ಎಎಫ್‌ಸಿ ಕಪ್‌ನ ಗುಂಪು ಹಂತದ ಆರಂಭಿಕ ಪಂದ್ಯದಲ್ಲಿ ಬೆಂಗಳೂರು ತಂಡ ಎಟಿಕೆ ಮೋಹನ್ ಬಗಾನ್ ವಿರುದ್ಧ 2-0 ಹಿನ್ನಡೆ

ರಾಯ್ ಕೃಷ್ಣ, ಸುಭಾಷಿಶ್ ಬೋಸ್ ಅವರ ಗೋಲ್ ಗಳಿಕೆಯಿಂದಾಗಿ ಬ್ಲೂಸ್ ತಂಡವು ಮಾರ್ಕೊ ಪೆಜೈಯುಲಿ ನೇತೃತ್ವದಲ್ಲಿ ತನ್ನ ಮೊದಲ ಸೋಲಿನ ರುಚಿಯನ್ನು ಕಂಡಿತು.

ಬುಧವಾರದಂದು ಮಾಲ್ಡೀವ್ಸ್‌ನ ನ್ಯಾಷನಲ್ ಸ್ಟೇಡಿಯಂನಲ್ಲಿ 2021ರ ಎಎಫ್‌ಸಿ ಕಪ್‌ನ ಡಿ ಗುಂಪಿನ ಆರಂಭಿಕ ಪಂದ್ಯದಲ್ಲಿ ರಾಯ್ ಕೃಷ್ಣ ಮತ್ತು ಸುಭಾಷಿಶ್ ಬೋಸ್ ಗಳಿಸಿದ ಪಂದ್ಯಾರ್ಧದ ಭಾಗದಲ್ಲಿನ ಅಂಕಗಳು ಮಾರ್ಕೊ ಪೆಜೈಯುಲಿ ನೇತೃತ್ವದ ಬೆಂಗಳೂರು ಎಫ್‌ಸಿಗೆ ಮೊದಲ ಸೋಲನ್ನು ಉಣಬಡಿಸಿದೆ.

ಮಾರ್ಕೊ ಪೆಜೈಯುಲಿ ಕ್ಲಬ್ ಈಗಲ್ಸ್ ಅನ್ನು ಕಳೆದ ಪಂದ್ಯದಲ್ಲಿ ಮಣಿಸಿದ್ದ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಿದರು, ನೊರೆಮ್ ರೋಷನ್ ಸಿಂಗ್ ಮತ್ತು ಅಜಯ್ ಛೇತ್ರಿ ಅವರು ಆಶಿಕ್ ಕುರುಣಿಯನ್ ಮತ್ತು ರೋಹಿತ್ ಕುಮಾರ್ ಬದಲಿಗೆ ಸ್ಥಾನ ಪಡೆದಿದ್ದರು. ಬೇಸಿಗೆಯ ವರ್ಗಾವಣೆಗಳಿಂದಾಗಿ ಬಿಡುವಿಲ್ಲದೆ ಒಪ್ಪಂದಗಳನ್ನು ಮಾಡಿಕೊಂಡ ಮರೈನರ್ಸ್ ತಮ್ಮ ಪಂದ್ಯಕ್ಕಾಗಿ ಅಮರೀಂದರ್ ಸಿಂಗ್, ಹ್ಯೂಗೋ ಬ್ಯೂಮಸ್ ಮತ್ತು ದೀಪಕ್ ಟ್ಯಾಂಗ್ರಿಗೆ ತಂಡದ ಪರ ಪಾದಾರ್ಪಣೆಗೆ ಅವಕಾಶ ಮಾಡಿಕೊಟ್ಟಿತ್ತು. ಮತ್ತು ಹೊಸ ಒಪ್ಪಂದ ಮಾಡಿಕೊಂಡ ಲಿಸ್ಟನ್ ಕೋಲಾಕೋ, ಬಿದ್ಯಾನಂದ ಸಿಂಗ್, ಅಶುತೋಷ್ ಮೆಹ್ತಾ, ರಿಕಿ ಜಾನ್ ಶಾಬಾಂಗ್, ಅಭಿಷೇಕ್ ಸೂರ್ಯವಂಶಿ ಮತ್ತು ಕಿಯಾನ್ ನಾಸಿರಿ ಅಂಗಳದಿಂದ ಹೊರಗುಳಿದಿದ್ದರು.

