ಬೆಂಗಳೂರು ತಿಲಕ್ ಮೈದಾನದಲ್ಲಿ ಜಮ್ಶೆಡ್ಪುರಕ್ಕೆ ಶರಣು

ತಿಲಕ್ ಮೈದಾನದಲ್ಲಿ ಬ್ಲೂಸ್‌ ಪರ 100 ನೇ ಗೋಲ್ ಗಳಿಸಿದ ಛೇತ್ರಿ

ಗುರುವಾರ ತಿಲಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನೌಶಾದ್ ಮೂಸಾ ಪಡೆ ಭಾರತೀಯ ಸೂಪರ್ ಲೀಗ್ನ ಈ ಆವೃತ್ತಿಯನ್ನು ಜಮ್ಶೆಡ್ಪುರ ಎಫ್‌ಸಿ ವಿರುದ್ಧ ದ್ವಿತೀಯಾರ್ಧದಲ್ಲಿನ ಅದ್ಭುತ ಹೋರಾಟದ ಹೊರತಾಗಿಯೂ 3-2 ಅಂತರದ ಸೋಲಿನೊಂದಿಗೆ ಮುಕ್ತಾಯಗೊಳಿಸಿದೆ. ಮೊದಲಾರ್ಧದಲ್ಲಿ ಆತಿಥೇಯ ತಂಡವು ಸ್ಟೀಫನ್ ಈಜ್, ಸೀಮಿನ್ಲೆನ್ ಡೌಂಗೆಲ್ ಮತ್ತು ಡೇವಿಡ್ ಗ್ರಾಂಡೆ ಅವರ ಮೂಲಕ ಮೂರು ಗೋಲುಗಳಿಸಿತು. ನಂತರ ದ್ವಿತೀಯಾರ್ಧದಲ್ಲಿ ಬೆಂಗಳೂರು ಎಫ್ ಸಿ ಫ್ರಾನ್ ಗೋಂಝಲೇಜ್ ಮತ್ತು ಸುನಿಲ್ ಛೇತ್ರಿ ಅವರ ಮೂಲಕ ಎರಡು ಗೋಲ್ ಪಡೆದರು.

ನೌಶಾದ್ ಮೂಸಾ ಎಫ್‌ಸಿ ಗೋವಾ ವಿರುದ್ಧ ಸೋತ ತಮ್ಮ ತಂಡದಲ್ಲಿ ಆರು ಬದಲಾವಣೆಗಳನ್ನು ಮಾಡಿದರು. ಗುರ್‌ಪ್ರೀತ್ ಸಿಂಗ್ ಸಂಧು, ರಾಹುಲ್ ಭೆಕೆ, ಆಶಿಕ್ ಕುರುನಿಯನ್, ಎರಿಕ್ ಪಾರ್ತಲು, ಫ್ರಾನ್ ಗೋಂಝಲೇಜ್ ಮತ್ತು ಕ್ಲಿಟನ್ ಸಿಲ್ವಾ ಬದಲಿಗೆ ಲಾಲ್ತು ಮ್ಮಾವಿಯಾ ರಾಲ್ಟೆ, ಹರ್ಮನ್‌ಜೋತ್ ಖಬ್ರಾ, ಅಜಿತ್ ಕುಮಾರ್, ವುಂಗ್‌ಗಯಂ ಮುಯಿರಾಂಗ್, ಪ್ರತೀಕ್ ಚೌಧರಿ ಮತ್ತು ಡಿಮಾಸ್ ಡೆಲ್ಗಾಡೊ ತಂಡದಲ್ಲಿ ಸ್ಥಾನ ಪಡೆದಿದ್ದರು. ಎದುರಾಳಿ ತಂಡದಲ್ಲಿ ಅಮಾನತುಗೊಂಡ ಲಿಥುವೇನಿಯನ್ ಸ್ಟ್ರೈಕರ್ ನೆರಿಜಸ್ ವಾಲ್ಸ್ಕಿಸ್ ಬದಲಿಗೆ ಡೇವಿಡ್ ಗ್ರಾಂಡೆ ಅವರನ್ನು ಓವನ್ ಕೋಯ್ಲ್ ನೇಮಕ ಮಾಡಿ ಜಮ್ಶೆಡ್ಪುರ ತಂಡವನ್ನು ನೇರವಾಗಿ ದಾಳಿಗಾಗಿ ಅಂಗಳಕ್ಕಿಳಿಸಿದರು.

