ಮುಂಬೈ ಸಿಟಿ ಎಫ್‌ಸಿ ವಿರುದ್ಧ ಬೆಂಗಳೂರು 4-2 ಅಂತರದಿಂದ ಭರ್ಜರಿ ಗೆಲುವು

ಸಿಲ್ವಾ, ಛೇತ್ರಿ ಅವರ ಗುರಿಯತ್ತದ ನಡಿಗೆ ಬ್ಲೂಸ್ ತಂಡಕ್ಕೆ ಬಂಬೋಲಿಮ್ನಲ್ಲಿ ಆಕರ್ಷಕ ಜಯ ತಂದಿದೆ. ಇದರೊಂದಿಗೆ ತಂಡ ಪಂದ್ಯಾವಳಿಯ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಜಿಗಿದಿದೆ.

ಮುಂಬೈ ಸಿಟಿ ಎಫ್‌ಸಿ ವಿರುದ್ಧ 4-2 ಅಂತರದಿಂದ ಜಯಗಳಿಸುವ ಮೂಲಕ ಇಂಡಿಯನ್ ಸೂಪರ್ ಲೀಗ್ ಪ್ಲೇಆಫ್‌ನಲ್ಲಿ ಆಡುವ ಅವಕಾಶ ಗಿಟ್ಟಿಸಲು ಬೆಂಗಳೂರು ಎಫ್‌ಸಿ ತಮ್ಮ ಯತ್ನವನ್ನು ಮುಂದುವರೆಸಿದೆ. ಸೋಮವಾರ ಬಂಬೋಲಿಮ್‌ನ ಜಿಎಂಸಿ ಕ್ರೀಡಾಂಗಣದಲ್ಲಿ ಕ್ಲೀಟನ್ ಸಿಲ್ವಾ ಮತ್ತು ಸುನಿಲ್ ಛೇತ್ರಿ ತಲಾ ಎರಡೆರಡು ಗೋಲ್ ಸಿಡಿಸಿದರೆ ಎದುರಾಳಿ ಮುಂಬೈ ಪರ ಆಡಮ್ ಲೆ ಫೊಂಡ್ರೆ ಹೋರಾಟದ ಆಟದೊಂದಿಗೆ ಎರಡು ಗೋಲ್ ಗಳಿಸಲು ಮಾತ್ರ ಶಕ್ತರಾಗಿ ಆಕರ್ಷಕ ಆಟದಲ್ಲಿ ಸಾಕ್ಷಿಯಾದರು.

ಎಟಿಕೆ ಮೋಹನ್ ಬಗಾನ್ ವಿರುದ್ಧ ಸೋಲೊಪ್ಪಿದ್ದ ತಂಡದಲ್ಲಿ ನೌಶಾದ್ ಮೂಸಾ ಮೂರು ಬದಲಾವಣೆಗಳನ್ನು ಮಾಡಿದರು. ಕ್ಸಿಸ್ಕೊ ಹೆರ್ನಾಂಡೆಜ್ ಸೇರ್ಪಡೆಯಾದ ನಂತರ ಮೊದಲ ಬಾರಿಗೆ ಆರಂಭಿಕ ತಂಡದಲ್ಲಿ ಅವಕಾಶವನ್ನು ಗಿಟ್ಟಿಸಿದ್ದಾರೆ. ಆರಂಭಿಕ ಹನ್ನೊಂದರಲ್ಲಿ ಪರಾಗ್ ಶ್ರೀವಾಸ್ ಮತ್ತು ಕ್ಲೀಟನ್ ಸಿಲ್ವಾ ಕೂಡ ಸ್ಥಾನ ಪಡೆದಿದ್ದರು. ಕ್ರಿಸ್ಟಿಯನ್ ಒಪ್ಸೆತ್, ಅಮಾನತುಗೊಂಡಿರುವ ಪ್ರತೀಕ್ ಚೌಧರಿ ಮತ್ತು ಗಾಯಗೊಂಡ ರಾಹುಲ್ ಭೆಕೆ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಮತ್ತೊಂದೆಡೆ ಎದುರಾಳಿ ತಂಡದಲ್ಲಿ ಸೆರ್ಗಿಯೋ ಲೋಬೆರಾ ಎರಡು ಬದಲಾವಣೆಗಳನ್ನು ಮಾಡಿದ್ದರು. ವಿಗ್ನೇಶ್ ದಕ್ಷಿಣಮೂರ್ತಿ ಮತ್ತು ರೇನಿಯರ್ ಫರ್ನಾಂಡಿಸ್ ಅವರು ಮಂದರ್ ರಾವ್ ದೇಸ್ಸಾಯ್ ಮತ್ತು ಅಮಾನತುಗೊಂಡ ಹ್ಯೂಗೋ ಬೌಮಸ್ ಅವರ ಬದಲಿಯಾಗಿ ತಂಡದಲ್ಲಿ ಸ್ಥಾನಪಡೆದಿದ್ದರು.

