ಬೆಂಗಳೂರು ಎಫ್‌ಸಿ ಮಹಿಳೆಯರ ಫುಟ್‌ಬಾಲ್‌ ಲೋಕಕ್ಕೆ ತನ್ನ ಪ್ರವೇಶವನ್ನು ಘೋಷಿಸಿದೆ

ಕ್ಲಬ್‌ U11, U13 ಮತ್ತು U15 ತಂಡಗಳನ್ನು ಆರಂಭಿಸಲಿದ್ದು, ಸೆಪ್ಟೆಂಬರ್ 25 ಕ್ಕೆ ಆಯ್ಕೆಪ್ರಕ್ರಿಯೆಯನ್ನು ನಿಗದಿಪಡಿಸಿದೆ

ಬೆಂಗಳೂರು ಎಫ್‌ಸಿ ಶುಕ್ರವಾರದಂದು 11, 13 ಮತ್ತು 15ರ ವಯೋಮಾನದ ಬಾಲಕಿಯರ ತಂಡಗಳನ್ನು ಆರಂಭಿಸುವ ಯೋಜನೆಯನ್ನು ಘೋಷಿಸಿದ್ದು, ಮಹಿಳಾ ಫುಟ್‌ಬಾಲ್‌ ಲೋಕಕ್ಕೆ ತನ್ನ ಪ್ರವೇಶವನ್ನು ಖಚಿತಪಡಿಸಿದೆ. ಸೆಪ್ಟೆಂಬರ್ 25 ರಂದು ಅಶೋಕ್ ನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಆಯ್ಕೆಯ ಪ್ರಕ್ರಿಯೆಗಳನ್ನು ಆಯೋಜಿಸಿದೆ.

“ನಾವು ಈವರೆಗೂ ಮಹಿಳೆಯರ ಫುಟ್‌ಬಾಲ್‌ ಲೋಕಕ್ಕೆ ಪ್ರವೇಶಿಸುವುದರ ಕುರಿತು ಕ್ಲಬ್‌ನಲ್ಲಿ ಸಾಕಷ್ಟು ಬಾರಿ ಚರ್ಚಿಸಿದ್ದೆವು ಮತ್ತು ನಾವು ಇದನ್ನು ಕೋವಿಡ್ -19 ಸಾಂಕ್ರಾಮಿಕವು ಇಲ್ಲದೆ ಇದ್ದಿದ್ದರೆ ಒಂದು ವರ್ಷದ ಹಿಂದೆಯೇ ಈ ಕ್ರಮವನ್ನು ಕೈಗೊಳ್ಳುತ್ತಿದ್ದೆವು. ಇಂದು, ಹೆಣ್ಣು ಮಕ್ಕಳು ಭಾಗವಹಿಸಲು ಸಾಕಷ್ಟು ಸ್ಪರ್ಧೆಗಳಿವೆ ಮತ್ತು ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ಕೂಡ ಸೂಪರ್ ಡಿವಿಷನ್ ಮತ್ತು ಎ ಡಿವಿಷನ್ ಅನ್ನು ನಡೆಸುವ ಮೂಲಕ ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಂಡಿದೆ. ನಮ್ಮ ಹೆಣ್ಣುಮಕ್ಕಳು ಭಾಗವಹಿಸಬಹುದಾದ ಸ್ಪರ್ಧೆಗಳನ್ನು ಅಯೋಜಿಸುತ್ತಿರುವಂತಹ ಬಹಳಷ್ಟು ಸಮುದಾಯಗಳನ್ನು ನಾವೀಗ ಕಾಣಬಹುದಾಗಿದೆ ಇದರಿಂದ ಆಟಗಾರರ ಸರ್ವತೋಮುಖ ಅಭಿವೃದ್ಧಿಗೆ ಸಾಕಷ್ಟು ಸಹಾಯವಾಗಲಿದೆ.” ಎಂದು ಕ್ಲಬ್ ಸಿಇಒ ಮಂದರ್ ತಮ್ಹಾನೆ ಹೇಳಿದರು.

ಕ್ಲಬ್ ಈ ವರ್ಷ ವಿವಿಧ ವಯೋಮಾನದ ಮಹಿಳಾ ತಂಡಗಳನ್ನು ಆರಂಭಿಸಲಿದ್ದು, ಹಿರಿಯ ತಂಡವು ಕೆಲಸಮಯದ ನಂತರ ರೂಪುಗೊಳ್ಳುವ ನಿರೀಕ್ಷೆಯಿದೆ.

