ಮಾರ್ಕೊ ಪೆಜೈಯೊಲಿ ಮಾರ್ಗದರ್ಶನದಲ್ಲಿ ಏಳು ನೂತನ ಆಟಗಾರರೊಂದಿಗಿನ ಒಪ್ಪಂದದ ನಂತರ ಮಾಲ್ಡೀವ್ಸ್‌ನಲ್ಲಿ ಕ್ಲಬ್ ಈಗಲ್ಸ್ ವಿರುದ್ಧ ಸೆಣೆಸಲು ಬ್ಲೂಸ್ ತಯಾರಿ ನಡೆಸುತ್ತಿದೆ.
ಬೆಂಗಳೂರು ಎಫ್‌ಸಿ ಸೋಮವಾರದಂದು, ಮಾಲ್ಡೀವಿಯನ್ ತಂಡವಾದ ಕ್ಲಬ್ ಈಗಲ್ಸ್ ವಿರುದ್ಧ ಆಡಲಿರುವ 2021 ರ ಎಎಫ್‌ಸಿ ಕಪ್ ಪ್ಲೇಆಫ್ ಪಂದ್ಯದ ಹಿನ್ನೆಲೆಯಲ್ಲಿ 29 ಆಟಗಾರರ ತಂಡವನ್ನು ಪ್ರಕಟಿಸಿದೆ. ನಾಯಕ ಸುನೀಲ್ ಛೇತ್ರಿ ಅವರಿಗೆ ಹೊಸ ಏಳು ಆಟಗಾರರು ಜೊತೆಯಾಗಲಿದ್ದಾರೆ.
ಡಿಫೆಂಡರ್ಸ್ ಆದ ಅಲನ್ ಕೋಸ್ಟಾ, ಯೋರಂಡು ಮುಸಾವು ಕಿಂಗ್ ಮತ್ತು ಬ್ರೆಜಿಲಿಯನ್ ಸ್ಟ್ರೈಕರ್ ಕ್ಲೀಟನ್ ಸಿಲ್ವಾ ಬ್ಲೂಸ್‌ನ ವಿದೇಶಿ ಆಟಗಾರರಾದರೆ, ತಂಡದಲ್ಲಿ ಒಪ್ಪಂದ ಮಾಡಿಕೊಳ್ಳಲಾದ ಆರು ಹೊಸ ಭಾರತೀಯ ಆಟಗಾರರಾದ ಹರ್ಮನ್‌ಪ್ರೀತ್ ಸಿಂಗ್, ಜಯೇಶ್ ರಾಣೆ, ಬಿದ್ಯಾಶಾಗರ್ ಸಿಂಗ್, ಸಾರ್ಥಕ್ ಗೊಲುಯಿ, ಡ್ಯಾನಿಶ್ ಫಾರೂಕ್ ಮತ್ತು ರೋಹಿತ್ ಕುಮಾರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಕ್ಲಬ್‌ನ ಮೀಸಲು ತಂಡದ ಪದವೀಧರರಲ್ಲಿ ಗೋಲ್‌ಕೀಪರ್ ಶರೋನ್ ಪಡಾಟಿಲ್, ಮಿಡ್‌ಫೀಲ್ಡರ್ ಮುಹಮ್ಮದ್ ಇನಾಯತ್ ಹಾಗೂ ಆಕಾಶದೀಪ್ ಸಿಂಗ್ ಅವರೊಂದಿಗೆ ಬ್ಲೂಸ್‌ನ BDFA ಸೂಪರ್ ಡಿವಿಷನ್ ಲೀಗ್ ಅಭಿಯಾನದಲ್ಲಿ ಅಗ್ರ ಅಂಕ ಪಡೆದ ರ್ಸ್ಟ್ರೈಕರ್ ಶಿವಶಕ್ತಿ ನಾರಾಯಣನ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.
