ಬೆಂಗಳೂರು ಎಫ್ ಸಿ ತಂಡಕ್ಕೆ 3-1 ಅಂತರದ ಸೋಲಿನ ಮುಖಭಂಗ

ಫಾಲ್, ಬಿಪಿನ್, ಆಗ್ಬೇಚೆ ಗಳಿಸಿದ ಗೋಲ್ಗಳು ಬ್ಲೂಸ್ ಗೆ ಸೋಲಿನ ಹಾದಿ ತೋರಿ, ಮುಂಬೈ ತಂಡವನ್ನು ಅಗ್ರಸ್ಥಾನಕ್ಕೇರಿಸಿತು.

ಮುಂಬೈ ಸಿಟಿ ಎಫ್ ಸಿ ಫತೋರ್ದಾ ಅಂಗಳದಲ್ಲಿ ಮಂಗಳವಾರ ನಡೆದ ಪಂದ್ಯದ ಮೊದಲಾರ್ಧದಲ್ಲಿ ಎರಡು ಸತತ ಗೋಲ್ಗಳನ್ನು ಮೌರ್ಟಾಡಾ ಫಾಲ್ (9′) ಮತ್ತು ಬಿಪಿನ್ ಸಿಂಗ್ (15′) ಮೂಲಕ ಪಡೆದು ಬ್ಲೂಸ್ ಗೆ ಇಂಡಿಯನ್ ಸೂಪರ್ ಲೀಗ್ ಅಲ್ಲಿ ಸತತ ಮೂರನೇ ಸೋಲಿಗೆ ಕಾರಣರಾದರು. ಇದರೊಂದಿಗೆ ಕಾರ್ಲೆಸ್ ತಂಡಕ್ಕೆ ಜನವರಿಯ ಮುಂದಿನ ಮುಖ್ಯ ಪಂದ್ಯಗಳನ್ನು ನಿಭಾಯಿಸುವ ಸವಾಲು ಎದುರಾಗಿದೆ.

ನಾಯಕ ಸುನಿಲ್ ಛೇತ್ರಿ (79′) ಎದುರಾಳಿಯ ಎಡವತ್ತಿನಿಂದ ದೊರೆತ ಪೆನಾಲ್ಟಿ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಗೋಲ್ ಗಳಿಸಿ ತಂಡಕ್ಕೆ ಅಂಕ ತರುವಲ್ಲಿ ನೆರವಾದರು. ನಂತರ ಆಗ್ಬೇಚೆ ಹೆಡರ್ ಪಡೆದರು ಗೋಲ್ ಅತ್ತ ಸಾಗಿದ್ದ ಚೆಂಡನ್ನು ಕೈಯಲ್ಲಿ ಹಿಡಿದ ಗುರ್ಪ್ರೀತ್ ಆಯ ತಪ್ಪಿ ಗೋಲ್ ಅತ್ತ ಬಿಟ್ಟಿದ್ದು ತಂಡಕ್ಕೆ ಇದ್ದ ಅವಕಾಶಗಳನ್ನು ದೂರ ಮಾಡಿ, ಪಂದ್ಯ ಕೈ ಜಾರಿತು.

ಅಮಾನತಿನಿಂದಾಗಿ ಎರಿಕ್ ಪಾರ್ತಲು ಆಟವನ್ನು ಕಳೆದುಕೊಂಡಿದ್ದರಿಂದ, ಕಾರ್ಲೆಸ್ ಕ್ವಾಡ್ರಾಟ್ ಮಿಡ್ಫೀಲ್ಡ್ ಆಯ್ಕೆಯಲ್ಲಿ ಎಂದಿನಂತೆ ಕ್ಲೀಟನ್ ಸಿಲ್ವಾ, ಡಿಮಾಸ್ ಡೆಲ್ಗಾಡೊ ಮತ್ತು ಸುರೇಶ್ ವಾಂಗ್ಜಮ್ ಅವರನ್ನು ಕಣದಲ್ಲಿಳಿಸಿದರು. ಏತನ್ಮಧ್ಯೆ, ಸ್ಟ್ರೈಕರ್‌ಗಳಾದ ಕ್ರಿಸ್ಟಿಯನ್ ಒಪ್ಸೆತ್ ಮತ್ತು ದೇಶೋರ್ನ್ ಬ್ರೌನ್ ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ನಾಯಕ ಸುನಿಲ್ ಛೇತ್ರಿಯೊಂದಿಗೆ ಆಕ್ರಮಣವನ್ನು ಪ್ರಾರಂಭಿಸಿದರು. ಕೆಲವೇ ದಿನಗಳ ಹಿಂದೆ ಕೇರಳ ಬ್ಲಾಸ್ಟರ್ಸ್ ತಂಡವನ್ನು ಸೋಲಿಸಿದ ಸೆರ್ಗಿಯೋ ಲೋಬೆರಾ ತಮ್ಮ ಮುಂಬೈ ಸಿಟಿ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿರಲಿಲ್ಲ.

