ಬ್ಲೂ ಕೋಲ್ಟ್ಸ್ ಬಿಡಿಎಫ್ಎ ಸೂಪರ್ ಡಿವಿಷನ್ ಲೀಗ್ನಲ್ಲಿ ಆಡಲು ಸಿದ್ಧ

ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಯಂಗ್ ಚಾಲೆಂಜರ್ಸ್ ಎಫ್ಸಿ ಅನ್ನು ಬೆಂಗಳೂರು ಎಫ್ಸಿ ಮೊದಲ ಪಂದ್ಯದಲ್ಲಿ ಎದುರಿಸಲಿದೆ.

ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಯಂಗ್ ಚಾಲೆಂಜರ್ಸ್ ಎಫ್‌ಸಿ ವಿರುದ್ಧ, ಪ್ರತಿಷ್ಠಿತ ಬಿಡಿಎಫ್‌ಎ ಸೂಪರ್ ಡಿವಿಷನ್ ಲೀಗ್‌ನ 2020-21ರ ಆವೃತ್ತಿಯ ಮೊದಲ ಪಂದ್ಯವನ್ನು ಹಾಲಿ ಚಾಂಪಿಯನ್ ಬೆಂಗಳೂರು ಎಫ್‌ಸಿ ಶುಕ್ರವಾರ ಪ್ರಾರಂಭಿಸಲಿದೆ.

COVID-19 ಸಾಂಕ್ರಾಮಿಕ ರೋಗದಿಂದ ಉಂಟಾದ ಒತ್ತಡಭರಿತ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಕಳೆದ ಆವೃತ್ತಿಯಲ್ಲಿ ತಂಡದ ಗೆಲುವುಗಳಿಗೆ ಕಾರಣರಾದ ಹಲವು ಆಟಗಾರರು ಗೋವಾದಲ್ಲಿ ಮೊದಲ ತಂಡವನ್ನು ಇಂಡಿಯನ್ ಸೂಪರ್ ಲೀಗ್ ಗಾಗಿ ಸೇರ್ಪಡೆಗೊಂಡಿರುವುದರೊಂದಿಗೆ, 2018-19 ಮತ್ತು 2019-20ರಲ್ಲಿ ಪ್ರಶಸ್ತಿ ಗೆದ್ದ ಬ್ಲೂಸ್ ಕೋಲ್ಟ್ಸ್ ಈ ಬಾರಿ ಕಠಿಣ ಸವಾಲನ್ನು ಎದುರಿಸಬೇಕಾಗುತ್ತದೆ.

“ನಾವು ಬಿಡಿಎಫ್ಎ ಸೂಪರ್ ಡಿವಿಷನ್ ಲೀಗ್‌ನ ಕೊನೆಯ ಎರಡು ಆವೃತ್ತಿಗಳಲ್ಲಿ ಪ್ರಬಲ ಪ್ರದರ್ಶನ ನೀಡಿದ್ದೇವೆ, ಮತ್ತು ಆ ತಂಡಗಳ ಅನೇಕ ಆಟಗಾರರು ನಮ್ಮ ಮೊದಲ ತಂಡವನ್ನು ಅಥವಾ ಹಲವಾರು ಇತರ ಭಾರತೀಯ ಕ್ಲಬ್‌ಗಳಲ್ಲಿ ಮೊದಲ ತಂಡಗಳನ್ನು ಸೇರಲು ಹೋಗಿದ್ದಾರೆ. ನಾವು ಇಲ್ಲಿಯವರೆಗೆ ಆಡಿದ ಕೆಲವು ಸ್ನೇಹಪರ ಆಟಗಳಲ್ಲಿ ನಮ್ಮ ಪ್ರಸ್ತುತ ಹುಡುಗರ ಗುಂಪು ಉತ್ತಮ ಪ್ರದರ್ಶನ ನೀಡಿದೆ, ಮತ್ತು ನಾವು ಆ ಫಾರ್ಮ್ ಅನ್ನು ಲೀಗ್‌ಗೆ ತೆಗೆದುಕೊಂಡು ಹೋಗುವ ಭರವಸೆ ಹೊಂದಿದ್ದೇವೆ ”ಎಂದು ಬೆಂಗಳೂರಿನಲ್ಲಿ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಸಂದೇಶ್ ಭೋಯಿಟ್ ಹೇಳಿದರು.

