ತಿಲಕ್ ಮೈದಾನದಲ್ಲಿ ಸಮಾನ ಅಂಕಗಳಿಸಲು ಅವಕಾಶ ನೀಡಿದ ಬ್ಲೂಸ್ ತಂಡಕ್ಕೆ ಕೊನೆ ನಿಮಿಷಗಳಲ್ಲಿ ಬದಲಾದ ಪಂದ್ಯದ ಫಲಿತಾಂಶ.
ಗೋವಾದ ತಿಲಕ್ ಮೈದಾನದಲ್ಲಿ ಗುರುವಾರ ನೌಶಾದ್ ಮೂಸಾ ಹುಡುಗರು 2 ಗೋಲ್ಗಳ ಮುನ್ನಡೆಯನ್ನು ಸುಲಭವಾಗಿ ಕಡೆಯ ಕ್ಷಣಗಳಲ್ಲಿ ಬಿಟ್ಟುಕೊಟ್ಟ ಕಾರಣ ಬೆಂಗಳೂರು ಎಫ್ ಸಿ – ಹೈದರಾಬಾದ್ ನಡುವಿನ ಪಂದ್ಯ 2-2 ರ ಗೋಲ್ನೊಂದಿಗೆ ಡ್ರಾ ಆಯ್ತು. ಸುನಿಲ್ ಛೇತ್ರಿ ಮತ್ತು ಲಿಯಾನ್ ಅಗಸ್ಟೀನ್ ಅವರ ಗೋಲುಗಳು ಬ್ಲೂಸ್‌ಗೆ 2-0 ಮುನ್ನಡೆ ತಂದುಕೊಟ್ಟವು, ಆದರೆ ಆತಿಥೇಯ ತಂಡದ ಅರಿಡನೆ ಸಂತನ ಮತ್ತು ಬದಲಿ ಆಟಗಾರ ಫ್ರಾನ್ ಸಂದಾಜಾ ಅವರ ಗೋಲುಗಳೊಂದಿಗೆ ಕೊನೆ ಕ್ಷಣಗಳಲ್ಲಿ ಪಂದ್ಯದ ಹಿಡಿತ ಸಾಧಿಸಿ ಫಲಿತಾಂಶ ಡ್ರಾ ಆಗುವಂತೆ ಮಾಡಿದರು.
ನೌಶಾದ್ ಮೂಸಾ ಒಡಿಶಾ ಎಫ್‌ಸಿ ವಿರುದ್ಧ ಆಡಿದ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಿದರು. ಹರ್ಮನ್‌ಜೋತ್ ಖಬ್ರಾ ಅವರು ಪರಾಗ್ ಶ್ರೀವಾಸ್ ಅವರನ್ನು ಡಿಫೆನ್ಸ್ ಅಲ್ಲಿ ಬದಲಾಯಿಸಿದರೆ, ಅಮಯ್ ಮೊರಾಜ್ಕರ್ ಬದಲಿಗೆ ಲಿಯಾನ್ ಅಗಸ್ಟೀನ್ ಅವರು ಆವೃತ್ತಿಯಲ್ಲಿ ತಮ್ಮ ಮೊದಲ ಆರಂಭವನ್ನು ಮಾಡಿದರು. ಮ್ಯಾನ್ಯುಯೆಲ್ ಮಾರ್ಕ್ವೆಜ್ ರೋಕಾ ನೇತೃತ್ವದ ಹೈದರಾಬಾದ್ ತಂಡದಲ್ಲಿ ಎರಡು ಬದಲಾವಣೆಗಳು ಕಂಡುಬಂದವು, ಜೊವಾವೊ ವಿಕ್ಟರ್ ಮತ್ತು ಲಿಸ್ಟನ್ ಕೊಲೊಕಾವೊ ರೋಲ್ಯಾಂಡ್ ಆಲ್ಬರ್ಗ್ ಮತ್ತು ಮೊಹಮ್ಮದ್ ಯಾಸಿರ್ ಅವರ ಬದಲಿಗೆ ತಂಡದಲ್ಲಿ ಸ್ಥಾನ ಪಡೆದರು.
