ಬೆಂಗಳೂರು ಈಗಲ್ಸ್‌ ವಿರುದ್ಧ 2-1ರಲ್ಲಿಮಣಿದ ಬ್ಲೂಬಳಗ

ಬೆಂಗಳೂರು ಫುಟ್ಬಾಲ್‌ ಕ್ರೀಡಾಂಗಣದಲ್ಲಿಕೊನೆಯ ನಿಮಿಷದಲ್ಲಿನಾಟಕೀಯ ಬೆಳವಣಿಗೆ | ಸ್ಥಳೀಯ ಲೀಗ್‌ನಲ್ಲಿಬೆಂಗಳೂರು ಎಫ್‌ಸಿಗೆ ಮೊದಲ ಸೋಲು

ಬೆಂಗಳೂರು ಎಫ್‌ಸಿ 2021-22ರ ಬಿಡಿಎಫ್‌ಎ ಸೂಪರ್‌ ಡಿವಿಜನ್‌ ಲೀಗ್‌ನಲ್ಲಿಇದೇ ಮೊದಲ ಬಾರಿ ಸೋಲು ಅನುಭವಿಸಿತು. ಬೆಂಗಳೂರು ಫುಟ್ಬಾಲ್‌ ಕ್ರೀಡಾಂಗಣದಲ್ಲಿಗುರುವಾರ ನಡೆದ ಹಣಾಹಣಿಯಲ್ಲಿಬಿಎಫ್‌ಸಿ 1-2 ಗೋಲ್‌ಗಳಿಂದ ಬೆಂಗಳೂರು ಈಗಲ್ಸ್‌ಗೆ ಶರಣಾಯಿತು. ಈಗಲ್ಸ್‌ ಪರ ಕ್ಲೆಟಸ್‌ ಪಾಲ್‌ (45ನೇ ನಿಮಿಷ) ಮತ್ತು ಹರ್‌ಪ್ರೀತ್‌ ರುಲ್ಬಿರ್‌ (86ನೇ ನಿಮಿಷ) ತಲಾ ಒಂದು ಗೋಲ್‌ ಗಳಿಸಿ ತಂಡಕ್ಕೆ ಪೂರ್ಣ ಅಂಕ ತಂದುಕೊಟ್ಟರೆ, ಬ್ಲೂಸ್‌ ಪರ ಅಜಿತ್‌ ಅರಸು (35ನೇ ನಿಮಿಷ ಉಡುಗೊರೆ ಗೋಲ್‌) ಒಂದು ಗೋಲ್‌ ದಾಖಲಿಸಿ ಮೊದಲಾರ್ಧದಲ್ಲಿಮುನ್ನಡೆಗೆ ಕಾರಣರಾದರು.
ಬಿಎಫ್‌ಸಿ ಪರ ಸಂದೇಶ್‌ ಬೋಯಿತೆ ಎರಡು ಬದಲಾವಣೆ ತಂದರು. ಥೋಯ್‌ ಸಿಂಗ್‌ ಮತ್ತು ಬೇಕೆ ಬದಲಿಗೆ ಮ್ಯಾಕರ್ಟನ್‌ ನಿಕ್ಸನ್‌ ಮತ್ತು ಮೊನಿರುಲ್‌ ಮೊಲ್ಲಾಅವರಿಗೆ ಆಡುವ ಬಳಗದಲ್ಲಿಸ್ಥಾನ ಕಲ್ಪಿಸಿದರು. ಮತ್ತೊಮ್ಮೆ ಹರ್‌ಪ್ರೀತ್‌ ಸಿಂಗ್‌ ಮತ್ತು ರಾಬಿನ್‌ ಯಾದವ್‌ ಬ್ಯಾಕ್‌ಲೈನ್‌ನಲ್ಲಿಕಾಣಿಸಿಕೊಂಡರೆ, ಬಿಸ್ವಾ ದಾರ್ಜಿ ಮತ್ತು ಎಡ್ವಿನ್‌ ರೊಸ್ಸಾರಿಯೊ ಮಿಡ್‌ಫೀಲ್ಡ್‌ನಲ್ಲಿಕಣಕ್ಕಿಳಿದರು.
ಪಂದ್ಯದ ಮೊದಲ 30 ನಿಮಿಷ ಬ್ಲೂಪಡೆ ಪ್ರಾಬಲ್ಯ ಮೆರೆಯಿತು. ಆದರೆ ಗೋಲ್‌ ಗಳಿಕೆ ಅವಕಾಶಗಳನ್ನು ಕೈಚೆಲ್ಲುವ ಮೂಲಕ ಮುನ್ನಡೆ ಗಳಿಸುವಲ್ಲಿಎಡವಿತು. ಲಾಲ್ತಾಂಗ್ಗಿಯಾನ ಮತ್ತು ಒಮೆಗಾ ನಡೆಸಿದ ಗೋಲಿನ ಯತ್ನಗಳನ್ನು ಬಿಎಫ್‌ಸಿಯ ಮಾಜಿ ಗೋಲ್‌ ಕೀಪರ್‌(ಕಸ್ಟೋಡಿಯನ್‌) ಶಾಯಿನ್‌ ಖಾನ್‌ ಚಿಲಪ್ಪುರಮ್‌ ಹಿಮ್ಮೆಟ್ಟಿಸುವ ಮೂಲಕ ಈಗಲ್ಸ್‌ಗೆ ಎದುರಾಗುತ್ತಿದ್ದ ಹಿನ್ನಡೆಯನ್ನು ತಗ್ಗಿಸಿದರು. 