ಈ ವಾರದ ಆರಂಭದಲ್ಲಿ ಪ್ರಾರಂಭವಾದ ಲೀಗ್ ಹದಿಮೂರು ತಂಡಗಳನ್ನು ಒಳಗೊಂಡಿದೆ, ಆಟಗಳನ್ನು ಒಂದೇ ಲೆಗ್ ಮಾದರಿಯಲ್ಲಿ ಆಡಲಿದ್ದು, ಪ್ರೇಕ್ಷಕರಿಗೆ ಅವಕಾಶವಿಲ್ಲದೆ ಪಂದ್ಯಾವಳಿ ನಡೆಸಲಾಗುತ್ತದೆ. ಗೋವಾದಲ್ಲಿ ಕ್ಲಬ್‌ನ ಮೊದಲ ತಂಡದ ಉಸ್ತುವಾರಿ ವಹಿಸಿಕೊಂಡಿರುವ ಯೂತ್ ಡೆವೆಲಪ್ಮೆಂಟ್ ಮುಖ್ಯಸ್ಥ ನೌಶಾದ್ ಮೂಸಾ, ಇನ್ನೂ ಅನೇಕ ಯುವಕರು ಈ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ ಎಂದು ಹೇಳಿದರು.

“ನೀವು ನೋಡುವಂತೆ, ಈ ವರ್ಷ ಸೂಪರ್ ಡಿವಿಷನ್ ಲೀಗ್‌ ಅಲ್ಲಿ ಆಡುತ್ತಿರುವ ನಮ್ಮ ಬೆಂಗಳೂರು ಎಫ್‌ಸಿ ತಂಡದ ಅನೇಕ ಆಟಗಾರರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಮತ್ತು ಕೆಲವರು ಇನ್ನೂ ಕಿರಿಯರಿದ್ದಾರೆ. ಲೀಗ್ ನಮ್ಮ ಕಿರಿಯರಿಗೆ ತಾವು ಫುಟ್ಬಾಲ್ ಆಟಗಾರರಾಗಿ ಬೆಳೆಯಲು ಮತ್ತು ಆಟಗಳಲ್ಲಿ ಆಡುವಾಗ ಅವಶ್ಯವಾಗಿ ಅಮೂಲ್ಯವಾದ ಅನುಭವವನ್ನು ಪಡೆಯಲು ಉತ್ತಮ ಮತ್ತು ಸ್ಪರ್ಧಾತ್ಮಕವಾಗಿ ದೈಹಿಕ ದೃಢತೆಯ ಸತ್ವ ಪರೀಕ್ಷೆಯನ್ನು ಮಾಡಿಕೊಳ್ಳಲು ಇದು ವೇದಿಕೆಯನ್ನು ನೀಡುತ್ತದೆ. ಮುಂಬರುವ ವರ್ಷಗಳಲ್ಲಿ ಈ ಆಟಗಾರರಲ್ಲಿ ಹೆಚ್ಚಿನವರು ಮೊದಲ ತಂಡಕ್ಕೆ ಕಾಲಿಡುವುದನ್ನು ನಾನು ನೋಡುತ್ತೇನೆ ”ಎಂದು ಗೋವಾದಲ್ಲಿನ ಕ್ಲಬ್‌ನ ತಂಡದ ಬಯೋ ಬಬಲ್ ಪರಿವೀಕ್ಷಕರೂ ಆಗಿರುವ ಮೂಸಾ ಹೇಳಿದರು.

