ಬೆಂಗಳೂರು ಎಫ್‌ಸಿ ಆವೃತ್ತಿಯ ಅತ್ಯುತ್ತಮ ಆಟಗಾರರ ಪ್ರಶಸ್ತಿಗಳನ್ನು ಪ್ರಕಟಿಸಿದೆ

ಬ್ರೆಜಿಲ್ ಆಟಗಾರ ಆವೃತ್ತಿಯ ಅತ್ಯುತ್ತಮ ಆಟಗಾರ, ಆವೃತ್ತಿಯ ಅತ್ಯಾಕರ್ಷಕ ಗೋಲ್ಗ ಳಿಸಿದ ಆಟಗಾರ ಪ್ರಶಸ್ತಿಗಳೊಂದಿಗೆ ಸುನಿಲ್ ಛೇತ್ರಿಯೊಂದಿಗೆ ಟಾಪ್ ಸ್ಕೋರರ್ಪ್ರ ಶಸ್ತಿಯನ್ನು ಹಂಚಿಕೊಂಡಿದ್ದಾರೆ; ಸುರೇಶ್ ವಾಂಗ್ಜಮ್ ಅಭಿಮಾನಿಗಳ ಅತ್ಯುತ್ತಮ
ಆಟಗಾರನಾಗಿ ಆಯ್ಕೆಯಾಗಿದ್ದಾರೆ.

ಕ್ಲಬ್‌ನ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ 2020-21 ವಾರ್ಷಿಕ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಬೆಂಗಳೂರು ಎಫ್‌ಸಿ ಭಾನುವಾರದಂದು ಘೋಷಿಸಿದ್ದು, ಬ್ರೆಜಿಲ್ ಸ್ಟ್ರೈಕರ್ ಕ್ಲೀಟನ್ ಸಿಲ್ವಾ ಮೂರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ನಾಯಕ ಸುನಿಲ್ ಛೇತ್ರಿಯೊಂದಿಗೆ ಸಿಲ್ವಾ ಅಗ್ರ ಗೋಲ್ ಸ್ಕೋರರ್ ಪ್ರಶಸ್ತಿಯನ್ನು ಗಳಿಸಿದರು. ಅವರನ್ನು ಆವೃತ್ತಿಯ ಅತ್ಯುತ್ತಮ ಆಟಗಾರ ಎಂದು ಹೆಸರಿಸಲಾಯಿತು ಮತ್ತು ಎಸ್ ಸಿ ಈಸ್ಟ್ ಬೆಂಗಾಲ್ ವಿರುದ್ಧದ ಅಂಕ ಗೋಲ್ ಆಫ್ ದಿ ಸೀಸನ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ತಂಡಕ್ಕೆ ಸೇರ್ಪಡೆಯಾದ ನಂತರದಲ್ಲಿ, ಸಿಲ್ವಾ ಅಭಿಯಾನದಲ್ಲಿ ಬ್ಲೂಸ್‌ ಪರ ಸ್ಪರ್ಧೆಗಳಲ್ಲಿ ಹದಿನೈದು ಗೋಲ್ ಪಡೆಯುವಲ್ಲಿನ ಪಾಲುದಾರಿಕೆಯನ್ನು ದಾಖಲಿಸಿದ್ದರು. 34 ರ ಹರೆಯದ ಇವರು ಒಂಬತ್ತು ಗೋಲುಗಳನ್ನು ಗಳಿಸಿದ್ದಾರೆ. ನಾಯಕ ಸುನಿಲ್ ಛೇತ್ರಿಯೊಂದಿಗೆ ಕ್ಲಬ್‌ನ ಗೋಲ್ ಸ್ಕೋರಿಂಗ್ ಪಟ್ಟಿಯ ಅಗ್ರಸ್ಥಾನವನ್ನೂ ಅಲಂಕರಿಸಿದ್ದಾರೆ. ಈ ಬಾರಿಯ ಹಂಚಿಕೆಗೊಂಡ ಪ್ರಶಸ್ತಿಯೊಂದಿಗೆ ಛೇತ್ರಿ ಸತತ ಎಂಟನೇ ಬಾರಿಗೆ ಬೆಂಗಳೂರು ಎಫ್‌ಸಿಯ ಅಗ್ರ ಸ್ಕೋರರ್ ಆಗಿ ಆವೃತ್ತಿಯನ್ನು ಮುಗಿಸಿದ್ದಾರೆ.

