ಹತ್ತೊಂಬತ್ತರ ಹರೆಯ ಬ್ಲೂಸ್‌ನೊಂದಿಗೆ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ
ಬೆಂಗಳೂರು ಎಫ್‌ಸಿ, 19 ವರ್ಷದ ಅಟ್ಯಾಕರ್ ಹರ್ಮನ್‌ಪ್ರೀತ್ ಸಿಂಗ್ ಜೊತೆ ಭಾನುವಾರದಂದು ಒಪ್ಪಂದ ಮಾಡಿಕೊಂಡಿರುವುದಾಗಿ ಪ್ರಕಟಿಸಿದೆ. ಯುನೈಟೆಡ್ ಪಂಜಾಬ್ ಎಫ್‌ಸಿಯ ಆಟಗಾರನಾಗಿದ್ದ ಮಾಜಿ ಈಸ್ಟ್ ಬೆಂಗಾಲ್ ತಂಡದ ವಿಂಗರ್ ಉಚಿತ ವರ್ಗಾವಣೆಯ ಮೂಲಕ ಸೇರಲಿದ್ದು, ಈಗಲ್ಸ್ ಎಫ್‌ಸಿ ವಿರುದ್ಧದ ಮುಂಬರುವ ಎಎಫ್‌ಸಿ ಕಪ್ ಪ್ಲೇಆಫ್ ಹಂತದ ಪಂದ್ಯಕ್ಕೂ ಮುನ್ನ ಬ್ಲೂಸ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.
ಹರ್ಮನ್‌ಪ್ರೀತ್ 2018 ರಲ್ಲಿ ಇಂಡಿಯನ್ ಆರೋಸ್ ಪರ ಆಡುತ್ತಿದ್ದರು ನಂತರ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ತಂಡದ ಚೊಚ್ಚಲ ಆವೃತ್ತಿಗಾಗಿ ತಂಡದಲ್ಲಿ ಆಡುವ ಮುನ್ನ ಐ-ಲೀಗ್‌ನ 14 ಪಂದ್ಯಗಳಲ್ಲಿ ಆಡುವ ಅನುಭವ ಪಡೆದುಕೊಂಡಿದ್ದರು. ಕಳೆದ ಆವೃತ್ತಿಯಲ್ಲಿ ಏಳು ಬಾರಿ ರೆಡ್ ಅಂಡ್ ಗೋಲ್ಡ್ ಬ್ರಿಗೇಡ್ ಅನ್ನು ಪ್ರತಿನಿಧಿಸಿದ ಪಂಜಾಬ್ ನಿವಾಸಿ ಬ್ಲೂಸ್‌ನೊಂದಿಗೆ ಹೊಸ ಸವಾಲನ್ನು ಎದುರಿಸುವ ಪಣತೊಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.
“ನಾನು ಬೆಂಗಳೂರು ಎಫ್‌ಸಿ ತಂಡ ಸೇರಿಕೊಳ್ಳಲು ಖುಷಿಯಾಗಿದ್ದೇನೆ. ಈ ತಂಡ ತನ್ನ ಅಸ್ತಿತ್ವದ ಸಮಯದಿಂದಲೂ ಯಶಸ್ವಿಯಾಗಿರುವ ಕ್ಲಬ್ ಮತ್ತು ಆಟಗಾರರು ಎಷ್ಟು ಚಿಕ್ಕವರಾಗಿದ್ದರೂ ಅವರ ಮೇಲೆ ನಂಬಿಕೆ ಇಟ್ಟು ಅವಕಾಶ ಕಲ್ಪಿಸುತ್ತದೆ. ನಾನು ಹೊಸ ಆವೃತ್ತಿಯತ್ತ ಎದುರು ನೋಡುತ್ತಿದ್ದೇನೆ ಮತ್ತು ತಂಡದಲ್ಲಿನ ದೇಶದ ಅತ್ಯಂತ ಅನುಭವಿ ಆಟಗಾರರಿಂದ ಕಲಿತುಕೊಳ್ಳಲಿದ್ದೇನೆ – ವಿಶೇಷವಾಗಿ ಸುನಿಲ್ ಭಾಯ್ ಮತ್ತು ಗುರ್‌ಪ್ರೀತ್ ಭಾಯ್ ಅವರಂತಹವರಿಂದ. ಈ ಕ್ಲಬ್‌ಗಾಗಿ ನನ್ನ ಅತ್ಯುತ್ತಮ ಪ್ರದರ್ಶನಗಳನ್ನು ನೀಡುತ್ತಾ, ತಂಡಕ್ಕಾಗಿ ಟ್ರೋಫಿಗಳನ್ನು ಗೆಲ್ಲಲು ನಾನು ಬಯಸುತ್ತೇನೆ ”ಎಂದು ಹರ್ಮನ್‌ಪ್ರೀತ್ ಹೇಳಿದರು.
