ಬ್ಲೂ ಕೋಲ್ಟ್ಸ್ 1-0 ಅಂತರದೊಂದಿಗೆ ಬೆಂಗಳೂರು ಈಗಲ್ಸ್‌ ವಿರುದ್ಧ ಪ್ರಥಮ ಸೋಲು

ಕ್ಲೆಟಸ್‌ ಪಾಲ್ ತನ್ನ ಕೊನೆ ನಿಮಿಷದ ಸ್ಟ್ರೈಕ್ ಇಂದ ಬೆಂಗಳೂರು ಎಫ್‌ಸಿ ತಂಡಕ್ಕೆ ಬಿಡಿಎಫ್‌ಎ ಸೂಪರ್ ಡಿವಿಷನ್ ಲೀಗ್‌ನಲ್ಲಿ ಮೊದಲ ಆಘಾತ ನೀಡಿದರು.

ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಬೆಂಗಳೂರು ಈಗಲ್ಸ್ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಮ್ಮ ಸತತ ಆರು ಪಂದ್ಯಗಳ ಗೆಲುವಿನ ಓಟವನ್ನು ಕೊನೆಗೊಳಿಸಿದೆ. ಕ್ಲೆಟಸ್ ಪಾಲ್ ಸಿಡಿಸಿದ ಕೊನೆಯ ಕ್ಷಣದ ಗೋಲ್ ಆವೃತ್ತಿಯಲ್ಲಿ ಮೊದಲ ಬಾರಿಗೆ ಸಂದೇಶ್ ಭೋಯಿಟ್ ಅವರ ಅಂಕಗಳನ್ನು ಕಸಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ, ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡಕ್ಕಿಂತ ಒಂದು ಅಂಕದ ಹಿನ್ನಡೆಯೊಂದಿಗೆ ಅಂಕಪಟ್ಟಿಯಲ್ಲಿ ಬಿ ಎಫ್ ಸಿ ಎರಡನೇ ಸ್ಥಾನದಲ್ಲಿದೆ.

ಉಭಯ ತಂಡಗಳು ಎದುರಾಳಿಯ ಮೇಲೆ ಒತ್ತಡ ಹೇರಿ ಅವಕಾಶ ಪಡೆಯುವ ಪ್ರಯತ್ನವು ಅತ್ಯಾಕರ್ಷಕ ಪ್ರಥಮಾರ್ಧದ ಕೊನೆಯವರೆಗೆ ಕಂಡುಬಂದಿತು. ಎರಡೂ ಕಡೆಯವರು ತಮ್ಮ ಅಟ್ಯಾಕ್ ಅನ್ನು ನೆಚ್ಚಿಕೊಂಡು ಮುನ್ನಡೆಯುತ್ತಿದ್ದಾಗ, ಜಿದ್ದಾಜಿದ್ದಿನ ಹೋರಾಟ ಮಿಡ್‌ಫೀಲ್ಡ್‌ ಅಲ್ಲಿ ಹೆಚ್ಚಾಯ್ತು. ಉತ್ತಮ ಸೆಟ್-ಪೀಸ್ ನಂತರ ಕಮಲೇಶ್ ಚೆಂಡನ್ನು ಗೋಲ್ ಪೋಸ್ಟ್ಗೆ ಸೇರಿಸಿದ್ದರು. ಬೆಂಗಳೂರು ಪಂದ್ಯದ ಅರ್ಧದ ಹಂತದಲ್ಲಿ ಮುನ್ನಡೆ ಸಾಧಿಸಿತು, ಆದರೆ ದೂರದ ಬದಿಯಲ್ಲಿರುವ ನಿರ್ಣಾಯಕರ ಸಹಾಯಕ ತಮ್ಮ ಧ್ವಜವನ್ನು ಆಫ್‌ಸೈಡ್ಗಾಗಿ ತೋರಿದ್ದರು.

