ಬೆಂಗಳೂರು ಮತ್ತು ಚೆನ್ನೈ ಗೋಲ್ ಗಳಿಸಲಾಗದೆ ಪರದಾಟ – ಪಂದ್ಯ ಡ್ರಾ

ಬ್ಲೂಸ್ ಪ್ಲೇ ಆಫ್ ಅವಕಾಶಕ್ಕೆ ನಾಂದಿಯಾಗದ ಫಲಿತಾಂಶ.

ಶುಕ್ರವಾರ ಮಾರ್ಗೋವಾದ ಫತೋರ್ದಾ ಅಂಗಳದಲ್ಲಿ ಗೋಲ್ ಇಲ್ಲದ ಪಂದ್ಯದಲ್ಲಿ ಚೆನ್ನಯಿನ್ ಎಫ್ ಸಿಯೊಂದಿಗೆ ಸಮಾನ ಅಂಕಗಳನ್ನು ಹಂಚಿಕೊಂಡ ನೌಶಾದ್ ಮೂಸಾ ನೇತೃತ್ವದ ಬೆಂಗಳೂರು ಎಫ್ ಸಿ. ಈ ಪಂದ್ಯದ ಫಲಿತಾಂಶದೊಂದಿಗೆ ಮಿಕ್ಕ ತಂಡಗಳಿಗೆ ಹೋಲಿಸಿದರೆ ಒಂದು ಪಂದ್ಯವನ್ನು ಹೆಚ್ಚಾಗಿಯೇ ಆಡಿರುವ ತಂಡಕ್ಕೆ ಪ್ಲೇ ಆಫ್ ಕನಸ್ಸು ಇನ್ನು ದೂರ.

ಎಸ್‌ಸಿ ಈಸ್ಟ್ ಬೆಂಗಾಲ್ ವಿರುದ್ಧ ಗೆಲುವು ಸಾಧಿಸಿದ ತಂಡದಲ್ಲಿ ಗಾಯಗೊಂಡ ಲಿಯಾನ್ ಅಗಸ್ಟೀನ್ ಮತ್ತು ಅಮಾನತುಗೊಂಡಿರುವ ರಾಹುಲ್ ಭೆಕೆ ಬದಲಿಗೆ ಪರಾಗ್ ಶ್ರೀವಾಸ್ ಮತ್ತು ಎರಿಕ್ ಪಾರ್ತಲು ಅವರನ್ನು ನೌಶಾದ್ ಮೂಸಾ ಅಂಗಳದಲ್ಲಿಳಿಸಿದರು. ಏತನ್ಮಧ್ಯೆ, ಮೂಸಾ ಪ್ರತಿಸ್ಪರ್ಧಿ ಸಾಬಾ ಲಾಸ್ಲೊ ತನ್ನದೇ ಮೂರು ಬದಲಾವಣೆಗಳನ್ನು ಮಾಡಿ ಎನೆಸ್ ಸಿಪೋವಿಕ್, ಅನಿರುದ್ಧ್ ಥಾಪಾ ಮತ್ತು ಮ್ಯಾನುಯೆಲ್ ಲಂಜಾರೋಟ್ ಅವರನ್ನು ದೀಪಕ್ ಟ್ಯಾಂಗ್ರಿ, ಥೋಯ್ ಸಿಂಗ್ ಮತ್ತು ಜರ್ಮನ್‌ಪ್ರೀತ್ ಸಿಂಗ್ ಅವರ ಸ್ಥಾನದಲ್ಲಿ ಬದಲಿಸಿತು.

ಬೆಂಗಳೂರು ಆಟವನ್ನು ಬಲವಾಗಿಯೇ ಪ್ರಾರಂಭಿಸಿತು, ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟ ಶುರುಮಾಡಿದ ತಂಡ ತಮ್ಮ ಮೊದಲ ಅವಕಾಶವನ್ನು 2 ನೇ ನಿಮಿಷದಲ್ಲಿಯೇ ಪಡೆದರು. ಪಾರ್ತಲು ಅವರು ಚೆನ್ನೈಯಿನ್ ರಕ್ಷಣೆಯನ್ನು ಹಿಮ್ಮೆಟ್ಟಿ ಪಾಸ್ ಮೂಲಕ ಛೇತ್ರಿ ಅವರನ್ನು ಹುಡುಕಿಕೊಂಡರು. ಆದರೆ ಎನೆಸ್ ಸಿಪೊವಿಕ್ ವಿಶಾಲ್ ಕೈತ್ ಅವರ ಸಾಲಿನಿಂದ ಹೊರಬಂದು ಚೆಂಡನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.