ಪಂದ್ಯದ ಆರಂಭದ ಅರ್ಧ ನಿಮಿಷಕ್ಕೂ ಮುನ್ನ ಮುನ್ನಡೆ ಸಾಧಿಸುವುದರೊಂದಿಗೆ ಬೆಂಗಳೂರು ಉತ್ತಮ ರೀತಿಯಲ್ಲಿ ಪ್ರಾರಂಭ ಪಡೆಯಿತು. ಐಲ್ಯಾಂಡರ್ಸ್‌ನ ರಕ್ಷಣ ಕೋಟೆಯ ಮೇಲೆ ಚೆಂಡನ್ನು ಉದಾಂತ ಸಿಂಗ್ ಗೆ ನಾಯಕ ಛೇತ್ರಿ ಅಂಗಳದ ಬಲಭಾಗದಲ್ಲಿ ತಲುಪಿಸಿದರು. ವಿಂಗರ್‌ನ ಲೋ ಡ್ರೈವ್ ಬಾಕ್ಸ್ ಅಲ್ಲಿ ಸಿಲ್ವಾ ಅವರನ್ನು ಕಂಡುಕೊಂಡು ಗೋಲ್ ಆಗಿ ಪರಿವರ್ತನೆಗೊಂಡು ಬ್ಲೂಸ್‌ ಅನ್ನು 1-0 ಅಂತರದಲ್ಲಿ ಮುನ್ನಡೆಯಲ್ಲಿಟ್ಟಿತು.

ರೇನಿಯರ್ ಫರ್ನಾಂಡಿಸ್ ಮತ್ತು ಆಡಮ್ ಲೆ ಫೊಂಡ್ರೆ ಬ್ಲೂಸ್‌ನ ರಕ್ಷಣೆಯಿಂದ ಮುಕ್ತರಾಗಲು ಯಶಸ್ವಿಯಾದರು ಮುಂಬೈ ತಂಡಕ್ಕೆ ಅಂಕ ಗಳಿಸಿ ಪಂದ್ಯದಲ್ಲಿ ಸಮಾನ ಹಿಡಿತ ಸಾಧಿಸುವ ಅವಕಾಶ ಎದುರಾಗಿತ್ತು. ಆದರೆ, ಇಬ್ಬರೂ ಆಟಗಾರರು ಗುರಿಯತ್ತ ಹೊಡೆತಕ್ಕೆ ಮುನ್ನುಗ್ಗಲಿಲ್ಲ. ಮತ್ತೊಂದೆಡೆ ಬ್ಲೂಸ್ ತಂಡದ ಮತ್ತೊಂದು ಗೋಲ್ ಗಳಿಸುವ ಯತ್ನ ವಿಫಲವಾಯ್ತು. ಅಮ್ರೀಂದರ್ ಸಿಂಗ್ ಮುನ್ನುಗ್ಗಿ ಎರಡು ಉತ್ತಮ ಗೋಲ್ ಉಳಿತಾಯಗಳನ್ನು ಮಾಡಿದರು. ಮೊದಲನೆಯ ಅವಕಾಶದಲ್ಲಿ ಬಿಪಿನ್ ಸಿಂಗ್ ಅವರಿಂದ ಪಾಸ್ ಪಡೆದ ಛೇತ್ರಿ 25 ಗಜಗಳಷ್ಟು ದೂರದಲ್ಲಿ ಶಾಟ್ ತೆಗೆದುಕೊಂಡಾಗ ಎಂಸಿಎಫ್‌ಸಿ ಗೋಲ್ ಕೀಪರ್ ತಡೆಯಲು ಯಶಸ್ವಿಯಾದರು. ಕೇವಲ ಆರು ನಿಮಿಷಗಳ ನಂತರ, ಎರಿಕ್ ಪಾರ್ತಲು ಪಡೆದ ಅವಕಾಶದ ಪ್ರಯತ್ನವನ್ನು ಪೆಟ್ಟಿಗೆಯ ಅಂಚಿನಿಂದ ದೂರ ತಳ್ಳಲು ಅಮರಿಂದರ್ ಉತ್ತಮ ಕ್ಷಮತೆ ತೋರಿದರು.

