ಮೂವತ್ತು ವರ್ಷದ ಸೆಂಟರ್-ಬ್ಯಾಕ್ ಎರಡು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದು, 2022-23ರ ಆವೃತ್ತಿಯ ಅಂತ್ಯದವರೆಗೆ ಆಡಲಿದ್ದಾರೆ.
ಬ್ರೆಜಿಲ್ ಡಿಫೆಂಡರ್ ಅಲನ್ ಹೆನ್ರಿಕ್ ಕೋಸ್ಟಾ ಎರಡು ವರ್ಷಗಳ ನಿರ್ಧಿಷ್ಟ ಅವಧಿಯವರೆಗೆ ಆಡುವಂತೆ ಕ್ಯಾಂಪಿಯೊನಾಟೊ ಬ್ರೆಸಿಲಿರೊ ಸೆರೀ ಬಿ, ಆವಯ್ ಫುಟ್ಬಾಲ್ ಕ್ಯೂಬ್ ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಬೆಂಗಳೂರು ಎಫ್‌ಸಿ ಮಂಗಳವಾರ ಪ್ರಕಟಿಸಿದೆ. ಮುವತ್ತೆರಡು ವರ್ಷದ ಕೋಸ್ಟಾ, 6.4 ಅಡಿಗಳ ಎತ್ತರವಿದ್ದು ಮಾರ್ಕೊ ಪೆಜೈಯುಲಿ ಅಡಿಯಲ್ಲಿ ಗ್ಯಾಬೊನೀಸ್ ಡಿಫೆಂಡರ್ ಯೊರುಂಡು ಮುಸಾವು-ಕಿಂಗ್ ಅವರೊಂದಿಗಿನ ಎರಡು ವರ್ಷಗಳ ಹೊಸ ಒಪ್ಪಂದಕ್ಕೆ ಶನಿವಾರ ಸಹಿ ಹಾಕಿದ ನಂತರ ಬ್ಲೂಸ್ ತಂಡಕ್ಕೆ ಸೇರಿಕೊಳ್ಳುತ್ತಿರುವ ಎರಡನೇ ವಿದೇಶಿ ಆಟಗಾರರಾಗಿದ್ದಾರೆ.
ಬ್ರೆಸಿಲ್‌ನ ಫೆರೋವಿಯೇರಿಯಾದ ಯುವ ಶ್ರೇಣಿಯಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಕೋಸ್ಟಾ, 2020 ರಲ್ಲಿ ಅವಾಯ್ ಗೆ ಸೇರುವ ಮುನ್ನ ಪಲ್ಮೈರಾಸ್, ಇಂಟರ್ನ್ಯಾಷನಲ್ ಮತ್ತು ಕೊರಿಟಿಬಾ, ಮತ್ತು ಸಾವ್ ಬೆಂಟೊ ಮತ್ತು ವಿಟೋರಿಯಾ ತಂಡಗಳ ಪರ ತಮ್ಮ ಉತ್ತಮಪ್ರದರ್ಶನಗಳನ್ನು ನೀಡಿದ್ದಾರೆ.
