ಮಿಡ್‌ಫೀಲ್ಡರ್ ರೋಹಿತ್ ಕುಮಾರ್ ಬೆಂಗಳೂರು ಎಫ್‌ಸಿಗೆ ಸೇರ್ಪಡೆ

24 ವರ್ಷದ ಆಟಗಾರ ಬ್ಲೂಸ್ ಪರ ಆಡಲು 2ವರ್ಷದ ಒಪ್ಪಂದಕ್ಕೆ ಸಹಿ; 2020 ರ ಎಎಫ್‌ಸಿ ಕಪ್ ಅಭಿಯಾನದ ಹಿನ್ನೆಲೆಯಲ್ಲಿ ಕ್ಲಬ್‌ ತನ್ನ ಮೊದಲ ಒಪ್ಪಂದವನ್ನು ಮಾಡಿಕೊಂಡಿದೆ.

2022-23ರ ಕ್ರೀಡಾ ಆವೃತ್ತಿಯ ಅಂತ್ಯದವರೆಗೆ ಬೆಂಗಳೂರು ಎಫ್‌ಸಿ ಪರ ಆಡಲು ಮಿಡ್‌ಫೀಲ್ಡರ್ ರೋಹಿತ್ ಕುಮಾರ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮಂಗಳವಾರ ಕ್ಲಬ್ ಪ್ರಕಟಿಸಿದೆ. 24 ರ ಹರೆಯದ ಆಟಗಾರ ಈ ಆವೃತ್ತಿಯಲ್ಲಿ ಬ್ಲೂಸ್‌ ಪರ ಆಡಲು ಒಪ್ಪಿದ್ದು ತಂಡದ ಪರ ಇದು ಮೊದಲ ಒಪ್ಪಂದವಾಗಿದೆ ಮತ್ತು ಈಗಲ್ಸ್ ಎಫ್‌ಸಿ ವಿರುದ್ಧ ಮುಂಬರುವ ಎಎಫ್‌ಸಿ ಕಪ್ ಪ್ಲೇಆಫ್ ಹಣಾಹಣಿಯ ಹಿನ್ನೆಲೆಯಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ.

ದೆಹಲಿ ಮೂಲದ ಕುಮಾರ್ 2016 ನಲ್ಲಿ ಡಿ ಎಸ್ ಕೆ ಶಿವಾಜಿಯನ್ಸ್ ಅಕಾಡೆಮಿಯಲ್ಲಿ ಅಭ್ಯಾಸಮಾಡಿ ನಂತರದಲ್ಲಿ ಡುರಾಂಡ್ ಕಪ್ಗಾಗಿ 2016 ರಲ್ಲಿ ಕ್ಲಬ್‌ನ ಮೊದಲ ತಂಡಕ್ಕೆ ಸೇರ್ಪಡೆಯಾಗಿದ್ದರು. ರೋಹಿತ್ ತಮ್ಮ ಸಿನಿಯರ್ಸ್ ತಂಡದ ವೃತ್ತಿಜೀವನದ ಆರಂಭದ ಕೇವಲ ಒಂಬತ್ತು ನಿಮಿಷಗಳ ಪ್ರದರ್ಶನದಲ್ಲೇ ತಮ್ಮ ಮೊದಲ ಗೋಲನ್ನು ಗಳಿಸಿಕೊಂಡರು ಮತ್ತು ಮುಂದಿನ ಎರಡು ಪಂದ್ಯಗಳಲ್ಲಿ ಇನ್ನೂ ಮೂರು ಗೋಲ್ ಗಳಿಸಿದರು. ಅದೇ ವರ್ಷ ಐ-ಲೀಗ್‌ಗೆ ಪಾದಾರ್ಪಣೆ ಮಾಡಿದ ನಂತರ ಮಿಡ್‌ಫೀಲ್ಡರ್ ಇಂಡಿಯನ್ ಸೂಪರ್ ಲೀಗ್ ಆವೃತ್ತಿಯ ಅಂತ್ಯದಲ್ಲಿ ಎಫ್‌ಸಿ ಪುಣೆ ತಂಡಕ್ಕೆ ಸೇರ್ಪಡೆಯಾದರು.