35ನೇ ನಿಮಿಷದಲ್ಲಿಒಮೆಗಾ ಹೊಡೆದ ಚೆಂಡನ್ನು ಈಗಲ್ಸ್‌ ತಂಡದ ಡಿಫೆಂಡರ್‌ ಅಜಿತ್‌ ಅರಸು ತಡೆಯಲು ಯತ್ನಿಸುವ ಆತುರದಲ್ಲಿಪ್ರಮಾದವೆಸಗಿದ ಪರಿಣಾಮ ಬ್ಲೂಸ್‌ಗೆ ಉಡುಗೊರೆ ಗೋಲ್‌ ಲಭಿಸಿತು. ಹೀಗಾಗಿ ಬಿಎಫ್‌ಸಿ 1-0 ಅಂತರದ ಮುನ್ನಡೆ ಪಡೆಯಿತು.
ಆದಾಗ್ಯೂ ರಕ್ಷ ಣಾ ಕ್ಷೇತ್ರದಲ್ಲಿಸಂವಹನ ಕೊರತೆಯಿಂದಾಗಿ ಬ್ಲೂಸ್‌ ಪಡೆಯ ಮಾಜಿ ಸ್ಟ್ರೈಕರ್‌ ಕ್ಲೆಟಸ್‌ ಪಾಲ್‌ 45ನೇ ನಿಮಿಷದಲ್ಲಿಈಗಲ್ಸ್‌ ಪರ ಗೋಲ್‌ ಗಳಿಸಿದರು. ಜಗದೀಪ್‌ ಸಿಂಗ್‌ ಮತ್ತು ಹರ್‌ಪ್ರೀತ್‌ ಸಿಂಗ್‌ ಅವರ ಕಣ್ತಪ್ಪಿಸಿ ಪ್ರಥಾಮರ್ಧಕ್ಕೆ ಈಗಲ್ಸ್‌ ತಂಡದ ಹಿನ್ನಡೆ ತಪ್ಪಿಸಿ 1-1ರ ಸಮಬಲದ ಹೋರಾಟಕ್ಕೆ ಸಾಕ್ಷಿಯಾದರು.
ಮುನ್ನಡೆ ಪಡೆಯುವ ನಿರೀಕ್ಷೆಯೊಂದಿಗೆ ದ್ವಿತೀಯಾರ್ಧದಲ್ಲಿಮೊಲ್ಲಾಅವರ ಬದಲಿಗೆ ಮೀಸಲು ಆಟಗಾರ ರಾಹುಲ್‌ ರಾಜು ಅವರತ್ತ ಬೆಂಗಳೂರು ಕಣ್ಣಾಯಿಸಿತು. ಒಮೆಗಾ ಮತ್ತು ಲಾಲ್ತಾಂಗ್ಲಿಯಾನ್‌ ಚೆಂಡನ್ನು ಎದುರಾಳಿ ತಂಡದ ಗೋಲ್‌ ಪೆಟ್ಟಿಗೆಯತ್ತ ಹೊಡೆದ 20 ನಿಮಿಷಗಳ ನಂತರ ಬ್ಲೂಸ್‌ ಪಡೆ ಗೋಲ್‌ ಗಳಿಕೆಯ ದೊಡ್ಡ ಅವಕಾಶ ಗಿಟ್ಟಿಸಿತು. ಮ್ಯಾಕರ್ಟನ್‌ ಹೆಡರ್‌ ಮೂಲಕ ಗೋಲಿನ ಯತ್ನ ಮಾಡಿದರು. ಆದರೆ ಇದರಿಂದ ಯಾವುದೇ ಫಲ ದೊರೆಯಲಿಲ್ಲ. ಅಂತಿಮ ಕ್ಷ ಣದಲ್ಲಿಬಿಎಫ್‌ಸಿ ಆಟಗಾರರು ಹಿನ್ನಡೆ ತಗ್ಗಿಸಲು ಇನ್ನಿಲ್ಲದ ಹರಸಾಹಸ ನಡೆಸಿದರೂ ಈಗಲ್ಸ್‌ನ ರಕ್ಷ ಣಾ ಬಳಗವನ್ನು ಬೇಧಿಸಲು ಸಾಧ್ಯವಾಗಲಿಲ್ಲ. ಪಂದ್ಯದ ಹೆಚ್ಚುವರಿ ಸಮಯದಲ್ಲಿಲಾಲ್ತಾಂಗ್ಲಿಯಾನಾ ನಡೆಸಿದ ಹೋರಾಟ ಸಾಕಾರಗೊಳ್ಳಲಿಲ್ಲ.
ಬ್ಲೂಬಳಗ ಡಿಸೆಂಬರ್‌ 6ರಂದು ಬೆಂಗಳೂರು ಫುಟ್ಬಾಲ್‌ ಸ್ಟೇಡಿಯಂನಲ್ಲಿಯಂಗ್‌ ಚಾಲೆಂಜರ್ಸ್‌ ತಂಡದ ಸವಾಲು ಎದುರಿಸಲಿದೆ.

Malcare WordPress Security