22 ನೇ ನಿಮಿಷದಲ್ಲಿ ಕ್ಲೀಟನ್ ತನ್ನ ಪಂದ್ಯದ ಎರಡನೇ ಗೋಲ್ ಗಳಿಸಿ ಬೆಂಗಳೂರು ತಂಡಕ್ಕೆ ಮುನ್ನಡೆಯನ್ನು ದ್ವಿಗುಣಗೊಳಿಸುವಲ್ಲಿ ಯಶಸ್ವಿಯಾದರು. ಕ್ಸಿಸ್ಕೊ ನೀಡಿದ ಸೆಟ್-ಪೀಸ್ ಕ್ಲೀಟನ್ ಅವರ ಹೆಡರ್ ಮೂಲಕ ಗೋಲ್ ತಲುಪಿತು. ಅದೃಷ್ಟಹೀನ ಅಮರಿಂದರ್‌ ಇದನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ.

ಗುರ್ಪ್ರೀತ್ ಸಿಂಗ್ ಸಂಧು 36 ನೇ ನಿಮಿಷದಲ್ಲಿ ಉತ್ತಮವಾಗಿ ಪ್ರತಿಕ್ರಿಯಿಸಿದ ಕಾರಣ ಬೆಂಗಳೂರು ತಮ್ಮ ಎರಡು ಗೋಲುಗಳ ಮುನ್ನಡೆಯ ಲಾಭವನ್ನು ವಿರಾಮದವರೆಗೂ ಕೊಂಡೊಯ್ಯಲು ಸಹಾಯವಾಯ್ತು.

ಆಡಮ್ ಲೆ ಫೊಂಡ್ರೆ ಅವರು ಸೈ ಗೊಡ್ಡಾರ್ಡ್ ಅವರ ಕಡಿಮೆ ಕ್ರಾಸ್ ಅನ್ನು ಗೋಲ್ ಆಗಿ ಪರಿವರ್ತಿಸಲು ಗುರ್ಪ್ರೀತ್ ಅನ್ನು ಹಿಂದಿಕ್ಕಿ ದ್ವಿತೀಯಾರ್ಧದ 4ನೆ ನಿಮಿಷದಲ್ಲಿ ತಮ್ಮ ತಂಡಕ್ಕೆ 2-1ರ ಮೂಲಕ ಅಂತರ ಕಡಿಮೆ ಮಾಡಿದರು. ನಂತರ ಬ್ಲೂಸ್ ತಂಡದ ನಂಬರ್ 1, ಮುಂಬೈ ಸಿಟಿ ಪರ ಫಾಲ್ ಅವರ ಮತ್ತೊಂದು ಯತ್ನವನ್ನು ನಿರಾಕರಿಸಲು ಅದ್ಭುತ ಉಳಿತಾಯವನ್ನು ಮಾಡುವಲ್ಲಿ ಯಶಸ್ವಿಯಾದರು.

ನಂತರ ಛೇತ್ರಿ, ಬ್ಲೂಸ್‌ ಪರ 200 ನೇ ಪಂದ್ಯದಲ್ಲಿ ಕಾಣಿಸಿಕೊಂಡಾಗ, ಗುರ್‌ಪ್ರೀತ್‌ನ ಪಂಟ್‌ ಅನ್ನು ಅಂಗಳದಲ್ಲಿ ಪಡೆದು ಎದುರಾಳಿ ಪೋಸ್ಟ್ ಅಲ್ಲಿ ಅಮರಿಂದರ್‌ ಅನ್ನು ಹಿಂದಿಕ್ಕಿ ಬೆಂಗಳೂರು ತಂಡಕ್ಕೆ ತಮ್ಮ ಗೋಲ್ ಮೂಲಕ ಮತ್ತೆ ಎರಡು ಗೋಲುಗಳ ಮುನ್ನಡೆಯನ್ನು ತಂದಿತ್ತರು.