ಬ್ಲೂಸ್ ತಮ್ಮ ಮೊದಲ ಗೋಲ್ ಯತ್ನವನ್ನು ಪಂದ್ಯಾರಂಭದ ನಾಲ್ಕು ನಿಮಿಷಗಳಲ್ಲೆ ಕಂಡಿತು. ಸುರೇಶ್ ವಾಂಗ್‌ಜಾಮ್ ಮತ್ತು ನವೊರೆಮ್ ರೋಷನ್ ಸಿಂಗ್ ಎಡ ಫ್ಲಾಂಕ್ ಅಲ್ಲಿ ಜೊತೆಯಾತವಾಡುತ್ತ ಕ್ಲೀಟನ್ ಸಿಲ್ವಾ ಅವರನ್ನು ಕಂಡುಕೊಂಡರು, ಬಾಕ್ಸ್‌ನ ಹೊರಗೆ ಧಾವಿಸಿ ಬಂದ ಜಯೇಶ್ ರಾಣೆಗೆ ತಲುಪಿಸಿದರು ಮತ್ತು ಸುಮಾರು 35ಯಾರ್ಡ್ ದೂರದಲ್ಲಿಂದ ಮಾಡಿದ ಮಿಡ್ ಫೀಲ್ಡರ್ ನ ಗೋಲ್ ಯತ್ನ ಪೋಸ್ಟ್‌ ಮೇಲೆ ಹಾದು ಹೋಯ್ತು.

ಎಟಿಕೆಎಂಬಿ ತನ್ನ ಮೊದಲ ಅಂಕ ಪಡೆಯುವ ಅವಕಾಶವನ್ನು ಪಂದ್ಯದ ಮೊದಲಾರ್ಧದ ಮಧ್ಯದಲ್ಲಿ ಪಡೆಯಿತು, ಬೌಮಸ್ ಪ್ರತಿ-ದಾಳಿಯಲ್ಲಿ ಆಡತೊಡಗಿದರು, ಸುರೇಶ್ ಸವಾಲನ್ನು ತಪ್ಪಿಸಿಕೊಂಡು ಗೋಲ್ ಯತ್ನ ಮಾಡಿದರು ಅದಕ್ಕೆ ಪ್ರತಿರೋಧವಾಗಿ ಗುರ್‌ಪ್ರೀತ್ ಸಿಂಗ್ ಸಂಧು ಬಲವಾಗಿ ಕೈ ಅಡ್ಡಗಟ್ಟಿ ಅಂಕ ಪಡೆಯದಂತೆ ತಡೆದರು.

ಆಟದ ಅರ್ಧ ಗಂಟೆಯ ಗಡಿ ದಾಟುತ್ತಿದ್ದಂತೆ, ಮೆರೈನರ್ಸ್ ಮತ್ತೆ ಮುಕ್ತವಾಗಿ ಆಡಲಾರಂಭಿಸಿದರು, ಬೌಮಸ್ ಅವರು ಕೃಷ್ಣ ಅವರೊಂದಿಗೆ ಎಡ ಪಾರ್ಶ್ವದಲ್ಲಿ ಆಡಿದರು. ಫಿಜಿ ಆಟಗಾರ ಪಾಸ್ ಪ್ರಯತ್ನದಲ್ಲಿ ಡೇವಿಡ್ ವಿಲಿಯಮ್ಸ್‌ಗೆ ಚೆಂಡನ್ನು ತಲುಪಿಸಲು ಯತ್ನಿಸಿದರು, ಆದರದು ಫ್ರೆಂಚ್ ಆಟಗಾರನನ್ನು ತಲುಪಿತು, ಆದರೆ ಆ ಪ್ರಯತ್ನ ಗುರ್‌ಪ್ರೀತ್ ನ ಚಾಚಿದ ಕಾಲನ್ನು ತಡೆಹಿಡಿಯಿತು. 39 ನೇ ನಿಮಿಷದಲ್ಲಿ ಆಂಟೋನಿಯೊ ಹಬಾಸ್ ಪಡೆಯ ಮೂರು ವಿದೇಶಿ ಆಟಗಾರರ ಜೊತೆಯಾಟ ಅಂಕ ತಂದುಕೊಟ್ಟಿತು. ಬೌಮಸ್ ಕಾರ್ನರ್‌ನಿಂದ ಕಾರ್ಲ್ ಮೆಕ್‌ಹಗ್ ಗೆ ಹೆಡರ್ ನೀಡಿದರು ಅದನ್ನು ಕಡಿಮೆ ಅಂತರದಲ್ಲೇ ಪಡೆದ ರಾಯ್ ಕೃಷ್ಣ ಗೋಲ್‌ನತ್ತ ತಿರುಗಿಸಿ ಸ್ಪರ್ಶಕೊಟ್ಟರು. ತಡೆಹಿಡಿಯುವ ಅವಕಾಶದಲ್ಲಿ ಗುರ್ಪ್ರೀತ್ ಸಿಂಗ್ ಸಂಧು ಆಸಹಾಯಕರಾಗಿದ್ದರು.

