ಬಿಡಿಎಫ್‌ಎ ಸೂಪರ್ ಡಿವಿಜನ್ ಲೀಗ್‌ನಲ್ಲಿಇಂಡಿಪೆಂಡೆಂಟ್ಸ್‌ಗೆ ಸೋಲುಣಿಸಿದ ಬ್ಲೂಕೋಲ್ಟ್ಸ್
ಪಂದ್ಯದ ಉಭಯ ಅವಧಿಗಳಲ್ಲೂಆಧಿಪತ್ಯ ಸಾಧಿಸಿದ ಬೆಂಗಳೂರು ಎಫ್‌ಸಿ ನಗರದ ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿಸೋಮವಾರ ನಡೆದ ಪಂದ್ಯದಲ್ಲಿ4-0 ಗೋಲ್‌ಗಳ ಅಂತರದಿಂದ ಬೆಂಗಳೂರು ಇಂಡಿಪೆಂಡೆಂಟ್ಸ್ ತಂಡವನ್ನು ಸೋಲಿಸಿ, ಬಿಡಿಎಫ್‌ಎ ಸೂಪರ್ ಡಿವಿಜನ್ ಲೀಗ್ ಅಭಿಯಾನದಲ್ಲಿನಾಲ್ಕನೇ ಜಯ ದಾಖಲಿಸಿದೆ. ಪಂದ್ಯದುದ್ದಕ್ಕೂ ಏಕಪಕ್ಷೀಯ ಪ್ರದರ್ಶನವಿತ್ತ ಬ್ಲೂಕೋಲ್ಟ್ಸ್ ಪರ ರಾಹುಲ್ ರಾಜು, ಮ್ಯಾಕರ್ಟನ್ ನಿಕ್ಸನ್, ಶಿಗಿಲ್ ಎನ್.ಎಸ್ ಮತ್ತು ವಿನಿತ್ ವೆಂಕಟೇಶ್ ತಲಾ ಒಂದು ಗೋಲ್ ಗಳಿಸಿ ಜಯದ ರೂವಾರಿಯೆನಿಸಿದರು.
ಟಾಸ್ ಗೆದ್ದು ಪಂದ್ಯ ಆರಂಭಿಸಿದ ಬೆಂಗಳೂರು ತ್ವರಿತವಾಗಿ ಎರಡು ಗೋಲ್ ಗಳಿಸಿ ಮುನ್ನಡೆ ಪಡೆಯಿತು. ಇಂಡಿಪೆಂಡೆಂಟ್ಸ್‌ನ ರಕ್ಷ ಣಾ ಕೋಟೆ ಹಾಗೂ ಗೋಲ್‌ಕೀಪರ್ ಅಂಥೋನಿ ಥಾಮಸ್ ಅವರನ್ನು ಭೇದಿಸಿದ ರಾಹುಲ್, ಬ್ಲೂಪರ ಖಾತೆ ತೆರೆದರು.ಇದಾದ ಮರು ಕ್ಷ ಣವೇ ಮ್ಯಾಕರ್ಟನ್ ಮೂಲಕ ಬ್ಲೂತನ್ನ ಮುನ್ನಡೆಯನ್ನು ದ್ವಿಗುಣಗೊಳಿಸಿತು. ಶಿಗಿಲಿ ಅವರಿಂದ ನೆರವು ಪಡೆದ ಮ್ಯಾಕರ್ಟನ್ ಯಾವುದೇ ತಪ್ಪೆಸಗದೆ ತಂಡದ ಮೇಲುಗೈಗೆ ಕಾರಣರಾದರು.
ಪಂದ್ಯದ ಅರ್ಧಗಂಟೆಗೆ ಸರಿಯಾಗಿ ಕೋಚ್ ಸಂದೇಶ್ ಭೋಯಿಟೆ ತಂಡ ಮೂರನೇ ಗೋಲ್ ಗಳಿಸಿತು. ಲಾಲ್ತಾಂಗ್ಲಿಯಾನ ನೀಡಿದ ಪಾಸನ್ನು ಸಮರ್ಥವಾಗಿ ಬಳಸಿಕೊಂಡ ಶಿಗಿಲಿ ಎದುರಾಳಿ ಗೋಲ್‌ಕೀಪರ್ ಕಣ್ತಪ್ಪಿಸಿ ಚೆಂಡನ್ನು ಗೋಲ್‌ಪೆಟ್ಟಿಗೆ ಸೇರಿಸಿದರು. ಹೀಗಾಗಿ ಬ್ಲೂಕೋಲ್ಟ್ಸ್ ವಿರಾಮಕ್ಕೆ 3-0 ಅಂತರದಲ್ಲಿಮೇಲುಗೈ ಸಾಧಿಸಿತು.
ವಿರಾಮದ ನಂತರ ಮ್ಯಾಕರ್ಟನ್ ಬದಲಿಗೆ ಮೈದಾನ ಪ್ರವೇಶಿಸಿದ ವಿನಿತ್, ಪಂದ್ಯ ಪುನರಾರಂಭವಾದ ಐದೇ ನಿಮಿಷಗಳ ಅಂತರದಲ್ಲಿಗೋಲ್ ಗಳಿಸಿ ಮಿಂಚಿದರು. ರಾಹುಲ್ ಅವರಿಂದ ನೆರವು ಪಡೆದ ಅವರು ನಿಸ್ತೇಜ ಪ್ರದರ್ಶನ ನೀಡಿದ ಅಂಥೋನಿಯನ್ನು ಮೆಟ್ಟಿನಿಂತರು. ನಂತರ ಗೋಲು ಗಳಿಕೆಯ ಅವಕಾಶಗಳನ್ನು ಬೆಂಗಳೂರು ಎಫ್‌ಸಿ ಸೃಷ್ಟಿಸಿತು. ಆದರೆ ಎದುರಾಳಿಯ ಎಲ್ಲಯತ್ನಗಳನ್ನು ಇಂಡಿಪೆಂಡೆಂಟ್ಸ್ ಡಿಫೆಂಡರ್ಸ್‌ಗಳನ್ನು ಹಿಮ್ಮೆಟ್ಟಿಸಿದರು.
ಬ್ಲೂಕೋಲ್ಟ್ಸ್ ಡಿಸೆಂಬರ್ 16ರಂದು ಗುರುವಾರ ಇದೇ ಕ್ರೀಡಾಂಗಣದಲ್ಲಿಎಫ್‌ಸಿ ಬೆಂಗಳೂರು ಯೂನೈಟೆಡ್ ತಂಡವನ್ನು ಎದುರಿಸಲಿದೆ.