ತಿಲಕ್ ಮೈದಾನದಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ವಿರುದ್ಧದ ಯತ್ನ, ಎಡಗಾಲಿನ ಹೊರಭಾಗದಲ್ಲಿ ಮತ್ತು ವಾಲಿಯಲ್ಲಿ ಗಳಿಸಿದ ಗೋಲ್ ಕ್ಲೀಟನ್‌ಗೆ ಮತ್ತೊಂದು ಪ್ರಶಸ್ತಿಯನ್ನು ತಂದಿತ್ತಿತು. ಕ್ಲಬ್‌ನ ಬ್ಯಾಕ್‌ರೂಮ್ ಸಿಬ್ಬಂದಿ ಮತ್ತು ಬಯೋಬಬಲ್ ಅಲ್ಲಿದ್ದ ಗೋವಾದಲ್ಲಿನ ಕ್ಲಬ್‌ನ ಹೋಟೆಲ್ ಸಿಬ್ಬಂದಿಯ ಮತಗಳ ಆಧಾರದ ಮೇಲೆ ಬ್ಲೂಸ್‌ನ ಗೋಲ್ ಆಫ್ ದಿ ಸೀಸನ್ ಗೆ ಸಿಲ್ವಾರನ್ನು ಹೆಸರಿಸಲಾಯಿತು.

ಆನ್‌ಲೈನ್‌ನಲ್ಲಿ ನಡೆಸಿದ ಸಮೀಕ್ಷೆ ಮತ್ತು ಬ್ಲೂಸ್‌ನ ಅಭಿಮಾನಿಗಳ ಮತಗಳೊಂದಿಗೆ ಮಿಡ್‌ಫೀಲ್ಡರ್ ಸುರೇಶ್ ವಾಂಗ್ಜಾಮ್‌ರನ್ನು ಜೆಎಸ್‌ಡಬ್ಲ್ಯು ಫ್ಯಾನ್ಸ್ ಪ್ಲೇಯರ್ ಆಫ್ ದಿ ಸೀಸನ್ ಎಂದು ಹೆಸರಿಸಲಾಯಿತು. ಸುರೇಶ್, ಕ್ಲಬ್‌ನಲ್ಲಿ ತಮ್ಮ ಎರಡನೇ ಆವೃತ್ತಿಯಲ್ಲಿ ಆಡಿದ್ದು, ಈ ಹಿಂದೆಯೂ ಫ್ಯಾನ್ಸ್ ’ಪ್ಲೇಯರ್ ಇನ್ ದಿ ಬ್ಲೂಸ್’ 2019-20ರ ಕೀರ್ತಿಗೆ ಪಾತ್ರರಾಗಿದ್ದರು.

