ಮುಂಬೈ ಸಿಟಿ ಎಫ್‌ಸಿಯನ್ನು ಎದುರಿಸಲು ಬ್ಲೂಸ್ ಬಾಂಬೋಲಿಮ್‌ಗೆ ಪಯಣ

ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿರುವ ತಂಡದ ವಿರುದ್ಧ ಎಚ್ಚರದಿಂದ ಆಡುವಂತೆ ಮೂಸಾ ಸೂಚನೆ. ಬೆಂಗಳೂರು ಪರ 200ನೇ ಪಂದ್ಯದಲ್ಲಿ ಆಡುತ್ತಿರುವ ಛೇತ್ರಿ.

ಬಾಂಬೋಲಿಮ್‌ನ ಜಿಎಂಸಿ ಕ್ರೀಡಾಂಗಣದಲ್ಲಿ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಲೀಗ್ ಅಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಬೀಗುತ್ತಿರುವ ಮುಂಬೈ ಸಿಟಿ ಎಫ್‌ಸಿಯನ್ನು ಎದುರಿಸುವಾಗ ಕಠಿಣ ಸವಾಲನ್ನು ನಿರೀಕ್ಷಿಸುವುದಾಗಿ ಹಂಗಾಮಿ ಕೋಚ್ ನೌಶಾದ್ ಮೂಸಾ ಹೇಳಿದ್ದಾರೆ. ಬ್ಲೂಸ್ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದು, ಪ್ಲೇಆಫ್ ಅರ್ಹತೆಗೆ ಐದು ಅಂಕಗಳ ದೂರದಲ್ಲಿದ್ದರೆ, ಸೆರ್ಗಿಯೋ ಲೋಬೆರಾ ನೇತೃತ್ವದ ಮುಂಬೈ ತಂಡವು ಈಗಾಗಲೇ ಪ್ಲೇಆಫ್‌ ಅರ್ಹತೆ ಪಡೆದಿದೆ. ಬೆಂಗಳೂರು ತಂಡದ ನಾಯಕ ಸುನೀಲ್ ಛೇತ್ರಿಗೆ ಈ ಆಟವು ಒಂದು ಮೈಲಿಗಲ್ಲಿನ ಕ್ಷಣವಾಗಿರಲಿದೆ, ಅವರು ಎಲ್ಲ ಮಾದರಿಯ ಆಟಗಳಲ್ಲಿ ಕ್ಲಬ್ ಪರ 200 ನೇ ಬಾರಿಗೆ ಆಡಲು ಅಣಿಯಾಗಿದ್ದಾರೆ.

“ಮುಂಬೈ ಉತ್ತಮ ತಂಡವಾಗಿದೆ ಮತ್ತು ಅವರು ಎಟಿಕೆ ಮೋಹನ್ ಬಗಾನ್ ಅವರೊಂದಿಗೆ (ಎಎಫ್‌ಸಿ) ಚಾಂಪಿಯನ್ಸ್ ಲೀಗ್ ಸ್ಥಾನಕ್ಕಾಗಿ ಹೋರಾಡುತ್ತಿದ್ದು ಬಲಿಷ್ಠ ತಂಡವೆನಿಸಿರುವುದು ಸ್ಪಷ್ಟವಾಗಿದೆ. ನಾವು ಕೆಲವು ಉತ್ತಮ ದಿನಗಳ ತರಬೇತಿಯನ್ನು ಹೊಂದಿದ್ದೇವೆ ಮತ್ತು ಅವರು ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿಯಾಗಿರಲಿದ್ದಾರೆಂದು ನಿರೀಕ್ಷಿಸುತ್ತೇವೆ. ಅವರು ಉತ್ತಮವಾಗಿ ಆಡುತ್ತಿದ್ದಾರೆ ಮತ್ತು ಸ್ಥಿರ ಪ್ರದರ್ಶನ ಕಾಯ್ದುಕೊಂಡಿದ್ದಾರೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡು, ಸ್ವಾಧೀನವನ್ನು ಆನಂದಿಸುತ್ತಾರೆ ಅದರೊಂದಿಗೆ ನಿಯಂತ್ರಣದಿಂದ ಚೆಂಡನ್ನು ಚೆನ್ನಾಗಿ ಚಲಿಸುತ್ತಿದ್ದಾರೆ. ನಾವು ಅತ್ಯುತ್ತಮವಾಗಿರಬೇಕಾಗುತ್ತದೆ ”ಎಂದು ಮೂಸಾ ಆಟದ ಮುನ್ನಾದಿನದಂದು ಮಾಧ್ಯಮಗಳನ್ನು ಉದ್ದೇಶಿಸಿ ಹೇಳಿದರು.

