ಎರಡನೇ ಬಿಡಿಎಫ್‌ಎ ಸೂಪರ್ ಡಿವಿಷನ್ ಲೀಗ್ ಎನ್‌ಕೌಂಟರ್‌ನಲ್ಲಿ ಭೋಯಿಟ್ ಹುಡುಗರು ಮತ್ತೊಮ್ಮೆ ಅದ್ಭುತ ಪ್ರದರ್ಶನ
ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಎಫ್‌ಸಿ ಡೆಕ್ಕನ್‌ರನ್ನು 4-2ರ ಅಂತರದ ಗೋಲುಗಳಿಂದ ಬ್ಲೂ ಕೋಲ್ಟ್ಸ್ ಸೋಲಿಸಿದೆ. ಬಿಡಿಎಫ್‌ಎ ಸೂಪರ್ ಡಿವಿಷನ್ ಆರಂಭಿಸಿದ್ದ ತಂಡದಲ್ಲಿ ಕೋಚ್ ಸಂದೇಶ್ ಭೋಯಿಟ್ ಒಂದು ಬದಲಾವಣೆಯನ್ನು ಮಾಡಿದ್ದರು. ಬೆಕಿ ಓರಮ್ ಬೆಂಚ್‌ಗೆ ತೆರಳಿ ಕಮಲೇಶ್ ಗೆ ಬ್ಲೂ ಕೋಲ್ಟ್ಸ್ ಪರ ಆಡುವ ಸ್ಥಾನ ಬಿಟ್ಟುಕೊಟ್ಟರು.
ಡೆಕ್ಕನ್ ಚೆಂಡನ್ನು ಲೆಫ್ಟ್ ಪ್ಲಾನ್ಕ್ ಕಡೆಗೆ ಸರಿಸುವುದರೊಂದಿಗೆ ಕವಿಯಾರಸನ್ ಮೊದಲ ಬಾರಿಗೆ ಕ್ರಾಸ್‌ನಿಂದ ದಿಪೇಶ್ ಚೌಹಾನ್‌ರನ್ನು ಹಿಮ್ಮೆಟ್ಟಿ ಗೋಲ್ ಗಳಿಸಿದರು.
ಆದಾಗ್ಯೂ, ಶಿವಶಕ್ತಿ ಚೆಂಡನ್ನು ಸ್ವಾಧೀನಪಡಿಸಿಕೊಳ್ಳಲು ಇಳಿದಾಗ, ತನ್ನ ಮಾರ್ಕರ್ ಇಂದ ಕಮಲೇಶ್ ಮೂಲಕ ಪಾಸ್ ಪಡೆದು ಬ್ಲೂ ಕೋಲ್ಟ್ಸ್ ಗೋಲ್ ಪಡೆದು ಅಂಕ ಸಮವಾಗಿಸಲು ಐದು ನಿಮಿಷಗಳಿಗಿಂತ ಕಡಿಮೆ ಸಮಯ ತೆಗೆದುಕೊಂಡಿತು. ದೃಢವಾದ ಹೊಡೆತದೊಂದಿಗೆ ದಿಲೀಪ್ ಅನ್ನು ತಪ್ಪಿಸಿ ಗೋಲ್ ಪಡೆಯುವಲ್ಲಿ ಯಶಸ್ವಿಯಾದರು.
ದ್ವಿತೀಯಾರ್ಧದ ಆರಂಭದಲ್ಲಿ, ಜಗದೀಪ್ ಸಿಂಗ್ ಅವರ ಫೌಲ್ ಆದ ನಂತರ ಆ ಪ್ರದೇಶದ ಹೊರಗೆ ಸಂಪರ್ಕ ಸಂಭವಿಸಿದೆ ಎಂದು ಲೈನ್ಸ್ಮನ್ ಭಾವಿಸಿದ್ದರೂ ಸಹ ರೆಫರಿ ಸ್ಥಳವನ್ನು ಸೂಚಿಸಿದಾಗ ಡೆಕ್ಕನ್ ಮುನ್ನಡೆ ಸಾಧಿಸಲು ಅವಕಾಶವನ್ನು ಪಡೆದರು. ಸ್ಕೋರ್ ಸಮನಾಗಿಸುವ ಗುರಿಯೊಂದಿಗೆ ಸಜೀಶ್ ಗೋಲ್ ಯತ್ನ ಮಾಡಿದರೂ, ಬಲಕ್ಕೆ ಧುಮುಕಿ ದೀಪೇಶ್ ಗೋಲ್ ತಡೆದು ಉತ್ತಮವಾಗಿ ಕಾರ್ಯನಿರ್ವಹಿಸಿದರು.