ಜುವಾನ್ ಗೊನ್ಜಾಲೆಜ್ ಪಂದ್ಯದ ಆರಂಭದಲ್ಲಿ ಮಂಡಿರಜ್ಜುವಿನ ಸಮಸ್ಯೆಯಿಂದ ಬಳಲುತ್ತಿದ್ದಂತೆ ತೋರುದಾಗ ಪರಾಗ್ ಶ್ರೀವಾಸ್ ಅವರನ್ನು ಬದಲಿ ಆಟಗಾರನಾಗಿ ತಂಡದಲ್ಲಿ ಕರೆತರಬೇಕಾಯ್ತು. ಆರಂಭಿಕ ಆಘಾತದ ಹಿನ್ನೆಲೆಯಲ್ಲೂ, ಬೆಂಗಳೂರು ಯೋಜನೆಯಂತೆ ದಾಳಿ ಮಾಡಿ ಕೇವಲ ಒಂಬತ್ತು ನಿಮಿಷಗಳ ಆಟದಲ್ಲಿಯೇ 1 ಗೋಲ್ ಸಿಡಿಸಿ ಮುನ್ನಡೆ ಸಾಧಿಸಿತು. ಫ್ರೀ ಕಿಕ್ ಮೂಲಕ ಕ್ಲೀಟನ್ ಸಿಲ್ವಾ ಗೋಲ್ನತ್ತ ಖಚಿತ ಹೊಡೆತದೊಂದಿಗೆ ಪ್ರಯತ್ನಿಸಿದರೆ ಅದಕ್ಕೆ ಅಲ್ಪ ಮಾರ್ಗದರ್ಶನವಿತ್ತು ಗೋಲ್ ಆಗಿ ಪರಿವರ್ತಿಸಿದ ಶ್ರೇಯ ನಾಯಕ ಛೇತ್ರಿಗೆ ಸೇರಿತು. ಇದರೊಂದಿಗೆ ಬ್ಲೂಸ್ 1-0 ಅಂತರದಿಂದ ಮೇಲಕ್ಕೇರಿತು. ಕೇವಲ ಮೂರು ನಿಮಿಷಗಳ ನಂತರ ಮುನ್ನಡೆಯನ್ನು ದ್ವಿಗುಣಗೊಳಿಸುವ ಅವಕಾಶ ಕ್ಲೀಟನ್‌ಗೆ ಮತ್ತೊಮ್ಮೆ ಸಿಕ್ಕಿತು, ಆದರೆ ಕೋನದಿಂದ ಗೋಲ್ನತ್ತ ಹೊಡೆತ ಸಾಧಿಸಿದ ಬ್ರೆಜಿಲಿಯನ್ ಸೈಡ್ ನೆಟಿಂಗ್‌ನಲ್ಲಿ ಚೆಂಡು ಸೇರುವಂತೆ ಮಾಡಿದರು ಹಾಗಾಗಿ ಗೋಲ್ ಸಿಗಲಿಲ್ಲ.
ಬ್ರೆಜಿಲ್ ಆಟಗಾರ ಬ್ಲೂಸ್‌ನ ಎಲ್ಲ ಉತ್ತಮವಾದ ವಿಷಯಗಳಲ್ಲೂ ಕೇಂದ್ರಬಿಂದುವಾಗಿದ್ದರು ಮತ್ತು 21 ನೇ ನಿಮಿಷದಲ್ಲಿ ಸುರೇಶ್ ವಾಂಗ್ಜಾಮ್ ತಮ್ಮ ಆವೃತ್ತಿಯ ಮೊದಲ ಗೋಲ್ ಗಳಿಸುವ ಅವಕಾಶಕ್ಕೆ ಅಡಿಪಾಯ ಹಾಕಿಕೊಟ್ಟರು. ಅಂಗಳದ ಎಡಭಾಗದಲ್ಲಿ ಚೆಂಡನ್ನು ಪಡೆದು, ಕ್ಲೀಟನ್ ಹೈದರಾಬಾದ್ ಪೆಟ್ಟಿಗೆಯ ಹೊರಗೆ ವಾಂಗ್‌ಜ್ಯಾಮ್ ಗೆ ಕ್ರಾಸ್ ನೀಡಿದರು. ಆದರೆ ಮಿಡ್‌ಫೀಲ್ಡರ್ ಸುರೇಶ್ ದೂರದಿಂದ ಮಾಡಿದ ಪ್ರಯತ್ನವು ಪೋಸ್ಟ್‌ನ ಹೊರಗೆ ಇಂಚುಗಳ ದೂರದಲ್ಲಿ ಸಾಗಿತು.