ಮಹಮ್ಮದ್ ಇನಾಯತ್ ಮತ್ತು ಶಿವಶಕ್ತಿಗೆ ಗೋಲ್ ಅವಕಾಶಗಳು ದೊರೆತವಾದರೂ ಪರಿವರ್ತಿಸಲು ಅವರಿಂದ ಸಾಧ್ಯವಾಗಲಿಲ್ಲ. ಬೆಂಗಳೂರು ಎರಡನೇ ಅವಧಿಯನ್ನು ಬಲವಾಗಿ ಪ್ರಾರಂಭಿಸಿತು, 71 ನೇ ನಿಮಿಷದಲ್ಲಿ ಬ್ಲೂ ಕೋಲ್ಟ್ಸ್ ಅಂಕ ಪಡೆಯುವ ಸನಿಹದಲ್ಲಿ ಇನಾಯತ್ ಅವಕಾಶ ಪಡೆದಿದ್ದರು. ಆದರೆ ಆ ಹೊಡೆತದ ನಂತರ ಪೋಸ್ಟ್ ಅಂಚಿನಲ್ಲಿ ಗೋಲ್ ಆಗುವ ಸಂಭವವನ್ನು ಮೂಲೆಯಲ್ಲಿ ನುಸುಳುತ್ತಿರುವಂತೆಯೇ ಎದುರಾಳಿ ತಂಡದ ಕೀಪರ್ ನಿಹಾಲ್ ಹುಸೇನ್ ತಡೆದು ನಿಲ್ಲಿಸಿದರು.

ಸ್ವಲ್ಪ ಸಮಯದ ನಂತರ ಇನಾಯತ್ ಅವರು ಎಂಬೊಕ್ಲಾಂಗ್ ನೊಂಗ್ಖ್ಲಾವ್‌ಗೆ ದಾರಿ ಮಾಡಿಕೊಟ್ಟರೆ, ಪಂದ್ಯದಲ್ಲಿನ ಅಗತ್ಯತೆಯ ಅನುಸಾರ ಭೋಯಿಟ್ ಅವರು ಬೆಕಿ ಓರಮ್‌ ಬದಲು ದಮೈತ್‌ಫಾಂಗ್ ಲಿಂಗ್‌ಡೊಹ್‌ಗೆ ಆಡಲು ಸ್ಥಾನ ಕಲ್ಪಿಸಿಕೊಟ್ಟರು.

ಸತತ ಏಳನೇ ಗೆಲುವು ಸಾಧಿಸಲು ಉತ್ಸುಕರಾಗಿದ್ದ ಬ್ಲೂ ಕೋಲ್ಟ್ಸ್ ಪೋಸ್ಟ್ ಬಳಿಯ 15ಯಾರ್ಡ್ ಅಂತರದಲ್ಲಿ ಚೆಂಡನ್ನು ಎದುರಾಳಿಗೆ ಬಿಟ್ಟುಕೊಟ್ಟರು. ಈಗಲ್ಸ್ ಆಕ್ರಮಣ ಮಾಡಿ ಚೆಂಡನ್ನು ಪಾಲ್ ಗೆ ತಲುಪಿಸುವಲ್ಲಿ ಯಶಸ್ವಿಯಾದರು, ನಂತರ ಶರೋನ್ ಶಿವನ್ ಅವರನ್ನು ಹಿಂದಿಕ್ಕಿ ಮುನ್ನಡೆದು ಅಂಕ ಗಳಿಸಿ, ಅಂತಿಮ ಶಿಳ್ಳೆ ತನಕ ಅವರು ಚೆಂಡನ್ನ ರಕ್ಷಿಸಿಕೊಂಡು ತಮ್ಮ ತಂಡಕ್ಕೆ ಮುನ್ನಡೆಯನ್ನು ಪಡೆದರು.

ಫೆಬ್ರವರಿ 22 ರಂದು ಬೆಂಗಳೂರು ಇಂಡಿಪೆಂಡೆಂಟ್ಸ್ ಎಫ್‌ಸಿ ವಿರುದ್ಧ ಬೆಂಗಳೂರು ಎಫ್‌ಸಿ ಆಡಲಿದೆ.

Malcare WordPress Security