ಕೋಸ್ಟಾ, ಮೂಲತಃ ಅರಾಕ್ವಾರಾದವರಾಗಿದ್ದು, ಇಲ್ಲಿಯವರೆಗಿನ ತಮ್ಮ ವೃತ್ತಿಜೀವನದ ಸಂಪೂರ್ಣ ಅವಧಿಯನ್ನು ಬ್ರೆಜಿಲ್‌ನಲ್ಲಿ ಕಳೆದಿದ್ದಾರೆ. ಬೆಂಗಳೂರಿಗೆ ಆಗಮಿಸಲಿರುವುದರ ಬಗ್ಗೆ ಉತ್ಸಾಹವನ್ನೂ ವ್ಯಕ್ತಪಡಿಸಿದ್ದಾರೆ. ಔಪಚಾರಿಕತೆಯನ್ನು ಪೂರ್ಣಗೊಳಿಸಿದ ನಂತರ ಮಾತನಾಡಿದ ಕೋಸ್ಟಾ, “ಬೆಂಗಳೂರು ಎಫ್‌ಸಿಯೊಂದಿಗೆ ಸಹಿ ಹಾಕಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಮತ್ತು ಭಾರತೀಯ ಫುಟ್‌ಬಾಲ್ ಬಗ್ಗೆ ನನಗೆ ಉತ್ತಮ ನಿರೀಕ್ಷೆಗಳಿವೆ. ಇಂಡಿಯನ್ ಸೂಪರ್ ಲೀಗ್ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ, ಆದರೆ ಇಲ್ಲಿ ಆಡಿದ ಸ್ನೇಹಿತರನ್ನು ನಾನು ಹೊಂದಿದ್ದೇನೆ, ಅವರು ಇಲ್ಲಿ ಕೇವಲ ಉತ್ತಮ ಸಂಗತಿಗಳನ್ನಷ್ಟೇ ಹೇಳಿದ್ದಾರೆ” ಎಂದು ವಿವರಿಸಿದರು.
ಮೇ ತಿಂಗಳಲ್ಲಿ ಅವಾಸ್ ಪರ ಕ್ಯಾಂಪಿಯೊನಾಟೊ ಕ್ಯಾಟಾರಿನೆನ್ಸ್ ಸ್ಟೇಟ್ ಚಾಂಪಿಯನ್‌ಶಿಪ್ ಅನ್ನು ಗೆದ್ದ ಕೋಸ್ಟಾ, ಎರಡು ಲೆಗ್ ಹೊಂದಿದ್ದ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಚಾಪೆಕೊಯೆನ್ಸ್ ವಿರುದ್ಧ 3-2 ಗೋಲುಗಳಿಂದ ಜಯಗಳಿಸಿದ್ದರು, ಅದೇ ರೀತಿಯಲ್ಲಿ ಬ್ಲೂಸ್‌ಗಾಗಿ ಉತ್ತಮ ಸಾಧನೆ ಮಾಡಬೇಕೆಂಬ ಹಂಬಲ ವ್ಯಕ್ತಪಡಿಸಿದರು.
“ಬಿಎಫ್‌ಸಿಯಲ್ಲಿನ ಈ ಹೊಸ ಯೋಜನೆಯು ನನ್ನನ್ನು ರೋಮಾಂಚಿತವಾಗಿಸಿದೆ ಮತ್ತು ನನ್ನ ಮೇಲೆ ನಂಬಿಕೆ ಇರಿಸಿ ಇಲ್ಲಿಗೆ ಕರೆತರಲು ಸಹಕರಿಸಿದವರ ನಂಬಿಕೆಯನ್ನು ಉಳಿಸಿಕೊಳ್ಳಲು ನಾನು ತುದಿಗಾಲಲ್ಲಿದ್ದೇನೆ. ಕ್ಲಬ್ ಇತ್ತೀಚಿಗೆ ಉತ್ತಮ ಪ್ರದರ್ಶನ ತೋರಿಲ್ಲವೆಂದು ನನಗೆ ತಿಳಿದಿದೆ, ಆದರೆ ನನ್ನ ಅನುಭವವನ್ನು ಮುಡಿಪಿಟ್ಟು ಈ ಆವೃತ್ತಿಯಲ್ಲಿ ಅದನ್ನು ಬದಲಾಯಿಸುವತ್ತ ಶ್ರಮಿಸುವುದಾಗಿ ಖಚಿತಪಡಿಸಲು ನಾನು ಬಯಸುತ್ತೇನೆ ” ಎಂದು ಕೋಸ್ಟಾ ಹೇಳಿದರು.