“ಅಂಡರ್ -11, ಅಂಡರ್ -13 ಮತ್ತು ಅಂಡರ್ -15 ತಂಡಗಳೊಂದಿಗೆ ಆರಂಭಿಸುವುದು ನಮ್ಮ ಪ್ರಜ್ಞಾಪೂರ್ವಕ ನಿರ್ಧಾರವಾಗಿತ್ತು, ಏಕೆಂದರೆ ನಾವು ಇದನ್ನು ಸರಿಯಾದ ಅಡಿಪಾಯದೊಂದಿಗೆ ನಿರ್ಮಿಸುವ ಉದ್ದೇಶವನ್ನು ಹೊಂದಿದ್ದೇವೆ. ಮುಂಬರುವ ದಿನಗಳಲ್ಲಿ ಎಎಫ್‌ಸಿ ಮಹಿಳಾ ಏಷ್ಯನ್ ಕಪ್ ಮತ್ತು ಯು 17 ಫಿಫಾ ಮಹಿಳಾ ವಿಶ್ವಕಪ್ ಸ್ಪರ್ಧೆಗಳಲ್ಲಿ ಮಹಿಳೆಯರಿಗೆ ಆಡುವ ಅವಕಾಶ ನೀಡುವ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿದ್ದು, ಈ ನಿಟ್ಟಿನಲ್ಲಿ ಕ್ರೀಡೆಯನ್ನು ಉತ್ತೇಜಿಸುವ ಸಲುವಾಗಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ ಕೂಡ ಸಾಕಷ್ಟು ಕೆಲಸ ಮಾಡುತ್ತಿದೆ. ಇದು ಕೇವಲ ಒಂದು ಚಿಕ್ಕ ಹೆಜ್ಜೆಯಾಗಿದೆ ಮತ್ತು ನಾವು ನಿಧಾನವಾಗಿ ಚಲಿಸಿ ಏರುತ್ತಾ, ಶೀಘ್ರದಲ್ಲೇ ಅಗ್ರ ಡಿವಿಷನ್ಗಳಲ್ಲಿ ನಮ್ಮ ಮಹಿಳಾ ತಂಡವನ್ನು ಅಂಗಳಕ್ಕಿಳಿಸುತ್ತೇವೆ.” ಎಂದು ಮಂದಾರ್ ಹೇಳಿದರು.

ಪುರುಷರ ತಂಡದ ನಾಯಕನಾದ ಸುನಿಲ್ ಛೇತ್ರಿ, ಕ್ಲಬ್‌ನ ಇತ್ತೀಚಿನ ನಿರ್ಧಾರದ ಕುರಿತು ಹೀಗೆ ವಿವರಿಸಿದರು “ಬೆಂಗಳೂರು ಎಫ್‌ಸಿ ತಮ್ಮ ಮಹಿಳಾ ತಂಡವನ್ನು ಆರಂಭಿಸಲಿರುವ ಸುದ್ದಿಯಿಂದ ಕ್ಲಬ್‌ನಲ್ಲಿರುವ ಪ್ರತಿಯೊಬ್ಬರೂ ಸಂತೋಷಪಟ್ಟಿದ್ದಾರೆ ಮತ್ತು ಈ ಬೆಳವಣಿಗೆಯ ಕುರಿತು ನಾಯಕನಾಗಿ ನಾನು ತುಂಬಾ ಉತ್ಸುಕನಾಗಿದ್ದೇನೆ. ಇದು ನಾವು ಈ ಹಿಂದೆಯೇ ಚರ್ಚಿಸುತ್ತಿದ್ದಂತಹ ವಿಷಯವಾಗಿತ್ತು, ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಇದನ್ನು ಆರಂಭಿಸಲು ಬಯಸಿದ್ದೆವು. ಇದೊಂದು ಅದ್ಭುತ ಆರಂಭಕ್ಕೆ ನಾಂದಿಯಾಗಲಿದೆ. ”

ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು 8197209753 ಅಥವಾ 8892386170 ಅನ್ನು ಸಂಪರ್ಕಿಸಿ.

ಆಯ್ಕೆ ಪ್ರಕ್ರಿಯೆ ಕುರಿತ ಮಾಹಿತಿ

U11: ಸೆಪ್ಟೆಂಬರ್ 25, 2021 – ಬೆಳಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ

U13: ಸೆಪ್ಟೆಂಬರ್ 25, 2021 – ಬೆಳಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ

U15: ಸೆಪ್ಟೆಂಬರ್ 25, 2021 – ಬೆಳಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ

ವಯೋಮಿತಿ

U11: 1/1/2011 ರಿಂದ 31/12/2013

U13: 1/1/2009 ರಿಂದ 31/12/2010

U15: 1/1/2007 ರಿಂದ 31/12/2008

Malcare WordPress Security