4 ಗೋಲ್ ಗಳಿಸಿದ ಆಕಾಶದೀಪ್, ಬೆಂಗಳೂರು ಕೋಲ್ಟ್ಸ್ ಗೆ ಸ್ಟುಡೆಂಟ್ಸ್ ಯೂನಿಯನ್ ವಿರುದ್ಧ 5-2 ಅಂತರದ ಗೆಲುವು

ಬಿಡಿಎಫ್‌ಎ ಸೂಪರ್ ಡಿವಿಷನ್ ಲೀಗ್‌ನಲ್ಲಿ 5-2ರ ಗೆಲುವಿನೊಂದಿಗೆ ಸ್ಟೂಡೆಂಟ್ಸ್ ಯೂನಿಯನ್ ತಂಡವನ್ನು ಹಿಮ್ಮೆಟ್ಟಿಸಿದ ಬೆಂಗಳೂರು ಎಫ್‌ಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ.

ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಸ್ಟೂಡೆಂಟ್ಸ್ ಯೂನಿಯನ್ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ 5-2 ರ ಅಂತರದ ಗೆಲುವಿನೊಂದಿಗೆ ಬಿಡಿಎಫ್‌ಎ ಸೂಪರ್ ಡಿವಿಷನ್ ಲೀಗ್‌ನಲ್ಲಿ ಬೆಂಗಳೂರು ಎಫ್‌ಸಿ ಅಜೇಯವಾಗಿದ್ದು ತಮ್ಮ ನಾಲ್ಕನೇ ಗೆಲುವನ್ನು ಸಾಧಿಸಿದೆ. ಆಕಾಶ್‌ದೀಪ್ ಸಿಂಗ್ ಅವರು ಸಂದೇಶ್ ಭೋಯಿಟ್‌ ನೇತೃತ್ವದ ತಂಡದಲ್ಲಿ ಅತ್ಯುತ್ತಮ ಪ್ರದರ್ಶನದೊಂದಿಗೆ ದಿನದ ಸ್ಟಾರ್ ಆಗಿದ್ದರು, ತಂಡದ ಪರ ಅವರ ನಾಲ್ಕು ಗೋಲುಗಳು ಬಿ ಎಫ್ ಸಿ ಗೆ ಪೂರ್ಣ ಮೂರು ಪಾಯಿಂಟ್‌ಗಳನ್ನು ತೆಗೆದುಕೊಳ್ಳುವುದರೊಂದಿಗೆ ಲೀಗ್ನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ.

ಎರಡೂ ತಂಡಗಳು ತಮ್ಮನ್ನು ತಾವು ಅಂಗಳದಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಎದುರಾಳಿಯ ಮೇಲೆ ಒತ್ತಡ ಹೇರಲು ಉತ್ಸುಕರಾಗಿದ್ದಂತೆ ಕಂಡುಬಂದು ಉದ್ರಿಕ್ತ ಆರಂಭಕ್ಕೆ ಇಳಿದಿದ್ದರು. ಕೇವಲ ಆರು ನಿಮಿಷಗಳ ಆರಂಭಿಕ ಆಟದ ನಂತರ, ಜಪಾನಿ ಸ್ಟ್ರೈಕರ್ ತಾಜ್ಕಿ ಯೋಶಿಡಾ ಮೂಲಕ ಸ್ಟೂಡೆಂಟ್ಸ್ ಯೂನಿಯನ್ ಮುನ್ನಡೆ ಸಾಧಿಸಿತು. ಮುರ್ಲಿ ಶ್ರೀನಿವಾಸ್ ಬಾಕ್ಸ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ ಅವರೊಂದಿಗೆ ದ್ವಂದ್ವಯುದ್ಧವನ್ನು ಗೆದ್ದರು ಮತ್ತು ಚೆಂಡನ್ನು ಯೋಶಿಡಾಗೆ ವರ್ಗಾಯಿಸಿದರು, ದೀಪೇಶ್ ಚೌಹಾನ್ ಗೋಲ್ ಅತ್ತ ಸಾಗಿದ್ದ ಚೆಂಡನ್ನು ತಡೆದರೂ ಗೋಲ್‌ಗೆ ನುಸುಳಲು ಆ ಹೊಡೆತಕ್ಕೆ ಸಾಕಷ್ಟು ಶಕ್ತಿ ಇತ್ತು.

