ್ಪಿಸಿಕೊಟ್ಟರು. ಇದರ ಸದುಪಯೋಗ ಪಡೆದ ನಿಮಾ ತಮಗೆ ಸಿಕ್ಕ ಅವಕಾಶವನ್ನು ಮಾಣಿಕ್ ಬಲಿಯಾನ್ ಅವರ ಚಾಚಿದ ಕೈಗಳನ್ನು ತಪ್ಪಿಸಿ ಗೋಲ್ ಗಳಿಸಿ 1-1ರ ಸಮಾನ ಅಂಕ ಸಾಧಿಸುವಲ್ಲಿ ಯಶಸ್ವಿಯಾದರು.

ಆರ್ ಸುಹಾಸ್ ಎರಡನೇ ಹಳದಿ ಕಾರ್ಡ್ ಪಡೆದ ಕಾರಣ ಅಂತಿಮ ನಿಮಿಷದಲ್ಲಿ ತಂಡ 10 ಆಟಗಾರರಿಗೆ ಇಳಿಯಿತು, ಡ್ರೀಮ್ ಯುನೈಟೆಡ್ ಹಿಡಿತ ಸಾಧಿಸಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಸಂಖ್ಯಾಬಲ ಬಳಸಿ ಯಶಸ್ವಿಯಾಯಿತು. ಬ್ಲೂಸ್ ಕೋಲ್ಟ್ಸ್ ಅಕ್ಟೋಬರ್ 30 ರಂದು ಎಡಿಇ ಎಫ್ ಸಿ ತಂಡವನ್ನು ಇದೇ ಅಂಗಳದಲ್ಲಿ ಎದುರಿಸಲಿದೆ.

Malcare WordPress Security