ಲೈನ್‌ಮ್ಯಾನ್ ತನ್ನ ಧ್ವಜವನ್ನು ತೋರಿದ ಹೊರತಾಗಿಯೂ ಆಫ್‌ಸೈಡ್ ಅಲ್ಲಿ ಆಟವಾಡುವುದನ್ನು ತಡೆಯಲು ರೆಫರಿ ವಿಫಲವಾದ ನಂತರ 27 ನೇ ನಿಮಿಷದಲ್ಲಿ ಹೈದರಾಬಾದ್‌ಗೆ ಆಟದಲ್ಲಿ ಗೋಲ್ ಗಳಿಸುವ ಮೊದಲ ಅವಕಾಶ ಸಿಕ್ಕಿತು. ಶೀಘ್ರಎಸೆತದ ನಂತರ ಅರಿಡನೆ ಸಂತನ ನೇರಾನೇರ ಗುರ್‌ಪ್ರೀತ್ ಸಿಂಗ್ ಸಂಧು ಅವರೊಂದಿಗೆ ಮುಖಾಮುಖಿಯಾದರು ಆದರೆ ಸ್ಪೇನಿಯಾರ್ಡ್‌ನ ಪ್ರಯತ್ನವು ಬೆಂಗಳೂರು ಪೋಸ್ಟ್ ಇಂದ ಸ್ವಲ್ಪ ದೂರದಲ್ಲಿ ಸಾಗಿತು.
ಮೊದಲ ಅವಧಿಯ ಕೊನೆಯಲ್ಲಿ ಲಿಸ್ಟನ್ ಕೊಲಾಕೊ ಅವರು ಆಕಾಶ್ ಮಿಶ್ರಾ ಅವರೊಂದಿಗೆ ಎಡಭಾಗದಲ್ಲಿ ಆಡಿದಾಗ ಹೈದರಾಬಾದ್‌ಗೆ ಮತ್ತೊಂದು ಅವಕಾಶ ಸಿಕ್ಕಿತು. ಫುಲ್ ಬ್ಯಾಕ್ ಆಟಗಾರ ಬೆಂಗಳೂರು ಪೆಟ್ಟಿಗೆಯಲ್ಲಿ ಕಾಲಿಟ್ಟು ದೂರದ ಪೋಸ್ಟ್ನಲ್ಲಿರುವ ಹಲಿಚರಣ್ ನರ್ಜಾರಿ ನೀಡಿದ ಗೋಲ್ನತ್ತದ ಕ್ರಾಸ್ ಹೊರತಾಗಿಯೂ ಚೆಂಡನ್ನು ಗುರಿಯತ್ತ ತಿರುಗಿಸಲು ಸಾಧ್ಯವಾಗಲಿಲ್ಲ.