ನಾಲ್ಕು ನಿಮಿಷಗಳಿಗಿಂತಲೂ ಕಡಿಮೆ ಸಮಯದಲ್ಲಿಯೇ ಬ್ಲೂ ಕೋಲ್ಟ್ಸ್ ಇದಕ್ಕೆ ಪ್ರತ್ಯುತ್ತರ ನೀಡಿದರು. ಅಂಗಳದಲ್ಲಿ ಆಕಾಶ್‌ದೀಪ್‌ನನ್ನು ಟ್ಯಾಕ್ಲ್‌ ಮಾಡುವ ಅವಸರದಲ್ಲಿ ಕೆಳಕ್ಕೆ ಉರುಳುವಂತೆ ಎದುರಾಳಿ ತಂಡದ ಆಟಗಾರ ಮಾಡಿದಾಗ, ರೆಫರಿ ಪೆನಾಲ್ಟಿಗೆ ಸ್ಥಳವನ್ನ ಸೂಚಿಸಿದರು. ವಿಂಗರ್ ನಂತರದಲ್ಲಿ ಯಾವುದೇ ತಪ್ಪನ್ನು ಮಾಡಲಿಲ್ಲ, ಕೋಲ್ಟ್ಸ್ ತಮ್ಮ ಅಂತರವನ್ನು ಸರಿಯಾಗಿಸಿಕೊಳ್ಳಲು ಈ ಪೆನಾಲ್ಟಿ ನೆರವಾಯ್ತು.

ಎಸ್‌ಯುಎಫ್‌ಸಿ ಡಿಫೆಂಡರ್‌ಗಳ ಹೆಗಲ ಮೇಲೆಯೇ ಅಂಗಳದಲ್ಲಿ ಅರ್ಧದಷ್ಟು ಆಟವಾಡಿದ ಶಿವಶಕ್ತಿ ಅಂತಿಮವಾಗಿ ಥೋಯಿ ಸಿಂಗ್‌ನ ಚೆಂಡನ್ನು ಪಡೆಯಲು ಆಫ್‌ಸೈಡ್ ಟ್ರಾಪ್ ಅನ್ನು ಮುರಿದು, ಅಭಿಷೇಕ್ ರಮೇಶ್ ತನ್ನ ಸಾಲಿನಿಂದ ಹೊರಬರುವುದನ್ನು ಕಂಡು, ಸ್ಟ್ರೈಕರ್ ಪರಿಪೂರ್ಣ ಬಲದೊಂದಿಗೆ ಚೆಂಡನ್ನು ದೂರದ ಪೋಸ್ಟ್ ಮೂಲೆಯತ್ತ ತಳ್ಳಿದರು. ವಿರಾಮಕ್ಕೆ ಇನ್ನೂ ಒಂದು ನಿಮಿಷದ ಆಟ ಇರುವಾಗಲೇ ಗೋಲ್ ಪಡೆದು ತಂಡಕ್ಕೆ ಮುನ್ನಡೆ ತಂದಿಟ್ಟರು.

