ಯುವ ಡಿಫೆಂಡರ್ ಸಾರ್ಥಕ್ ಗೊಲುಯಿ ಬ್ಲೂಸ್ ಗೆ ಸೇರ್ಪಡೆ

ಎಐಎಫ್ಎಫ್ ಎಲೈಟ್ ಅಕಾಡೆಮಿಯ ಆಟಗಾರ ಬ್ಲೂಸ್‌ ಪರ ಆಡಲು ಎರಡು ವರ್ಷಗಳ ಒಪ್ಪಂದಕ್ಕೆ ಸಹಿ.

ಬೆಂಗಳೂರು ಎಫ್‌ಸಿ ಪರ ಆಡಲು ಎರಡು ವರ್ಷಗಳ ಒಪ್ಪಂದಕ್ಕೆ ಭಾರತದ ಯುವ ಡಿಫೆಂಡರ್ ಸಾರ್ಥಕ್ ಗೊಲುಯಿ ಅವರೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಬ್ಲೂಸ್ ಸೋಮವಾರ ಪ್ರಕಟಿಸಿದೆ. ಯರೊಂಡು ಮುಸಾವು-ಕಿಂಗ್, ಅಲನ್ ಕೋಸ್ಟಾ ಮತ್ತು ರೋಹಿತ್ ಅವರೊಂದಿಗಿನ ಒಪ್ಪಂದಗಳ ನಂತರ ನಾಲ್ಕನೇ ಆಟಗಾರನಾಗಿ 23 ರ ಹರೆಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ, ಈಗಲ್ಸ್ ಎಫ್‌ಸಿ ವಿರುದ್ಧದ ಮುಂಬರುವ ಎಎಫ್‌ಸಿ ಕಪ್ ಪ್ಲೇಆಫ್ ಹಂತದ ಪಂದ್ಯಕ್ಕೂ ಮುನ್ನ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಕೋಲ್ಕತಾ ಮೂಲದ ಗೊಲುಯಿ ಎಐಎಫ್ಎಫ್ ಎಲೈಟ್ ಅಕಾಡೆಮಿಯಲ್ಲಿನ ಪ್ರದರ್ಶನಗಳ ಶ್ರೇಯಾಂಕ ಪಡೆದು ಐ-ಲೀಗ್ ಮತ್ತು ಇಂಡಿಯನ್ ಸೂಪರ್ ಲೀಗ್‌ನಲ್ಲಿ ಹಲವು ಕ್ಲಬ್‌ಗಳನ್ನು ಪ್ರತಿನಿಧಿಸಿದ್ದಾರೆ. ಎಫ್‌ಸಿ ಪುಣೆ ಸಿಟಿ, ಮುಂಬೈ ಸಿಟಿ ಎಫ್‌ಸಿ ಮತ್ತು ಎಸ್‌ಸಿ ಈಸ್ಟ್ ಬೆಂಗಾಲ್ ಪರ 49 ಬಾರಿ ಅಂಗಳದಲ್ಲಿ ಪ್ರದರ್ಶನ ತೋರಿ ಈಗ ಬೆಂಗಳೂರು ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ.

“ನಾನು ಬೆಂಗಳೂರು ಎಫ್‌ಸಿ ತಂಡವನ್ನು ಸೇರಿಕೊಳ್ಳಲು ತುಂಬಾ ಉತ್ಸುಕನಾಗಿದ್ದೇನೆ. ಅಷ್ಟು ಯಶಸ್ವಿಯಾದ ಕ್ಲಬ್‌ನ ಭಾಗವಾಗುವುದೆಂದರೆ ಅದರೊಂದಿಗೆ ದೊಡ್ಡ ಜವಾಬ್ದಾರಿಯೂ ನಮಗಾಗಿ ಅದು ತರುತ್ತದೆ ಎಂದರ್ಥ. ಕ್ಲಬ್ ಮತ್ತು ಅದರ ಅಭಿಮಾನಿಗಳು ನನ್ನ ಮೇಲಿಟ್ಟಿರುವ ಎಲ್ಲ ನಿರೀಕ್ಷೆಗಳನ್ನು ನಾನು ಈಡೇರಿಸುತ್ತೇನೆಂದು ಭಾವಿಸುತ್ತೇನೆ ”ಎಂದು ಸಾರ್ಥಕ್ ತಮ್ಮ ಒಪ್ಪಂದಕ್ಕೆ ಸಹಿ ಹಾಕಿದ ನಂತರ ತಿಳಿಸಿದ್ದಾರೆ.