“ಬೆಂಗಳೂರು ಎಫ್‌ಸಿ ಜೊತೆಗಿನ ಒಪ್ಪಂದ ಮತ್ತು ಮುಂಬರುವ ಸವಾಲುಗಳ ಬಗ್ಗೆ ನಾನು ತುಂಬಾ ಉತ್ಸುಕನಾಗಿದ್ದೇನೆ. ಇದು ದೇಶದ ಫುಟ್ಬಾಲ್ ಆಟಗಾರರ ನೆಚ್ಚಿನ ಕ್ಲಬ್ ಆಗಿದೆ, ಆದ್ದರಿಂದ ಈ ಅವಕಾಶವನ್ನು ಪಡೆಯುವುದು ವಿಶೇಷ ಎನಿಸಿದೆ. ಬಿಎಫ್‌ಸಿಯ ಬಗ್ಗೆ ನಾನು ಕೇಳಿದ ಎಲ್ಲ ಒಳ್ಳೆಯ ಸಂಗತಿಗಳನ್ನು ಅನುಭವಿಸಲು ಆರಂಭಿಸಿದ್ದೇನೆ ಮತ್ತು ಈ ತಂಡ ಹಾಗೂ ಅಭಿಮಾನಿಗಳಿಗಾಗಿ ಯಶಸ್ಸನ್ನು ಸಾಧಿಸುವಲ್ಲಿ ನನ್ನ ಪಾತ್ರವನ್ನು ನಿರ್ವಹಿಸಲು ನಾನು ಉತ್ಸುಕನಾಗಿದ್ದೇನೆ ”ಎಂದು ಕುಮಾರ್ ತಮ್ಮ ಒಪ್ಪಂದದ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ಹೇಳಿದರು.

ಪುಣೆ ಎಫ್ ಸಿಯೊಂದಿಗೆ ಎರಡು ವರ್ಷ ಮತ್ತು ಹೈದರಾಬಾದ್ ಎಫ್‌ಸಿಯೊಂದಿಗಿನ ಒಂದು ಆವೃತ್ತಿಯ ಈ ಅವಧಿಯಲ್ಲಿನ ಲೀಗ್‌ ಗಳಲ್ಲಿ ಒಟ್ಟು 30 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು, ಕುಮಾರ್ ಅವರ ಇತ್ತೀಚಿಗೆ ಕೇರಳ ಬ್ಲಾಸ್ಟರ್ಸ್‌ ಪರ ಆಡಿದ್ದರು.

ಪ್ರಸ್ತುತ ನಾನು ರೋಹಿತ್ ಅವರನ್ನು ಬೆಂಗಳೂರು ಎಫ್‌ಸಿಗೆ ಸ್ವಾಗತಿಸಲು ಬಯಸುತ್ತೇನೆ. ಅವರು ಯುವಕ ಮತ್ತು ಕಠಿಣ ಪರಿಶ್ರಮಿಸುವ ಫುಟ್ಬಾಲ್ ಆಟಗಾರನಾಗಿದ್ದು, ಶೀಘ್ರದಲ್ಲೇ ಪ್ರಾರಂಭವಾಗುವ ಆವೃತ್ತಿಯಲ್ಲಿ ಅವರು ತಮ್ಮ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ನಾನು ನಂಬಿದ್ದೇನೆ. ಒಬ್ಬ ತರಬೇತುದಾರನಾಗಿ, ಅವರನ್ನು ಕ್ಲಬ್‌ಗೆ ಸ್ವಾಗತಿಸಲು ನನಗೆ ತುಂಬಾ ಸಂತೋಷವಾಗಿದೆ, ಮತ್ತು ನಾನು ಅವರಿಗೆ ಉತ್ತಮ ಯಶಸ್ಸನ್ನು ಬಯಸುತ್ತೇನೆ ”ಎಂದು ಮುಖ್ಯ ತರಬೇತುದಾರ ಮಾರ್ಕೊ ಪೆಜೈಯುಲಿ ಹೇಳಿದರು. ಮೂಲತಃ ರಕ್ಷಣಾತ್ಮಕ ಮಿಡ್‌ಫೀಲ್ಡರ್ ಆಗಿರುವ ರೋಹಿತ್ ರವರು, ನೇಪಾಳದಲ್ಲಿ ನಡೆದ 2015 ರ SAFF ಅಂಡರ್ -19 ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅಂಡರ್ -19 ತಂಡವನ್ನು ಪ್ರತಿನಿಧಿಸಿದ್ದರು.

Malcare WordPress Security