ಶಿವಶಕ್ತಿ ಆರ್ಭಟ – ಅಂಕಪಟ್ಟಿಯಲ್ಲಿ ಉನ್ನತ ಸ್ಥಾನಗಳಿಸಿದ ಬ್ಲೂ ಕೋಲ್ಟ್ಸ್

ಬೆಂಗಳೂರು ಎಫ್‌ಸಿ 3-0 ಗೋಲುಗಳ ಅಂತರದಿಂದ ಬೆಂಗಳೂರು ಇಂಡಿಪೆಂಡೆಂಟ್ಸ್ ಎಫ್‌ಸಿ ವಿರುದ್ಧ ಜಯ

ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಬೆಂಗಳೂರು ಇಂಡಿಪೆಂಡೆಂಟ್ಸ್ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಬೆಂಗಳೂರು ಎಫ್‌ಸಿ ಜಯ ಸಾಧಿಸಿ ಗೆಲುವಿನ ಹಾದಿಗೆ ಮರಳಿದೆ. ಸ್ಟ್ರೈಕರ್ ಶಿವಶಕ್ತಿ ಅವರ ಮೊದಲಾರ್ಧದ ಹ್ಯಾಟ್ರಿಕ್ ಗೋಲ್ ಬಿಡಿಎಫ್‌ಎ ಸೂಪರ್ ಡಿವಿಷನ್ ಪಂದ್ಯಾವಳಿಯ ಅಂಕಪಟ್ಟಿಯಲ್ಲಿ ಸಂದೇಶ್ ಭೋಯಿಟ್ ತಂಡವನ್ನು ಮತ್ತೊಮ್ಮೆ ತಮ್ಮ ಸ್ಥಾನಕ್ಕೆ ಮರಳಿಸಿದೆ.

ಪಂದ್ಯದ ಆರಂಭದಿಂದಲೇ ಬ್ಲೂಸ್ ಪ್ರಕ್ರಿಯೆಯಲ್ಲಿ ಪ್ರಾಬಲ್ಯ ಸಾಧಿಸಿತು ಮತ್ತು ಗಡಿಯಾರದಲ್ಲಿ ಕೇವಲ ಆರು ನಿಮಿಷಗಳಿದ್ದಾಗ ಮುನ್ನಡೆ ಸಾಧಿಸಿತು. ಥೋಯ್ ಸಿಂಗ್ ಸಿಕ್ಕ ಅವಕಾಶವನ್ನು ಬಳಸಿಕೊಂಡು ಪಿಚ್‌ನ ಮಧ್ಯದಲ್ಲಿ ಬ್ಲೂ ಕೋಲ್ಟ್ಸ್ ತಂಡಕ್ಕೆ ನೆರವಾದರು. ಮಿಡ್‌ಫೀಲ್ಡರ್ ಥೋಯ್ ಶಿವಶಕ್ತಿಯನ್ನು ಥ್ರೂ ಬಾಲ್ ಮೂಲಕ ಕಂಡುಕೊಂಡರು ಮತ್ತು ತಂಡದ ನಂ.9 ಎದುರಾಳಿ ತಂಡದ ನಿಶಾಂತ್ ಎನ್. ಅವರನ್ನು ಹಿಂದಿಕ್ಕಿ ಬಿಎಫ್‌ಸಿಯನ್ನು 1-0 ಅಂತರದೊಂದಿಗೆ ಮುನ್ನಡೆಗೆ ತಂದರು. ಕೇವಲ ಎರಡು ನಿಮಿಷಗಳ ನಂತರ, ಅವರು ಬಾಕ್ಸ್‌ನ ತುದಿಯಲ್ಲಿರುವ ನವನೀತ್ ಕೃಷ್ಣ ಅವರಿಂದ ಚೆಂಡನ್ನು ಕಸಿದು ಗೋಲ್ ಪೋಸ್ಟ್ ಕೆಳಭಾಗದ ಮೂಲೆಯನ್ನು ಕಂಡುಕೊಂಡು ಮೊದಲ ಪ್ರಯತ್ನದಲ್ಲಿಯೇ ಅಂಕ ಸಾಧಿಸಿ ತಂಡಕ್ಕೆ ಇದ್ದ ಮುನ್ನಡೆಯನ್ನು ದ್ವಿಗುಣಗೊಳಿಸಿದರು.