ಪಂದ್ಯಾರಂಭವಾದ ಕೇವಲ ನಾಲ್ಕು ನಿಮಿಷಗಳಲ್ಲಿ ಆತಿಥೇಯ ತಂಡ ಐಸಾಕ್ ವನ್ಮಾಲ್ಸಾವ್ಮಾ ಅವರ ಕ್ರಾಸ್ ರಾಲ್ಟೆಗೆ ನೇರವಾಗಿ ಗ್ರ್ಯಾಂಡೆ ಅವರಿಂದ ತಲುಪುವ ಮೂಲಕ ಮೊದಲ ಅವಕಾಶವನ್ನು ಪಡೆದರು. ಬೆಂಗಳೂರಿನ ಮೊದಲ ಅವಕಾಶವು ರಾಲ್ಟೆ ಅವರ ಲಾಂಗ್ ಬಾಲ್ ಮೂಲಕ ನೇರವಾಗಿ ಸುನಿಲ್ ಛೇತ್ರಿ ಅವರನ್ನು ತಲುಪಿತು. ಅವರು ಅದನ್ನು ಬಾಕ್ಸ್ ಅಂಚಿನಿಂದ ಉದಂತ ಸಿಂಗ್‌ಗೆ ವರ್ಗಾಯಿಸಿದರು ಅಲ್ಲಿಂದ ಚೆಂಡು ಪಡೆದ ರೆಹನೇಶ್ ಮೊದಲ ಪ್ರಯತ್ನಕ್ಕೆ ಅಡ್ಡಿಯಾಗಿ ನಿಂತು ತಡೆದರು.

ಕೆಲವೇ ಕ್ಷಣಗಳ ನಂತರ ಜಮ್ಶೆಡ್ಪುರ್ ಮುನ್ನಡೆಯನ್ನು ಸಾಧಿಸಿದರು. ಐಟರ್ ಮನ್ರಾಯ್ ಅವರ ಫ್ರೀ-ಕಿಕ್ ಪಡೆದ ಸ್ಟೀಫನ್ ಈಜ್ ನೇರವಾಗಿ ಗೋಲ್ ಪೋಸ್ಟ್ಗೆ ಚೆಂಡನ್ನು ತಳ್ಳಿದರು ರಾಲ್ಟೆ ಅವರ ಸಾಲಿನಿಂದ ಹೊರಬರಲು ಸಾಧ್ಯವಾಗದೇ ಗೋಲ್ ಬಿಟ್ಟುಕೊಟ್ಟರು. ಜಮ್ಶೆಡ್ಪುರ್ ಸೀಮಿನ್ಲೆನ್ ಡೌಂಗೆಲ್ ಮೂಲಕ ಅರ್ಧ ಘಂಟೆಯ ಆಟದ ಬಳಿಕ ತಮ್ಮ ಮುನ್ನಡೆಯನ್ನು ದ್ವಿಗುಣಗೊಳಿಕೊಂಡರು, ಅವರು ಅಜಿತ್‌ನನ್ನು ದಾಟಿ ತಮ್ಮ ಹೊಡೆತದೊಂದಿಗೆ ರಾಲ್ಟೆ ಅವರನ್ನು ತಪ್ಪಿಸಿ ಪೋಸ್ಟ್ನ ದೂರದ ಮೂಲೆಗೆ ಗೋಲ್ ಸೇರಿಸಿದರು.