ಏಪ್ರಿಲ್ ನಲ್ಲಿ ನಡೆದ ಎಎಫ್‌ಸಿ ಕಪ್ ನ ಎರಡನೇ ಪ್ರಾಥಮಿಕ ಹಂತದ ಪಂದ್ಯದಲ್ಲಿ ತ್ರಿಭುವನ್ ಆರ್ಮಿ ಎಫ್‌ಸಿ ವಿರುದ್ಧ 5-0 ಗೋಲುಗಳಿಂದ ಬೆಂಗಳೂರು ತಂಡ ವಿಜೇತರಾದರು, ಇದು ಮಾರ್ಕೊ ಪೆಜೈಯುಲಿ ಅವರ ಉಸ್ತುವಾರಿಯ ಮೊದಲ ಪಂದ್ಯವಾಗಿತ್ತು. ಕೋಸ್ಟಾ ಅವರ ಉಪಸ್ಥಿತಿ ಮತ್ತು ನಾಯಕತ್ವವು ತಮ್ಮ ತಂಡಕ್ಕೆ ಬಹುಮುಖ್ಯವಾಗಿರಲಿದೆ ಎಂದು ಇಟಾಲಿಯನ್ ಸಮರ್ಥಿಸಿದ್ದಾರೆ.
“ಅಲನ್ ಅವರನ್ನು ಬೆಂಗಳೂರು ಎಫ್‌ಸಿಗೆ ಸ್ವಾಗತಿಸಲು ಸಂತಸವಾಗಿದೆ. ಅವರು ಪಿಚ್‌ನಲ್ಲಿ ಬಹಳ ಮುಖ್ಯವಾದ ಆಟಗಾರನಾಗಿರಲಿದ್ದು ಅಂಗಳದ ಹೊರಗೆ ಅತ್ಯತ್ತಮ ವ್ಯಕ್ತಿತ್ವವನ್ನು ಹೊಂದಿರಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ನೈಸರ್ಗಿಕವಾಗಿಯೇ ನಾಯಕತ್ವದ ಗುಣಗಳನ್ನು ಹೊಂದಿದ್ದಾರೆ ಮತ್ತು ಅವರು ಈ ಹಿಂದೆ ಆಡಿದ್ದ ತಂಡಗಳಿಗೆ ನಾಯಕತ್ವವನ್ನು ವಹಿಸಿ ಯಶಸ್ವಿಯಾಗಿದ್ದಾರೆ ”ಎಂದು ಪೆಜೈಯುಲಿ ಹೇಳಿದರು.
ಗುರುವಾರದಂದು, ಕೋಸ್ಟಾ ಅವರು ಬ್ರೆಸಿಲೈರೋ ಸೀರಿ ಬಿ ಆವೃತ್ತಿಯ ಮೊದಲ ಗೋಲನ್ನು ಪಡೆದು ಲಂಡ್ರಿನಾ ಎಸ್ಪೋರ್ಟ್ ಕ್ಲಬ್ ವಿರುದ್ಧ 3-1 ಅಂತರದ ಗೆಲುವನ್ನು ಸಾಧಿಸಿದ್ದಾರೆ. “ಚೆಂಡಿನೊಂದಿಗೆ ಅಲನ್ ಅವರ ಆಟ ಉತ್ತಮ ಗುಣಮಟ್ಟದ್ದಾಗಿದೆ ಮತ್ತು ಕಳೆದ ಕೆಲವು ಆವೃತ್ತಿಗಳಿಂದ ಅವರು ಗೋಲುಗಳನ್ನು ಗಳಿಸುತ್ತಿದ್ದು ಬಹಳ ಆಸಕ್ತಿದಾಯಕ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಅವರ ಉಪಸ್ಥಿತಿ ಖಂಡಿತವಾಗಿಯೂ ತಂಡದ ಒಟ್ಟಾರೆ ಗುಣಮಟ್ಟವನ್ನು ಸುಧಾರಿಸುತ್ತದೆ. ಜೊತೆಗೆ ನಮ್ಮೊಂದಿಗಿನ ಅವರ ಈ ಹೊಸ ಪ್ರಯಾಣದಲ್ಲಿ ಅವರು ಯಶಸ್ಸನ್ನು ಪಡೆಯಬೇಕೆಂದು ನಾನು ಬಯಸುತ್ತೇನೆ ”ಎಂದು ಪೆಜೈಯುಲಿ ಹೇಳಿದರು.