ಕೆಲವು ನಿಮಿಷಗಳ ನಂತರ, ಗುರ್‌ಪ್ರೀತ್ ಸಿಂಗ್ ಸಂಧು ಅವರನ್ನು ಇನ್ನೊಂದು ತುದಿಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಎಸ್ಮೇಲ್ ಗೊನ್ಕಾಲ್ವ್ಸ್ ಚೆಂಡನ್ನು ಮಿಡ್‌ಫೀಲ್ಡ್‌ನಲ್ಲಿ ಗೆದ್ದು ಬಾಕ್ಸ್ ಅತ್ತ ಓಡಿ, ದೂರದಿಂದ ಒಂದು ಹೊಡೆತವನ್ನು ತೆಗೆದುಕೊಂಡರು. ಪ್ರತಿಫಲನವನ್ನು ತೆಗೆದುಕೊಂಡ ರಹೀಮ್ ಅಲಿಯ ಗೋಲ್ ಯತ್ನವು ನೇರವಾಗಿ ಕೀಪರ್ ಕೈ ಸೇರಿತು.

34 ನೇ ನಿಮಿಷದಲ್ಲಿ ಎರಿಕ್ ತಮ್ಮ ಬಲ ಫ್ಲ್ಯಾಂಕಲ್ಲಿ ಹರ್ಮನ್‌ಜೋತ್ ಖಬ್ರಾರನ್ನು ಕಂಡುಕೊಂಡಾಗ ಬ್ಲೂಸ್‌ಗೆ ಮೊದಲಾರ್ಧದಲ್ಲಿ ಸಿಕ್ಕ ಉತ್ತಮ ಅವಕಾಶ ಅದಾಗಿತ್ತು. ಬೆಂಗಳೂರಿನ ರೈಟ್ ಬ್ಯಾಕ್ ಚೆಂಡನ್ನು ಹತ್ತಿರದ ಪೋಸ್ಟ್‌ನಲ್ಲಿ ಛೇತ್ರಿಯತ್ತ ಕ್ರಾಸ್ ಮಾಡಿದರು ಮತ್ತು ನಾಯಕನ ಹೊಡೆತವನ್ನು ಡೈವ್ ಮಾಡಿ ಕಾಪಡಿದರು ಎಲಿ ಸಬಿಯಾ.

ವಿರಾಮದ ಐದು ನಿಮಿಷಗಳ ಮೊದಲಲ್ಲೆ ಗುರ್‌ಪ್ರೀತ್‌ ಮತ್ತೊಮ್ಮೆ ಕೈಚಳಕ ತೋರಬೇಕಾಯ್ತು. ಇಸ್ಮಾಯಿಲ್ ಗೊನ್ಕಾಲ್ವ್ಸ್‌ಗಾಗಿ ಲ್ಯಾಂಜಾರೋಟ್ ಕ್ರಾಸ್ ನೀಡಿ ಪ್ರಯತ್ನಿಸಿದಾಗ ಬ್ಲೂಸ್‌ನ ನಂಬರ್ ಒನ್ ತನ್ನ ಗ್ಲವ್ಸ್ ಅನ್ನು ಎದುರಾಳಿಯ ಕ್ರಾಸ್ಗೆ ಅಡ್ಡಕೊಟ್ಟು ಗೋಲ್ ಅವಕಾಶ ತಡೆದರು. ಇದರೊಂದಿಗೆ ಬೆಂಗಳೂರು ಆಘಾತದಿಂದ ತಪ್ಪಿಸಿಕೊಂಡಿತು.

