ಬ್ಲೂಸ್ ಪರ ಆಡಲಿರುವ ಕಾಂಗೋಲೀಸ್ ಸ್ಟೈಕರ್ ಪ್ರಿನ್ಸ್ ಇಬರಾ

ಇಪ್ಪತ್ತೈದರ ಹರೆಯದ ಅಟ್ಯಾಕರ್ 2021ರ ಎಎಫ್‌ಸಿ ಕಪ್ ಪ್ಲೇಆಫ್ ಹಿನ್ನೆಲೆಯಲ್ಲಿ, ಒಂದು ವರ್ಷದ ವಿಸ್ತರಣೆಯ ಅವಕಾಶದೊಂದಿಗೆ, ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.

ಕಾಂಗೋಲೀಸ್ ಸ್ಟ್ರೈಕರ್ ಪ್ರಿನ್ಸ್ ವಿನ್ನಿ ಇಬರಾ ಡೊನಿಯಾಮಾ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಮುಂಬರುವ ಎಎಫ್‌ಸಿ ಕಪ್ ಪ್ಲೇಆಫ್ ಗೂ ಮುನ್ನ ಬೆಂಗಳೂರು ಎಫ್‌ಸಿ ತಂಡವು ತಮ್ಮ ತಂಡದ ದಾಳಿಯ ಬಲವನ್ನು ಹೆಚ್ಚಿಸಿದೆ ಎಂದು ಕ್ಲಬ್ ಶುಕ್ರವಾರ ಪ್ರಕಟಿಸಿತು. ಬೆಲ್ಜಿಯಂನ ಫಸ್ಟ್ ಡಿವಿಶನ್ ಎ ಬೀರ್‌ಶಾಟ್‌ ತಂಡದಿಂದ ಒಪ್ಪಂದದ ಆಧಾರದಲ್ಲಿ ಇತ್ತೀಚೆಗೆ ಲೀಗ್ 2 ಪರ ಚಟೌರೊಕ್ಸ್ ಅನ್ನು ಪ್ರತಿನಿಧಿಸಿದ್ದರು. 25ರ ಹರೆಯ, ಒಂದು ವರ್ಷದ ವಿಸ್ತರಣೆಯ ಅವಕಾಶದೊಂದಿಗೆ ಎರಡು ವರ್ಷಗಳ ಒಪ್ಪಂದಕ್ಕೆ ಒಪ್ಪಿ ಆಡಲಿದ್ದಾರೆ.
ಕಾಂಗೋದ ಎಸಿಎನ್‌ಎಫ್‌ಎಫ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಇಬರಾ, 2017 ರಲ್ಲಿ ಕತಾರ್ ಸ್ಟಾರ್ಸ್ ಲೀಗ್ ತಂಡದ ಅಲ್-ವಕ್ರಾಗೆ ಸೇರುವ ಮೊದಲು ಗ್ಯಾಬೊನ್ ಮತ್ತು ಟುನೀಶಿಯಾದ ಕ್ಲಬ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ನಂತರದ ಆವೃತ್ತಿಯಲ್ಲಿ ಇಬರಾ, ಅಲ್ಜೀರಿಯಾದ ಲೀಗ್ ಪ್ರೊಫೆಷನಲ್ 1 ಸೈಡ್ ಯುಎಸ್‌ಎಂ ಆಲ್ಜರ್‌ ಜೊತೆ ಸೇರಿಕೊಂಡರು, ಆ ಲೀಗ್ ಅಲ್ಲಿ ಅವರು ಒಂಬತ್ತು ಅಂಕಗಳನ್ನು ಗಳಿಸುವ ಮೂಲಕ ಚಾಂಪಿಯನ್ನಾಟ್ ನ್ಯಾಷನಲ್ 1 ಪ್ರಶಸ್ತಿ ಪಡೆಯಲು ಆಲ್ಜರ್‌ ತಂಡದ ಪರ ಬೆನ್ನೆಲುಬಾಗಿ ಆಡಿದ್ದರು.