ಶಿವಶಕ್ತಿ ತನ್ನ ಗುರುತುಗಳನ್ನು ಲೆಕ್ಕಿಸದೆ ಅಂಗಳದ ದೂರದ ಭಾಗದಿಂದಲೇ ಅರ್ಧ ಗಂಟೆಯ ಆಟದ ಸಮಯಕ್ಕೆ ಸರಿಯಾಗಿ ತನ್ನ ಹ್ಯಾಟ್ರಿಕ್ ಪೂರ್ಣಗೊಳಿಸಿದರು ಮತ್ತು ಥೋಯ್ ಓಟದಲ್ಲಿ ಸಮನಾಗಿ ನಿಂತು ಅಂಗಳದ ಎಡಭಾಗದಿಂದ ನೇರವಾದ ಹೊಡೆತದ ಮೂಲಕ ದಾರಿ ತೋರಿ ಇಂಡಿಪೆಂಡೆಂಟ್ಸ್ ತಂಡದ ಡಿಫೆಂಡರ್ ಸುರೇಂದ್ರನನ್ನು ಹಿಂಡಿಕ್ಕಿ ಬಾಕ್ಸ್ ಅಲ್ಲಿ ಕ್ರಾಸ್ ಮೂಲಕ ಶಿವಶಕ್ತಿಗೆ ಚೆಂಡನ್ನು ತಲುಪಿಸಿದರು. ಇದ್ದ ಅವಕಾಶವನ್ನು ತಪ್ಪಿಸದೆ ಶಿವಶಕ್ತಿ ನೇರವಾಗಿ ಪೋಸ್ಟ್ ಛಾವಣಿಗೆ ತಾಗುವಂತೆ ಬಲವಾಗಿ ಹೊಡೆದು ಗೋಲ್ ಗಳಿಸಿ ತಂಡದ ಅಂಕವನ್ನು 3-0 ಗೆ ಏರಿಸಿದರು.

ಹಾಲ್ಫ್ ಟೈಮ್ ಅಲ್ಲಿ ತಂಡಕ್ಕೆ ಸೇರಿಕೊಂಡ ಬದಲಿ ಆಟಗಾರ ಮೊನಿರುಲ್ ಮೊಲ್ಲಾ ಬಾಕ್ಸ್‌ಗೆ ಕಾಲಿಟ್ಟು ಶಿವಶಕ್ತಿಯನ್ನು ಕಂಡುಕೊಂಡರು. ದ್ವಿತೀಯಾರ್ಧದ ನಾಲ್ಕು ನಿಮಿಷಗಳ ನಂತರ ಬ್ಲೂ ಕೋಲ್ಟ್ಸ್ ಸ್ಕೋರ್‌ಬೋರ್ಡ್‌ಗೆ ಮತ್ತೊಂದು ಗೋಲ್ ಸೇರಿಸಿ ನಾಲ್ಕನೆಯ ಅಂಕ ಪಡೆಯುವಲ್ಲಿತ್ತು ಆದರೆ ಸ್ಟ್ರೈಕರ್‌ನ ಶಾಟ್ ನೇರವಾಗಿ ‘ಕೀಪರ್’ ಕೈಸೇರಿತು. ಬ್ಲೂ ಕೋಲ್ಟ್ಸ್ ತಂಡದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದರಾದರೂ ಉಳಿದ ಅರ್ಧದಷ್ಟು ಆಟವನ್ನು ತನ್ನ ನಿಯಂತ್ರಣದಲ್ಲಿ ಇರಿಸಿಕೊಂಡಿದ್ದರು. ಎಲ್ಲಾ ಮೂರು ಪಾಯಿಂಟ್‌ಗಳನ್ನು ತೆಗೆದುಕೊಂಡು ಅಂಕಪಟ್ಟಿಯಲ್ಲಿ ಮೇಲಕ್ಕೆ ಹೋಗಲು ಆಟವನ್ನು ಸುಲಭವಾಗಿ ನಿಭಾಯಿಸಿ ನೋಡಿಕೊಂಡಿರು.

ಫೆಬ್ರವರಿ 26 ರಂದು ಎಎಸ್ಸಿ&ಸಿ ಎಫ್‌ಸಿ ವಿರುದ್ಧ ಬೆಂಗಳೂರು ಎಫ್‌ಸಿ ಆಡಲಿದೆ.