ದ್ವಿತೀಯಾರ್ಧದಲ್ಲಿ ತಂಡ ಮತ್ತೊಮ್ಮೆ ಲಯ ಕಂಡುಕೊಳ್ಳಲು ಸ್ವಲ್ಪ ಸಮಯ ಬೇಕಾಯ್ತು ಮತ್ತು ಪುನರಾರಂಭದ ನಾಲ್ಕು ನಿಮಿಷಗಳ ನಂತರ, ಶಿವಶಕ್ತಿ ಗೋಲ್ ಅವಕಾಶಕ್ಕಾಗಿ ಚೆಂಡನ್ನು ಒದಗಿಸಿಕೊಟ್ಟರು. ಪೆಟ್ಟಿಗೆಯ ತುದಿಯಲ್ಲಿ ಚೆಂಡನ್ನು ಸ್ವೀಕರಿಸಿದ ಸ್ಟ್ರೈಕರ್ ಆಕಾಶ್‌ದೀಪ್‌ ತಮ್ಮ ಚಾಣಾಕ್ಷ ಆಟದ ತುಣುಕನ್ನು ಬಿತ್ತರಿಸಿ, ಅಭಿಷೇಕ್ ಪ್ರತಿಕ್ರಿಯಿಸುವ ಮೊದಲೇ ಬಲವಾದ ಹೊಡೆತದೊಂದಿಗೆ ಪೋಸ್ಟ್ ಹಿಂಭಾಗಕ್ಕೆ ಚೆಂಡನ್ನು ಒಯ್ದು ಅಂಕ ಗಳಿಸಿದರು. ಆಕಾಶ್‌ದೀಪ್ ಕೆಲವೇ ಕ್ಷಣಗಳಲ್ಲಿ ತನ್ನ ಹ್ಯಾಟ್ರಿಕ್ ಪೂರ್ಣಗೊಳಿಸಿದರು. ಶಿವಶಕ್ತಿಯ ಕ್ರಾಸ್ ತನ್ನತ್ತ ಬಂದಾಗ, ಚೆಂಡನ್ನು ಸ್ಟೂಡೆಂಟ್ಸ್ ಯೂನಿಯನ್ ತಂಡದ ಗೋಲ್ ಕೀಪರ್ ಅನ್ನು ಹಿಂದಿಕ್ಕುವ ಮೂಲಕ ತಂಡಕ್ಕೆ 4-1ರ ಗೋಲುಗಳ ಅಂತರ ತಂದುಕೊಡುವುದರಲ್ಲಿ ಸಫಲರಾದರು.

ಥೋಯಿ ಸಿಂಗ್ ಪೋಸ್ಟ್ ಬಳಿ ಪ್ರವೇಶಿಸಿದ ನಂತರ ಚಿಕ್ಕ ಪಾಸ್‌ ನೀಡುವುದರೊಂದಿಗೆ ಆಕಾಶ್‌ದೀಪ್ ಪಂದ್ಯದಲ್ಲಿನ ತನ್ನ ನಾಲ್ಕನೇ ಗೋಲ್ ಅನ್ನು ಪೋಸ್ಟ್ ನ ಒಳಗಿನಿಂದ ಮುಕ್ತಾಯಗೊಳಿಸಿದರು. ಪಂದ್ಯದ ಮುಕ್ತಾಯದ ಹಂತದಲ್ಲಿ, ಎದುರಾಳಿ ತಂಡದ ಪರ ಸಂಜಯ್ ಎಸ್ ಒಂದು ಗೋಲ್ ಗಳಿಸುವ ಮುಖೇನ ಅಂತರವನ್ನು 5-2ಕ್ಕೆ ಕಡಿಮೆ ಮಾಡಿದರದ್ರೂ ಅದು ಬಹಳ ತಡವಾಗಿತ್ತು. ಪೋಸ್ಟ್ ಹೊರಗೆ ಶಿವಶಕ್ತಿಯೊಂದಿಗಿನ ಅಹಿತಕರವಾದ ವರ್ತನೆಯಿಂದ ಎದುರಾಳಿ ತಂಡದ ಬದಲಿ ಕೀಪರ್ ಜೀವನ್ ಕುಮಾರ್ ಅವರಿಗೆ ಅಂಗಳದಿಂದ ಹೊರ ನಡೆಯಲು ಸೂಚನೆ ನೀಡಲಾಗಿ, ಯೂನಿಯನ್ ಕಷ್ಟಕರವಾದ ಸಂಧರ್ಭದಲ್ಲಿ ಹತ್ತು ಆಟಗಾರರೊಂದಿಗೆ ಪಂದ್ಯವನ್ನು ಆಡಬೇಕಾಯ್ತು.

ಫೆಬ್ರವರಿ 4 ರಂದು ಎಡಿಇ ಎಫ್‌ಸಿ ವಿರುದ್ಧ ಬ್ಲೂ ಕೋಲ್ಟ್ಸ್ ಸೆಣೆಸಲಿದ್ದಾರೆ.

Malcare WordPress Security