“ನಾನು ಈ ತಂಡದ ಭಾಗವಾಗಲು ನಿಜವಾಗಿಯೂ ಉತ್ಸುಕನಾಗಿದ್ದೇನೆ. ನಾನು ಇದನ್ನು ಒಂದು ಯೋಜನೆಯೆಂದು ಪರಿಗಣಿಸುತ್ತೇನೆಯೇ ಹೊರತು ವ್ಯವಹಾರದಂತೆ ಭಾವಿಸುವುದಿಲ್ಲ. ನಾನು ಆಡಿದ ಕ್ಲಬ್‌ಗಳಿಗಾಗಿ ನಾನು ಕೆಲವು ಚಾಂಪಿಯನ್‌ಶಿಪ್‌ಗಳು ಮತ್ತು ಪ್ರಶಸ್ತಿಗಳನ್ನು ಗೆದ್ದಿದ್ದೇನೆ ಆದರೆ ಭಾರತ ಮತ್ತು ಏಷ್ಯಾದಲ್ಲಿನ ಪಂದ್ಯಗಳು ನನಗೆ ಮುಂದಿನ ಸವಾಲು ಎಂದು ಭಾವಿಸುತ್ತೇನೆ. ಅದು ಪ್ರೇರೇಪಣೆಯ ಅಂಶವಾಗಿದೆ. ಅಲ್ಲದೆ, ಕೋಚ್ ನನ್ನನ್ನು ದಾಳಿಯಲ್ಲಿ ಹೆಜ್ಜೆ ಇಡುವಂತೆ ಸೂಚಿಸಿದ್ದಾರೆ ಹಾಗಾಗಿ ನಾನು ಬೆಂಗಳೂರು ಎಫ್‌ಸಿ ಪರ ಆಡುವ ನಿರ್ಧಾರ ಮಾಡಿದ್ದೇನೆ “ಎಂದು ಇಬರಾ ತಮ್ಮ ಒಪ್ಪಂದದ ಔಪಚಾರಿಕತೆಯನ್ನು ಪೂರ್ಣಗೊಳಿಸಿದ ನಂತರ ತಿಳಿಸಿದ್ದಾರೆ.

ಬ್ರಾಜಾವಿಲ್ಲೆ ನಿವಾಸಿಯಾದ ಇಬರಾ 13 ಬಾರಿ ಕಾಂಗೋ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದು, 2016 ರಲ್ಲಿ ಮೊರಾಕೊ ವಿರುದ್ಧದ ಸ್ನೇಹಪರ ಪಂದ್ಯದ ಮೂಲಕ ಪಾದಾರ್ಪಣೆ ಮಾಡಿದ್ದರು. ಅವರು ತಮ್ಮ ದೇಶದ ಪರ ನಾಲ್ಕು ಬಾರಿ ಸ್ಕೋರ್ ಮಾಡಿದ್ದಾರೆ, 2018 ರಲ್ಲಿ ನಡೆದ ಆಫ್ರಿಕನ್ ಕಪ್ ಆಫ್ ನೇಷನ್ಸ್ ಅರ್ಹತಾ ಪಂದ್ಯಗಳಲ್ಲಿ ಲೈಬೀರಿಯಾ ವಿರುದ್ಧದ ಪಂದ್ಯದಲ್ಲಿ ತಮ್ಮ ಮೊದಲನೆಯ ಗೋಲ್ ಅನ್ನು ಗಳಿಸಿದ್ದಾರೆ.