ಪ್ರತಿ ಆವೃತ್ತಿಯಂತೆ, ಬ್ಲೂಸ್ ತಮ್ಮ ಯುವ ತಂಡಗಳ ಅತ್ಯುತ್ತಮ ಆಟಗಾರರನ್ನೂ ಗುರುತಿಸಿದ್ದಾರೆ, ಅಕಾಡೆಮಿಯ ಪದವೀಧರ ಮತ್ತು ಮಿಡ್‌ಫೀಲ್ಡರ್ ದಮೈತ್‌ಫಾಂಗ್ ಲಿಂಗ್ಡೊ ಅವರು ಅಪ್ಕಮಿಂಗ್ ಪ್ಲೇಯರ್ ಆಫ್ ದಿ ಸೀಸನ್ ಪ್ರಶಸ್ತಿಯನ್ನು ಪಡೆದರು. ಬಿಡಿಎಫ್‌ಎ ಸೂಪರ್ ಡಿವಿಷನ್ ಲೀಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಮೊದಲ ತಂಡಕ್ಕೆ ಬಡ್ತಿ ಪಡೆದ ಹದಿನೇಳು ವರ್ಷದ ಲಿಂಗ್ಡೊ, ಏಪ್ರಿಲ್ ಅಲ್ಲಿ ನಡೆದ ಎಎಫ್‌ಸಿ ಕಪ್ ಪ್ರಾಥಮಿಕ ಹಂತದ ಎರಡು ಪಂದ್ಯಗಳಲ್ಲಿ ಕಾಣಿಸಿಕೊಂಡಾಗ, ಕ್ಲಬ್‌ನ ಮೊದಲ ತಂಡವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಬ್ಲೂಸ್ ತಮ್ಮ ಗ್ರಾಸ್‌ರೂಟ್ಸ್ ಕಾರ್ಯಕ್ರಮದ ಮೂಲಕ ಅತ್ಯುತ್ತಮ ಪರಿಶ್ರಮ ಮತ್ತು ಪ್ರಯತ್ನಗಳೊಂದಿಗೆ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಹಲವಾರು ಯುವ ಆಟಗಾರರಿಗೆ ಪ್ರಶಂಸಾ ಪ್ರಶಸ್ತಿಗಳನ್ನು ನೀಡಿದರು. ಬೆಂಗಳೂರು ಎಫ್‌ಸಿಯ ಅಕಾಡೆಮಿ ತಂಡಗಳು ಇತರ ಸ್ಥಳೀಯ ಸ್ಪರ್ಧೆಗಳೊಂದಿಗೆ ಕೆಎಸ್‌ಎಫ್‌ಎ ಯೂತ್ ಪ್ರೀಮಿಯರ್ ಲೀಗ್ ಮತ್ತು ಬಿಓಸಿಎ ಶ್ಲೋಕ್ ಚಾಂಪಿಯನ್‌ಶಿಪ್‌ನಲ್ಲಿನ ಅತ್ಯುತ್ತಮ ಸಾಧನೆಗೆ ವಯಸ್ಸಿನ ಗುಂಪುಗಳ ಆಧಾರದ ಮೇಲೆ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.

ಅಕಾಡೆಮಿ ಆಟಗಾರರಾದ ಲಾಲ್ಮಿಂಗ್‌ಚುವಾಂಗಾ (ಯು 15), ನ್ಯೂಟನ್ ಸಿಂಗ್ (ಯು 13), ಸಾಥ್ವಿಕ್ ಸುಭಾರ್ಕರ್ (ಯು 12), ಲಿಯಾಮ್ ಫರ್ನಾಂಡಿಸ್ (ಯು 10) ಮತ್ತು ದೇವಾಂಶ್ ಚಿಂತನ್ (ಯು 8) ಆಯಾ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು
ಪಡೆದರು. ಮೊದಲನೆಯದಾಗಿ, ಕ್ಲಬ್ ತನ್ನ ಬಿಎಫ್‌ಸಿ ಸಾಕರ್ ಶಾಲೆಗಳ ಎಲೈಟ್ ತಂಡಗಳ ಅತ್ಯುತ್ತಮ ಆಟಗಾರರನ್ನೂ ಹೆಸರಿಸಿದೆ. ಹೇಮಂದ್ ಮೂರ್ತಿ (ಯು 10), ಆರ್ಯನ್ ವೊರಾ (ಯು 12) ಮತ್ತು ಕೆವಿನ್ ಕುರಿಯನ್ (ಯು 14) ಪ್ರಶಸ್ತಿಗೆ ಭಾಜನರಾದರು.