ಆಟಕ್ಕೆ ಮರಳಲು ಯೋಜನೆಗಳನ್ನು ಹೂಡುತ್ತ ಬ್ಲೂಸ್ ಒಂದು ಬದಲಾವಣೆಯನ್ನು ಮಾಡಿತ್ತು ದ್ವಿತೀಯಾರ್ಧಕ್ಕೆ ಮುನ್ನ ಅಜಯ್ ಛೇತ್ರಿ ಬದಲಿಗೆ ಡ್ಯಾನಿಶ್ ಫಾರೂಕ್ ಅಂಗಳಕ್ಕಿಳಿದರು ಹೀಗಿರುವಾಗಲೇ ತಂಡಕ್ಕೆ ಮತ್ತೊಂದು ಆಘಾತ ಕಾದಿತ್ತು. ಪಂದ್ಯ ಮರು ಆರಂಭವಾದ ಕೆಲವೇ ಸೆಕೆಂಡುಗಳಲ್ಲಿ ಎದುರಾಳಿ ಪಡೆ ತಮ್ಮ ಮುನ್ನಡೆಯನ್ನು ದ್ವಿಗುಣಗೊಳಿಸಿಕೊಂಡರು, ವಿಲಿಯಮ್ಸ್ ಬಾಕ್ಸ್ ನ ಮಧ್ಯದಲ್ಲಿ ಸುಭಾಷಿಶ್ ಬೋಸ್ ಅವರನ್ನು ಕಂಡುಕೊಂಡರು, ಅವರು ಡ್ಯಾನಿಶ್ ಅತ್ತ ಚೆಂಡನ್ನು ತಿರುಗಿಸಿದರು ಮತ್ತು ಚೆಂಡು ದೂರದ ಕಾರ್ನರ್ ತಲುಪಿ ಅಂಕ ದೊರೆಯಿತು.

BFC ಯ ಎರಡನೇ ಅವಧಿಯಲ್ಲಿ ಮೊದಲ ಅಂಕ ಪಡೆಯುವ ಅವಕಾಶ 52 ನೇ ನಿಮಿಷದಲ್ಲಿ ಬಂದಿತು, ಕ್ಲೀಟನ್ ಸಿಲ್ವಾ ಬಾಕ್ಸ್ ನ ತುದಿಯಿಂದ ಮಾಡಿದ ಅದ್ಭುತ ಗೋಲ್ ಯತ್ನವು ಅಮರೀಂದರ್ ಅವರ ಉತ್ತಮ ಗೋಲ್ ಉಳಿತಾಯದ ಯತ್ನಕ್ಕೆ ಹೆಸರಾಯ್ತು. ಎಟಿಕೆಎಂಬಿ ತಾವು ಗಳಿಸಿದ್ದ ಉತ್ತಮ ಮುನ್ನಡೆಯ ಕಾಯ್ದುಕೊಳ್ಳುವಲ್ಲಿ ಆರಾಮದಾಯಕ ಆಟವಾಡಿದರೆ, ಬ್ಲೂಸ್ ಪಡೆ ಆಟದ 68% ಅಷ್ಟು ಪ್ರಾಬಲ್ಯವನ್ನು ತನ್ನ ಸ್ವಾಧೀನದಲ್ಲಿ ಇರಿಸಿಕೊಂಡಿತ್ತು.

ಬದಲಿ ಆಟಗಾರ ಲಿಯಾನ್ ಅಗಸ್ಟೀನ್ ತನ್ನ ಚತುರ ಆಟವನ್ನು ತೋರುವ ಹೆಜ್ಜೆಗಳನ್ನಿಡುತ್ತಿರುವಾಗ, 77 ನೇ ನಿಮಿಷದಲ್ಲಿ, ಉತ್ತಮ ಓಟವನ್ನು ಗಳಿಸಿಕೊಂಡಿದ್ದರು. ಇದಕ್ಕೆ ಸವಾಲಾಗಿ ಸುಮಿತ್ ರಾಠಿ, ಓಟದಲ್ಲಿದ್ದ ಲಿಯಾನ್ ಅನ್ನು ತಡೆಗಟ್ಟಿ ಯೆಲ್ಲೋ ಕಾರ್ಡ್ ಪಡೆದರು. ಆ ಕಾರಣ ಫ್ರೀ-ಕಿಕ್‌ ಅವಕಾಶ ಪಡೆದ ನಂತರ ಕ್ಲಿಟನ್‌ ಗೋಲ್ ಯತ್ನ ಮಾಡಿದರು ಆದರೆ ಅದು ಅಮರೀಂದರ್‌ಗೆ ಯಾವುದೇ ತೊಡಕಾಗಲಿಲ್ಲ ಕಾರಣ ಚೆಂಡು ಗುರಿಗೆ ದೂರವಾಗಿ ಸರಿದಿತ್ತು.

ಆಗಸ್ಟ್ 21 ರಂದು ಬ್ಲೂಸ್ ತಮ್ಮ ಮುಂದಿನ ಗುಂಪು ಹಂತದ ಪಂದ್ಯದಲ್ಲಿ ಇದೇ ಅಂಗಳದಲ್ಲಿ ಬಶುಂಧರಾ ಕಿಂಗ್ಸ್ ವಿರುದ್ಧ ಪಂದ್ಯವನ್ನು ಆಡಲಿದೆ.

Malcare WordPress Security