ಆಟದ ಅಂತಿಮ ಹಂತದಲ್ಲಿ, ಲೆ ಫಂಡ್ರೆ ಅವರು ಗುಡ್ಡಾರ್ಡ್ ನೀಡಿದ ಕ್ರಾಸ್ ಅನ್ನು ಬಳಸಿಕೊಂಡು ಗುರ್ಪ್ರೀತ್ ಅವರನ್ನು ಹಿಂದಿಕ್ಕಿ ಗೋಲ್ ಆಗಿ ಪರಿವರ್ತಿಸಿದರು ಅದರೊಂದಿಗೆ ಜಿದ್ದಾಜಿದ್ದಿಯಲ್ಲಿ ಮತ್ತೊಮ್ಮೆ ಅಂತರ ಎಂ ಸಿ ಎಫ್ ಸಿ ಪರ 3-2 ಕ್ಕೆ ಕಡಿಮೆಯಾಯ್ತು . ಆಟದ ಅಂತ್ಯಕ್ಕೆ 5 ನಿಮಿಷಗಳ ಮುಂಚಿತವಾಗಿ, ಲೆ ಫೊಂಡ್ರೆ ಸ್ಥಳಾವಕಾಶ ಮತ್ತು ಕಾಲಾವಕಾಶವನ್ನು ಬಳಸಿಕೊಂಡು ಗೋಲ್ ಅತ್ತ ಮತ್ತೊಂದು ಯತ್ನಕ್ಕೆ ಕೈಹಾಕಿದರು. ಆದರೆ ಅವರ ಪ್ರಯತ್ನವನ್ನು ಗುರ್ಪ್ರೀತ್ ತಮ್ಮ ಕಾಲಂಚಿನಲ್ಲಿ ತಾಗಿಸಿ ಗೋಲ್ ಆಗುವುದನ್ನು ತಡೆದು ತಂಡದ ಅಂತರ ಕಾಯ್ದುಕೊಂಡು ಮುಂಬೈಯನ್ನು ನಿರಾಕರಿಸಿದರು.

ಬೆಂಗಳೂರು ತಂಡ ಗೆಲುವಿಗಾಗಿ ಹಪಹಪಿಸುತ್ತಿದ್ದ ಸಂಧರ್ಭದಲ್ಲಿ ಎದುರಾಳಿ ಎಂ ಸಿ ಎಫ್ ಸಿ ಇಂದ ಎದುರಾದ ಎಲ್ಲಾ ಅಡೆತಡೆಗಳನ್ನು ಸುಗಮವಾಗಿ ದಾಟಲು ಯಶಸ್ವಿಯಾದರು ಮತ್ತು ಅದರೊಂದಿಗೆ ಒಟ್ಟು ಗೋಲ್ ಮೊತ್ತಕ್ಕೆ ಮತ್ತೊಂದು ಅಂಕ ಸೇರಿಸಿ ಪಂದ್ಯದ ಪೂರ್ಣ ಅಂಕ ಗಳಿಸುವಲ್ಲಿ ಸಮರ್ಥ ಯತ್ನ ಹಾಕಿದರು. ಬದಲಿ ಆಟಗಾರ ಎಡ್ಮಂಡ್ ಲಾಲ್ರಿಂಡಿಕಾ ಅವರು ಅಂಗಳದ ಅರ್ಧದಾರಿಯಲ್ಲೇ ಲೈನ್ನಲ್ಲಿ ತಮ್ಮ ಮಾರ್ಕರ್ ಅನ್ನು ಬದಲಿಸಿದರು ಮತ್ತು ನಾಯಕ ಇದರ ಮುಕ್ತ ಅವಕಾಶ ಪಡೆದು, ಆಕರ್ಷಕ ವೇಗದ ಓಟದೊಂದಿಗೆ ಅಮರಿಂದರ್ ಅವರನ್ನು ತಪ್ಪಿಸಿ ಗೋಲ್ ಸಾಧಿಸುವಲ್ಲಿ ಸಫಲರಾದರು. ಫಲಿತಾಂಶವು ಬ್ಲೂಸ್ ಅನ್ನು ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಜಿಗಿಯುವಂತೆ ಮಾಡಿದೆ, ಪ್ಲೇಆಫ್ ಅಂತಿಮ ಸ್ಥಾನಕ್ಕೆ ಬೇಕಿರುವ 2 ಅಂಕಗಳ ಅಂತರದೊಂದಿಗೆ ಮುಂದಿನ ಪಂದ್ಯಕ್ಕಾಗಿ ತಯಾರಿ ನಡೆಸಲಿದೆ.

ಫೆಬ್ರವರಿ 21 ರಂದು ಫತೋರ್ದಾ ಅಂಗಳದಲ್ಲಿ ಬೆಂಗಳೂರು ಎಫ್‌ಸಿ ತಮ್ಮ ಮುಂದಿನ ಮುಖಾಮುಖಿಯಲ್ಲಿ ಎಫ್‌ಸಿ ಗೋವಾ ತಂಡವನ್ನು ಎದುರಿಸಲಿದೆ.

Malcare WordPress Security