ಮೂರನೆಯ ನಿಮಿಷದಲ್ಲಿಯೇ ಬ್ಲೂಸ್‌ಗೆ ಆಟದಲ್ಲಿ ಗೋಲ್ ಗಳಿಸುವ ಮೊದಲ ಅವಕಾಶ ಬಂದಿತು. ಮಿಡ್ಫೀಲ್ಡ್ ನಲ್ಲಿ ಡೀಪ್ ನ ಜವಾಬ್ದಾರಿ ನಿರ್ವಹಿಸುತ್ತಿರುವ ಕ್ಲೀಟನ್ ಸಿಲ್ವಾ, ಡೆಶಾರ್ನ್ ಬ್ರೌನ್‌ ಅವರಿಗೆ ಚೆಂಡು ತಲುಪಿಸಿದರು. ಆದರೆ ಜಮೈಕದ ಆಟಗಾರ ಶೂಟ್ ಮಾಡಿದರಾದರೂ ಚೆಂಡು ಬಾರ್‌ನ ಮೇಲೆ ಸಾಗಿತ್ತು.

ಫತೋರ್ದಾ ಅಂಗಳದಲ್ಲಿ, 9 ನೇ ನಿಮಿಷದಲ್ಲಿ ಮೊದಲ ಬಾರಿಗೆ ಜಿದ್ದಾಜಿದ್ದಿಯಲ್ಲಿ ಬೆಂಗಳೂರು ತಂಡಕ್ಕೆ ಆಘಾತ ಕಾದಿತ್ತು. ಬಿಪಿನ್ ಸಿಂಗ್ ಅವರ ಎಸೆತದಿಂದ ಹೆರ್ನಾನ್ ಸಂತಾನ ಚೆಂಡನ್ನು ತಳ್ಳಿದರು ಮತ್ತು ಮೌರ್ಟಾಡಾ ಫಾಲ್ ಅವರು ಜುವಾನಾನ್ ನನ್ನು ಮೀರಿ ಹೆಡರ್ ನೀಡಿ ಗೋಲ್ ಗಳಿಸಿ ಗುರ್ಪ್ರೀತ್ ಸಿಂಗ್ ಅವರನ್ನು ಚಕಿತಗೊಳಿಸಿದರು.

ಪ್ರವಾಸಿ ತಂಡ ಆರು ನಿಮಿಷಗಳ ನಂತರ ತಮ್ಮ ಮುನ್ನಡೆಯನ್ನು ದ್ವಿಗುಣಗೊಳಿಸಿದರು. ಮಂದಾರ್ ರಾವ್ ದೇಸ್ಸಾಯ್ ಅವರ ಕ್ರಾಸ್ ಬಿಪಿನ್ ಚಾಚಿದ ಕಾಲಿನಿಂದ ಗೋಲ್ ತಲುಪಿ, ಮುಂಬೈ ತಂಡಕ್ಕೆ 2-0 ಅಂತರ ತಂದು ಕೊಟ್ಟಿತು.

ಮೊದಲಾರ್ಧದಲ್ಲಿ ಬ್ಲೂಸ್ ಎರಡು ಬಾರಿ ಗೋಲ್ ಗಳಿಸುವ ಅವಕಾಶ ಪಡೆದರೂ ಯಶಸ್ವಿಯಾಗಲಿಲ್ಲ. 39ನೆ ನಿಮಿಷದಲ್ಲಿ ಒಪ್ಸೆಥ್ ತಮ್ಮ ಫ್ರೀ ಕಿಕ್ ಅವಕಾಶದಲ್ಲಿ ಅಮರಿಂದರ್ ಗೋಲ್ ಪೋಸ್ಟ್ ಮೇಲೆ ಚೆಂಡು ಹಾದುಹೋಗಿ ಗೋಲ್ ಪಡೆಯಲಾಗಲಿಲ್ಲ. ಎರಡು ನಿಮಿಷಗಳಲ್ಲೇ ಮತ್ತೊಮ್ಮೆ ಫ್ರೀ ಕಿಕ್ ಅವಕಾಶ ಪಡೆದ ಕ್ಲೀಟನ್ ನೇರವಾಗಿ ಗೋಲ್ ಪಡೆಯೋ ಉತ್ಸಾಹದಲ್ಲಿ ಅಮರೆಂದರ್ ಸಿಂಗ್ ಅವರಿಗೆ ಚೆಂಡು ತಲುಪಿಸಿದರು. ಅದೇ ರೀತಿಯಲ್ಲಿ ನಾಯಕ ಛೇತ್ರಿ ಅವರಿಗೆ ಒಂದು ಸುಲಭ ಗೋಲ್ ಗಳಿಸುವ ಅವಕಾಶವಿತ್ತಾದರು ಕ್ಲಿಟನ್ ಅವರಿಂದ ಪಡೆದ ಚೆಂಡಿನ ಮೇಲಿ ಹೆಚ್ಚಿನ ನಿಯಂತ್ರಣ ಸಾಧಿಸಲು ಸಾಧ್ಯವಾಗದೇ ಕೀಪರ್ ಕೈಗೆ ಚೆಂಡನ್ನು ಇತ್ತರು. ಇದರೊಂದಿಗೆ 2 ಗೋಲ್ಗಳ ಮುನ್ನಡೆಯೊಂದಿಗೆ ಮೊದಲಾರ್ಧದ ಅಂತ್ಯಕ್ಕೆ ಮುಂಬೈ ಮೇಲುಗೈ ಸಾಧಿಸಿತ್ತು.