“ಈ ಅವಕಾಶ ನನಗೆ ದೊಡ್ಡ ಸವಾಲಾಗಿದೆ ಮತ್ತು ನಾನು ಪ್ರತಿದಿನವೂ ಪರಿಪೂರ್ಣ ಪ್ರದರ್ಶನ ನೀಡುತ್ತೇನೆ. ಮ್ಯಾನೇಜ್ಮೆಂಟ್ ಮತ್ತು ಕೋಚ್ ನನ್ನನ್ನು ಈ ಕ್ಲಬ್‌ಗೆ ಕರೆತರುವಲ್ಲಿ ನಂಬಿಕೆಯನ್ನು ತೋರಿಸಿದ್ದಾರೆ ಮತ್ತು ನಾನು ಅದನ್ನು ಉಳಿಸಿಕೊಳ್ಳಲು ಬಯಸುತ್ತೇನೆ. ಇದರೊಂದಿಗೆ ಸುನಿಲ್ ಭಾಯ್ ಮತ್ತು ಗುರ್‌ಪ್ರೀತ್ ಭಾಯ್ ಅವರಂತಹ ಅನುಭವಿ ಆಟಗಾರರಿಂದ ಕಲಿಯಲು ನನಗೆ ಅವಕಾಶ ದೊರೆತಂತಾಗಿದೆ ಮತ್ತು ಶೀಘ್ರದಲ್ಲೇ ನಾನು ನನ್ನ ತಂಡದ ಎಲ್ಲ ಆಟಗಾರರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ.”

ಕ್ಲಬ್‌ನ ಇತ್ತೀಚಿನ ಒಪ್ಪಂದಗಳ ಕುರಿತು ಮಾತನಾಡಿದ ಕೋಚ್ ಮಾರ್ಕೊ ಪೆಜೈಯುಲಿ, “ನಾನು ಸಾರ್ಥಕ್ ಅವರನ್ನು ಬೆಂಗಳೂರು ಎಫ್‌ಸಿಗೆ ಸ್ವಾಗತಿಸಲು ಇಚ್ಛಿಸುತ್ತೇನೆ. ಅವರು ಬಹುಮುಖಿಆಟಗಾರರಾಗಿದ್ದು ರೈಟ್ ಬ್ಯಾಕ್ ಮತ್ತು ಸೆಂಟರ್ ಬ್ಯಾಕ್ ಸ್ಥಾನವನ್ನು ತುಂಬಬಲ್ಲರು. ಮುಖ್ಯವಾಗಿ, ಅವರ ದೃಷ್ಟಿಕೋನ ಕ್ಲಬ್‌ನಲ್ಲಿನ ನಮ್ಮೊಂದಿಗೆ ಹೊಂದಿಕೊಳ್ಳುತ್ತದೆ, ಇದು ನಮಗೆ ಸಕಾರಾತ್ಮಕ ಆರಂಭವನ್ನು ನೀಡುತ್ತದೆ. ಅವರು ಕಳೆದ ಐದು ಆವೃತ್ತಿಗಳಲ್ಲಿ ಅನೇಕ ಕ್ಲಬ್‌ಗಳಲ್ಲಿ ಆಡಿದ್ದಾರೆ ಮತ್ತು ಬೆಂಗಳೂರಿನಲ್ಲಿ ಮತ್ತಷ್ಟು ಅನುಭವವನ್ನು ಪಡೆಯಲಿದ್ದಾರೆ.

ಈ ಯುವ ಡಿಫೆಂಡರ್ ಬ್ಲೂಸ್‌ನ ನಿಷ್ಠಾವಂತತೆಯ ಕುರಿತು ಕೆಲವು ಪದಗಳನ್ನು ಹೇಳಿದರು. “ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಎರಡು ವರ್ಷಗಳು ಎಲ್ಲರಿಗೂ ಕಷ್ಟಕರವಾಗಿತ್ತು, ನಾನು ವೆಸ್ಟ್ ಬ್ಲಾಕ್ ಬ್ಲೂಸ್ ಗಾಗಿ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಆದಷ್ಟು ಬೇಗ ಆಡಬೇಕೆಂದು ಆಶಿಸುತ್ತೇನೆ. ಅವರು ದೇಶದಲ್ಲಿನ ಅತ್ಯುತ್ತಮ ಅಭಿಮಾನಿಗಳು, ಮತ್ತು ನಾನು ಕುತೂಹಲದಿಂದ ಆ ಸಮಯಕ್ಕಾಗಿ ಎದುರು ನೋಡುತ್ತಿದ್ದೇನೆ.”

ಗೊಲುಯಿ ಅವರು ಭಾರತದ U16 ಮತ್ತು U19 ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿದ್ದರು, ನಂತರ ಬಾಂಗ್ಲಾದೇಶದಲ್ಲಿ ನಡೆದ 2018 ರ SAFF ಚಾಂಪಿಯನ್‌ಶಿಪ್‌ನಲ್ಲಿ ಶ್ರೀಲಂಕಾ ವಿರುದ್ಧ ಹಿರಿಯ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ವೇಗದ ಆಟ ಮತ್ತು ಅಕ್ರಮಣಕಾರಿಯಾಗಿ ಚೆಂಡನ್ನು ಮುಂದಕ್ಕೆ ಕೊಂಡೊಯ್ಯುವ ಸಾಮರ್ಥ್ಯದೊಂದಿಗೆ, ಅವರು ನಮ್ಮ ತಂಡಕ್ಕೆ ಅಮೂಲ್ಯವಾದ ಸೇರ್ಪಡೆಯಾಗಲಿದ್ದಾರೆ ಎಂದು ಬ್ಲೂಸ್ ನ ಮುಖ್ಯ ಕೋಚ್ ಮಾರ್ಕೊ ಪೆಜೈಯುಲಿ ಅವರು ಗೊಲುಯಿ ಕುರಿತು ಹೇಳಿದರು.

Malcare WordPress Security