ಪ್ರಶಸ್ತಿಗಳು

ಅಗ್ರ ಸ್ಕೋರರ್: ಸುನಿಲ್ ಛೇತ್ರಿ, ಕ್ಲೀಟನ್ ಸಿಲ್ವಾ (9 ಗೋಲ್)

ಆವೃತ್ತಿಯ ಅತ್ಯುತ್ತಮ ಆಟಗಾರ: ಕ್ಲೀಟನ್ ಸಿಲ್ವಾ

ಜೆಎಸ್‌ಡಬ್ಲ್ಯು ಫ್ಯಾನ್ಸ್ ’ಪ್ಲೇಯರ್ ಆಫ್ ದಿ ಸೀಸನ್: ಸುರೇಶ್ ಸಿಂಗ್ ವಾಂಗ್ಜಮ್

ಆವೃತ್ತಿಯ ಆಕರ್ಷಕ ಗೋಲ್: ಕ್ಲೀಟನ್ ಸಿಲ್ವಾ v ಎಸ್ ಸಿ ಈಸ್ಟ್ ಬೆಂಗಾಲ್, ತಿಲಕ್ ಮೈದಾನ (2 ಫೆಬ್ರವರಿ, 2021)

ಆವೃತ್ತಿಯ ಉದಯೋನ್ಮುಖ ಆಟಗಾರ: ದಮೈತ್‌ಫಾಂಗ್ ಲಿಂಗ್ಡೊ (ಮಿಡ್‌ಫೀಲ್ಡರ್)

U15 ಅಕಾಡೆಮಿ ಪ್ಲೇಯರ್ ಆಫ್ ದಿ ಸೀಸನ್: ಲಾಲ್ಮಿಂಗ್ಚುವಾಂಗಾ (ಮಿಡ್‌ಫೀಲ್ಡರ್)

U13 ಅಕಾಡೆಮಿ ಪ್ಲೇಯರ್ ಆಫ್ ದಿ ಸೀಸನ್: ನ್ಯೂಟನ್ ಸಿಂಗ್ (ಮಿಡ್‌ಫೀಲ್ಡರ್)

U12 ಅಕಾಡೆಮಿ ಆಟಗಾರ: ಸಾಥ್ವಿಕ್ ಸುಭಾರ್ಕರ್ (ರಕ್ಷಕ)

U10 ಅಕಾಡೆಮಿ ಪ್ಲೇಯರ್ ಆಫ್ ದಿ ಸೀಸನ್: ಲಿಯಾಮ್ ಫರ್ನಾಂಡಿಸ್ (ಡಿಫೆಂಡರ್)

U8 ಅಕಾಡೆಮಿ ಪ್ಲೇಯರ್ ಆಫ್ ದಿ ಸೀಸನ್: ದೇವಾಂಶ್ ಚಿಂತನ್ (ಡಿಫೆಂಡರ್)

ಬಿಎಫ್‌ಸಿ ಸಾಕರ್ ಶಾಲೆಗಳ U10 ಎಲೈಟ್ ಪ್ಲೇಯರ್ ಆಫ್ ದಿ ಸೀಸನ್: ಹೇಮಂದ್ ಮೂರ್ತಿ (ಸ್ಟ್ರೈಕರ್)

ಬಿಎಫ್‌ಸಿ ಸಾಕರ್ ಶಾಲೆಗಳ U12 ಎಲೈಟ್ ಪ್ಲೇಯರ್ ಆಫ್ ದಿ ಸೀಸನ್: ಆರ್ಯನ್ ವೋರಾ (ಡಿಫೆಂಡರ್)

ಬಿಎಫ್‌ಸಿ ಸಾಕರ್ ಶಾಲೆಗಳ ಯು 14 ಎಲೈಟ್ ಪ್ಲೇಯರ್ ಆಫ್ ದಿ ಸೀಸನ್: ಕೆವಿನ್ ಕುರಿಯನ್ (ಮಿಡ್‌ಫೀಲ್ಡರ್)

Malcare WordPress Security