ಆಗಸ್ಟ್ 15 ರಂದು ಮಾಲ್ಡೀವ್ಸ್‌ನ ನ್ಯಾಷನಲ್ ಕ್ರೀಡಾಂಗಣದಲ್ಲಿ ಕ್ಲಬ್ ಈಗಲ್ಸ್ ವಿರುದ್ಧ ಬ್ಲೂಸ್ ತನ್ನ ಪ್ಲೇಆಫ್ ಪಂದ್ಯ ಆಡಲಿದ್ದಾರೆ.
ಪ್ಲೇಆಫ್‌ನ ಗೆಲುವು ಬ್ಲೂಸ್ ಅನ್ನು ಗ್ರೂಪ್ ಡಿಗೆ ಕಳುಹಿಸುತ್ತದೆ, ಈ ಗುಂಪಿನಲ್ಲಿ ಇಂಡಿಯನ್ ಸೂಪರ್ ಲೀಗ್ ತಂಡ ಎಟಿಕೆ ಮೋಹನ್ ಬಗಾನ್, ಬಸುಂಧರಾ ಕಿಂಗ್ಸ್ (ಬಾಂಗ್ಲಾದೇಶ) ಮತ್ತು ಮಜಿಯಾ ಎಸ್ & ಆರ್‌ಸಿ (ಮಾಲ್ಡೀವ್ಸ್) ತಂಡಗಳೂ ಇರಲಿವೆ.
ಗೋಲ್‌ಕೀಪರ್ಸ್: ಗುರುಪ್ರೀತ್ ಸಿಂಗ್ ಸಂಧು, ಲಲ್ತುಮ್ಮಾವಿಯಾ ರಾಲ್ಟೆ, ಲಾರಾ ಶರ್ಮಾ, ಶರೋನ್ ಪಡಾಟಿಲ್.
ಡಿಫೆಂಡರ್ಸ್: ಪ್ರತೀಕ್ ಚೌಧರಿ, ವುಂಗಯಮ್ ಮುರಾಂಗ್, ಅಜಿತ್ ಕುಮಾರ್, ಆಶಿಕ್ ಕುರುಣಿಯನ್, ಪರಾಗ್ ಶ್ರೀವಾಸ್, ಯೋರಂಡು ಮುಸಾವು-ಕಿಂಗ್, ಬಿಸ್ವಾ ದರ್ಜಿ, ಅಲನ್ ಕೋಸ್ಟಾ, ಸಾರ್ಥಕ್ ಗೊಲುಯಿ
ಮಿಡ್‌ಫೀಲ್ಡರ್ಸ್: ಸುರೇಶ್ ವಾಂಗ್ಜಾಮ್, ನಮಗ್ಯಾಲ್ ಭುಟಿಯಾ, ಜಯೇಶ್ ರಾಣೆ, ಡ್ಯಾನಿಶ್ ಫಾರೂಕ್, ರೋಹಿತ್ ಕುಮಾರ್, ಮುಹಮ್ಮದ್ ಇನಾಯತ್, ಅಜಯ್ ಛೇತ್ರಿ
ಫಾರ್ವರ್ಡ್ಸ್: ಸುನಿಲ್ ಛೇತ್ರಿ, ಉದಾಂತ ಸಿಂಗ್, ಕ್ಲಿಟನ್ ಸಿಲ್ವಾ, ಲಿಯಾನ್ ಅಗಸ್ಟೀನ್, ನೊರೆಮ್ ರೋಷನ್ ಸಿಂಗ್, ಬಿದ್ಯಾಶಾಗರ್ ಸಿಂಗ್, ಶಿವಶಕ್ತಿ ನಾರಾಯಣನ್, ಆಕಾಶದೀಪ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್
ಮುಖ್ಯ ತರಬೇತುದಾರ: ಮಾರ್ಕೊ ಪೆಜೈಯೊಲಿ
ಸಹಾಯಕ ಕೋಚ್: ನೌಶಾದ್ ಮೂಸಾ