ಕಾರ್ಲೆಸ್ ಅವರು ಅಜಿತ್ ಕುಮಾರ್ ಮತ್ತು ಉದಾಂತ ಅವರನ್ನು ಅಂಗಳಕ್ಕೆ ಕರೆತಂದು ಪಂದ್ಯದಲ್ಲಿ ಮುನ್ನಡೆಗೆ ಯತ್ನಿಸಿದರು. ಕೊನೆಯ 45 ನಿಮಿಷಗಳ ಪಂದ್ಯ ಎರಡೂ ತಂಡಗಳಿಗೆ ಹಿಡಿತ ಸಾಧಿಸುವಲ್ಲಿ ಅನುಕೂಲಗಳನ್ನು ಮಾಡಿಕೊಡಲಿಲ್ಲ. ಈ ನಡುವೆ ಫಾಲ್ ಅವರ ಅಚಾತುರ್ಯದ ಕಾರಣ ಕ್ಲೀಟನ್ ನೆಲಕ್ಕೆ ಬಿದ್ದಾಗ ಎದುರಾಳಿಯ ವಿರುದ್ಧ ಪೆನಲ್ಟಿ ಗೋಲ್ ಗಳಿಸುವ ಅವಕಾಶ ಒದಗಿಬಂತು. ಯಾವುದೇ ತಪ್ಪು ಎಸಗದೇ ಛೇತ್ರಿ ಅಮರಿಂದರ್ ಅವರನ್ನು ಮಣಿಸಿ ತಂಡಕ್ಕೆ ಮೊದಲ ಗೋಲ್ ಗಳಿಸಿದರು. ಆದರೆ ಕಡಿಮೆಯಾಗಿದ್ದ ಗೋಲ್ ಅಂತರವನ್ನು ಆರೇ ನಿಮಿಷಗಳಲ್ಲಿ ಹೆಚ್ಚಿಸಿ, ಮತ್ತೆ ಪ್ರಾಬಲ್ಯ ಮೆರೆಯಲು ಆಗ್ಬೇಚೆ ತಮ್ಮ ಹೆಡರ್ ಇಂದ ಗೋಲ್ ಗಳಿಸಿ ಗೆಲುವನ್ನು ಸುಲುವಾಗಿಸಿದರು.

ಪ್ರವಾಸಿ ಮುಂಬೈ ತಂಡದ ಅಹ್ಮದ್ ಜೋಹುವ ಎರಡು ಯೆಲ್ಲೋ ಕಾರ್ಡ್ ಗಳಿಸಿದ್ದರಿಂದ ತಂಡ ನಂತರ ಕೇವಲ ಹತ್ತು ಆಟಗಾರರೊಂದಿಗೆ ಕಣದಲ್ಲಿ ಸೆಣೆಸಬೇಕಾಯ್ತು. ಇದರ ಸದುಪಯೋಗವನ್ನು ಬ್ಲೂಸ್ ಗಳಿಸುವ ಮುನ್ನವೇ ಮುಂಬೈ ಪಂದ್ಯ ಗೆದ್ದು ಫತೋರ್ದಾ ಅಂಗಳದಲ್ಲಿ 3 ಅಂಕ ತನ್ನದಾಗಿಸಿಕೊಂಡಿತ್ತು.

ಬೆಂಗಳೂರು ತಂಡ ಇದೇ ಅಂಗಳದಲ್ಲಿ ತಮ್ಮ ಮುಂದಿನ ಪಂದ್ಯವನ್ನು ಎಸ್ ಸಿ ಈಸ್ಟ್ ಬೆಂಗಾಲ್ ವಿರುದ್ಧ ಜನವರಿ 9 ರಂದು ಆಡಲಿದೆ.

Malcare WordPress Security