ಈ ಆವೃತ್ತಿಯಲ್ಲಿ ಬೆಂಗಳೂರಿನ ಬ್ಯಾಕ್‌ಲೈನ್ ಕುಂಠಿತಗೊಂಡಿದೆ ಮತ್ತು ಮುಂಬೈ ವಿರುದ್ಧ ಯಾವುದೇ ಅಂಕಗಳನ್ನು ಪಡೆಯಬೇಕಾದರೆ ಸೋಮವಾರದ ಮುಖಾಮುಖಿಯಲ್ಲಿ ಅವಧಿಗೂ ಮೀರಿ ಉತ್ತಮ ಪ್ರದರ್ಶನ ನೀಡಿವತ್ತ ತಮ್ಮ ಕಡೆಯವರು ಗಮನ ಹರಿಸಬೇಕಾಗುತ್ತದೆ ಎಂದು ಮೂಸಾ ಒಪ್ಪಿಕೊಂಡಿದ್ದಾರೆ. “ನಾವು ಮೊದಲ 35 ನಿಮಿಷಗಳಲ್ಲಿ ಎಟಿಕೆ ಮೋಹನ್ ಬಗಾನ್ ವಿರುದ್ಧ ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇವೆ, ಚೆಂಡನ್ನು ಚೆನ್ನಾಗಿ ಇಟ್ಟುಕೊಂಡಿದ್ದೇವೆ ಮತ್ತು ತೀವ್ರವಾಗಿ ಆಡಲು ಸಾಧ್ಯವಾಯಿತು. ಆದರೆ ಒಮ್ಮೆ ನಾವು ಗೋಲ್ ಬಿಟ್ಟುಕೊಟ್ಟ ನಂತರ, ನಾವು ಆವೇಗವನ್ನು ಕಳೆದುಕೊಳ್ಳಲು ಪ್ರಾರಂಭಿಸಿದೆವು. ಸೋಮವಾರ ಇಡೀ ಆಟದಲ್ಲಿ ನಾವು ಜಾಗರೂಕರಾಗಿರಬೇಕು ಮತ್ತು ಕೇಂದ್ರೀಕೃತವಾಗಿರಬೇಕು. ಸ್ಕೋರ್ ಮಾಡಲು ನಾವು ಅವಕಾಶಗಳನ್ನು ಹುಡುಕುತ್ತೇವೆ, ವಿಶೇಷವಾಗಿ ಪ್ರತಿದಾಳಿಯಲ್ಲಿ ಪಂದ್ಯದ ಹಿಡಿತ ಸಾಧಿಸಿ, ಹಿಂಭಾಗದಲ್ಲಿ ಬಿಗಿ ಆಟದೊಂದಿಗೆ ಒತ್ತಡ ಹೇರಬೇಕಿದೆ.”

ಲೀಗ್ ತನ್ನ ವ್ಯವಹಾರಿಕ ಅಂತ್ಯಕ್ಕೆ ತಲುಪಿರುವ ಈ ಸಂಧರ್ಭದಲ್ಲಿ, ಅನೇಕ ತಂಡಗಳು ಇನ್ನೂ ಪ್ಲೇಆಫ್‌ ತಲುಪುವತ್ತ ಲೆಕ್ಕಾಚಾರಗಳಲ್ಲಿ ತೊಡಗಿವೆ ಮತ್ತು ಮೂಸಾ ತನ್ನ ಆಟಗಾರರು ಉಳಿದಿರುವ ಆಟಗಳಿಂದ ಗರಿಷ್ಠ ಅಂಕಗಳನ್ನು ಪಡೆಯಲು ಪರಿಪೂರ್ಣವಾಗಿ ಪ್ರಯತ್ನಿಸಿ ಆಡಲಿದ್ದಾರೆ ಎಂದು ಹೇಳಿದರು. “ಫಲಿತಾಂಶಗಳು (ಇತರ ತಂಡಗಳ) ನಮಗೆ ಮಾತ್ರವಲ್ಲದೇ, ಎಲ್ಲರ ಪರವಾಗಿಯೂ ಇರಲಿದೆ. ಉತ್ತಮ ಫುಟ್ಬಾಲ್ ಆಡುವತ್ತ ಗಮನಹರಿಸಬೇಕು ಮತ್ತು ಸಕಾರಾತ್ಮಕವಾಗಿರುವುದನ್ನು ಬೆಳೆಸಿಕೊಳ್ಳಬೇಕು. ಈ ಮೂರು ಪಂದ್ಯಗಳಿಂದ ನಮಗೆ ಸಾಧ್ಯವಾದಷ್ಟು ಅಂಕಗಳನ್ನು ಪಡೆಯಲು ನಾವು ಯತ್ನಿಸಬೇಕು. ”

