ಬ್ಲೂ ಕೋಲ್ಟ್ಸ್ 3-2 ಅಂತರದಿಂದ ಎಫ್‌ಸಿಬಿಯು ವಿರುದ್ಧ ಸೋಲು ಅನುಭವಿಸಿದೆ

ಸಂಶಯಾಸ್ಪದ ನಿರ್ಧಾರಗಳು ಬಿಎಫ್‌ಎಸ್‌ನಲ್ಲಿ ಕಂಡುಬಂದವು; ಪಂದ್ಯದ ನಂತರದ ಗಲಿಬಿಲಿಯಲ್ಲಿ ಹರ್ಪ್ರೀತ್ಗೆ ಕೆಂಪು ಕಾರ್ಡ್ ನೀಡಲಾಯಿತು.

ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಸೋಮವಾರದಂದು ಬೆಂಗಳೂರು ಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್ ಡಿವಿಷನ್ ಲೀಗ್‌ನಲ್ಲಿ ಪಂದ್ಯವನ್ನು ಗೆಲ್ಲುವ ಅವಕಾಶದಿಂದ ಹಿಂದೂಡಲಾಯಿತು. ಪ್ರಶ್ನಾರ್ಹ ತೀರ್ಪುಗಳಿಂದಾಗಿ 3-2 ಅಂತರದಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್ ಗೆಲುವಿಗೆ ಕಾರಣವಾಯಿತು. ಶಿವಶಕ್ತಿ ಮತ್ತು ದಮೈತ್‌ಫಾಂಗ್ ಲಿಂಗ್‌ಡೊ ಅವರ ಗೋಲ್ಗಳು ಬ್ಲೂ ಕೋಲ್ಟ್ಸ್ ತಂಡವನ್ನು ಗೋಲ್ ಅಂತರದಲ್ಲಿ ಸಮನಾಗಿಸಿದವು. ಆದರೆ ಎಫ್‌ಸಿಬಿಯು ಆಟದ ಕೊನೆಯ ಕಿಕ್‌ನಿಂದ ಎಲ್ಲಾ ಮೂರು ಪಾಯಿಂಟ್‌ಗಳನ್ನು ತೆಗೆದುಕೊಂಡು ಲೀಗ್ ಟೇಬಲ್‌ನ ಅಗ್ರಸ್ಥಾನವನ್ನು ಗಳಿಸಿತು, ಪಂದ್ಯದ ನಿಯಂತ್ರಣ ಸಮಯದ ನಂತರ ಬಿಎಫ್‌ಸಿ ರಕ್ಷಕ ಹರ್ಪ್ರೀತ್ ಸಿಂಗ್ ಅವರಿಗೆ ಕೆಂಪು ಕಾರ್ಡ್ ತೋರಿಸಲಾಯ್ತು.

ಕಿಕ್‌ಆಫ್‌ನಿಂದಲೇ ಬ್ಲೂ ಕೋಲ್ಟ್ಸ್ ದಾಳಿಯಲ್ಲಿದ್ದವು, ತ್ವರಿತ ಪಾಸ್‌ಗಳು ಮತ್ತು ಎಫ್‌ಸಿಬಿಯು ತಂಡದ ರಕ್ಷಣಾ ರೇಖೆಗಳ ನಡುವಿನ ಚಲನವಲನ ಅದ್ಭುತವಾಗಿ ಕಂಡುಬಂತು. ಗುರಿಯತ್ತದ ಮೊದಲ ಶಾಟ್ 5 ನೇ ನಿಮಿಷದಲ್ಲಿ ತಂಡದ ಅಗ್ರ ಸ್ಕೋರರ್ ಶಿವಶಕ್ತಿ ಮೂಲಕ ಬಂದಿತು, ಅವರ ಪ್ರಯತ್ನವನ್ನು ಬೆಂಗಳೂರು ಯುನೈಟೆಡ್ ತಂಡದ ಕಸ್ಟೋಡಿಯನ್ ಕುನ್ಜಾಂಗ್ ಭುಟಿಯಾ ಅವರು ದಮೈತ್‌ಫಾಂಗ್ ಲಿಂಗ್ಡೊ ಮೂಲಕ ಆಡಿದ ನಂತರ ಉಳಿಸಿದರು.

ಆಟದ ಓಟಕ್ಕೆ ವಿರುದ್ಧವಾಗಿ, ಬೆಂಗಳೂರು ಯುನೈಟೆಡ್ 10 ನೇ ನಿಮಿಷದಲ್ಲಿ ಮಾಲೆಂಗಂಬಾ ಮೀಟೆಯವರ ಮೂಲಕ ಗೋಲ್ ಪಡೆಯುವ ಅವಕಾಶಕ್ಕೆ ಸನಿಹದಲ್ಲಿತ್ತು. ಬಾಕ್ಸ್‌ ಬಳಿ ಶರೋನ್ ಶಿವನ್ ಅವರೊಂದಿಗೆ ಒಬ್ಬರಿಗೊಬ್ಬರು ಪಾಸ್ ಕೊಡುತ್ತಾ ಮುನ್ನುಗ್ಗಿದರು. ವಿಂಗರ್ ನ ಲೋ ಪಾಸ್ ಅನ್ನು ತಡೆಯಲಾಯಿತು.