ಬೆಂಗಳೂರು ಮತ್ತೆ ಒಗ್ಗಟ್ಟಿನ ಆಟದ ಪ್ರದರ್ಶನ ತೋರಲು ಮುಂದಾದರು ಆದರೆ ಜಮ್ಶೆಡ್ಪುರ್ ಮೂರನೇ ಗೋಲ್ ಸಾಧಿಸಿ ಬೆಂಗಳೂರು ತಂಡವನ್ನು ಮತ್ತೊಮ್ಮೆ ಹಿಮ್ಮೆಟ್ಟಿದರು. ವಿರಾಮಕ್ಕೆ ಕೇವಲ ನಾಲ್ಕು ನಿಮಿಷಗಳ ಮುನ್ನ, ಮನ್ರಾಯ್ ಮತ್ತೊಮ್ಮೆ ಬಲಗೈಯಿಂದ ತನ್ನ ಸೆಟ್-ಪೀಸ್ ಅನ್ನು ಡೇವಿಡ್ ಗ್ರ್ಯಾಂಡೆ ಅವರಿಗೆ ತಲುಪಿಸಿದರೆ ಅದನ್ನು ಗೋಲ್ ಆಗಿ ಪರಿವರ್ತಿಸಿ ಆತಿಥೇಯರಿಗೆ 3-0 ಅಂತರದ ಮುನ್ನಡೆ ತಂದುಕೊಟ್ಟರು.

ಆಟದಲ್ಲಿ ಹಿಂತಿರುಗುವ ಯೋಜನೆಯೊಂದಿಗೆ ಮೂಸಾ ಪಂದ್ಯಾರ್ಧ ಸಮಯದಲ್ಲಿ ಎರಡು ಬದಲಾವಣೆಗಳನ್ನು ಮಾಡಿದರು, ಅಜಿತ್ ಮತ್ತು ಮುಯಿರಾಂಗ್ ಬದಲಿಗೆ ಎರಿಕ್ ಮತ್ತು ಫ್ರಾನ್ ಅಂಗಳಕ್ಕಿಳಿದರು. ದ್ವಿತೀಯಾರ್ಧದಲ್ಲಿನ ಗೋಲಿನ ಮೊದಲ ಪ್ರಯತ್ನವು ಸುರೇಶ್ ವಾಂಗ್ಜಮ್ ಅವರ ಬೂಟ್‌ನಿಂದ ಹೊರಬಂದಿತು, ಮಿಡ್‌ಫೀಲ್ಡರ್ ಖಬ್ರಾ ಅವರ ಲೋಕ್ರಾಸ್‌ ಅನ್ನು ಬಾಕ್ಸ್ ಅಂಚಿನಿಂದ ಪೋಸ್ಟ್ನ ದೂರದಲ್ಲಿ ಸರಿಯುವಂತೆ ಚೆಂಡನ್ನು ಹೊಡೆದರು.

ಒಂದು ಗಂಟೆಯ ಆಟದ ಬಳಿಕ, ಬದಲಿ ಆಟಗಾರ ನೊರೆಮ್ ರೋಶನ್ ಸಿಂಗ್ ಅವರು ಛೇತ್ರಿ ಅವರಿಗೆ ಚೆಂಡನ್ನು ವರ್ಗಾಯಿಸುವ ಮುನ್ನ ಇಬ್ಬರು ಎದುರಾಳಿ ಆಟಗಾರರನ್ನು ಅಂಗಳದ ಎಡಭಾಗದಲ್ಲಿ ಹಿಂದಿಕ್ಕಿದ್ದರು ಆದರೆ ಛೇತ್ರಿ ತಮ್ಮ ಪ್ರಯತ್ನದಲ್ಲಿ ಫಲ ಅನುಭವಿಸಲಿಲ್ಲ. ಎರಡು ನಿಮಿಷಗಳ ನಂತರ, ಬ್ಲೂಸ್ ಫ್ರಾನ್ ಮೂಲಕ ಒಂದು ಅಂಕ ಗಳಿಸಲು ದೂರದ ಪೋಸ್ಟ್ನಲ್ಲಿ ಪರಾಗ್ ಅವರ ಲಾಂಗ್ ಥ್ರೋ ಪಡೆದು ಗೋಲ್ ಆಗಿ ಪರಿವರ್ತಿಸಿದರು.