ಗಾಯದಿಂದ ಹೊರಗುಳಿದ ಜುವಾನ್ ಗೊನ್ಜಾಲೆಜ್ ಅವರೊಂದಿಗೆ ರಾಹುಲ್ ಭೆಕೆ ಪಂದ್ಯವನ್ನು ಆಡದೆ ತಪ್ಪಿಸಿಕೊಳ್ಳುಬೇಕಾಗಿದೆ. ಪ್ರತೀಕ್ ಚೌಧರಿ ಅವರ ನಾಲ್ಕನೇ ಹಳದಿ ಕಾರ್ಡ್ ಪಡೆದ ಕಾರಣ ಪಂದ್ಯದಿಂದ ಅಮಾನತುಗೊಳ್ಳಲಿದ್ದಾರೆ. ಮತ್ತೊಂದೆಡೆ, ಎದುರಾಳಿ ತಂಡದಲ್ಲಿ, ಎಫ್‌ಸಿ ಗೋವಾ ವಿರುದ್ಧದ ಅವರ ಹಿಂದಿನ ಮುಖಾಮುಖಿಯಲ್ಲಿ ಪ್ರಭಾವ ಬೀರಿದ್ದ ಮಿಡ್‌ಫೀಲ್ಡರ್ ಹ್ಯೂಗೋ ಬೌಮಸ್ ಆಡುವುದು ಅನುಮಾನವಾಗಿದೆ. ಆದರೆ ಆತಿಥೇಯರು ಫ್ರೆಂಚ್‌ ಬೂಟ್ಗಳೊಂದಿಗೆ ಅಂಗಳಕ್ಕಿಳಿದು ತಮ್ಮ ಕಡೆಯಿಂದ ಸಾಕಷ್ಟು ಗುಣಮಟ್ಟದ ಆಟವನ್ನು ಪ್ರದರ್ಶಿಸಲಿದ್ದಾರೆ ಎಂದು ಮೂಸಾ ನಂಬುತ್ತಾರೆ.

“ಬೌಮಸ್ ಮುಂಬೈ ಪರ ಮುಂದಿನ ಪಂದ್ಯದಲ್ಲಿ ಆಡದಿರುವುದು ಅವರಿಗೆ ಸ್ವಲ್ಪ ಕಷ್ಟವಾದರೂ ಅವರನ್ನು ಪಿಚ್‌ನಲ್ಲಿ ಬದಲಿಸಲು ಯೋಗ್ಯವಾದ ಆಟಗಾರರು ತಂಡದಲ್ಲಿ ಇದ್ದು ಅವರಲ್ಲಿ ಗುಣಮಟ್ಟವಿದೆ. ಸೈ ಗೊಡ್ಡಾರ್ಡ್, ಅಹ್ಮದ್ ಜಹೌ, ರೌಲಿನ್ ಬೊರ್ಗೆಸ್ ಉತ್ತಮ ಆಯ್ಕೆಗಳಾಗಲಿದ್ದಾರೆ, ಅವರ ಬದಲಿಗೆ ಅಂಗಳಕ್ಕಿಳಿದು ಆಡುವಲ್ಲಿ ಶಕ್ತರಾಗಿರಲಿದ್ದಾರೆ. ನಮಗೆ ಸಂಕಷ್ಟಗಳು ಎದುರಾಗಬಹುದು ಸುಲಭದ ಪಂದ್ಯ ಇದಾಗಿರುವುದಿಲ್ಲ. ” ಎಂದು ಮೂಸಾ ತಿಳಿಸಿದರು.

ಜಿಎಂಸಿ ಕ್ರೀಡಾಂಗಣದಲ್ಲಿ ಕಿಕ್ ಆಫ್ ಸಂಜೆ 7.30 ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್‌ಸ್ಟಾರ್ ಮತ್ತು ಜಿಯೋ ಟಿವಿಯಲ್ಲಿ ನೇರ ಪ್ರಸಾರವಾಗಲಿದೆ.

Malcare WordPress Security