ನಾಲ್ಕು ನಿಮಿಷಗಳ ನಂತರ, ಆಕಾಶ್‌ದೀಪ್ ಸಿಂಗ್ ಮೂಲಕ ಬ್ಲೂ ಕೋಲ್ಟ್ಸ್ ಮುನ್ನಡೆ ಸಾಧಿಸಿತು. ವಿಂಗರ್ ಪೋಸ್ಟ್ ಬಳಿ ಕ್ರಾಸ್ ಪಡೆದು ಬ್ಲೂಸ್‌ಗೆ ಮುನ್ನಡೆ ನೀಡಲು ದೂರದ ಪೋಸ್ಟ್‌ನಲ್ಲಿರುವ ‘ಕೀಪರ್’ ಅನ್ನು ತಪ್ಪಿಸಿ ಗೋಲ್ ಪಡೆದರು. ಕೇವಲ ಎರಡು ನಿಮಿಷಗಳ ನಂತರ, ಶಿವಶಕ್ತಿ ಮೂಲಕ ಬ್ಲೂ ಕೋಲ್ಟ್ಸ್ ತಮ್ಮದೇ ಆದ ಪೆನಾಲ್ಟಿ ಅವಕಾಶವನ್ನು ಗೆದ್ದಿತು. ಥೋಯಿ ಸಿಂಗ್ ಅವರ ಲೋ ಶಾಟ್ ದಿಲೀಪ್ ಅವರನ್ನು ಯಾಮಾರಿಸಿ ತಂಡಕ್ಕೆ 3-1 ಗೋಲುಗಳ ಮುನ್ನಡೆ ಸಾಧಿಸಿವಲ್ಲಿ ಸಹಾಯಕವಾಯ್ತು.
ಸಜೀಶ್ ತನ್ನ ಪೆನಾಲ್ಟಿ ಅವಕಾಶವನ್ನು ಕಳೆದುಕೊಂಡು ಪರಿತಪಿಸುತ್ತಿದ್ದರು. ಎಫ್‌ಸಿ ಡೆಕ್ಕನ್ ಪಂದ್ಯದಲ್ಲಿ ಹಿಂತಿರುಗುವ ಆಲೋಚನೆ ವಿಫಲಯತ್ನವಾಯ್ತು ಕಾರಣ ಬ್ಲೂ ಕೋಲ್ಟ್ಸ್ 90 ನೇ ನಿಮಿಷದಲ್ಲಿ ಮತ್ತೊಂದು ಗೋಲ್ ಅನ್ನು ತಮ್ಮ ತೆಕ್ಕೆಗೆ ಸೇರಿಸಿಕೊಂಡರು.ನಂತರ ಲಾಸ್ಟ್‌ಬೋರ್ನ್ ಮಾವ್‌ಫಿಯಾಂಗ್ ಚೆಂಡನ್ನು ಕೌಂಟರ್‌ನಲ್ಲಿ ಮುಂದಕ್ಕೆ ಕೊಂಡೊಯ್ದರು ಮತ್ತು ಒಮೆಗಾ ವನ್‌ಲಾಲ್‌ರುಯಿಟುವಾಂಗಾ ಅವರನ್ನು ಕಂಡುಕೊಂಡರು, ಅವರು ಪೋಸ್ಟ್ನ ಅಂಚಿನಲ್ಲಿ ಗೋಲ್ ಗಳಿಸಿ 4-2ರ ಅಂತರದೊಂದಿಗೆ ಪಂದ್ಯದಲ್ಲಿ ಮತ್ತೊಂದು ಅಂಕ ತಮ್ಮ ತಂಡಕ್ಕೆ ಪಡೆದುಕೊಂಡರು.
ಇನ್ಕಮ್ ಟ್ಯಾಕ್ಸ್ ಎಫ್‌ಸಿ ವಿರುದ್ಧ ಜನವರಿ 27 ರಂದು ಬ್ಲೂಸ್ ಮತ್ತೆ ಇದೆ ಅಂಗಳದಲ್ಲಿ ಕಾದಾಡಲಿದ್ದಾರೆ.