ಅಂತಿಮ ಮೂರನೇ ಹಂತದ ಆಟದಲ್ಲಿ ವಿವಿಧ ಸ್ಥಾನಗಳಲ್ಲಿ ಆಡುವ ಸಾಮರ್ಥ್ಯ ಹೊಂದಿರುವ ಬಹುಮುಖಿ, ಶ್ರಮವಹಿಸುವ ಆಟಗಾರ – ಹರ್ಮನ್‌ಪ್ರೀತ್ ಫುಟ್‌ಬಾಲ್ ಆಟಗಾರರ ಕುಟುಂಬದಿಂದ ಬಂದವರು. ಅವರ ತಂದೆ ಸತ್ನಾಮ್ ಸಿಂಗ್ ಪಂಜಾಬ್ ಪೋಲಿಸ್ ಪರ ಆಡಿದ್ದರೆ, ಅವರ ಚಿಕ್ಕಪ್ಪ ಜೆಸಿಟಿ ಫಾಗ್ವಾರಾ ಪರ ಆಡಿ, ಅವರೊಂದಿಗೆ ಪ್ರತಿಷ್ಠಿತ ಡುರಾಂಡ್ ಕಪ್ ಗೆಲುವಿನಲ್ಲಿ ಪಾತ್ರವಹಿಸಿದ್ದಾರೆ.
“ನಾನು ಹರ್ಮನ್‌ಪ್ರೀತ್‌ನನ್ನು ಬೆಂಗಳೂರು ಎಫ್‌ಸಿಗೆ ಸ್ವಾಗತಿಸಲು ಬಯಸುತ್ತೇನೆ. ಆತ ಒಬ್ಬ ಯುವ ಆಟಗಾರನಾಗಿದ್ದು, ಅಟ್ಯಾಕ್ ಮತ್ತು ವಿಂಗ್ಸ್ ಅಲ್ಲಿ ನಮಗೆ ಒಂದು ಆಯ್ಕೆಯಾಗಿ ಸ್ಥಾನ ತುಂಬಲಿದ್ದಾರೆ ಮತ್ತು ಅವರು ಅನುಭವವನ್ನು ಹೊಂದಿರುವ ಡ್ರೆಸ್ಸಿಂಗ್ ಕೋಣೆಯ ಪ್ರಯೋಜನ ಪಡೆಯಲಿದ್ದಾರೆ ಎಂಬ ಖಾತ್ರಿ ನನಗಿದೆ. ಕ್ಲಬ್‌ನೊಂದಿಗಿನ ಈ ಹೊಸ ಪ್ರಯಾಣದಲ್ಲಿ ಅವರಿಗೆ ಶುಭ ಹಾರೈಸುತ್ತೇನೆ ”ಎಂದು ಬ್ಲೂಸ್‌ನ ಮುಖ್ಯ ಕೋಚ್ ಮಾರ್ಕೊ ಪೆಜೈಯುಲಿ ತಿಳಿಸಿದರು.