ಆರಂಭಿಕ ಗೋಲು ಪಡೆಯಲು ಸತತ ಪ್ರಯತ್ನದಲ್ಲಿದ್ದ ಬ್ಲೂ ಕೋಲ್ಟ್ಸ್ ಎರಡು ಬಾರಿ ಹತ್ತಿರದ ಅವಕಾಶ ಕಳೆದುಕೊಂಡಿತ್ತು. ಮೊದಲನೆಯದಾಗಿ, ಬಾಕ್ಸ್ ಅಂಚಿನಿಂದ ಆಕಾಶ್‌ದೀಪ್ ಸಿಂಗ್ ತನ್ನ ಗೋಲ್ ಯತ್ನ ಮಾಡಿದರು ಆದ್ರೆ ಡೈವಿಂಗ್ ಭುಟಿಯಾ ಉಳಿಸಿದರು. ಆ ನಂತರ ಶಿವಶಕ್ತಿಯ ಲೂಪಿಂಗ್ ಹೆಡರ್ ಗೋಲ್ ಪ್ರಯತ್ನ ಪೋಸ್ಟ್ ಇಂದ ದೂರವಾಗಿ ಸರಿದು ಅಂಕ ತರಲಿಲ್ಲ.

ಆದಾಗ್ಯೂ, ಎಫ್‌ಸಿಬಿಯು ಜಿದ್ದಾಜಿದ್ದಿನ ಅಂಕ ಜಗ್ಗಾಟದಲ್ಲಿ ಮೊದಲ ಅಂಕ ಪಡೆಯಿತು. ಟ್ರಿನಿಡಾಡ್ ಮತ್ತು ರಾಬರ್ಟ್ ಪ್ರಿಮಸ್ ಅಂಗಳದ ಮೂಲೆಯಿಂದ ಎತ್ತರಕ್ಕೆ ಜಿಗಿದು ದೂರದ ಪೋಸ್ಟ್‌ನಲ್ಲಿ ಚೆಂಡನ್ನು ತಳ್ಳಿ 1-0 ಗೋಲುಗಳ ಮುನ್ನಡೆ ಸಾಧಿಸಿತು.

ಪಂದ್ಯದ ಅರ್ಧ ಸಮಯದ ಮುನ್ನ, ಡಮೈಟ್‌ಫಾಂಗ್ ಅಂಗಳದ ಅರ್ಧದಿಂದ ಎಫ್‌ಸಿಬಿಯು ಬಾಕ್ಸ್ ಅತ್ತ ಓಡಿ ಗೋಲ್ ಯತ್ನಮಾಡಿದರಾದರೂ, ತನ್ನ ಲೋ ಶಾಟ್ ಅನ್ನು ಭೂಟಿಯಾ ಉಳಿಸಿದರು. ವಿರಾಮದ ಸಮಯದಲ್ಲಿ ಬ್ಲೂ ಕೋಲ್ಟ್ಸ್ ಹಿನ್ನಡೆಯಲ್ಲಿತ್ತು.

ದ್ವಿತೀಯಾರ್ಧದ 13 ನಿಮಿಷಗಳ ಆಟದ ನಂತರ ಬ್ಲೂ ಕೋಲ್ಟ್ಸ್ ಸಮಾನ ಅಂಕ ಗಳಿಸಿ ಪಂದ್ಯಕ್ಕೆ ಮರಳಿದರು. ಶಿವಶಕ್ತಿ ಎಫ್‌ಸಿಬಿಯುನ ಡಿಫೆನ್ಸ್ ನಡುವೆ ಜಾಗವನ್ನು ಕಂಡುಕೊಂಡರು, ಕಲಾಮೇಶ್‌ ಅವರ ಚೆಂಡಿನ್ನು ಪಡೆದ ಶಿವಶಕ್ತಿ ತಮ್ಮ ಹೊಡೆತವನ್ನು ಕೀಪರ್‌ನ ಎಡಭಾಗದಲ್ಲಿ ತೆಗೆದುಕೊಂಡರು. ತಂಡದ ಅಂಕವನ್ನು 1-1 ಮಾಡಿದರು.