ದ್ವಿತೀಯಾರ್ಧದ ಮೂವತ್ತು ಸೆಕೆಂಡುಗಳ ನಂತರ, ಬ್ಲೂಸ್‌ ಆಟದಲ್ಲಿ ಉಳಿಯಲು ಮತ್ತೊಂದು ಅದ್ಭುತ ಉಳಿತಾಯವನ್ನು ಮಾಡಿದರು. ಫ್ರೀ ಕಿಕ್‌ನಿಂದ ಲ್ಯಾಂಜಾರೋಟ್‌ನ ಎಸೆತ ಪೋಸ್ಟ್ ಮೇಲಿನ ಮೂಲೆಯಲ್ಲಿ ನುಸುಳುತ್ತಿತ್ತು ಆದರೆ ಬೆರಳ ತುದಿಯನ್ನು ಪಡೆದುಕೊಂಡ ಕಾರಣ ಚೆಂಡು ಕ್ರಾಸ್‌ಬಾರ್‌ ಹೊರಗೆ ಹೋಗಿ, ಆಟದಿಂದ ಹೊರಕ್ಕೆ ತಳ್ಳಲ್ಪಟ್ಟಿತು. ಅವರು ಒತ್ತಡಗಳ ನಡುವೆ ಅದ್ಭುತ ಕೀಪರ್ ಆಗಿ ಕಂಡರು ಮತ್ತು 1 ಗಂಟೆಯ ಆಟದ ಹತ್ತಿರ ಇನ್ನೂ ಎರಡು ಗೋಲ್ಗಳನ್ನು ಉಳಿಸಿದರು. ಮೊದಲಿಗೆ, ಜರ್ಮನ್‌ಪ್ರೀತ್ ಸಿಂಗ್ ಪ್ರಯತ್ನವನ್ನು ಬಾಕ್ಸ್ ಹೊರಗಿನಿಂದ ತಳ್ಳಿದ್ರೆ, ನಂತರದಲ್ಲಿ ಗುರ್‌ಪ್ರೀತ್‌ನೊಂದಿಗೆ ಮುಖಾಮುಖಿಯಾದ ಎಸ್ಮೇಲ್ ಗೋಲ್ಗಾಗಿ ಪ್ರಯತ್ನಿಸಿದರು. ಆದರೆ ಪ್ರಯತ್ನವನ್ನು ನಿರ್ಬಂಧಿಸಲಾಯ್ತು.

ಸ್ಪ್ಯಾನಿಷ್ ಮಿಡ್‌ಫೀಲ್ಡರ್ ಕ್ಸಿಸ್ಕೊ ಹೆರ್ನಾಂಡೆಜ್ ಅಂತಿಮ ಕಾಲು ಘಂಟೆಯ ಆಟವಿದ್ದಾಗ ಉತ್ತಮ ಪ್ರದರ್ಶನವನ್ನೇ ತೋರಿದರು ಮತ್ತು ಚೆನ್ನೈಯಿನ್ ರಕ್ಷಣಾಕೋಟೆಯ ಮೇಲೆ ಲಾಬ್ ಮಾಡಿ ಫ್ರಾನ್ ಗೊನ್ಜಾಲೆಜ್ ಅವರನ್ನು ಕಂಡುಕೊಂಡರು ಅದು ಪರಿಣಾಮಕಾರಿಯಾಗದೇ ಆಫ್‌ಸೈಡ್‌ಗೆ ತೆರಳಿತು.

ಇನ್ನೊಂದು ತುದಿಯಲ್ಲಿ, ವಿಂಗರ್ ಮೂಲಕ ಎಸ್ಮೇಲ್ ಆಡಿದ ಚೆಂಡನ್ನು ಪಡೆದ ಲಾಲಿಯನ್ಜುವಾಲಾ ಚಾಂಗ್ಟೆ ಅವರನ್ನು ಗುರ್‌ಪ್ರೀತ್ ನಿರಾಕರಿಸಲು ತಮ್ಮ ಬೆರಳ ತುದಿಯನ್ನು ನೀಡಿ ಗೋಲ್ ಉಳಿಸಿದರು. ಅವರ ಉಳಿತಾಯವು ಬ್ಲೂಸ್‌ಗೆ ಆಟದಿಂದ ಒಂದು ಪಾಯಿಂಟ್ ತೆಗೆದುಕೊಳ್ಳಲು ಸಹಾಯ ಮಾಡಿತು ಮತ್ತು ಈ ಪ್ರಕ್ರಿಯೆಯಿಂದ ಅವರು ಸುಬ್ರತಾ ಪಾಲ್ ಅವರನ್ನು ಐಎಸ್‌ಎಲ್ ದಾಖಲೆಯ ಪ್ರಕಾರ 29 ಕ್ಲೀನ್ ಶೀಟ್‌ಗಳೊಂದಿಗೆ ಹಿಂದಿಕ್ಕಿದರು.

ಫೆಬ್ರವರಿ 9 ರಂದು ಫತೋರ್ದಾದಲ್ಲಿ ಬ್ಲೂಸ್ ತಮ್ಮ ಮುಂದಿನ ಮುಖಾಮುಖಿಯಲ್ಲಿ ಎಟಿಕೆ ಮೋಹನ್ ಬಗಾನ್ ಅನ್ನು ಎದುರಿಸಲಿದ್ದಾರೆ.

Malcare WordPress Security