ಗುರ್‌ಪ್ರೀತ್ ಎರಡು ನಿಮಿಷಗಳ ಅಂತರದಲ್ಲಿ ಎರಡು ಅದ್ಭುತ ಗೋಲ್ ಉಳಿತಾಯಗಳನ್ನು ಮಾಡಿದರು ಇದರಿಂದ ಬಹಳ ಕಾಲ ಬೆಂಗಳೂರು ಮುನ್ನಡೆ ಸಾಧಿಸುವಲ್ಲಿ ಸಫಲವಾಯ್ತು. 53 ನೇ ನಿಮಿಷದಲ್ಲಿ ಹಲಿಚರಣ್ ಅವರ ಕ್ರಾಸ್ ಅರಿಡನೆ ಸಂತನ ಅವರನ್ನು ತಲುಪಿದರೂ ಕೀಪರ್ ಸಿಂಗ್ ಅದನ್ನು ಬಲವಾಗಿ ತಡೆದರು. ನಂತರದಲ್ಲಿ ತಂಡದ ನಂ.1, ಫ್ರೀ-ಕಿಕ್‌ನೊಂದಿಗೆ ತನ್ನ ಸಾಲಿನಿಂದ ಬಂದು ಕಾಲುಗಳನ್ನು ಬಳಸಿ ಅರಿಡಾನೆ ಚೆಂಡನ್ನು ಸೆಟ್ ಪೀಸ್ ಮಾಡಿ ಗೋಲ್ ಅತ್ತ ತಿರುಗಿಸುವುದನ್ನು ತಡೆದರು.
ಬ್ಲೂಸ್ ಗೋಲ್ ಉಳಿತಾಯಗಳನ್ನು 1ಗಂಟೆಯ ಆಟದ ನಂತರದವರೆಗೂ ತಡೆದು ನಿಲ್ಲಿಸಿದ್ದರು. ಲಿಯಾನ್ ಹಿತೇಶ್ ಶರ್ಮಾ ಅವರ ಬ್ಯಾಕ್‌ಪಾಸ್‌ನೊಂದಿಗೆ, ಹೈದರಾಬಾದ್ ರಕ್ಷಣೆಯಿಂದ ಮುಕ್ತರಾಗಿ ಓಡಿಬಂದು, ಪಾದದ ಹೊರಭಾಗ ಬಳಸಿ ಬೆಂಗಳೂರು ಪರ ತಮ್ಮ ಮೊದಲ ಗೋಲ್ ಗಳಿಸಿದರು.
ಗೆಲುವಿನ ಮುಕ್ತ ಅವಕಾಶದ ಮುನ್ನೋಟದಲ್ಲಿದ್ದ ಬೆಂಗಳೂರು ತಂಡಕ್ಕೆ 86ನೆ ನಿಮಿಷದಲ್ಲಿ ಆಘಾತ ಎದುರಾಯ್ತು. ರೋಹಿತ್ ಅವರ ಕ್ರಾಸ್ ಪಡೆದ ಅರಿಡನೆ, ಗೋಲ್ ಪೋಸ್ಟ್ ಹತ್ತಿರದಿಂದ ಸಿಡಿಸಿ ಗೋಲ್ ಗಳಿಸಿದರು. ಗೋಲ್ ಪಡೆದ ಹುಮ್ಮಸ್ಸಿನೊಂದಿಗೆ ಎಡಿರಲ್ಲಿ ತಂಡ ಗುರಿಯತ್ತ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿತು. ಕೊನೆಯ ನಿಮಿಷಗಳಲ್ಲಿ ಮತ್ತೊಂದು ರೋಚಕ ಗೋಲ್ ಅನ್ನು ಫ್ರಾನ್ ಸಾಂಡಜ ಗಳಿಸುವ ಮೂಲಕ ಸೋಲುವ ಪಂದ್ಯದಲ್ಲಿ ಸಮಾನ ಗೌರವ ಸಾಧಿಸಲು ತಂಡ ಯಶಸ್ವಿಯಾಯ್ತು. ಇದರೊಂದಿಗೆ ಎರಡೂ ತಂಡಗಳ ಅಂಕ ಸಮಾನವಾಗಿ ಉಳಿಯಿತು.
ಫೆಬ್ರವರಿ 2 ರಂದು ಇದೇ ಅಂಗಳದಲ್ಲಿ ಬ್ಲೂಸ್ ತಮ್ಮ ಮುಂದಿನ ಪಂದ್ಯವನ್ನು ಎಸ್‌ಸಿ ಈಸ್ಟ್ ಬೆಂಗಾಲ್ ವಿರುದ್ಧ ಆಡಲಿದ್ದಾರೆ.