“ಈ ಕ್ಲಬ್ ಏಷ್ಯನ್ ಸ್ಪರ್ಧೆಯಲ್ಲಿ ಆಡಲಿರುವುದು ನಾನು ಇಲ್ಲಿ ಒಪ್ಪಿಕೊಳ್ಳಲು ಒಂದು ಕಾರಣವಾಗಿದೆ. ನನಗೆ ಯಾವುದೇ ಆತಂಕಗಳಿಲ್ಲ, ಈ ಫುಟ್ಬಾಲ್ ಕ್ಲಬ್‌ಗಾಗಿ ಸಾಧ್ಯವಾದಷ್ಟು ಗೋಲುಗಳನ್ನು ಗಳಿಸಲು ಮತ್ತು ತಂಡದ ಪರ ಆಡಲು ನಾನು ಉತ್ಸುಕನಾಗಿದ್ದೇನೆ. ನಾನು ಬೇರೆ ಕೆಲವು ಅವಕಾಶಗಳನ್ನು ಬದಿಗಿಟ್ಟು, ಭಾರತದಲ್ಲಿ ಆಡುವ ಯೋಜನೆಯ ಸಲುವಾಗಿ ಸೇರಬೇಕು ಎಂದು ಭಾವಿಸಿದೆ. ಇಲ್ಲಿ ‘ಯೋಜನೆ’ ಪದದ ಮೇಲೆ ಹೆಚ್ಚು ನಿಗಾವಹಿಸಬೇಕಾಗಿದೆ, ಏಕೆಂದರೆ ಅದನ್ನೇ ಕೋಚ್ ಮಾಡಿಸಲು ಬಯಸಿದ್ದಾರೆ, ಅದನ್ನೇ ಕಾರ್ಯಗತಗೊಳಿಸುವತ್ತ ಗುರಿಯನ್ನು ಹೊಂದಿದ್ದಾರೆ ಮತ್ತು ನಾನು ಅದರ ಭಾಗವಾಗಲು ಬಯಸುತ್ತೇನೆ, ”ಎಂದು ಇಬರಾ ವಿವರಿಸಿದರು.

ಆವೃತ್ತಿಯ ಮುನ್ನ ಸ್ಟ್ರೈಕರ್ ತಂಡ ಸೇರಿಕೊಳ್ಳುವುದನ್ನು ನೋಡಲು ಉತ್ಸುಕನಾಗಿದ್ದೇನೆ ಎಂದು ಮುಖ್ಯ ಕೋಚ್ ಮಾರ್ಕೊ ಪೆಜೈಯುಲಿ ಹೇಳಿದರು. “ಪ್ರಿನ್ಸ್ ಓರ್ವ ಯುವ ಸ್ಟ್ರೈಕರ್ ಆಗಿದ್ದು, ಅವರು ತಂಡಕ್ಕೆ ಹೆಚ್ಚಿನ ಬಲವನ್ನು ತರುತ್ತಾರೆ. ಅವರು ಯುರೋಪಿನಲ್ಲಿ ಮತ್ತು ಕಾಂಗೋ ರಾಷ್ಟ್ರೀಯ ತಂಡಕ್ಕೆ ಆಡಿದ ಅನುಭವವನ್ನು ಹೊಂದಿದ್ದಾರೆ ಮತ್ತು ಅದು ತಂಡಕ್ಕೆ ಹೆಚ್ಚಿನ ಗುಣಮಟ್ಟವನ್ನು ನೀಡುತ್ತದೆ. ಮುಖ್ಯವಾಗಿ, ಅವರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು ಆ ಮನಸ್ಥಿತಿಯನ್ನು ತಂಡದೊಂದಿಗೆ ಹಂಚಿಕೊಳ್ಳಲಿದ್ದಾರೆ. ನಾನು ಅವರನ್ನು ಬಿಎಫ್‌ಸಿ ಕುಟುಂಬಕ್ಕೆ ಸ್ವಾಗತಿಸಲು ಬಯಸುತ್ತೇನೆ ಮತ್ತು ನಾವು ಒಟ್ಟಾಗಿ ಯಶಸ್ಸನ್ನು ಸಾಧಿಸಬಹುದೆಂದು ಭಾವಿಸುತ್ತೇವೆ “ಎಂದು ಪೆಜೈಯುಲಿ ಹೇಳಿದರು.

Malcare WordPress Security