ಅಲ್ಲಿಂದ ಎಫ್‌ಸಿಬಿಯು ತಂಡ ಮುನ್ನಡೆ ಸಾಧಿಸಲು ಕೇವಲ ಐದು ನಿಮಿಷಗಳನ್ನು ತೆಗೆದುಕೊಂಡಿತು. ಒಂದು ಮೂಲೆಯಿಂದ, ಡೇನಿಯಲ್ ಕಾರ್ ಚೆಂಡನ್ನು ದೂರದ ಪೋಸ್ಟ್ ಮೂಲೆಯಲ್ಲಿ ಇರಿಸಲು ಯಶಸ್ವಿಯಾದರು. ತಂಡದ ಮೊತ್ತವನ್ನು 2-1 ಗೆ ಏರಿಸಿದರು.

ಪೋಸ್ಟಲ್ಲಿ ರಾಬಿನ್ ಗುರುಂಗ್ ಅವರ ಹ್ಯಾಂಡ್‌ಬಾಲ್ ಅನ್ನು ಒಪ್ಪಿಕೊಳ್ಳಲು ರೆಫ್ರಿ ನಿರಾಕರಿಸಿದಾಗ ಅಂತರ ಪುನಃಸ್ಥಾಪಿಸಲು ಬ್ಲೂ ಕೋಲ್ಟ್‌ಗಳಿಗೆ ಅವಕಾಶ ಸಿಗಲಿಲ್ಲ. ಆದಾಗ್ಯೂ, ಬಿಎಫ್‌ಸಿ ಸತತ ಪ್ರಯತ್ನದೊಂದಿಗೆ ಎಫ್‌ಸಿಬಿಯು ಮೇಲೆ ಆಕ್ರಮಣ ಮಾಡುತ್ತಲೇ ಇತ್ತು ಮತ್ತು ನಿಲುಗಡೆ ಸಮಯಕ್ಕೆ ಅವಕಾಶ ನೀಡಲಾಯಿತು. ಒಂದು ಕಾರ್ನರ್ ಅಲ್ಲಿ ಬಾಕ್ಸ್ ತುದಿಯನ್ನು ಗುರುತಿಸಲಾಯ್ತು, ದಮೈತ್‌ಫಾಂಗ್ ತನ್ನ ಹೆಡರ್ ಅನ್ನು ಮೇಲಿನ ಮೂಲೆಯಲ್ಲಿ ಕೀಪರ್ ಅನ್ನು ತಪ್ಪಿಸಿದರೂ ಗೋಲ್ ಸಿಗಲಿಲ್ಲ.

ಕಿರಣ್ ಸರ್ವನನ್ ಮತ್ತು ಗುರುಂಗ್ ಮತ್ತೊಮ್ಮೆ ಪೋಸ್ಟ್ ಅಲ್ಲಿ ಹ್ಯಾಂಡ್‌ಬಾಲ್‌ಗಳಿಗಾಗಿ ಬ್ಲೂ ಕೋಲ್ಟ್‌ಗಳಿಗೆ ಎರಡು ಸ್ಟೋನ್‌ವಾಲ್ ಪೆನಾಲ್ಟಿಗಳನ್ನು ನಿರಾಕರಿಸಲಾಯಿತು, ಆಟಗಾರರು ಮತ್ತು ಅಭಿಮಾನಿಗಳ ಪ್ರತಿಭಟನೆಯ ಹೊರತಾಗಿಯೂ ರೆಫರಿ ಅದನ್ನು ನಿರ್ಲಕ್ಷಿಸಲು ಆಯ್ಕೆ ಮಾಡಿಕೊಂಡರು.

ಆಟದ ಅಂತ್ಯದಲ್ಲಿ ಈಕ್ವಲೈಜರ್ ಪಡೆದಿದ್ದರೂ ಸಹ, ಎಫ್‌ಸಿಬಿಯು ದಿನದ ಅಂತಿಮ ಕಿಕ್‌ನೊಂದಿಗೆ 3-2 ಮುನ್ನಡೆ ಸಾಧಿಸುವ ಮೂಲಕ ಅಂತಿಮ ಅವಕಾಶವನ್ನು ಪರಿವರ್ತಿಸಿತು ಮತ್ತು ಅಂಕಪಟ್ಟಿಯ ಅಗ್ರಸ್ಥಾನಕ್ಕೆ ಜಿಗಿಯಿತು, ಆಟದ ಓಟವನ್ನು ಅಂತಿಮ ಸುತ್ತಿಗೆ ಪಂದ್ಯದ ಫಲಿತಾಂಶ ಕೊಂಡೊಯ್ದಿತು.

ಮಾರ್ಚ್ 14 ರಂದು ಬೆಂಗಳೂರು ಎಫ್‌ಸಿ ತಂಡವು ಕಿಕ್‌ಸ್ಟಾರ್ಟ್ ಎಫ್‌ಸಿಯನ್ನು ತಮ್ಮ ಅಭಿಯಾನದ ಕೊನೆಯ ಪಂದ್ಯದಲ್ಲಿ ಎದುರಿಸಲಿದ್ದಾರೆ.

Malcare WordPress Security