ಆವೇಗದೊಂದಿಗೆ, ಬ್ಲೂಸ್ ಮತ್ತೊಂದು ಯತ್ನಕ್ಕೆ ಕೈಹಾಕಿದರು ಮತ್ತು ಖಬ್ರಾ ಅಂಗಳದ ಬಲಬದಿಯಲ್ಲಿ ತಮಗೆ ಸ್ಥಳಾವಕಾಶ ಕಲ್ಪಿಸಿಕೊಂಡು ಬಲವಾದ ಕ್ರಾಸ್ ಮೂಲಕ ನಾಯಕನನ್ನು ತಲುಪಿದರು. ಡೈವ್ ಮೂಲಕ ಛೇತ್ರಿ ಸುನಾಯಸವಾಗಿ ಬ್ಲೂಸ್ ಪರ ತಮ್ಮ 100 ನೇ ಗೋಲ್ ಗಳಿಸಿ ತಂಡಕ್ಕೆ 2ನೆ ಅಂಕ ಗಳಿಸಿದರು.

ಸಮಾನ ಅಂಕ ಗಳಿಸಲು ಕಠಿಣವಾಗಿ ಬ್ಲೂಸ್ ಪರಿಶ್ರಮಿಸಿದರು. ಸುರೇಶ್ ಅವರು ಉದಾಂತ ಅವರನ್ನು ಎಡಭಾಗದಲ್ಲಿ ಕಂಡುಕೊಂಡರು ಮತ್ತು ವಿಂಗರ್‌ನ ಪ್ರಯತ್ನವು ದೂರ ಸರಿಯಿತು. ನಂತರ, ಪರಾಗ್‌ ಅವರ ಕ್ರಾಸ್ ದೂರದ ಪೋಸ್ಟ್‌ನಲ್ಲಿ ಉದಾಂತ ಅವರ ಸ್ಪರ್ಶ ಕಂಡುಕೊಂಡರೂ ಅದನ್ನು ರೆಹೆನೇಶ್ ತಡೆದರು. ಕೊನೆಯ ಪ್ರಯತ್ನದಲ್ಲಿ ಫ್ರೀ ಕಿಕ್‌ನಿಂದ ಛೇತ್ರಿಯವರು ಮತ್ತೊಂದು ಗೋಲ್ ಯತ್ನ ಮಾಡಿದರು ಆದರೆ ಎದುರಾಳಿ ತಂಡದ ಕೀಪರ್ ತಡೆಯುವಲ್ಲಿ ಯಶಸ್ವಿಯಾದರು.

ಬೆಂಗಳೂರು ತಂಡಕ್ಕೆ ಜಮ್ಶೆಡ್ಪುರ್ ತಂಡದ ರಕ್ಷಣಾತ್ಮಕ ಹೋರಾಟವನ್ನು ಭೇಧಿಸಲು ಯಾವುದೇ ದಾರಿ ಸಿಗದೇ ಸೋಲುಂಡು ಇಂಡಿಯನ್ ಸೂಪರ್ ಲೀಗ್ ಆವೃತ್ತಿಯ ಅಂಕಪಟ್ಟಿಯಲ್ಲಿ 7ನೆ ಸ್ಥಾನಕ್ಕೆ ತೃಪ್ತಿಪಟ್ಟು ನಿರ್ಗಮಿಸಬೇಕಾಯಿತು.

2021 ರ ಎಎಫ್‌ಸಿ ಕಪ್‌ನ ಪ್ರಾಥಮಿಕ ಸುತ್ತಿನ ಎರಡು ಪಂದ್ಯಗಳಲ್ಲಿ ತ್ರಿಭುವನ್ ಆರ್ಮಿ ಕ್ಲಬ್ ಅಥವಾ ಶ್ರೀಲಂಕಾ ಪೊಲೀಸ್ ಎಸ್‌ಸಿಯನ್ನು ಏಪ್ರಿಲ್ 14 ರಂದು ಬ್ಲೂಸ್ ಎದುರಿಸಲಿದೆ.

Malcare WordPress Security