ಎಫ್‌ಸಿ ಬೆಂಗಳೂರು ಯುನೈಟೆಡ್ ವಿರುದ್ಧದ ಆಟದಲ್ಲಿ 3-3ರ ಸಮಬಲ ಸಾಧಿಸುವ ಮುನ್ನ ಬ್ಲೂ ಕೋಲ್ಟ್ಸ್ ತಮ್ಮ ಆವೃತ್ತಿಪೂರ್ವದ ಪಂದ್ಯವೊಂದರಲ್ಲಿ ಕಿಕ್‌ಸ್ಟಾರ್ಟ್ ಎಫ್‌ಸಿಗೆ 2-1 ಅಂತರದಲ್ಲಿ ಸೋಲು ಅನುಭವಿಸಿತ್ತು. ನಂತರ ಯುವ ಆಟಗಾರರ ಸ್ಥಿರ ಪ್ರಯತ್ನದೊಂದಿಗೆ ಬೆಂಗಳೂರು ಈಗಲ್ಸ್ (5-0) ಮತ್ತು ಆರ್ಮಿ ಗ್ರೀನ್ (7-0) ವಿರುದ್ಧ ದೊಡ್ಡ ಗೆಲುವು ಸಾಧಿಸಿದರು.

ಈ ಆವೃತ್ತಿಯ ಬಿಡಿಎಫ್‌ಎ ಸೂಪರ್ ಡಿವಿಷನ್ ಲೀಗ್‌ನ ಎಲ್ಲಾ ಪಂದ್ಯಗಳು ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಮಧ್ಯಾಹ್ನ 1.30 ಕ್ಕೆ ಮತ್ತು ಮಧ್ಯಾಹ್ನ 3ಕ್ಕೆ ಅಥವಾ 3.30 ಕ್ಕೆ ಆರಂಭವಾಗಲಿದೆ.

ಪಂದ್ಯಗಳು:

# 1 – 15/1/21 ಯಂಗ್ ಚಾಲೆಂಜರ್ಸ್ ಎಫ್‌ಸಿ vs ಬಿಎಫ್‌ಸಿ
# 2 – 20/1/21 ಬಿಎಫ್‌ಸಿ vs ಎಫ್‌ಸಿ ಡೆಕ್ಕನ್
# 3 – 27/1/21 ಇನ್ಕಮ್ ಟ್ಯಾಕ್ಸ್ ಎಫ್‌ಸಿ vs ಬಿಎಫ್‌ಸಿ
# 4 – 2/2/21 ಬಿಎಫ್‌ಸಿ vs ಸ್ಟೂಡೆಂಟ್ಸ್ ಯೂನಿಯನ್ ಎಫ್‌ಸಿ
# 5 – 4/2/21 ಎಡಿಇ ಎಫ್‌ಸಿ vs ಬಿಎಫ್‌ಸಿ
# 6 – 9/2/21 ಬಿಎಫ್‌ಸಿ vs ಬೆಂಗಳೂರು ಡ್ರೀಮ್ ಯುನೈಟೆಡ್ ಎಫ್‌ಸಿ
# 7 – 15/2/21 ಬೆಂಗಳೂರು ಈಗಲ್ಸ್ ಎಫ್‌ಸಿ vs ಬಿಎಫ್‌ಸಿ
# 8 – 22/2/21 ಬಿಎಫ್‌ಸಿ vs ಬೆಂಗಳೂರು ಇಂಡಿಪೆಂಡೆನ್ಸ್ ಎಫ್‌ಸಿ
# 9 – 26/2/21 ಎಎಸ್ ಸಿ & ಸೆಂಟರ್ ಎಫ್ಸಿ vs ಬಿಎಫ್ಸಿ
# 10 – 4/3/21 ಎಂಇಜಿ ಮತ್ತು ಸೆಂಟರ್ ಎಫ್‌ಸಿ vs ಬಿಎಫ್‌ಸಿ
# 11 – 8/3/21 ಬಿಎಫ್‌ಸಿ vs ಎಫ್‌ಸಿ ಬೆಂಗಳೂರು ಯುನೈಟೆಡ್
# 12 – 14/3/21 ಬಿಎಫ್‌ಸಿ vs ಕಿಕ್‌ಸ್ಟಾರ್ಟ್ ಎಫ್‌ಸಿ